twitter
    For Quick Alerts
    ALLOW NOTIFICATIONS  
    For Daily Alerts

    ಯಾರೀ 'ಮಗಳು ಜಾನಕಿ': ಧಾರಾವಾಹಿಗೆ ಗಾನವಿ ಆಯ್ಕೆ ಆಗಿದ್ದು ಹೇಗೆ.?

    By Naveen
    |

    Recommended Video

    ಮಗಳು ಜಾನಕಿ ಜೊತೆ ಮಾತುಕತೆ..! | Filmibeat Kannada

    ''ಕಲಾವಿದೆ ಆಗಿಯೇ ಇರಬೇಕು.. ಕಲಾವಿದೆ ಅಂತಲೇ ಗುರುತಿಸಿಕೊಳ್ಳಬೇಕು... ಕಲೆಯ ಜೊತೆಗೆ ಬದುಕಬೇಕು... ಎಲ್ಲ ರೀತಿಯ ಕಲೆಯನ್ನು ನೋಡಬೇಕು ಅದನ್ನು ಕಲಿಯಬೇಕು..'' ಇದು ಸಂದರ್ಶನದಲ್ಲಿ ನಟಿ ಗಾನವಿ ಹೇಳಿದ ಅದ್ಭುತ ಮಾತು.

    ಸದ್ಯ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಗಳು ಜಾನಕಿ' ಧಾರಾವಾಹಿ ದೊಡ್ಡ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿಯ ಮೂಲಕ ನಟಿ ಗಾನವಿ ಕನ್ನಡ ಕಿರುತೆರೆ ಲೋಕಕ್ಕೆ ಕಾಲಿಟ್ಟಿದ್ದಾರೆ. ಚಿಕ್ಕಮಗಳೂರಿನ ಈ ಚಿಕ್ಕ ಮಲ್ಲಿಗೆ ಕಡಿಮೆ ಅವಧಿಯಲ್ಲಿಯೇ ದೊಡ್ಡ ವೀಕ್ಷಕ ಬಳಗವನ್ನು ಹೊಂದಿದ್ದಾರೆ.

    'ಮಗಳು ಜಾನಕಿ' ಧಾರಾವಾಹಿಯ ನಿರಂಜನ್ ಯಾರು? ಅವರ ಹಿನ್ನೆಲೆ ಏನು?'ಮಗಳು ಜಾನಕಿ' ಧಾರಾವಾಹಿಯ ನಿರಂಜನ್ ಯಾರು? ಅವರ ಹಿನ್ನೆಲೆ ಏನು?

    ಪ್ರತಿ ದಿನ ಟಿವಿ ಮುಂದೆ ಕೂತು ಧಾರಾವಾಹಿ ನೋಡುವವರಿಗೆ 'ಮಗಳು ಜಾನಕಿ' ಯಾರು ಎಂಬುದು ಗೊತ್ತಿರುತ್ತದೆ. ಆದರೆ, ಇಲ್ಲಿ ನಾವು ಗಾನವಿಯ ಪರಿಚಯ ಮಾಡಿಸುತ್ತೇವೆ.

    ಅಂದಹಾಗೆ, 'ಮಗಳು ಜಾನಕಿ' ಧಾರಾವಾಹಿಯ ನಟಿ ಗಾನವಿ 'ಫಿಲ್ಮಿಬೀಟ್ ಕನ್ನಡ'ಕ್ಕೆ ನೀಡಿದ ಪೂರ್ಣ ಸಂದರ್ಶನ ಇಲ್ಲಿದೆ ಓದಿ...

    ಸಂದರ್ಶನ : ನವಿ ಕನಸು (ನವೀನ್.ಎಂ.ಎಸ್)

    'ಮಗಳು ಜಾನಕಿ'ಯನ್ನು ನೋಡುವ ಬಳಗ ದೊಡ್ಡದಿದ್ದೆ. ಆದರೆ, ನಿಮ್ಮ ಧಾರಾವಾಹಿಯನ್ನು ನೀವು ಪ್ರತಿದಿನ ನೋಡುತ್ತೀರಾ.?

    'ಮಗಳು ಜಾನಕಿ'ಯನ್ನು ನೋಡುವ ಬಳಗ ದೊಡ್ಡದಿದ್ದೆ. ಆದರೆ, ನಿಮ್ಮ ಧಾರಾವಾಹಿಯನ್ನು ನೀವು ಪ್ರತಿದಿನ ನೋಡುತ್ತೀರಾ.?

