twitter
    For Quick Alerts
    ALLOW NOTIFICATIONS  
    For Daily Alerts

    'ಭಾವಚಿತ್ರ' ತೋರಿಸಲು ಸಜ್ಜಾದ 'ಮಗಳು ಜಾನಕಿ' ಖ್ಯಾತಿಯ ಗಾನವಿ ಲಕ್ಷ್ಮಣ್: 'ಹೀರೋ' ಅಲ್ಲ ಮೊದಲ ಸಿನಿಮಾ

    |

    ಒಂದೂವರೆ ವರ್ಷಗಳ ಕಾಲ ಟಿ ಎನ್ ಸೀತಾರಾಮ್ ನಿರ್ದೇಶಿಸಿದ 'ಮಗಳು ಜಾನಕಿ' ಧಾರಾವಾಹಿ ಕಿರುತೆರೆ ವೀಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು. ಇದೇ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಗಾನವಿ ಲಕ್ಷ್ಮಣ್ ಈಗ ಸಿನಿಮಾಗಳಲ್ಲಿ ಬ್ಯುಸಿ. ಅದರಲ್ಲೂ ಲಾಕ್‌ಡೌನ್‌ ವೇಳೆ ಚಿತ್ರೀಕರಣಗೊಂಡ ರಿಷಬ್ ಶೆಟ್ಟಿ ಅಭಿನಯದ 'ಹೀರೋ' ನಟಿ ಗಾನವಿ ಲಕ್ಷಣ್‌ಗೆ ಹೊಸ ಇಮೇಜ್ ತಂದುಕೊಟ್ಟಿತ್ತು. ಈ ಸಿನಿಮಾ ಬಳಿಕ ಈ ಕಿರುತೆರೆ ನಟಿ ಕನ್ನಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

    ರಿಷಬ್ ಶೆಟ್ಟಿ ಜೊತೆ ನಟಿಸ 'ಹೀರೋ' ಸಿನಿಮಾನೇ ಗಾನವಿ ಲಕ್ಷ್ಮಣ್ ಮೊದಲ ಸಿನಿಮಾ ಎಂದುಕೊಂಡಿರುವವರು ಹಲವು ಮಂದಿ. ಆದರೆ, 'ಹೀರೋ' ಸಿನಿಮಾ ಮುನ್ನ ಗಾನವಿ ನಟನೆಯ ಸಿನಿಮಾವೊಂದು ಸೆಟ್ಟೇರಿತ್ತು. ಅದುವೇ 'ಭಾವ ಚಿತ್ರ'. ಈ ಸಿನಿಮಾ ಈಗ ರಿಲೀಸ್‌ಗೆ ರೆಡಿಯಾಗಿದೆ. ಧಾರಾವಾಹಿಯಿಂದ ಸಿನಿಮಾಗೆ ವಾಲಿದ ಮಗಳು ಜಾನಕಿಯ ಹೊಸ ಅವತಾರವನ್ನು ಕೆಲವೇ ದಿನಗಳಲ್ಲಿ ತೆರೆಮೇಲೆ ನೋಡಬಹುದು.

    ಟಿ.ಎನ್.ಸೀತಾರಾಂ 'ಮಗಳು ಜಾನಕಿ' ಗಾನವಿಯ 'ಭಾವಚಿತ್ರ' ಅನಾವರಣ: ಏನಿದು ವಿಷಯ?ಟಿ.ಎನ್.ಸೀತಾರಾಂ 'ಮಗಳು ಜಾನಕಿ' ಗಾನವಿಯ 'ಭಾವಚಿತ್ರ' ಅನಾವರಣ: ಏನಿದು ವಿಷಯ?

