ಯಶ್‌ಗೆ ಛತ್ರಪತಿ ಶಿವಾಜಿ ಅವತಾರವೆತ್ತಿ ಎಂದ ಮಹಾರಾಷ್ಟ್ರ ಫ್ಯಾನ್ಸ್: ಕನ್ನಡಿಗರು ಏನಂದ್ರು ನೋಡಿ?
ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪಟ್ಟಕ್ಕೇರಿದ್ದಾರೆ. 'ಕೆಜಿಎಫ್ 2' ಸಿನಿಮಾ ರಿಲೀಸ್ ಆಗಿದ್ದೇ ಆಗಿದ್ದು ರಾಕಿ ಭಾಯ್ ರೇಂಜ್ ಬದಲಾಗಿದೆ. ದೇಶದ ಮೂಲೆ ಮೂಲೆಯಲ್ಲೂ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಇವರೆಲ್ಲರಿಗೂ ಯಶ್ ಮುಂದಿನ ಸಿನಿಮಾ ಬಗ್ಗೆ ಕುತೂಹಲ ದುಪ್ಪಟ್ಟಾಗಿದೆ. ಈ ಮಧ್ಯೆ ಒಂದೊಂದು ಕಡೆಯಿಂದ ಒಬ್ಬೊಬ್ಬರು ಒಂದು ಪಾತ್ರಕ್ಕೆ ಸಲಹೆ ನೀಡುತ್ತಿದ್ದಾರೆ.
Recommended Video

'ಕೆಜಿಎಫ್ 2' ಜೂನ್ 03ರಂದು 50 ದಿನಗಳನ್ನು ಯಶಸ್ವಿಯಾಗಿ ಪೂರೈಸಲಿದೆ. ಈ ಸಂದರ್ಭದಲ್ಲಿ ಯಶ್ ಮುಂದಿನ ಸಿನಿಮಾ ಅನೌನ್ಸ್ ಆಗುತ್ತೆ ಎಂದು ಗುಲ್ಲೆದ್ದಿದೆ. ಆದರೆ, ಯಶ್ ಹಾಗೂ ಅವರ ತಂಡ ಮಾತ್ರ ಸೈಲೆಂಟಾಗಿದೆ. ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಇದೂವರೆಗೂ ಚಿಕ್ಕದೊಂದು ಸುಳಿವು ಕೂಡ ನೀಡುತ್ತಿಲ್ಲ.
'ಕೆಜಿಎಫ್ 2' ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಭಾರತದ ಪ್ರತಿ ರಾಜ್ಯದಲ್ಲೂ ಯಶ್‌ಗೆ ಅಭಿಮಾನಿ ಸಂಘಗಳು ಹುಟ್ಟಿಕೊಂಡಿದ್ದಾರೆ. ಇವರೆಲ್ಲರೂ ಯಶ್ ಮುಂದಿನ ಸಿನಿಮಾ ನೋಡುವುದಕ್ಕೆ ಕಾತುರರಾಗಿದ್ದಾರೆ. ಅದರಲ್ಲೂ ಮಹಾರಾಷ್ಟ್ರದ ಯಶ್ ಅಭಿಮಾನಿಗಳಿಗೆ ರಾಕಿ ಭಾಯ್ ತಮ್ಮ ನಾಯಕನ ಅವತಾರದಲ್ಲಿ ನಟಿಸಬೇಕು ಅನ್ನುವ ಆಸೆ ವ್ಯಕ್ತಪಡಿಸಿದ್ದಾರೆ.