    (ನಗುತ್ತಾ) ''ಖಂಡಿತ.. ನಾನು ದಿನ ಧಾರಾವಾಹಿಯನ್ನು ನೋಡುತ್ತೇನೆ. ರಾತ್ರಿ ಶೂಟಿಂಗ್ ಇದ್ದಾಗ ಮರು ದಿನ Voot ನಲ್ಲಿ ನೋಡುತ್ತೇನೆ. ಧಾರಾವಾಹಿಯಲ್ಲಿ ದಿನ ಏನ್ ಏನ್ ಆಗುತ್ತದೆ ಎಂದು ನೋಡಿದಾಗ ಇನ್ನೂ ಚೆನ್ನಾಗಿ ನಟಿಸಲು ಒಂದು ಹಿಡಿತ ಸಿಗುತ್ತದೆ. ನಿರ್ದೇಶಕರ ದೃಷ್ಟಿಕೋನ ಕೂಡ ಅರ್ಥ ಆಗುತ್ತದೆ.''

    ಜಾನಕಿ ಈಗ ತುಂಬ ಫೇಮಸ್ ಆಗಿದ್ದಾರೆ. ಸೋ, ನಿಮ್ಗೆ 'ಜಾನಕಿ' ಅಂದ್ರೆ ಇಷ್ಟನಾ ಅಥವಾ 'ಗಾನವಿ' ಅಂದ್ರೆ ಇಷ್ಟನಾ?

    ಜಾನಕಿ ಈಗ ತುಂಬ ಫೇಮಸ್ ಆಗಿದ್ದಾರೆ. ಸೋ, ನಿಮ್ಗೆ 'ಜಾನಕಿ' ಅಂದ್ರೆ ಇಷ್ಟನಾ ಅಥವಾ 'ಗಾನವಿ' ಅಂದ್ರೆ ಇಷ್ಟನಾ?

    ''ಗಾನವಿ ನನ್ನ ರಿಯಲ್ ಹೆಸರು. ಆದರೆ, ಈಗ ನನಗೆ ಜಾನಕಿ ಎಂದು ಹೊಸ ಹೆಸರು ಸಿಕ್ಕಿದೆ. ಜಾನಕಿ ಎಂದು ಯಾರೇ ಕರೆದರೂ ತುಂಬ ಉತ್ಸಾಹದಿಂದ ನೋಡುತ್ತೇನೆ. ಎರಡೂ ಹೆಸರುಗಳು ನನಗೆ ಇಷ್ಟ.. ಅದರಲ್ಲಿ ಯಾವುದು ಕರೆದರೂ ಖುಷಿ ಆಗುತ್ತದೆ.''

    ಗಂಟು-ಮೂಟೆ ಕಟ್ಟಿಕೊಂಡು ರಾತ್ರೋರಾತ್ರಿ ಮನೆಯಿಂದ ಹೊರಬಂದ ಮಗಳು 'ಜಾನಕಿ'.!ಗಂಟು-ಮೂಟೆ ಕಟ್ಟಿಕೊಂಡು ರಾತ್ರೋರಾತ್ರಿ ಮನೆಯಿಂದ ಹೊರಬಂದ ಮಗಳು 'ಜಾನಕಿ'.!

    ಜಾನಕಿ ಪಾತ್ರಕ್ಕೆ ನೀವು ಆಯ್ಕೆ ಆಗಿದ್ದು ಹೇಗೆ?

    ಜಾನಕಿ ಪಾತ್ರಕ್ಕೆ ನೀವು ಆಯ್ಕೆ ಆಗಿದ್ದು ಹೇಗೆ?

    ''ಈ ಅವಕಾಶ ಆಡಿಷನ್ ಮೂಲಕ ನನಗೆ ಸಿಕ್ಕಿತು. 25 ದಿನಗಳಿಂದ ಬೇರೆ ಬೇರೆ ಕಡೆ ಆಡಿಷನ್ ನೀಡುತ್ತಿದ್ದೆ. ಮುಂಚೆ ನಾನು ನಾಟಕ ಮಾಡುವಾಗ ಆಕ್ಟಿಂಗ್ ಮಾಡಬಹುದು ಎಂಬ ವಿಶ್ವಾಸ ಬಂತು. ಸೀತಾರಾಮ್ ಸರ್ ರೀತಿಯ ಡೈರೆಕ್ಟರ್ ಹಾಗೂ ಈ ರೀತಿಯ ಕಥೆಯಲ್ಲಿ ನಟಿಸಬೇಕು ಎಂಬ ಆಸೆ ಇತ್ತು. ಕೊನೆಗೂ ಅದು ಈಡೇರಿತು.''

