ಬೆಂಗಳೂರಿನ ಕೆಜಿ ರಸ್ತೆಯಲ್ಲಿ ಎರಡು ಮಲ್ಟಿಪ್ಲೆಕ್ಸ್.. ಸಿಂಗಲ್ ಸ್ಕ್ರೀನ್ ಸಂಸ್ಕೃತಿ ಅಂತ್ಯವಾಗುತ್ತಾ?
ಕನ್ನಡ ಚಿತ್ರರಂಗದಲ್ಲೊಂದು ಪದ್ಧತಿಯಿದೆ. ಯಾವುದೇ ಸಿನಿಮಾ ರಿಲೀಸ್‌ಗೆ ರೆಡಿಯಾಗ್ತಿದ್ರೆ, ಜಾಹೀರಾತಿನಿಂದ ಕೆಲಸ ಆರಂಭ ಮಾಡುತ್ತಾರೆ. ನ್ಯೂಸ್ ಪೇಪರ್‌ಗಳಲ್ಲಿ ಪ್ರಮುಖ ಚಿತ್ರಮಂದಿರ ಯಾವುದು ಅನ್ನೋದನ್ನು ಮೊದಲು ಅನೌನ್ಸ್ ಮಾಡುತ್ತಾರೆ. ಅದರ ಮೇಲೆ ಅಭಿಮಾನಿಗಳು ಸಿನಿಮಾ ನೋಡುವುದಕ್ಕೆ ಪ್ಲ್ಯಾನ್ ಮಾಡಿಕೊಳ್ಳುತ್ತಾರೆ. ಸೂಪರ್‌ಸ್ಟಾರ್‌ಗಳು ಕೂಡ ಪ್ರಮುಖ ಚಿತ್ರಮಂದಿರಗಳಲ್ಲಿ ಫೈಟ್ ಮಾಡುತ್ತಾರೆ. ಕೆಲವರಿಗೆ ಕೆಲವು ಥಿಯೇಟರ್‌ಗಳು ಲಕ್ಕಿ. ಈ ಎಲ್ಲಾ ಪ್ರಮುಖ ಚಿತ್ರಮಂದಿರಗಳು ಇರೋದು ಬೆಂಗಳೂರಿನ ಕೆಜಿ ರಸ್ತೆಯಲ್ಲಿ.
ಇನ್ನು ಅಭಿಮಾನಿಗಳು ಯಾಕೆ ಅನೌನ್ಸ್‌ಮೆಂಟ್ ಆಗುವುದನ್ನೇ ಕಾಯುತ್ತಾರೆ? ಈ ಪ್ರಶ್ನೆಗೆ ಉತ್ತರ ಸಿಂಪಲ್. ಆ ಪ್ರಮುಖ ಚಿತ್ರಮಂದಿರದ ಮುಂದೆ ಅಭಿಮಾನಿಗಳು ಸಂಭ್ರಮಿಸುವುದಕ್ಕೆ ವಾರದ ಮೊದಲೇ ರೆಡಿಯಾಗುತ್ತಾರೆ. ಅಲ್ಲಿ ಬಿಡುಗಡೆಗೆ ಒಂದು ದಿನ ಮೊದಲು ಕಟೌಟ್ ನಿಲ್ಲಿಸಿರುತ್ತಾರೆ. ರಾತ್ರಿಯಿಂದಲೇ ಮಾರುದ್ಧದ ಹೂವಿನ ಹಾರ ಹಾಕಿ ಬೆಳಗ್ಗೆ ಇನ್ನೇನು ರಿಲೀಸ್ ಆಗಬೇಕು ಅನ್ನುವಾಗ ಲೀಟರ್‌ಗಟ್ಟಲೇ ಹಾಲುಗಳನ್ನು ಸುರಿದು ಖುಷಿ ಪಡುತ್ತಾರೆ.

