AMB Kapali: ಕಪಾಲಿ ಇದ್ದ ಜಾಗದಲ್ಲಿ ಎದ್ದು ನಿಂತ ಮಹೇಶ್ ಬಾಬು ಮಲ್ಪಿಪ್ಲೆಕ್ಸ್; ಯಾವ ಆರಂಭ? ಸ್ಪೆಷಾಲಿಟಿ ಏನು?
ಬೆಂಗಳೂರಿನ ಐಕಾನಿಕ್ ಚಿತ್ರಮಂದಿರ 'ಕಪಾಲಿ' ಕನ್ನಡ ಚಿತ್ರರಂಗದ ಹೆಮ್ಮೆಯಾಗಿತ್ತು. 1968 ಫೆಬ್ರವರಿಯಲ್ಲಿ ಶುಭಾರಂಭ ಮಾಡಿದ್ದ ಚಿತ್ರಮಂದಿರ 3-ಪ್ರೊಜೆಕ್ಟರ್ ಹೊಂದಿದ್ದ ಭಾರತದ ಮೊದಲ ಚಿತ್ರಮಂದಿರ ಆಗಿತ್ತು. ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್‌ನಲ್ಲಿ ನೆಲೆ ನಿಂತಿದ್ದ 'ಕಪಾಲಿ' ಸಿನಿಮಾ ಮಂದಿಯ ನೆಚ್ಚಿನ ಚಿತ್ರಮಂಇದರ ಆಗಿತ್ತು. 1400ಕ್ಕೂ ಅಧಿಕ ಸೀಟ್‌ಗಳನ್ನು ಈ ಚಿತ್ರಮಂದಿರ ಹೊಂದಿತ್ತು. ಆದ್ರೀಗ ಇದರ ಜಾಗದಲ್ಲಿ ಮಲ್ಟಿಪ್ಪೆಕ್ಸ್ ನಿರ್ಮಾಣಗೊಳ್ಳುತ್ತಿದೆ.
ಕಪಾಲಿ ಚಿತ್ರಮಂದಿರಕ್ಕೆ ತನ್ನದೇ ಆದ ಇತಿಹಾಸವಿದೆ. ಈ ಚಿತ್ರಮಂದಿರದ ಹಿಂದೆ ಒಳ್ಳೆಯ ನೆನಪುಗಳೂ ಇವೆ. ಇನ್ನೊಂದು ಕಡೆ ಕೆಟ್ಟ ನೆನಪುಗಳೂ ಇವೆ. ಹೀಗಾಗಿದ್ದರೂ, ಈ ಥಿಯೇಟರ್‌ನಲ್ಲಿ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಯ ಸಿನಿಮಾಗಳು ಸಿಲ್ವರ್ ಜ್ಯುಬಿಲಿ ಸೆಲೆಬ್ರೆಷನ್ ಕಂಡಿವೆ. ಮೆಜೆಸ್ಟಿಕ್‌ನಲ್ಲಿ ಇದ್ದ ಅತೀ ದೊಡ್ಡ ಸಿಂಗಲ್ ಸ್ಕ್ರೀನ್ ಅನ್ನು 2017ರಲ್ಲಿ ಮುಚ್ಚಲಾಯಿತು.

ಥಿಯೇಟರ್ ಅನ್ನು ಕೆಡವಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಾಣ ಮಾಡುವ ಸುದ್ದಿ ಹೊರಬಿದ್ದಿತ್ತು. ಇದಾದ ಕೆಲವು ತಿಂಗಳಲ್ಲಿಯೇ ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ತನ್ನ ಪಾರ್ಟ್ನರ್ ಜೊತೆ ಕಪಾಲಿಯನ್ನು ಖರೀದಿ ಮಾಡಿದ್ದು ತಿಳಿದು ಬಂದಿತ್ತು. ಅಗಲೇ ಅಲ್ಲೊಂದು ಮಲ್ಟಿಪ್ಲೆಕ್ಸ್ ಆಗುತ್ತೆ ಅನ್ನೋದು ಸುಳಿವು ಸಿಕ್ಕಿತ್ತು. ಅದೀಗ ನಿರ್ಮಾಣಗೊಂಡು ಲೋಕಾರ್ಪಣೆಗೊಳ್ಳಲಿದೆ. ಎಂದಿನಿಂದ ಶುರುವಾಗುತ್ತೆ? ಮಹೇಶ್ ಬಾಬು ಬರುತ್ತಾರಾ? ಎಎಂಬಿ ಕಪಾಲಿಯ ವಿಶೇಷತೆ ಏನು? ತಿಳಿಯುವುದಕ್ಕೆ ಮುಂದೆ ಓದಿ.
ಮೆಜೆಸ್ಟಿಕ್‌ನಲ್ಲಿ ಎಎಂಬಿ-ಕಪಾಲಿ
ಮಹೇಶ್ ಬಾಬು ಈಗಾಗಲೇ ಹೈದರಾಬಾದ್‌ನಲ್ಲಿ ಎಎಂಬಿ ಮಲ್ಟಿಪ್ಲೆಕ್ಸ್ ಅನ್ನು ನಡೆಸುತ್ತಿದ್ದಾರೆ. ಅಲ್ಲಿ ಸೂಪರ್ ಸಕ್ಸಸ್ ಕಂಡಿದೆ. ಈಗ ಅದೇ ಹೆಸರಿನಲ್ಲಿ ಬೆಂಗಳೂರಿನಲ್ಲೂ ಮಲ್ಟಿಪ್ಲೆಕ್ಸ್ ನಿರ್ಮಾಣ ಮಾಡಿದ್ದು, ಇದೇ ಡಿಸೆಂಬರ್ 16ರಂದು ಶುಭಾರಂಭಗೊಳ್ಳಲಿದೆ. ಮಹೇಶ್ ಬಾಬು ಖುದ್ದಾಗಿ ಆಗಮಿಸಿ, ಎಎಂಬಿ-ಕಪಾಲಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಇದೆ.
ಎಎಂಬಿ-ಕಪಾಲಿ ವಿಶೇಷತೆಯೇನು?
ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ನಿರ್ಮಿಸಿರುವ 'ಎಎಂಬಿ ಕಪಾಲಿ' ಆಧುನಿಕ ತಂತ್ರಜ್ಞಾನದೊಂದಿಗೆ ಶುಭಾರಂಭಗೊಳ್ಳುತ್ತಿದೆ. ಇಲ್ಲಿ ಬರೋಬ್ಬರು 6 ಸ್ಕ್ರೀನ್‌ಗಳು ಇವೆ. ಎಲ್ಲವೂ 4K, 3D ಸ್ಕ್ರೀನ್‌ಗಳೇ ಆಗಿವೆ. ಈ ಆರೂ ಸ್ಕ್ರೀನ್‌ಗಳ ಕ್ಯಾಪಸಿಟಿ ಹೆಚ್ಚು ಕಡಿಮೆ 1500 ರಿಂದ 1900 ಸ್ಕ್ರೀನ್ ಎಂದು ಹೇಳಲಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇದು ಭಾರತದ ಮೊದಲ ಡಾಲ್ಬಿ ಲಾರ್ಜ್ ಸ್ಕ್ರೀನ್ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಈ ಸ್ಕ್ರೀನ್‌ನ ಅಂದಾಜು ಸೈಜ್ 60 ಫೀಟ್ ಎನ್ನಲಾಗಿದೆ.