    ಜಾನಕಿ ಪಾತ್ರಕ್ಕೆ ಏನಾದರೂ ಸಿದ್ಧತೆ ಮಾಡಿಕೊಂಡಿದ್ರಾ?

    ಜಾನಕಿ ಪಾತ್ರಕ್ಕೆ ಏನಾದರೂ ಸಿದ್ಧತೆ ಮಾಡಿಕೊಂಡಿದ್ರಾ?

    ''ಹೌದು, ಈ ಪಾತ್ರ ಸ್ವಲ್ಪ ಎಮೋಷನಲ್ ಆಗಿ ಇದೆ. ಅದಕ್ಕೆ ಸಟಲ್ ಆಗಿ ನಟಿಸಬೇಕು. ದಿನ ಆ ಪಾತ್ರದ ಬಗ್ಗೆ ಯೋಚನೆ ಮಾಡುತ್ತೇನೆ. ಇನ್ನಷ್ಟು ಆ ಪಾತ್ರಕ್ಕೆ ಹತ್ತಿರ ಆಗಲು ಪ್ರಯತ್ನ ಮಾಡುತ್ತೇನೆ.''

    ಜಾನಕಿ ಜೊತೆಗಿನ ಮದುವೆಗೆ ನಿರಂಜನ್ ಒಲ್ಲೆ.? ಜಾನಕಿ ಜೊತೆಗಿನ ಮದುವೆಗೆ ನಿರಂಜನ್ ಒಲ್ಲೆ.?

    ಜಾನಕಿ ಬಗ್ಗೆ ಎಲ್ಲರಿಗೆ ಗೊತ್ತಾಗಿದೆ, ಗಾನವಿ ಹೇಗೆ..?

    ಜಾನಕಿ ಬಗ್ಗೆ ಎಲ್ಲರಿಗೆ ಗೊತ್ತಾಗಿದೆ, ಗಾನವಿ ಹೇಗೆ..?

    ''ಗಾನವಿ ಚಿಕ್ಕಮಗಳೂರ ಹುಡುಗಿ. ಕ್ರಿಯೇಟಿವ್ ಡ್ಯಾನ್ಸ್ ಮೂಮೆಂಟ್ ಅಂತ ಒಂದು ಡ್ಯಾನ್ಸ್ ಫಾರ್ಮ್ ಅನ್ನು ನಾನು ಪ್ರಾಕ್ಟಿಸ್ ಮಾಡುತ್ತಿದ್ದೇನೆ. ಯುವ ಜನರಿಗೆ, ಮಕ್ಕಳಿಗೆ ಡ್ಯಾನ್ಸ್ ಹೇಳಿಕೊಡುತ್ತೇನೆ. ನನ್ನ ಪ್ರಕಾರ ನೃತ್ಯ ಮನರಂಜನೆ ಮಾತ್ರವಲ್ಲ, ಅದು ಶಿಕ್ಷಣ. ಇಡೀ ವಿಶ್ವದಲ್ಲಿ ಇರುವ ಎಲ್ಲ ರೀತಿಯ ಕಲೆಯನ್ನು ಕಲಿಯಬೇಕು ಎಂಬ ಆಸೆ ನನಗೆ ಇದೆ.''

    ಸೀತಾರಾಮ್ ಸರ್ ಜೊತೆಗೆ ಕೆಲಸ ಮಾಡಿದ ಅನುಭವ ಹೇಗಿತ್ತು?

    ಸೀತಾರಾಮ್ ಸರ್ ಜೊತೆಗೆ ಕೆಲಸ ಮಾಡಿದ ಅನುಭವ ಹೇಗಿತ್ತು?

    ''ಅವರು ಒಬ್ಬ ದೊಡ್ಡ ನಿರ್ದೇಶಕ. ಅವರ ಮಾತು ಕೇಳುತ್ತಿದ್ದರೆ ಎಷ್ಟೋ ವರ್ಷಗಳಿಂದ ಗೊತ್ತಿರುವ ಹಾಗೆ ಅನಿಸುತ್ತದೆ. ಅವರ ಮಗಳಾಗಿ ನಾನು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ. ಆದರೆ. ಅವರನ್ನು ನೋಡಿದಾಗ ನಮ್ಮ ತಂದೆಯನ್ನು ನೋಡಿದ ಹಾಗೆ ಆಗುತ್ತದೆ. ಅವರ ಜೊತೆಗೆ ಕೆಲಸ ಮಾಡುತ್ತಿರುವ ನಾನು ಲಕ್ಕಿ.''

