For Quick Alerts
  ALLOW NOTIFICATIONS  
  For Daily Alerts

  ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಶವ ಹುಡುಕಲು ತೊಡಕು: ಕಾರಣವೇನು.?

  By Bharath Kumar
  |

  'ಮಾಸ್ತಿಗುಡಿ' ಚಿತ್ರದ ಕ್ಲೈಮ್ಯಾಕ್ಸ್ ದುರಂತದಲ್ಲಿ ಮೃತಪಟ್ಟಿದ್ದ ಇಬ್ಬರು ಖಳನಟರ ಪೈಕಿ ಓರ್ವ ನಟನ ಮೃತದೇಹ ಪತ್ತೆಯಾಗಿದೆ. ಎರಡು ದಿನಗಳ ಶೋಧ ಕಾರ್ಯಚರಣೆ ಬಳಿಕ ಇಂದು ಉದಯ್ ರವರ ಮೃತದೇಹ ಪತ್ತೆಯಾಗಿದ್ದು, ಅನಿಲ್ ರವರ ಮೃತದೇಹ ಪತ್ತೆಗಾಗಿ ಕಾರ್ಯಚರಣೆ ಮುಂದುವರೆದಿದೆ.

  ಕಳೆದ 2 ದಿನಗಳಿಂದ ಇಬ್ಬರು ನಟರ ಮೃತ ದೇಹಗಳನ್ನ ಹುಡುಕಲು ಹಲವು ತಂಡಗಳು ಕಾರ್ಯಚರಣೆ ನಡೆಸಿದ್ದವು. ಆದ್ರೆ, ಮೂರನೇ ದಿನವಾದ ಇಂದು 'ಮಾಸ್ತಿ ಗುಡಿ' ಕ್ಲೈಮ್ಯಾಕ್ಸ್ ಶೂಟಿಂಗ್ ನಡೆದ ಸ್ಪಾಟ್ ನಲ್ಲೇ ಉದಯ್ ಶವ ತೇಲಿ ಬಂದ ಪರಿಣಾಮ, 'ಎನ್.ಡಿ.ಆರ್.ಎಫ್' ಸಿಬ್ಬಂದಿಗಳಿಗೆ ಮೃತದೇಹ ಸಿಕ್ಕಿದೆ.['ಮಾಸ್ತಿಗುಡಿ' ದುರಂತ: 2 ದಿನಗಳ ಬಳಿಕ ಓರ್ವ ನಟನ ಶವ ಪತ್ತೆ]

  ಅಷ್ಟಕ್ಕೂ, ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಶವಗಳನ್ನ ಹುಡುಕಲು ತಡವಾಗುತ್ತಿರುವುದೇಕೆ.? ಅಗ್ನಿಶಾಮಕ ದಳ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಮುಳುಗು ತಜ್ಞರು ಸೇರಿದಂತೆ ಅನೇಕರು ಶೋಧ ನಡೆಸುತ್ತಿದ್ದರೂ, ಕಾರ್ಯಚರಣೆ ವಿಳಂಬವಾಗುತ್ತಿರುವುದೇಕೆ.? ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಓದಿರಿ.......