ಸಿಂಗಲ್ ಸ್ಕ್ರೀನ್ ಏರಿಯಾದಲ್ಲಿ ಮಲ್ಟಿಪ್ಲೆಕ್ಸ್
ಇಲ್ಲಿವರೆಗೂ ಕೆಜಿ ರಸ್ತೆ ಹಾಗೂ ಮೆಜೆಸ್ಟಿಕ್ ಏರಿಯಾದಲ್ಲಿ ಸಿಂಗಲ್ ಸ್ಕ್ರೀನ್‌ಗಳೇ ಹೆಚ್ಚಿದ್ದವು. ಆದ್ರೀಗ ಒಂದೊಂದು ಸ್ಕ್ರೀನ್‌ಗಳು ಮುಚ್ಚಿ ಕಮರ್ಷಿಯಲ್ ಕಾಂಪ್ಲೆಕ್ಸ್ ಆಗುತ್ತಿವೆ. ಅದರಲ್ಲಿ ಕಪಾಲಿ ಚಿತ್ರಮಂದಿರ ಕೂಡ ಒಂದು ಇಂತಹ ಏರಿಯಾದಲ್ಲಿ ಮೊದಲ ಮಲ್ಟಿಪ್ಲೆಕ್ಸ್ ಎದ್ದು ನಿಲ್ಲುತ್ತಿದೆ. ಹೀಗಾಗಿ ಉಳಿದುಕೊಂಡಿರುವ ಕೆಲವೇ ಕೆಲವು ಸಿಂಗಲ್ ಸ್ಕ್ರೀನ್‌ಗಳು ಪೈಪೋಟಿ ಎದುರಿಸಬೇಕಾಸ ಸನ್ನಿವೇಶ ಎದುರಾಗಿದೆ.
ತಮಿಳು ಸಿನಿಮಾಗಳ ಎಂಟ್ರಿ
ಕೆಜಿ ರಸ್ತೆಯ ಹಾಗೂ ಮೆಜೆಸ್ಟಿಕ್ ಸುತ್ತಮುತ್ತ ಕನ್ನಡ ಹಾಗೂ ತೆಲುಗು ಸಿನಿಮಾಗಳಷ್ಟೇ ಪ್ರದರ್ಶನ ಆಗುತ್ತಿದ್ದವು. ಇದೂವರೆ ಈ ಏರಿಯಾದಲ್ಲಿ ತಮಿಳು ಸಿನಿಮಾ ಪ್ರದರ್ಶನ ಆಗಿದ್ದು ತೀರಾ ವಿರಳ. ಆದ್ರೀಗ ಮಹೇಶ್ ಬಾಬು ಅವರ ಎಎಂಬಿ ಕಪಾಲಿ ಮಲ್ಟಿಪ್ಲೆಕ್ಸ್ ಆರಂಭ ಆಗುತ್ತಿದೆ. ಇದರ ಬಳಿಕ ಕೆಲವೇ ದೂರಗಳಲ್ಲಿ ಪಿವಿಆರ್ ಐಶ್ವರ್ಯಾ ಆರಂಭ ಆಗುತ್ತಿದೆ. ಹೀಗಾಗಿ ತಮಿಳು ಸಿನಿಮಾಗಳು ಕೂಡ ಎಂಟ್ರಿ ಕೊಡುತ್ತವೆ. ಕನ್ನಡ ಸಿನಿಮಾಗಳು ಕೆಜಿ ರಸ್ತೆಯಲ್ಲಿಯೂ ಪರಭಾಷೆಯ ಸಿನಿಮಾಗಳೊಂದಿಗೆ ಫೈಟ್ ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು.


Click it and Unblock the Notifications