ಹಾಗಂತ ಸಂಭ್ರಮ ಇಲ್ಲಿಗೆ ಮುಗಿದಿಲ್ಲ. ಸಿನಿಮಾದ ಫಸ್ಟ್ ಡೇ ಫಸ್ಟ್ ಶೋ ಆರಂಭ ಆಗುವುದಕ್ಕೂ ಮುನ್ನ ಡೊಳ್ಳು ಕುಣಿತ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಈ ಕಾರಣಕ್ಕೆ ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಚಿತ್ರಮಂದಿರಗಳು ಸಿನಿಮಾದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾ ಬಂದಿವೆ. ಆದ್ರೀಗ ಈ ಸಿಂಗಲ್ ಸ್ಕ್ರೀನ್‌ಗಳ ಅಳಿವಿನ ಅಂಚಿನಲ್ಲಿವೆ. ಈಗಿರುವ ಬೆರಳೆಣಿಕೆಯಷ್ಟು ಸಿಂಗಲ್ ಸ್ಕ್ರೀನ್‌ಗಳ ಕಥೆ ಏನಾಗುತ್ತೋ? ಅದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಸದ್ಯ ಇದೇ ಕೆಜಿ ರಸ್ತೆಯಲ್ಲಿ ಎರಡು ಮಲ್ಟಿಪ್ಲೆಕ್ಸ್‌ಗಳು ಬರಲಿವೆ. ಆ ಮೇಲೆ ಇದೇ ಸೆಲೆಬ್ರೆಷನ್ ಇರುತ್ತಾ? ಅನ್ನೋದು ಸದ್ಯದ ಪ್ರಶ್ನೆ.
ಮುಂದೆ ಓದಿ
ಬೆಂಗಳೂರಿನ ಕೆಜಿ ರಸ್ತೆಯಲ್ಲಿ ಎರಡು ಮಲ್ಟಿಪ್ಲೆಕ್ಸ್ ಎದ್ದೇಳಲಿವೆ.
ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ 'ಎಎಂಬಿ'
ರಾಧಿಕಾ ಕುಮಾರಸ್ವಾಮಿ ಮಾಲ್‌ನಲ್ಲಿ ಪಿವಿಆರ್ ಮಲ್ಟಿಪ್ಲೆಕ್ಸ್
ಎಬಿಎಂ- ಪಿವಿಆರ್ ಬಂದರೆ, ಸಿಂಗಲ್ ಸ್ಕ್ರೀನ್‌ಗಳ ಕಥೆಯೇನು?

ಹೌದು, ಕೆಜೆ ರಸ್ತೆಯಲ್ಲಿದ್ದ ಐಕಾನಿಕ್ ಥಿಯೇಟರ್‌ಗಳಲ್ಲಿ ಕಪಾಲಿ ಕೂಡ ಒಂದು. ಅತೀ ದೊಡ್ಡ ಥಿಯೇಟರ್ 1112 ಸೀಟ್‌ಗಳಿರುವ ಈ ಚಿತ್ರಮಂದಿರ 1968ರಲ್ಲಿ ಆರಂಭ ಆಗಿತ್ತು. ಮೊದಲ ಸಿನಿಮಾ ಡಾ.ರಾಜ್‌ಕುಮಾರ್ ನಟಿಸಿದ ಮಣ್ಣಿನ ಮಗ. ಈ ಸಿನಿಮಾ 100 ದಿನಗಳನ್ನು ಪೂರೈಸಿತ್ತು. ಹೀಗೆ ಹಲವು ಸೂಪರ್ ಹಿಟ್ ಸಿನಿಮಾಗಳು ಇಲ್ಲಿ ತೆರೆಕಂಡಿವೆ. ನಾಲ್ಕೂವರೆ ದಶಕಗಳಿಗೂ ಹೆಚ್ಚು ಕಾಲ ಸಿನಿಮಾ ಪ್ರದರ್ಶನ ಮಾಡಿದ ಬಳಿಕ ಚಿತ್ರಮಂದಿರವನ್ನು ಮಾರುವ ನಿರ್ಧಾರಕ್ಕೆ ಬರಲಾಯ್ತು. ಇದೇ ಐಕಾನಿಕ್ ಕಪಾಲಿ ಚಿತ್ರಮಂದಿರವನ್ನು ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಹಾಗೂ ಏಷ್ಯಯನ್ ಸಿನಿಮಾಸ್ ಖರೀದಿ ಮಾಡಿವೆ. ಈಗಾಗಲೇ ಈ ಚಿತ್ರಮಂದಿರವನ್ನು ಉರುಳಿಸಿ, ಇಲ್ಲಿ ಅವರದ್ದೇ AMB ಮಾಲ್ ಕಟ್ಟುತ್ತಿದ್ದಾರೆ. ಹೆಚ್ಚು ಕಡಿಮೆ 44 ಸಾವಿರ ಚದರ ಅಡಿ ವಿಸ್ತೀರ್ಣದ ಈ ಜಾಗದಲ್ಲಿ ಮಾಲ್ ಜೊತೆಗೆ ಆರು ಸ್ಕ್ರೀನ್‌ಗಳಿಗೆ ಮಲ್ಟಿಪ್ಲೆಕ್ಸ್ ತಲೆ ಎತ್ತಲಿದೆ.
ಇನ್ನೊಂದು ಕಡೆ ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರಗಳಾದ ಸಂತೋಷ, ನರ್ತಕಿ ಚಿತ್ರಮಂದಿರಗಳು ಇರುವ ಮುಂಭಾಗದಲ್ಲಿ ಐಶ್ವರ್ಯಾ ಮಾಲ್ ತಲೆ ಎತ್ತುತ್ತಿದೆ. ಇದರ ಅಲ್ಲೂ ಕೂಡ ಪಿವಿಆರ್ ಸಿನಿಮಾಸ್ ಬರುತ್ತಿದೆ. ಇಲ್ಲೂ ಆರೇಳು ಸ್ಕ್ರೀನ್‌ಗಳು ನಿರ್ಮಾಣ ಆಗುತ್ತಿದೆ. ಈ ಎರಡು ಮಲ್ಟಿಪ್ಲೆಕ್ಸ್‌ಗಳಿಂದ ಸಿಂಗಲ್ ಸ್ಕೀನ್‌ಗಳು ಕಣ್ಮರೆಯಾಗುತ್ತವೆಯೇ? ಸಿನಿಮಾ ಮಂದಿ ಏನು ಹೇಳ್ತಾರೆ?

ಕೆಜಿ ರಸ್ತೆಯಲ್ಲಿ ಮಲ್ಟಿಪ್ಲೆಕ್ಸ್ ಎಂಟ್ರಿಗೆ ಸಿನಿಮಾ ಮಂದಿ ಖುಷಿಯಾಗಿದ್ದಾರೆ. ಇದರಿಂದ ಕನ್ನಡ ಚಿತ್ರರಂಗಕ್ಕೆ ಅನುಕೂಲವೇ ಹೊರತು. ತೊಂದರೆ ಏನೂ ಆಗುವುದಿಲ್ಲವೆಂದು ಹೇಳುತ್ತಿದ್ದಾರೆ. ನಿರ್ದೇಶಕ-ನಿರ್ಮಾಪಕ ಆರ್.ಚಂದ್ರು ಪ್ರಕಾರ "ಈ ಆಡಿಯನ್ಸ್ ಬದಲಾಗಿದ್ದಾರೆ. ಈಗ ಸಿನಿಮಾಗಳನ್ನು ನೋಡುತ್ತಿರುವವರು Gen Z ಕಿಡ್ಸ್. ಹಾಗೇ ಹಿಂದೆ ಸಿನಿಮಾ ನೋಡುವುದಕ್ಕೆ ಬರುತ್ತಿರೋ ಈಗ ಚಿತ್ರಮಂದಿರಕ್ಕೆ ಬರುತ್ತಿಲ್ಲ. ಓಟಿಟಿಯಲ್ಲಿ ಕೂತು ನೋಡುವಂತಾಗಿದ್ದಾರೆ. ಸೂಪರ್‌ಸ್ಟಾರ್ ಇದ್ದರೆ ಮಾತ್ರ ಬರುತ್ತಾರೆ. ಅದೂ ಎಸಿ ಇರಬೇಕು, ಸೌಂಡ್ ಚೆನ್ನಾಗಿ ಇರಬೇಕು ಅಂತ ಬಯಸುತ್ತಾರೆ. ಕೆಜಿ ರಸ್ತೆಯಲ್ಲಿ ಮಲ್ಟಿಪ್ಲೆಕ್ಸ್ ಬರುವುದರಿಂದ ನಮಗೆ ಒಳ್ಳೆಯದೇ ಹೊರತು ಕೆಟ್ಟದ್ದಲ್ಲ" ಎನ್ನುತ್ತಾರೆ. ಆರ್.ಚಂದ್ರು.
