ಹೊಂಬಾಳೆ ಫಿಲ್ಮ್‌ನ ಸಿನಿಮ್ಯಾಟಿಕ್ ಯೂನಿವರ್ಸ್ ಮಹಾವತಾರ್ ಪರಶುರಾಮ್ to ಕಲ್ಕಿ 2 ಯಾವ್ಯಾವ ವರ್ಷ ರಿಲೀಸ್?
ಕನ್ನಡ ಚಿತ್ರರಂಗದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಕೊಟ್ಟಿದೆ. 'ಕೆಜಿಎಫ್', 'ಕೆಜಿಎಫ್ 2', 'ಕಾಂತಾರ', 'ಸಲಾರ್' ಅಂತಹ ಸಿನಿಮಾಗಳನ್ನು ನಿರ್ಮಾಣ ಬಳಿಕ ಭಾರತೀಯ ಚಿತ್ರರಂಗದಲ್ಲಿ ಕ್ರಾಂತಿಕಾರಿ ಹೆಜ್ಜೆಯನ್ನು ಇಟ್ಟಿತ್ತು. ಅದುವೇ 'ಮಹಾವತಾರ್ ನರಸಿಂಹ'. ಐದು ಭಾಷೆಗಳಲ್ಲಿ ಏಕಕಾಲಕ್ಕೆ ಈ ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಈ ಅನಿಮೇಷನ್ ಸಿನಿಮಾಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
'ಮಹಾವತಾರ ನರಸಿಂಹ' ಅನಿಮೇಷನ್ ಸಿನಿಮಾವನ್ನು ಅಶ್ವಿನ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಬಿಡುಗಡೆಯಾದಲ್ಲಿಂದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಾ ಮುಂದೆ ಸಾಗುತ್ತಿದೆ. ಈಗಾಗಲೇ ₹50 ಕೋಟಿ ಕ್ಲಬ್ ಸೇರಿರುವ ಈ ಸಿನಿಮಾ ಹೊಂಬಾಳೆ ಫಿಲ್ಮ್ಸ್ ಯಶಸ್ಸಿನ ಓಟಕ್ಕೆ ಮತ್ತೊಂದು ಗರಿ ಸೇರಿಕೊಂಡಂತೆ ಆಗಿದೆ. ಈಗಾಗಲೇ ಗೊತ್ತಿರುವ ಭಾರತದ ಪೌರಾಣಿಕ ಕಥೆಗಳಿಗೆ ಹೊಸ ದೃಶ್ಯ ವೈಭವವನ್ನು ನೀಡಿ, ಪ್ರೇಕ್ಷಕರನ್ನು ರೋಮಾಂಚಿತರನ್ನಾಗಿ ಮಾಡಿದೆ.

ಹೊಂಬಾಳೆ ಸಹ ನಿರ್ಮಾಣ ಮಾಡಿದ 'ಮಹಾವತಾರ ನರಸಿಂಹ' ಕಳೆದ 8 ದಿನಗಳಿಂದ ಭಾರತ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. 8 ದಿನಗಳ ಒಟ್ಟು ಬಾಕ್ಸಾಫೀಸ್ ಕಲೆಕ್ಷನ್ 60.5 ಕೋಟಿ ರೂಪಾಯಿ ಎಂದು ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಘೋಷಣೆ ಮಾಡಿದೆ. ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದಲ್ಲಿ ಈ ಸಿನಿಮಾದ ಕ್ರೇಜ್ ಹೆಚ್ಚಾಗಿರುವುದರಿಂದ ಹಿಂದಿ ಬೆಲ್ಟ್‌ನಿಂದಲೇ ಅತೀ ಹೆಚ್ಚು ಕಲೆಕ್ಷನ್ ಆಗಿದೆ. ಹಾಗಿದ್ದರೆ, 'ಮಹಾವತಾರ ನರಸಿಂಹ' ಒಂದೇ ಅಲ್ಲ. ಇಂತಹದ್ದೇ ಆರು ಅನಿಮಿಷನ್ ಸಿನಿಮಾಗಳು ಬರಲಿವೆ. ಆ ಸಿನಿಮಾಗಳು ಯಾವಾಗ ರಿಲೀಸ್ ಆಗುತ್ತವೆ? ಸಿನಿಮಾದ ಟೈಟಲ್ ಏನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಇತಿಹಾಸ ಬರೆದ 'ಮಹಾವತಾರ ನರಸಿಂಹ'
ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ 'ಮಹಾವತಾರ್ ನರಸಿಂಹ' ಭಾರತದ ಇತಿಹಾಸದಲ್ಲಿಯೇ ಅತೀ ಹೆಚ್ಚು ಗಳಿಸಿದ ಅನಿಮೇಷನ್ ಸಿನಿಮಾ ಎಂಬ ಇತಿಹಾಸವನ್ನು ಸೃಷ್ಟಿಸಿದೆ. ಈ ಸಿನಿಮಾದಲ್ಲಿ ಸನಾತನ ಮೌಲ್ಯಗಳ ಜೊತೆಗೆ ಜಾಗತಿಕ ಗುಣಮಟ್ಟಕ್ಕೆ ತಕ್ಕಂತೆ ಚಿತ್ರಕಥೆಯನ್ನು ಹೆಣೆದು ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಈ ಸಿನಿಮಾ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರ ಮನಸೂರೆಗೊಂಡಿದೆ. 'ಮಹಾವತಾರ ನರಸಿಂಹ' ಪುರಾಣ ಕಥೆಗಳಿಗೆ ಹೊಸ ದೃಶ್ಯವೈಭವ ನೀಡಿದ್ದು ಪ್ರೇಕ್ಷಕರ ಗಮನ ಸೆಳೆದಿದೆ.
ಇನ್ನು ಬರುತ್ತೆ ಆರು ಸಿನಿಮಾ
'ಮಹಾವತಾರ್ ನರಸಿಂಹ'ಗೆ ಸಿಕ್ಕಿರುವ ಯಶಸ್ಸಿನಿಂದ ಸ್ಪೂರ್ತಿಗೊಂಡಿರುವ ಹೊಂಬಾಳೆ ಫಿಲ್ಮ್ಸ್ ಇನ್ನೂ ಆರು ಇಂತಹದ್ದೇ ಮಹಾವತಾರದ ಪೌರಾಣಿಕ ಕಥೆಗಳನ್ನು ತೆರೆಮೇಲೆ ತರಲಿದೆ. 'ಮಹಾವತಾರ ನರಸಿಂಹ' ಸಿನಿಮಾದಿಂದ ಶುರುವಾಗಿರುವ ಈ ಜರ್ನಿ 'ಮಹಾವತಾರ್ ಕಲ್ಕಿ 2'ವರೆಗೂ ಮುಂದುವರೆಯಲಿದೆ. 2025ಕ್ಕೆ ಸಿನಿಮ್ಯಾಟಿಕ್ ಯುನಿವರ್ಸ್‌ನ ಮೊದಲ ಸಿನಿಮಾ ರಿಲೀಸ್ ಆಗಿದ್ದು, ಪ್ರತಿ ಎರಡು ವರ್ಷಕ್ಕೊಮ್ಮೆ ಒಂದೊಂದು ಸಿನಿಮಾ ರಿಲೀಸ್ ಆಗಲಿದೆ. ಆ ಸಿನಿಮಾಗಳು ಹೆಸರು ಹಾಗೂ ಬಿಡುಗಡೆಯಾಗುವ ವರ್ಷವನ್ನು ಹೊಂಬಾಳೆ ಫಿಲ್ಮ್ಸ್ ಅನೌನ್ಸ್ ಮಾಡಿದೆ.