    ಧಾರಾವಾಹಿಯಲ್ಲಿ ನೀವು ಆನಂದ್ ಅಥವಾ ನಿರಂಜನ್ ಇಬ್ಬರಲ್ಲಿ ಯಾರನ್ನು ಮದುವೆ ಆಗುತ್ತೀರಾ?

    ಧಾರಾವಾಹಿಯಲ್ಲಿ ನೀವು ಆನಂದ್ ಅಥವಾ ನಿರಂಜನ್ ಇಬ್ಬರಲ್ಲಿ ಯಾರನ್ನು ಮದುವೆ ಆಗುತ್ತೀರಾ?

    ''ನಾನು ಯಾರನ್ನು ಮದುವೆ ಆಗುತ್ತೇನೆ ಅಂತ ನನಗೂ ಗೊತ್ತಿಲ್ಲ. ಅಪ್ಪ, ಅಮ್ಮ, ಪ್ರೀತಿ, ಪ್ರತಿಷ್ಟೆ ಇದರ ಮಧ್ಯೆ ಜಾನಕಿ ಸಿಕ್ಕಿ ಹಾಕಿಕೊಂಡಿದ್ದಾಳೆ. ನೀವು ದಿನ ಧಾರಾವಾಹಿ ನೋಡಿ ನಾನು ಯಾರನ್ನ ಮದುವೆ ಆಗುತ್ತೇನೆ ಎನ್ನುವುದು ನಿಮಗೆ ಗೊತ್ತಾಗುತ್ತದೆ.''

    'ಮಗಳು ಜಾನಕಿ' ಅಪ್ಪ ಮಗಳ ಕಥೆ ಹೊಂದಿದೆ. ಸೋ, ನಿಮ್ಮ ತಂದೆಯ ಬಗ್ಗೆ ಏನು ಹೇಳುತ್ತಿರಾ?

    'ಮಗಳು ಜಾನಕಿ' ಅಪ್ಪ ಮಗಳ ಕಥೆ ಹೊಂದಿದೆ. ಸೋ, ನಿಮ್ಮ ತಂದೆಯ ಬಗ್ಗೆ ಏನು ಹೇಳುತ್ತಿರಾ?

    ''ನಮ್ಮ ತಂದೆಗೆ ನಾನು ಸಣ್ಣ ಮಗು. ನಾನು, ಅಪ್ಪ, ಅಮ್ಮ ಮೂರು ಜನ ಫ್ರೆಂಡ್ಸ್ ತರಹ ಇರುತ್ತೇವೆ. ಅವರೇ ನನಗೆ ಪ್ರೋತ್ಸಾಹ ನೀಡಿರುವುದು. ಕಲೆ ಬಗ್ಗೆ ಅವರಿಗೆ ಗೊತ್ತಿಲ್ಲ. ಆದರೆ, ನನಗೆ ಏನು ಇಷ್ಟನೋ ಅದು ಮಾಡು ಎಂಬ ಸ್ವಾತಂತ್ರ್ಯ ನೀಡಿದ್ದಾರೆ. ಅವರು ಧಾರಾವಾಹಿಯನ್ನು ಇಷ್ಟ ಪಟ್ಟಿದ್ದಾರೆ.''

    ನೀವು ಕ್ಯಾಮರಾ ಮುಂದೆ ಬಂದಿದ್ದು ಇದೇ ಮೊದಲೇ?

    ನೀವು ಕ್ಯಾಮರಾ ಮುಂದೆ ಬಂದಿದ್ದು ಇದೇ ಮೊದಲೇ?

    ''ಇದು ನನ್ನ ಮೊದಲ ಧಾರಾವಾಹಿ. ಆದರೆ, ಹಿಂದೆ ಕೆಲವು ಕಿರುಚಿತ್ರ ಮಾಡಿದ್ದೆ. 'ಮಗಳು ಜಾನಕಿ' ಧಾರಾವಾಹಿಯಲ್ಲಿ ಮೊದಲ ಸೀನ್ ಅನ್ನು ದೇವಸ್ಥಾನದಲ್ಲಿ ಶೂಟಿಂಗ್ ಮಾಡಿದ್ವಿ. ದೇವರ ಸನ್ನಿಧಿಯಲ್ಲಿ ನನ್ನ ಸೀರಿಯಲ್ ಜೀವನ ಶುರು ಆಗಿದ್ದು ಖುಷಿ ತಂದಿದೆ.

    ಟ್ರಾವೆಲಿಂಗ್ ಅಂದ್ರೆ ಇಷ್ಟ ಅಂತ ಹೇಳಿದ್ರಿ, ಇದುವರೆಗೆ ಯಾವ ಯಾವ ಊರು ಸುತ್ತಿದ್ದೀರಾ?