    ಗಾನವಿ ಮೊದಲ ಚಿತ್ರ 'ಭಾವಚಿತ್ರ'

    ಗಾನವಿ ಮೊದಲ ಚಿತ್ರ 'ಭಾವಚಿತ್ರ'

    'ಮಗಳು ಜಾನಕಿ' ಧಾರಾವಾಹಿ ಚಿತ್ರೀಕರಣದ ಸಮಯದಲ್ಲೇ ಗಾನವಿ ಲಕ್ಷ್ಮಣ್ ಮೊದಲ ಸಿನಿಮಾ ಬಗ್ಗೆ ಮಾತುಕತೆ ನಡೆದಿತ್ತು. ಅದುವೇ 'ಭಾವ ಚಿತ್ರ'. ಈ ಸಿನಿಮಾದ ಕತೆ ನಾಯಕಿ ಗಾನವಿ ಲಕ್ಷ್ಮಣ್ ಸುತ್ತಾ ಸಾಗುತ್ತೆ. ಒಂದು ಗ್ರಾಮದ ಹಳೆಯ ದೇವಸ್ಥಾನದ ಶಿಲ್ಪಕಲೆಯ ಬಗ್ಗೆ ಅಧ್ಯಯನ ನಡೆಸುವ ಆರ್ಕಿಯಾಲಜಿಸ್ಟ್ ಪಾತ್ರದಲ್ಲಿ ಗಾನವಿ ಲಕ್ಷ್ಮಣ್ ನಟಿಸಿದ್ದಾರೆ. ಇದು ಹೀರೊಗಿಂತಲೂ ಮೊದಲೇ ಸೆಟ್ಟೇರಿದ್ದ ಸಿನಿಮಾವಿದು. "ಇದು ನನ್ನ ಮೊದಲ ಸಿನಿಮಾ. ಪ್ರಥಮ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿದ್ದೀನಿ. ಆರ್ಕಿಯಾಲಜಿಸ್ಟ್ ಪಾತ್ರದಲ್ಲಿ ನಟಿಸಿದ್ದೇನೆ. ನನ್ನ ಪಾತ್ರ ಜೊತೆ ಚಿತ್ರ ಎಲ್ಲರಿಗೂ ಇಷ್ಟು ಆಗುತ್ತೆ ಎನ್ನುವ ಭರವಸೆ ಇದೆ." ಎನ್ನುತ್ತಾರೆ ನಾಯಕಿ ಗಾನವಿ ಲಕ್ಷ್ಮಣ್.

    'ಭಾವಚಿತ್ರ'ದ ಕಥೆಯೇನು?

    'ಭಾವಚಿತ್ರ'ದ ಕಥೆಯೇನು?

    'ಭಾವಚಿತ್ರ' ‌ ಥ್ರಿಲ್ಲರ್, ಸಸ್ಪೆನ್ಸ್ ಕಮ್ ಸೆಂಟಿಮೆಂಟ್ ಸಿನಿಮಾ. ಹಾಗಂತ ಕೇವಲ ಥ್ರಿಲ್ಲರ್, ಸೆಂಟಿಮೆಂಟ್ ಅಷ್ಟೇ ಅಲ್ಲ. ಇಲ್ಲಿ ಲವ್ ಸ್ಟೋರಿ ಕೂಡ ಇದೆ. ಕಥೆಯಲ್ಲಿ ಹಲವು ಟ್ವಿಸ್ಟ್ ಅಂಡ್ ಟರ್ನ್‌ ಗಳಿವೆ. ವಿಶೇಷ ಅಂದರೆ, ಈ ಸಿನಿಮಾದ ಕಥೆಯನ್ನು ಮೊಬೈಲ್ ಕ್ಯಾಮರಾ ಮೂಲಕವೇ ಪ್ರೇಕ್ಷಕರಿಗೆ ಹೇಳಲು ಹೊರಟಿದ್ದಾರೆ ನಿರ್ದೇಶಕ ಗಿರೀಶ್ ಕುಮಾರ್. ಈ ಸಿನಿಮಾ ಇದೇ ವಾರ ಅಂದರೆ, ಫೆಬ್ರವರಿ 18 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

    ಹೋಗಿ ಬಾ ಜಾನಕಿ: 'ಮಗಳು ಜಾನಕಿ'ಗೆ ಭಾವುಕ ವಿದಾಯ ಹೇಳಿದ ಟಿಎನ್ ಸೀತಾರಾಮ್ಹೋಗಿ ಬಾ ಜಾನಕಿ: 'ಮಗಳು ಜಾನಕಿ'ಗೆ ಭಾವುಕ ವಿದಾಯ ಹೇಳಿದ ಟಿಎನ್ ಸೀತಾರಾಮ್

    ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಾ 'ಭಾವಚಿತ್ರ'

    ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಾ 'ಭಾವಚಿತ್ರ'

    ಗಾನವಿ ಲಕ್ಷ್ಮಣ್ 'ಹೀರೋ' ಮೊದಲ ಸಿನಿಮಾ ಭಾವಚಿತ್ರಕ್ಕೂ ಮುನ್ನವೇ ತೆರೆಕಂಡಿದೆ. ಹಾಡುಗಳು, ನಿರೂಪಣೆ ಹಾಗೂ ಅಭಿನಯದಿಂದ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿ ಆಯಿತು. ಆದರೆ, ಮೊದಲ ಸಿನಿಮಾ 'ಭಾವಚಿತ್ರ'ದಲ್ಲಿ ಕಥೆಯನ್ನು ಹೇಳುವ ವಿಧಾನ ಭಿನ್ನವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಕಾರಣಕ್ಕೆ ಸಿನಿಮಾವನ್ನು ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ ಎನ್ನುವುದು ಫೆಬ್ರವರಿ 18ರ ಬಳಿಕ ತಿಳಿಯಲಿದೆ.

    'ಮಗಳು ಜಾನಕಿ' ಧಾರಾವಾಹಿ ಅಂತ್ಯಕ್ಕೆ ಕಾರಣವೇನು?: ಟಿಎನ್ ಸೀತಾರಾಮ್ ನೀಡಿದ ಸ್ಪಷ್ಟನೆ'ಮಗಳು ಜಾನಕಿ' ಧಾರಾವಾಹಿ ಅಂತ್ಯಕ್ಕೆ ಕಾರಣವೇನು?: ಟಿಎನ್ ಸೀತಾರಾಮ್ ನೀಡಿದ ಸ್ಪಷ್ಟನೆ

    'ವೇದ' ಸಿನಿಮಾಗೆ ಗಾನವಿ ಲಕ್ಷ್ಮಣ್ ನಾಯಕಿ

    'ವೇದ' ಸಿನಿಮಾಗೆ ಗಾನವಿ ಲಕ್ಷ್ಮಣ್ ನಾಯಕಿ

    'ಮಗಳು ಜಾನಕಿ' ಧಾರಾವಾಹಿಯಿಂದ ಫೇಮಸ್ ಆಗಿರುವ ನಟಿ ಗಾನವಿ ಲಕ್ಷ್ಮಣ್‌ ಕೈಯಲ್ಲಿ ಬಿಗ್ ಬಜೆಟ್ ಸಿನಿಮಾವಿದೆ. ಅದೇ ಶಿವಣ್ಣ 125ನೇ ಸಿನಿಮಾ 'ವೇದ'. ಶಿವಣ್ಣ ಹಾಗೂ ಎ ಹರ್ಷ ಕಾಂಬಿನೇಷನ್‌ ಸಿನಿಮಾ ಒಂದೇ ಒಂದು ಪೋಸ್ಟರ್‌ನಿಂದ ಗಮನ ಸೆಳೆಯುತ್ತಿದೆ. ಇದು ಗಾನವಿ ಲಕ್ಷ್ಮಣ್ ಅಭಿನಯದ ಮೊದಲ ಬಿಗ್ ಬಜೆಟ್ ಸಿನಿಮಾ. ಎಲ್ಲಕ್ಕಿಂತ ಹೆಚ್ಚಾಗಿ ಗೀತಾ ಶಿವರಾಜ್‌ಕುಮಾರ್ ನಿರ್ಮಿಸುತ್ತಿರುವ ಈ ಸಿನಿಮಾ ಗಾನವಿ ಸಿನಿ ಕರಿಯರ್‌ನ ಹೊಸ ದಿಕ್ಕನೇ ಬದಲಿಸಬಹುದು. ಈಗಾಗಲೇ ಈ ಸಿನಿಮಾ ಚಿತ್ರೀಕರಣದ ಹಂತದಲ್ಲಿದೆ.

    English summary
    Magalu Janaki actress Ganavi lakshman first movie Bhavachitra releasing on feb 18th. Bhavachitra is Ganavi Lakshman first kannada movie.
    Monday, February 14, 2022, 17:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X