'ಮಹಾವತಾರ್ ನರಸಿಂಹ' 2025
'ಮಹಾವತಾರ್ ಪರಷುರಾಮ' 2027
'ಮಹಾವತಾರ್ ರಘುನಂದನ್' 2029
'ಮಹಾವತಾರ್ ದ್ವಾರ್ಕದೇಶ್' 2031
'ಮಹಾವತಾರ್ ಗೋಕುಲನಂದ' 2033
'ಮಹಾವತಾರ್ ಕಲ್ಕಿ ಪಾರ್ಟ್ 1' 2035
'ಮಹಾವತಾರ್ ಕಲ್ಕಿ ಪಾರ್ಟ್ 2' 2037

ಅಪ್ಪಟ ಕನ್ನಡದ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಈಗ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪುನೀತ್ ರಾಜ್‌ಕುಮಾರ್ ನಟಿಸಿದ 'ರಾಜಕುಮಾರ್' ಸಿನಿಮಾದಿಂದ ಗೆಲುವಿನ ಯಾನ ಆರಂಭಿಸಿದ ಈ ಸಂಸ್ಥೆ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಸಿನಿಮಾದಿಂದ ಸಿನಿಮಾಗೆ ಬಿಗ್ ಪ್ರಾಜೆಕ್ಟ್‌ಗಳಿಗೆ ಕೈ ಗೆಲುವು ಸಾಧಿಸುತ್ತಲೇ ಇದೆ. ಎಷ್ಟೇ ಯಶಸ್ಸು ಕಂಡರೂ ಕೌಟುಂಬಿಕ ಮೌಲ್ಯಗಳು, ಸಂಪ್ರದಾಯ ಮತ್ತು ಭಾವನಾತ್ಮಕ ಕಥೆಗಳಿಗೆ ಹೆಚ್ಚು ಒತ್ತು ನೀಡುತ್ತಿದೆ. ಭಾರತ ಕಥೆಗಳನ್ನು ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ. ಕರ್ನಾಟಕದ ಸಿನಿಮಾ ನಿರ್ಮಾಣ ಸಂಸ್ಥೆ ಭಾರತದಾದ್ಯಂತ ತನ್ನ ಸಿನಿಮಾಗಳಿಂದ ಜನಪ್ರಿಯತೆ ಗಿಟ್ಟಿಸಿಕೊಂಡಿದೆ.
ವಿಭಿನ್ನ ಸಿನಿಮಾಗಳನ್ನು ಕೊಟ್ಟ ಸಂಸ್ಥೆ
ಹೊಂಬಾಳೆ ಫಿಲ್ಮ್ಸ್ ಕೇವಲ ಒಂದೇ ರೀತಿಯ ಸಿನಿಮಾಗಳನ್ನು ನಿರ್ಮಿಸಿಲ್ಲ. ಒಂದೊಂದು ಸಿನಿಮಾವೂ ವಿಶಿಷ್ಟ ಸಾಧನೆಯನ್ನು ಮಾಡಿದೆ.'ಕೆಜಿಎಫ್' ಮತ್ತು 'ಸಲಾರ್' ಮೂಲಕ ಅದ್ಧೂರಿ ಆಕ್ಷನ್ ಸಿನಿಮಾಗಳ ಜಗತ್ತನ್ನು ಕಟ್ಟಿಕೊಟ್ಟಿದೆ. 'ಕಾಂತಾರ' ಸಿನಿಮಾ ಕರ್ನಾಟಕದ ದೈವಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸಿಕೊಟ್ಟಿದೆ. ಈಗ 'ಮಹಾವತಾರ ನರಸಿಂಹ' ಭಾರತದ ಪೌರಾಣಿಕ ಕಥೆಯನ್ನು ಅದ್ಭುತ ದೃಶ್ಯ ವೈಭವವೊಂದಿಗೆ ಪ್ರೇಕ್ಷಕರನ್ನು ರಂಜಿಸಿದೆ.


Click it and Unblock the Notifications