ಯಶ್ ಛತ್ರಪತಿ ಅವತಾರ
ಯಶ್ ಈಗ ಕೇವಲ ಕನ್ನಡದ ನಟನಾಗಿ ಉಳಿದಿಲ್ಲ. ರಾಕಿಂಗ್ ಸ್ಟಾರ್ ಮುಂದೆ ಯಾವುದೇ ಸಿನಿಮಾ ಮಾಡಬೇಕೆಂದಿದ್ದರೂ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿಯೇ ಯೋಚಿಸಬೇಕು. ಈ ಕಾರಣಕ್ಕೆ ಒಂದಿಷ್ಟು ಸಮಯ ತೆಗೆದುಕೊಂಡು ಮುಂದಿನ ಸಿನಿಮಾ ಅನೌನ್ಸ್ ಮಾಡಲು ಮುಂದಾಗಿದ್ದಾರೆ. ಈ ಮಧ್ಯೆ ಮಹಾರಾಷ್ಟ್ರದ ಯಶ್ ಅಭಿಮಾನಿಗಳು ಛತ್ರಪತಿ ಶಿವಾಜಿ ಪಾತ್ರದಲ್ಲಿ ನಟಿಸಿ ಎನ್ನುತ್ತಿದ್ದಾರೆ. ಶಿವಾಜಿ ಬಯೋಪಿಕ್ ಮಾಡುವಂತೆ ಕೇಳಿಕೊಳ್ಳುತ್ತಿದ್ದಾರೆ.
ಅಭಿಮಾನಿಗಳಿಂದಲೇ ಪೋಸ್ಟರ್
ಯಶ್ ಅಭಿಮಾನಿಗಳೇ ಛತ್ರಪತಿ ಶಿವಾಜಿಯ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದಾರೆ. ಈ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಯಶ್ ಕೂಡ ಈ ಫ್ಯಾನ್ ಮೇಡ್ ಪೋಸ್ಟರ್‌ನಲ್ಲಿ ಛತ್ರಪತಿ ಶಿವಾಜಿಯನ್ನು ಹೋಲುತ್ತಿದ್ದಾರೆ. ಈ ಮಧ್ಯೆ ಕನ್ನಡಿಗರು ಬೇರೊಂದು ಹೆಸರನ್ನು ಸೂಚಿಸುತ್ತಿದ್ದಾರೆ.

ಕನ್ನಡದ ಫ್ಯಾನ್ಸ್ ಆಸೆಯೇನು?
ಮರಾಠಿಗರಿಗೆ ಯಶ್, ಛತ್ರಪತಿ ಶಿವಾಜಿ ಪಾತ್ರದಲ್ಲಿ ನಟಿಸಬೇಕು. ಆ ಸಿನಿಮಾವನ್ನು ಮೂವಿ ಮಾಂತ್ರಿಕ ರಾಜಮೌಳಿ ನಿರ್ದೇಶನ ಮಾಡಬೇಕಂಬ ಆಸೆ. ಆದರಂತೆ ಕನ್ನಡದ ಯಶ್ ಅಭಿಮಾನಿಗಳಿಗೂ ಒಂದು ಆಸೆಯಿದೆ. ಇವರಿಗೆ ಯಶ್ ಇಮ್ಮಡಿ ಪುಲಕೇಶಿ ಅವತಾರೆವೆತ್ತಬೇಕು ಅಂತ ಆಸೆ. ಇವರಿಬ್ಬರ ಆಸೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಯಾರ ಆಸೆಯನ್ನು ಈಡೇರಿಸುತ್ತಾರೆ ಎನ್ನುವುದನ್ನು ನೋಡಬೇಕಿದೆ.

ಐತಿಹಾಸಿಕ ಸಿನಿಮಾ ಬಗ್ಗೆನೂ ಇದೆ ಆಸೆ
ಯಶ್ ಮುಂದಿನ ಸಿನಿಮಾ ನರ್ತನ್ ಜೊತೆ ಅನ್ನುವುದು ಬಹುತೇಕ ಪಕ್ಕ ಆದಂತಾಗಿದೆ. ಯಶ್ ಹಾಗೂ ನರ್ತನ್ ಕಾಂಬಿನೇಷನ್‌ನಲ್ಲಿ ಸಿನಿಮಾ ಹೇಗೆ ಮೂಡಿ ಬರಬಹುದು ಅನ್ನುವ ಕುತೂಹಲವಂತೂ ಇದ್ದೇ ಇದೆ. ಆದರೆ, ಯಶ್‌ಗೂ ಕೂಡ ಐತಿಹಾಸಿಕ ಸಿನಿಮಾದಲ್ಲಿ ಆಸೆ ಇದ್ದು, ಮುಂದಿನ ದಿನಗಳಲ್ಲಿ ಇಂತಹದ್ದೇ ಪಾತ್ರದಲ್ಲಿ ನಟಿಸಬಹುದು ಎನ್ನುತ್ತಿವೆ ಆಪ್ತ ಮೂಲಗಳು. ಇವೆಲ್ಲ ಏನೇ ಇದ್ರೂ, ಇಬ್ಬರ ಪಾತ್ರಗಳಲ್ಲೂ ಯಶ್ ನಟಿಸುತ್ತಾರಾ? ಅನ್ನೋದು ಪ್ರಶ್ನೆ.


Click it and Unblock the Notifications