    ಟ್ರಾವೆಲಿಂಗ್ ಅಂದ್ರೆ ಇಷ್ಟ ಅಂತ ಹೇಳಿದ್ರಿ, ಇದುವರೆಗೆ ಯಾವ ಯಾವ ಊರು ಸುತ್ತಿದ್ದೀರಾ?

    ''ಕಲೆಗೆ ಸಂಬಂಧಪಟ್ಟ ಕೆಲಸಕ್ಕಾಗಿ ಟ್ರಾವೆಲ್ ಮಾಡುವುದಕ್ಕೆ ಇಷ್ಟ. ಕೇರಳ, ಚೆನ್ನೈ, ಪಾಂಡಿಚೆರಿ ಹೀಗೆ ಕೆಲವು ಕಡೆ ಹೋಗಿದ್ದೇನೆ. ಯಕ್ಷಗಾನ ಸೇರಿದಂತೆ ಬೇರೆ ಬೇರೆ ರೀತಿಯ ಕಲೆ ಇರುವ ಕರ್ನಾಟಕದ ಅನೇಕ ಕಡೆ ಸುತ್ತಿದ್ದೇನೆ.''

    ಧಾರಾವಾಹಿಯ ಟೈಟಲ್ ಸಾಂಗ್ ಸಖತ್ ಹಿಟ್ ಆಗಿದೆ, ನಿಮಗೂ ಆ ಹಾಡು ಇಷ್ಟನಾ?

    ಧಾರಾವಾಹಿಯ ಟೈಟಲ್ ಸಾಂಗ್ ಸಖತ್ ಹಿಟ್ ಆಗಿದೆ, ನಿಮಗೂ ಆ ಹಾಡು ಇಷ್ಟನಾ?

    ''ಆ ಹಾಡಿನ ಪ್ರತಿ ಪದ ಕೂಡ ಅದ್ಬುತ ಅರ್ಥ ಹೊಂದಿದೆ. 'ಅಗ್ನಿಯಿಂದ ಎದ್ದು ಬಂದ ಮಗಳು ಜಾನಕಿ..' ಎಂಬ ಸಾಲು ಕೇಳಿದರೆ ಒಂದು ಶಕ್ತಿ ಬರುತ್ತದೆ. ಸೀತಾರಾಮ್ ಸರ್ ಅವರ ಧಾರಾವಾಹಿಗಳಲ್ಲಿ ಹೆಣ್ಣಿನ ಶಕ್ತಿಯನ್ನು ಚೆನ್ನಾಗಿ ತೋರಿಸುತ್ತಾರೆ. ಅವರ ಹಿಂದಿನ ಧಾರಾವಾಹಿಗಳ ಹಾಡು ಕೂಡ ಇಂದಿಗೂ ಗುನುಗುತ್ತೇನೆ.''

    ಮುಂದೆ ಸಿನಿಮಾ ಅವಕಾಶ ಬಂದರೆ?

    ''ಮುಂದೆ ಏನಾಗುತ್ತದೆ ಅಂತ ಗೊತ್ತಿಲ್ಲ. ಚಾಲೆಂಜಿಂಗ್ ಪಾತ್ರಗಳು ಬಂದರೆ ಖಂಡಿತ ಸಿನಿಮಾ ಮಾಡುತ್ತಾನೆ. ಆದರೆ, ಸದ್ಯಕ್ಕೆ ಈ ಕಥೆ, ಪಾತ್ರ ಹಾಗೂ ತಂಡದ ಜೊತೆಗೆ ಇರಲು ಇಷ್ಟ ಪಡುತ್ತೇನೆ.''

    ಮುಂದಿನ ಕನಸು?

    ಮುಂದಿನ ಕನಸು?

    ''ಕಲಾವಿದೆ ಆಗಿಯೇ ಇರಬೇಕು.. ಕಲಾವಿದೆ ಅಂತ್ತಾನೆ ಗುರುತಿಸಿಕೊಳ್ಳಬೇಕು... ಕಲೆಯ ಜೊತೆಗೆ ಬದುಕಬೇಕು... ಎಲ್ಲ ರೀತಿಯ ಕಲೆಯನ್ನು ನೋಡಬೇಕು ಅದನ್ನು ಕಲಿಯಬೇಕು.. ಇದೇ ನನ್ನ ಕನಸು''

    English summary
    Kannada serial 'Magalu Janaki' actress Ganavi Laxman interview.
    Thursday, August 16, 2018, 15:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X