ರಿಷಬ್ ಶೆಟ್ಟಿ ಚಿತ್ರಕ್ಕೆ ನಾಯಕಿಯಾದ 'ಮಗಳು ಜಾನಕಿ'

ಬೆಲ್ ಬಾಟಮ್ ಚಿತ್ರದ ಯಶಸ್ಸಿನಲ್ಲಿರುವ ರಿಷಬ್ ಶೆಟ್ಟಿ ಈಗ ಇನ್ನೊಂದು ಚಿತ್ರಕ್ಕೆ ಸಜ್ಜಾಗಿದ್ದಾರೆ. ನಾಯಕನಾಗಿ ಮೊದಲ ಹೆಜ್ಜೆಯಲ್ಲೇ ಸಕ್ಸಸ್ ಕಂಡ ರಿಷಬ್ ಹೀರೋ ಆಗಿ ಎರಡನೇ ಸಿನಿಮಾ ಶುರು ಮಾಡಿದ್ದಾರೆ.

ಕಿರುತೆರೆಯಲ್ಲಿ ಖ್ಯಾತಿ ಗಳಿಸಿಕೊಂಡಿರುವ ವಿನು ಬಳಂಜ ನಿರ್ದೇಶನ ಮಾಡಲಿರುವ ನಾಥೂರಾಮ್ ಸಿನಿಮಾದಲ್ಲಿ ರಿಷಬ್ ನಾಯಕನಾಗಿದ್ದು, ಈ ಚಿತ್ರಕ್ಕೀಗ ಮಗಳು ಜಾನಕಿ ಖ್ಯಾತಿಯ ಗಾನವಿ ಲಕ್ಷ್ಮಣ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಯಾರೀ 'ಮಗಳು ಜಾನಕಿ': ಧಾರಾವಾಹಿಗೆ ಗಾನವಿ ಆಯ್ಕೆ ಆಗಿದ್ದು ಹೇಗೆ.?
ಕನ್ನಡದ ಹೆಸರಾಂತ ನಿರ್ದೇಶಕ ಟಿಎನ್ ಸೀತಾರಾಮ್ ನಿರ್ದೇಶನದಲ್ಲಿ ಮೂಡಿಬರ್ತಿರುವ ಮಗಳು ಜಾನಕಿ ಧಾರಾವಾಹಿಯಲ್ಲಿ ಗಾನವಿ ಲಕ್ಷ್ಮಿಣ್, ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಮ್ಮ ಅಭಿನಯದ ಮೂಲಕ ಬಹುಬೇಗ ಜನಪ್ರಿಯತೆ ಗಳಿಸಿಕೊಂಡ ಗಾನವಿಗೆ ಈಗ ಸ್ಯಾಂಡಲ್ ವುಡ್ ನಲ್ಲಿ ಮಿಂಚಲು ಅವಕಾಶ ಸಿಕ್ಕಿದೆ.

Magalu Janaki ganavi Laxman heroine for Rishab Shetty

ಮೂಲತಃ ಚಿಕ್ಕಮಗಳೂರಿನವರಾಗಿರುವ ಗಾನವಿ ಡ್ಯಾನ್ಸರ್ ಮತ್ತು ನಟನೆಯಲ್ಲಿ ಪ್ರಾವಿಣ್ಯತೆ ಹೊಂದಿದ್ದಾರೆ. ಈ ವಿಷ್ಯವನ್ನ ಸದ್ಯಕ್ಕೆ ಗೌಪ್ಯವಾಗಿಟ್ಟಿರುವ ಚಿತ್ರತಂಡ ಮಾರ್ಚ್ ಮೊದಲ ವಾರದಲ್ಲಿ ಶೂಟಿಂಗ್ ಮಾಡುವ ಸಿದ್ಧತೆ ಮಾಡಿಕೊಂಡಿದೆ. ಎಹ್ ಕೆ ಪ್ರಕಾಶ್ ಈ ಚಿತ್ರವನ್ನ ನಿರ್ಮಿಸುತ್ತಿದ್ದಾರೆ.

ಅಂದ್ಹಾಗೆ, ನಾಥೂರಾಮ್ ಸಿನಿಮಾ ವ್ಯಕ್ತಿಯೊಬ್ಬನ ಜೀವನ ಶೈಲಿ, ಜೀವನ, ಬದುಕಿನ ಸುತ್ತಮುತ್ತ ನಡೆಯಲಿದ್ದು, ಅನಂತ್ ನಾಗ್, ಕಿಶೋರ್, ಶಿವಮಣಿ, ಅಚ್ಯುತ್ ಕುಮಾರ್ ಸೇರಿದಂತೆ ಹಲವರು ನಟಿಸಲಿದ್ದಾರೆ.

More from Filmibeat

English summary
Ganavi Laxman, The dancer and artiste, who has become a household name with Magalu Janaki, will make her silver screen debut opposite Rishab Shetty.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X