  ಜಾಗದ ನಿಖರತೆ ಬಗ್ಗೆ ಗೊಂದಲ

  ಜಾಗದ ನಿಖರತೆ ಬಗ್ಗೆ ಗೊಂದಲ

  ತಿಪ್ಪಗೊಂಡನಹಳ್ಳಿ ಕೆರೆಗೆ ಉದಯ್ ಹಾಗೂ ಅನಿಲ್ ಧುಮುಕಿದ ಜಾಗದ ಬಗ್ಗೆ ಗೊಂದಲ ಉಂಟಾಗಿದ್ದು, ಮೃತ ದೇಹಗಳನ್ನ ಹುಡುಕಲು ಕಷ್ಟವಾಗುತ್ತಿದೆ. ಮೂವರು ನಟರು ಹೆಲಿಕಾಫ್ಟರ್ ನಿಂದ ಕೆರೆಗೆ ಹಾರಿದ ಸ್ಥಳದ ಬಗ್ಗೆ ನಿಖರವಾದ ಮಾಹಿತಿ ಸಿಕ್ಕದೆ ಇರುವುದು ಕಾರ್ಯಚರಣೆ ವಿಳಂಬವಾಗಲು ಮೊದಲ ಕಾರಣ.['ಮಸಣ' ಗುಡಿ ಕಥೆ: ಒಬ್ಬರ ಕಣ್ಣಿಗೆ ಬೆಣ್ಣೆ, ಇನ್ನೊಬ್ಬರ ಕಣ್ಣಿಗೆ ಸುಣ್ಣ ಯಾಕೆ?]

  ವಿಶಾಲವಾದ ಕೆರೆ

  ವಿಶಾಲವಾದ ಕೆರೆ

  ತಿಪ್ಪಗೊಂಡನಹಳ್ಳಿ ಕೆರೆಯ ವಿಸ್ತರಣೆ 378 ಎಕೆರೆಗೂ ಅಧಿಕ. ನೀರಿನ ಚಲನೆ ಜೊತೆಗೆ ಶವಗಳು ಬೇರೆ ಕಡೆ ಹೋಗಿರಬಹುದು ಎಂಬ ಅನುಮಾನದಿಂದ ಇಡೀ ಕೆರೆಯನ್ನ ಹುಡುಕುತ್ತಿರುವುದು ವಿಳಂಬವಾಗುತ್ತಿರುವುದಕ್ಕೆ ಎರಡನೇ ಕಾರಣ.

  ಕಲುಷಿತ ನೀರು

  ಕಲುಷಿತ ನೀರು

  ತಿಪ್ಪಗೊಂಡನಹಳ್ಳಿ ಕೆರೆಯ ನೀರು ಕಲುಷಿತಗೊಂಡಿದ್ದು, ಕಾರ್ಯಚರಣೆಗೆ ಅಡ್ಡಿಯಾಗುತ್ತಿದೆ.[ನಿಮಗೆಲ್ಲಾ ಗೊತ್ತಿಲ್ಲದ 'ಮಾಸ್ತಿ ಗುಡಿ' ವಿಲನ್ ಉದಯ್ ಅಸಲಿ ಕಹಾನಿ]

  ಕೆರೆಯಲ್ಲಿ ಕಪ್ಪು ಮಣ್ಣು

  ಕೆರೆಯಲ್ಲಿ ಕಪ್ಪು ಮಣ್ಣು

  ಉದಯ್ ಹಾಗೂ ಅನಿಲ್ ಮೃತದೇಹಗಳನ್ನ ಹುಡುಕಲು ಬೇರೆ ರಾಜ್ಯಗಳಿಂದ ಮುಳುಗು ತಜ್ಞರು ನೀರಿಗೆ ಇಳಿದಿದ್ದರು. ಆದ್ರೆ, ಅವರ ಕಾರ್ಯಚರಣೆಗೆ ಕಪ್ಪು ಮಣ್ಣು ಅಡ್ಡಿಯಾಗಿದೆ. ಕಪ್ಪು ಮಣ್ಣಿನಿಂದಾಗಿ ನೀರಿನೊಳಗೆ ವಸ್ತುಗಳು ಗೋಚರವಾಗುತ್ತಿಲ್ಲ.

  Oxygen ಕೊರತೆ

  Oxygen ಕೊರತೆ

  ನೀರಿನಲ್ಲಿ ಹುಡುಕುವ ಸಿಬ್ಬಂದಿಗಳಿಗೆ 'ಆಕ್ಸಿಜನ್' ಒದಗಿಸಲು ಬಳಸುವ ಗ್ಯಾಸ್ ಸಿಲಿಂಡರ್ ಗಳ ಕೊರತೆ ಎದುರಾಯಿತು. ಕಡಿಮೆ ಸಂಖ್ಯೆಯಲ್ಲಿ ಸಿಲಿಂಡರ್ ಗಳ ಲಭ್ಯತೆಯಿದ್ದು, ಅದು ಮುಗಿದ ನಂತರ ಮತ್ತೆ ತರಿಸಲು ಸಮಯ ಹಿಡಿಯುತ್ತಿರುವುದು ಶೋಧಕಾರ್ಯಚರಣೆ ವಿಳಂಬವಾಗಲು ಮತ್ತೊಂದು ಕಾರಣ.[ದುರಂತ ಸಾವಿಗೀಡಾದ ಅನಿಲ್ ಯಾರು.? ನಿಜ ಬದುಕಿನ ಕಥೆ ಇಲ್ಲಿದೆ...]

