ಆಂಧ್ರದಲ್ಲಿ, ತಮಿಳುನಾಡು ಓಕೆ; ಬೆಂಗಳೂರು, ಮೈಸೂರಿನಲ್ಲೂ 'ಗುಂಟೂರು ಖಾರಂ'ಗೆ ಇಷ್ಟೊಂದು ಕ್ರೇಜ್ ಇದ್ಯಾ?
ಈಗಾಗಲೇ 'ಗುಂಟೂರು ಖಾರಂ' ಸಿನಿಮಾಗೆ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಲಾಗಿದೆ. ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ನಟನೆಯ ಈ ಸಿನಿಮಾಗೆ ಆಂಧ್ರ ಪ್ರದೇಶದಲ್ಲಿ ಕ್ರೇಜ್ ಕಮ್ಮಿಯೇನು ಇಲ್ಲ. ಇತ್ತೀಚೆಗಷ್ಟೇ ಈ ಸಿನಿಮಾ ಟ್ರೈಲರ್ ರಿಲೀಸ್ ಆಗಿತ್ತು. ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿ ಈ ಸಿನಿಮಾ ನಂ 1 ಸ್ಥಾನದಲ್ಲಿದೆ.
ತ್ರಿವಿಕ್ರಮ್ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾ 'ಗುಂಟೂರು ಖಾರಂ' 2024ರ ಮೊದಲ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಒಂದು. ಬಹಳ ದಿನಗಳ ಬಳಿಕ ತ್ರಿವಿಕ್ರಮ್ ಹಾಗೂ ಮಹೇಶ್ ಬಾಬು ಜೋಡಿ ಮತ್ತೆ ಒಟ್ಟಿಗೆ ಒಂದೇ ಸಿನಿಮಾದಲ್ಲಿ ಕೆಲಸ ಮಾಡಿದೆ. ಈ ಹಿಟ್ ಕಾಂಬಿನೇಷನ್ ಮತ್ತೊಂದು ಮೆಗಾ ಸಿನಿಮಾ ನೀಡುತ್ತಾ? ಎಂದು ಚಿತ್ರರಂಗ ಕೂಡ ಎದುರು ನೋಡುತ್ತಿದೆ.

