ಅಭಿಷೇಕ್ ಅಂಬರೀಶ್‌ಗೆ ಮಾಡ್ಬೇಕಿದ್ದ ಸಿನಿಮಾ ನಿಂತೋಯ್ತಾ? ಹೊಸ ಸಿನಿಮಾಗೆ ಕೈ ಹಾಕಿದ್ದೇಕೆ ಮಹೇಶ್?

'ಅಯೋಗ್ಯ', 'ಮದಗಜ' ಎರಡು ಸಿನಿಮಾಗಳನ್ನು ನಿರ್ದೇಶಿಸಿದ ಬಳಿಕ ಮಹೇಶ್ ಕುಮಾರ್ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದ್ದರು. ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಆ ಸಿನಿಮಾದಲ್ಲಿ ನಟಿಸಬೇಕಿತ್ತು. ರಾಕ್‌ಲೈನ್ ವೆಂಕಟೇಶ್ ಆ ಸಿನಿಮಾವನ್ನು ನಿರ್ಮಾಣ ಮಾಡಬೇಕಿತ್ತು. ಅದಕ್ಕೆ ಮಹೇಶ್ ಕುಮಾರ್ 'AA04'ಅಂತ ತಾತ್ಕಾಲಿಕ ಹೆಸರಿಟ್ಟು ಘೋಷಣೆ ಮಾಡಿದ್ದರು.

ಅಭಿಷೇಕ್ ಅಂಬರೀಶ್ ಬರ್ತ್‌ಡೇಗೆ, ಹಬ್ಬ ಹರಿದಿನಗಳಲ್ಲಿ ಈ ಸಿನಿಮಾದ ಒಂದಿಷ್ಟು ಪೋಸ್ಟರ್ ಹರಿದಾಡಿದ್ದು ಬಿಟ್ಟರೆ, ಸಿನಿಮಾ ಟೇಕಾಫ್ ಆಗಲೇ ಇಲ್ಲ. 'ಬ್ಯಾಡ್ ಮ್ಯಾನರ್ಸ್' ಗೆಲ್ಲುತ್ತೆ ಅಂದುಕೊಂಡಿದ್ದವರಿಗೆ ನಿರಾಸೆ ಆಗಿತ್ತು. ಇತ್ತ ರಾಕ್‌ಲೈನ್‌ ವೆಂಕಟೇಶ್ ಪ್ರಾಜೆಕ್ಟ್ ಅನ್ನು ಮುಂದೂಡಿದ್ದಾರೆ ಅನ್ನೋ ಮಾತು ಕೇಳಿ ಬಂದಿತ್ತು.

Madagaja director Mahesh Kumar will start new movie what happened Abhishek Ambareesh film

ಇತ್ತ ಮಹೇಶ್ ಕುಮಾರ್ ಬೇರೆ ಬೇರೆ ಸಿನಿಮಾಗಳನ್ನು ಪ್ರಮೋಷನ್ ಮಾಡುವುದರಲ್ಲಿಯೇ ಬ್ಯುಸಿಯಾಗಿದ್ದರು. ಇದೇ ವೇಳೆ ಅಭಿಷೇಕ್ ಅಂಬರೀಶ್ ಸಿನಿಮಾವನ್ನು ಮಹೇಶ್‌ ಕುಮಾರ್ ಮಾಡುತ್ತಿಲ್ಲ ಅಂತನೂ, ಈ ಸಿನಿಮಾ ಟೇಕಾಫ್ ಆಗುವುದಿಲ್ಲ ಅಂತಾನೂ ಸುದ್ದಿನೂ ಹರಿದಾಡಿದ್ದು ಇದೆ. ಕೊನೆಗೂ ಮಹೇಶ್ ಕುಮಾರ್ ಒಂದಿಷ್ಟು ವಿಷಯಗಳಿಗೆ ಕ್ಲಾರಿಟಿ ಕೊಟ್ಟಿದ್ದಾರೆ. ಅದೇನು? ತಿಳಿಯಲು ಮುಂದೆ ಓದಿ.

ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ಗಳು ಮಹೇಶ್ ಕುಮಾರ್ ನಿರ್ದೇಶನ ಬಿಟ್ಟು ಪ್ರಮೋಷನ್‌ ಮಾತ್ರ ಮಾಡ್ತಿದ್ದಾರಾ? ಅಂತ ಸುದ್ದಿ ಹಬ್ಬಿತ್ತು. ಅದಕ್ಕೆ ಅವರ ಉತ್ತರ ಹೀಗಿತ್ತು. "ಯಾಕೆ ಒಬ್ಬ ನಿರ್ದೇಶಕ ಪ್ರಮೋಷನ್ ಮಾಡಬಾರದಾ? ಇನ್ನೊಬ್ಬರ ಸಿನಿಮಾಗೆ ಸಪೋರ್ಟ್ ಮಾಡಬಾರದಾ? ನನ್ನ ಹತ್ತಿರ ಪ್ರೀತಿಯಿಂದ ಬಂದವರಿಗೆ ಖಂಡಿತಾ ಸಪೋರ್ಟ್ ಮಾಡುತ್ತೇನೆ. ನನ್ನ ಹತ್ತಿರ ಒಂದಿಷ್ಟು ಸ್ಟ್ರಾಟಜಿಗಳಿವೆ ಅದನ್ನು ಅವರಿಗೆ ಹೇಳಿಕೊಡುತ್ತೇನೆ. ಇವತ್ತು ಹೇಳುತ್ತೇನೆ. ಮುಂದೇನೂ ಹೇಳುತ್ತೇನೆ." ಎಂದಿದ್ದಾರೆ.