  ಗಿಡ, ಬಳ್ಳಿಗಳಿಂದ ಅಡ್ಡಿ

  ಗಿಡ, ಬಳ್ಳಿಗಳಿಂದ ಅಡ್ಡಿ

  ನೀರಿನಲ್ಲಿರುವ ಶವಗಳನ್ನ ಹುಡುಕಲು ಹುಕ್ಕು-ಕಂಬಿಗಳನ್ನ ಬಳಿಸಿ ಕಾರ್ಯಚರಣೆ ಮಾಡಲಾಯಿತು. ಆದರೇ, ಈ ಹುಕ್ಕು ಕಂಬಿಗಳಿಗೆ ನೀರಿನಲ್ಲಿದ್ದ ಗಿಡ, ಬಳ್ಳಿಗಳು ಹಾಗೂ ತ್ಯಾಜ್ಯ ವಸ್ತುಗಳು ಸಿಲುಕಿ, ಕಾರ್ಯಚರಣೆಗೆ ಅಡ್ಡಿ ಪಡಿಸುತ್ತಿವೆ.

  ಕಾರ್ಯಚರಣೆ ಮಾಡಿದವರು ಯಾರು

  ಕಾರ್ಯಚರಣೆ ಮಾಡಿದವರು ಯಾರು

  ಅಗ್ನಿಶಾಮಕ ದಳದ ಸಿಬ್ಬಂದಿ, (ಎನ್.ಡಿ.ಆರ್.ಎಫ್) ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಪಣಂಬೂರಿನ ಮೂವರು ಮುಳುಗು ತಜ್ಞರು ಹಾಗೂ ಹರಿಹರದ ಮೂವರು ಮುಳುಗು ತಜ್ಞರು ಸೇರಿದಂತೆ ಹಲವು ಈಜು ಪರಿಣಿತರು ಕಾರ್ಯಚರಣೆಯಲ್ಲಿ ತೊಡಗಿದ್ದಾರೆ.

  ದುರ್ಘಟನೆ ವಿವರ

  ದುರ್ಘಟನೆ ವಿವರ

  ಎರಡು ದಿನಗಳ ಹಿಂದೆ ( ನವೆಂಬರ್ 7, ಸೋಮವಾರ ಮಧ್ಯಾಹ್ನ ) ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ 'ಮಾಸ್ತಿಗುಡಿ' ಚಿತ್ರದ ಕ್ಲೈಮ್ಯಾಕ್ಸ್ ನಡೆಯುವ ವೇಳೆ ದುನಿಯಾ ವಿಜಯ್, ಉದಯ್, ಹಾಗೂ ಅನಿಲ್ ಮೂವರು ಹೆಲಿಕಾಫ್ಟರ್ ನಿಂದ ಕೆರೆಗೆ ಹಾರಿದ್ದರು. ಮೂವರ ಪೈಕಿ ನಟ ವಿಜಯ್ ಮಾತ್ರ ನೀರಿನಿಂದ ಮೇಲೆ ಬಂದಿದ್ದು, ಉಳಿದ ಇಬ್ಬರು ಖಳನಟರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]

  English summary
  Teams of NDRF, Fire and safety personnel along with the help of local fishermen had been scouting the T.G.Halli reservoir since Monday evening for bodies of Actors Uday and Anil who lost their lives attempting an action sequence for 'Maasti Gudi'. But what is the reason for the delay of Search Operations? Here is the complete report.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X