'ಗುಂಟೂರ್ ಖಾರಂ' ಸಿನಿಮಾ ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕಳೆದ 24 ಗಂಟೆಗಳಲ್ಲಿ ಈ ಸಿನಿಮಾದ ಟ್ರೈಲರ್ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದ್ದು ದಾಖಲೆಗಳನ್ನು ಬರೆದಿದೆ. ಪ್ರಶಾಂತ್ ನೀಲ್ ನಿರ್ದೇಶಿಸಿದ ಪ್ರಭಾಸ್ ಸಿನಿಮಾ 'ಸಲಾರ್-ಸೀಸ್‌ಫೈಯರ್' ಟ್ರೈಲರ್ ದಾಖಲೆಯನ್ನು ಕೇವಲ 24 ಗಂಟೆಗಳಲ್ಲಿ ಹಿಂದಿಕ್ಕಿದೆ. 'ಗುಂಟೂರ್ ಖಾರಂ' 24 ಗಂಟೆಗಳಲ್ಲಿ 39 ಮಿಲಿಯನ್ ವೀವ್ಸ್ ಸಿಕ್ಕಿದ್ದರೆ, 'ಸಲಾರ್' 32 ಮಿಲಿಯನ್ ವೀವ್ಸ್ ದಾಖಲು ಮಾಡಲಾಗಿತ್ತು ಎನ್ನಲಾಗಿದೆ.
ಹೀಗಾಗಿ ಮಹೇಶ್ ಬಾಬು ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ಹೊಸ ದಾಖಲೆಗಳನ್ನು ಬರೆಯುವ ಎಲ್ಲಾ ಸಾಧ್ಯತೆಗಳು ಇವೆ. 'ಗುಂಟೂರ್ ಖಾರಂ' ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಲಾಗಿದೆ. ಭಾರತದಾದ್ಯಂತ ಮೊದಲ ದಿನದ ಸುಮಾರು 268 ಶೋಗಳ ಪೈಕಿ 83.83 ಲಕ್ಷ ಟಿಕೆಟ್‌ಗಳು ಸೇಲ್ ಆಗಿವೆ ಎಂದು ಬ್ಯುಸಿನೆಸ್ ಟುಡೇ ವರದಿ ಮಾಡಿದೆ. ಆದರೆ, ಅಡ್ವಾನ್ಸ್ ಬುಕಿಂಗ್‌ನಲ್ಲಿ ಅತೀ ಹೆಚ್ಚು ಟಿಕೆಟ್‌ಗಳನ್ನು ಕರ್ನಾಟಕ ಪ್ರಮುಖ ನಗರಗಳಲ್ಲಿ ಸೇಲ್ ಆಗಿದೆ ಅನ್ನೋದು ಗಮನಿಸಬೇಕಾದ ಅಂಶ.
ಹೌದು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಮಹೇಶ್ ಬಾಬು ನಟಿಸಿದ 'ಗುಂಟೂರ್ ಖಾರಂ' ಬಗ್ಗೆ ಸಹಜವಾಗಿಯೇ ಕ್ರೇಜ್ ಇದೆ. ಆದರೆ, ಗಮನಿಸಬೇಕಾದ ಅಂಶ ಏನಂದ್ರೆ, ಕರ್ನಾಟಕದ ಪ್ರಮುಖ ನಗರಗಳಲ್ಲೂ ಹೆಚ್ಚು ಟಿಕೆಟ್‌ಗಳು ಸೇಲ್ ಆಗಿವೆ. ಇದರಲ್ಲಿ ಬೆಂಗಳೂರು, ಮೈಸೂರು, ಮಂಗಳೂರು, ಶಿವಮೊಗ್ಗದಲ್ಲಿ ಹೆಚ್ಚು ಪ್ರತಿಕ್ರಿಯೆ ಸಿಕ್ಕಿದೆ ಎಂದು ಹೇಳಲಾಗಿದೆ.

ಬೆಂಗಳೂರಿನಲ್ಲಿ ಮೊದಲ ದಿನದ 107 ಶೋಗಳಲ್ಲಿ ಈಗಾಗಲೇ ಸುಮಾರು 18 ಶೋಗಳು ಹೌಸ್‌ಫುಲ್ ಆಗಿವೆ. ಹೀಗಾಗಿ ಸಿನಿಮಾ ಬಿಡುಗಡೆಗೆ ಇನ್ನು ಮೂರು ದಿನ ಬಾಕಿ ಉಳಿದಿದ್ದು, ಮತ್ತಷ್ಟು ಟಿಕೆಟ್‌ಗಳು ಹೆಚ್ಚು ಸೇಲ್ ಆಗುವ ಸಾಧ್ಯತೆಯಿವೆ. ಬೆಂಗಳೂರಿನಲ್ಲಿ ಸಹಜವಾಗಿ ತೆಲುಗು ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತೆ. ಆದರೆ, ಬೆಂಗಳೂರು ಬಿಟ್ಟು, ಮೈಸೂರು, ಮಂಗಳೂರು, ಶಿವಮೊಗ್ಗದಲ್ಲೂ ಟೆಕೆಟ್ ಖರೀದಿಯಾಗುತ್ತಿರೋದು ಕನ್ನಡ ಸಿನಿಮಾಗಳ ಆತಂಕ ಹೆಚ್ಚಿಸಿದೆ.
'ಗುಂಟೂರು ಖಾರಂ' ಸಿನಿಮಾದ ಅಡ್ವಾನ್ಸ್ ಬುಕಿಂಗ್ ಅನ್ನು ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು, ಒಡಿಶಾದಲ್ಲಿ ಓಪನ್ ಮಾಡಲಾಗಿದೆ. ಈ ರಾಜ್ಯಗಳ ಪ್ರಮುಖ ನಗರಗಳಲ್ಲಿ ಭಾರಿ ಸಂಖ್ಯೆಯಲ್ಲಿ ಟಿಕೆಟ್ ಸೇಲ್ ಆಗಿದೆ.


Click it and Unblock the Notifications











