ದುನಿಯಾ ವಿಜಯ್ ವಿರುದ್ಧ ಖಳನಟ ಉದಯ್ ತಾಯಿ ಸಿಡಿಮಿಡಿ

By Harshitha

'ಪುತ್ರ ಶೋಕಂ ನಿರಂತರಂ' ಎನ್ನುವ ಹಾಗೆ, ಬಾಳಿ ಬದುಕಬೇಕಾಗಿರುವ ಮಗ ಕಣ್ಣಮುಂದೆಯೇ ಸಾವನ್ನಪ್ಪಿದರೆ, ಹೆತ್ತ ತಾಯಿಗೆ, ಜನ್ಮ ಕೊಟ್ಟ ತಂದೆಗೆ ಆಗುವ ಆಘಾತ ಅಷ್ಟಿಷ್ಟಲ್ಲ. ['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]

ಮಗನಿಗೆ ಮದುವೆ ಮಾಡಿ, ಮೊಮ್ಮಕ್ಕಳನ್ನ ಆಡಿಸುವ ತವಕದಲ್ಲಿದ್ದ 'ಮಾಸ್ತಿ ಗುಡಿ' ಚಿತ್ರದ ಖಳನಟ ಉದಯ್ ಪೋಷಕರು ಇಂದು ದುಃಖದ ಮಡುವಿನಲ್ಲಿದ್ದಾರೆ. ಅವರ ಆಕ್ರಂದನ ಮುಗಿಲು ಮುಟ್ಟಿದೆ.

ಉದಯ್ ತಂದೆ ದುಃಖತಪ್ತ

ಉದಯ್ ತಂದೆ ದುಃಖತಪ್ತ

''ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದ ಕಾರಣದಿಂದ ಈ ದುರ್ಘಟನೆ ಸಂಭವಿಸಿದೆ. ಯಾರದ್ದೋ ಸಂತೋಷಕ್ಕೆ ನಾವು ನಮ್ಮ ಮಗನನ್ನು ಕಳೆದುಕೊಂಡಿದ್ದೀವಿ'' ಎಂದು ಕಣ್ಣೀರಿಡುತ್ತಾರೆ ಉದಯ್ ತಂದೆ ವೆಂಕಟೇಶ್. [ಅನಿಲ್, ಉದಯ್ ಕೊನೆಯ ಮಾತಲ್ಲಿ ಸಾವಿನ ಮುನ್ಸೂಚನೆಯ ಸುಳಿವು.!]

ದುನಿಯಾ ವಿಜಯ್ ವಿರುದ್ಧ ಉದಯ್ ತಾಯಿ ಆಕ್ರೋಶ

ದುನಿಯಾ ವಿಜಯ್ ವಿರುದ್ಧ ಉದಯ್ ತಾಯಿ ಆಕ್ರೋಶ

''ಉದಯ್ ನ 'ತಮ್ಮ' ಅಂತ ದುನಿಯಾ ವಿಜಯ್ ಕರೆಯುತ್ತಿದ್ದ. ಈಗ ತಮ್ಮನನ್ನೇ ನೀರಿಗೆ ತಳ್ಳಿ ಅವನು ಬದುಕಿ ಬಂದಿದ್ದಾನೆ'' ಅಂತ ಆಕ್ರೋಶ ವ್ಯಕ್ತಪಡಿಸುತ್ತಾರೆ ಉದಯ್ ತಾಯಿ ಕೌಸಲ್ಯ. ['ಮಾಸ್ತಿಗುಡಿ' ಸಾಹಸ ನಿರ್ದೇಶಕ ರವಿವರ್ಮಗೆ ಜಗ್ಗೇಶ್ ಛೀಮಾರಿ]

ಬಲವಂತವಾಗಿ ನೀರಿಗೆ ತಳ್ಳಿದ್ದಾರೆ

ಬಲವಂತವಾಗಿ ನೀರಿಗೆ ತಳ್ಳಿದ್ದಾರೆ

''ನನ್ನ ಮಗನಿಗೆ ಈಜು ಬರುತ್ತಿರಲಿಲ್ಲ. ತಲೆಗೆ ಪೆಟ್ಟು ಬಿದ್ದಿತ್ತು. ಆದರೂ ಬಲವಂತವಾಗಿ ನೀರಿಗೆ ತಳ್ಳಿದ್ದಾರೆ'' ಎನ್ನುತ್ತಾರೆ ಉದಯ್ ತಾಯಿ ಕೌಸಲ್ಯ. ['ಮಾಸ್ತಿ ಗುಡಿ' ದುರಂತ ಸಂಭವಿಸಲು ಪ್ರಮುಖ ಕಾರಣ ಇದೇ.!]

ಮಾನವೀಯತೆ ಇಲ್ಲ.!

ಮಾನವೀಯತೆ ಇಲ್ಲ.!

''ಮಾಸ್ತಿ ಗುಡಿ' ಚಿತ್ರತಂಡದವರಿಗೆ ಮಾನವೀಯತೆ ಇಲ್ಲ. ಯಾವಾಗಲೂ ದುನಿಯಾ ವಿಜಯ್ ಜೊತೆ ಉದಯ್ ಇರುತ್ತಿದ್ದ. ಆದರೂ ದುರ್ಘಟನೆ ನಡೆದ ಬಳಿಕ ಇಲ್ಲಿ ಬಂದು ಕುಟುಂಬಕ್ಕೆ ಸಾಂತ್ವನ ಹೇಳುವ ಮನಸ್ಸು ದುನಿಯಾ ವಿಜಯ್ ಗೆ ಇಲ್ಲ'' ಅಂತ ಉದಯ್ ಚಿಕ್ಕಪ್ಪ ಶ್ರೀನಿವಾಸ್ ಕಿಡಿಕಾರಿದ್ದಾರೆ.

More from Filmibeat

English summary
'Maasti Gudi' Villain Uday mother Kausalya blames Kannada Actor Duniya Vijay for the Tragic incident, which involved in the death of her son.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X