ಇನ್ನು ಪ್ರಚಾರದ ವಿಷಯದಲ್ಲಿ ಜೋಗಿ ಪ್ರೇಮ್ ಹಾಗೂ ಆರ್. ಚಂದ್ರುನೇ ತನಗೆ ಗುರುಗಳು ಎಂದಿದ್ದಾರೆ. "ಪ್ರೇಮ್ ಸರ್, ಆರ್‌.ಚಂದ್ರು ಸರ್ ನನಗೆ ಪ್ರಮೋಷನ್ ವಿಷಯದಲ್ಲಿ ಗುರುಗಳು. ಪ್ರಮೋಷನ್ ವಿಷಯದಲ್ಲಿ ಅವರನ್ನು ಫಾಲೋ ಮಾಡುತ್ತೇನೆ." ಎಂದು ಮಹೇಶ್ ಕುಮಾರ್ ತಮ್ಮ ಸೀಕ್ರೆಟ್ ಬಿಟ್ಟು ಕೊಟ್ಟಿದ್ದಾರೆ.

Madagaja director Mahesh Kumar will start new movie what happened Abhishek Ambareesh film

ದರ್ಶನ್ ನಟಿಸಿದ ಎರಡು ಸೂಪರ್ ಹಿಟ್ ಸಿನಿಮಾಗಳಿಗೂ ಮಹೇಶ್ ಕುಮಾರ್ ಪ್ರಚಾರ ಮಾಡಿದ್ದರು. ಹೀಗಾಗಿ ಮುಂದಿನ ದಿನಗಳಲ್ಲೂ ಅವರ ಸಿನಿಮಾಗಳಿಗೆ ಪ್ರಚಾರ ಮಾಡುವುದಕ್ಕೆ ನಿರ್ಧರಿಸಿದ್ದು, ಅವರೂ ಬೆಂಬಲ ನೀಡುತ್ತಾರೆಂಬ ಭರವಸೆಯಲ್ಲಿದ್ದಾರೆ. "ಕೈವಾ ಮಾಡಿದ್ದೀನಿ. ಬಾಸ್ ಸಿನಿಮಾ ಮಾಡಿದ್ದೀನಿ. ರಾಬರ್ಟ್ ಮಾಡಿದ್ದೀನಿ, ಕಾಟೇರ ಮಾಡಿದ್ದೀನಿ. ಅವರು ಫ್ಯೂಚರ್‌ನಲ್ಲಿ ಮಾಡುವ ಸಿನಿಮಾವನ್ನು ಮಾಡೇ ಮಾಡುತ್ತೇನೆ. ಬಾಸ್ ಆಚೆ ಬಂದ್ಮೇಲೆ ಅವರು ಯಾವುದೇ ಸಿನಿಮಾ ಮಾಡಿದರೂ ನಾವು ಅವರ ಜೊತೆ ನಿಲ್ಲುತ್ತೇವೆ. ಅವರು ನಮ್ಮ ಜೊತೆ ನಿಲ್ಲುತ್ತಾರೆ. " ಎಂದು ಮಹೇಶ್ ಕುಮಾರ್ ಹೇಳಿದ್ದಾರೆ.

ಹಾಗಂತ ಅಭಿಷೇಕ್ ಅಂಬರೀಶ್ ನಟಿಸಬೇಕಿದ್ದ ಸಿನಿಮಾ ನಿಂತಿಲ್ವಂತೆ. ಬ್ಯಾಡ್ ಮ್ಯಾನರ್ಸ್ ಬಳಿಕ ಬಾಡಿ ಟ್ರಾನ್ಸ್‌ಫರ್ಮೇಷನ್‌ಗೋಸ್ಕರ ಥೈಲ್ಯಾಂಡ್‌ಗೆ ಹೋಗಿದ್ದಾರಂತೆ. ಅಲ್ಲಿಂದ ಬಂದ್ಮೇಲೆ ಸಿನಿಮಾ ಸೆಟ್ಟೇರುತ್ತೆ ಅನ್ನೋ ಭರವಸೆಯಲ್ಲಿದ್ದಾರೆ. ಈಗ್ಯಾಪ್‌ನಲ್ಲಿ ಇನ್ನೊಂದು ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ. ಆ ಸಿನಿಮಾ ಆಗಸ್ಟ್ 16ರಂದು ಅನೌನ್ಸ್ ಆಗುತ್ತಿದೆಯಂತೆ. ಅದು 'ಆಯೋಗ್ಯ', 'ಮದಗಜ' ಸೀಕ್ವೆಲ್ ಆಗಿರಬಹುದು ಎಂದು ಸುಳಿವು ಕೊಟ್ಟಿದ್ದಾರೆ. ಆ ಬಳಿಕ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳುತ್ತಾರಂತೆ. ಅದೇನಾಗುತ್ತೋ ನೋಡೋಣ.

More from Filmibeat

English summary
Madagaja director Mahesh Kumar doing one of his movie sequel:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X