ಕೆಜಿ ರಸ್ತೆಯಲ್ಲಿ ಒಂದೊಂದು ಥಿಯೇಟರ್‌ಗಳನ್ನು ಕೆಡವುತ್ತಿದ್ದಾರೆ. ಕೆಲವು ವರ್ಷಗಳ ಹಿಂದಷ್ಟೇ ಸಾಗರ್, ಮೇನಕಾ, ಕಲ್ಪನಾ, ಮೆಜೆಸ್ಟಿಕ್, ಕಪಾಲಿ, ಮ್ಯೂವಿಲ್ಯಾಂಡ್ ಸೇರಿದಂತೆ ಹಲವು ಚಿತ್ರಮಂದಿರಗಳು ಇದ್ದವು. ಇವುಗಳು ಈಗ ಕೇವಲ ನೆನಪಾಗಿದೆಯಷ್ಟೇ. ಆದರೆ, ಸಿಂಗಲ್ ಸ್ಕ್ರೀನ್ ಹೋದರೂ ಆ ಜಾಗದಲ್ಲಿ ಐದಾರು ಸ್ಕ್ರೀನ್‌ಗಳು ಬಂದಿದ್ದಕ್ಕೆ ಸಿನಿಮಾ ಮಂದಿಗೆ ಸಮಾಧಾನ ತಂದಿದೆ.
"ಈ ಆಡಿಯನ್ಸ್ ಬದಲಾಗಿದ್ದಾರೆ. ಈಗ ಸಿನಿಮಾಗಳನ್ನು ನೋಡುತ್ತಿರುವವರು Gen Z ಕಿಡ್ಸ್. ಹಾಗೇ ಹಿಂದೆ ಸಿನಿಮಾ ನೋಡುವುದಕ್ಕೆ ಬರುತ್ತಿರೋ ಈಗ ಚಿತ್ರಮಂದಿರಕ್ಕೆ ಬರುತ್ತಿಲ್ಲ. ಓಟಿಟಿಯಲ್ಲಿ ಕೂತು ನೋಡುವಂತಾಗಿದ್ದಾರೆ. ಸೂಪರ್‌ಸ್ಟಾರ್ ಇದ್ದರೆ ಮಾತ್ರ ಬರುತ್ತಾರೆ. ಅದೂ ಎಸಿ ಇರಬೇಕು, ಸೌಂಡ್ ಚೆನ್ನಾಗಿ ಇರಬೇಕು ಅಂತ ಬಯಸುತ್ತಾರೆ. ಹೀಗಾಗಿ ಕ್ರಮೇಣವಾಗಿ ಎಲ್ಲರೂ ಇಲ್ಲಿಗೆ ಬಂದು ಬಿಡುತ್ತಾರೆ. ಹಳೆಯ ಸಂಭ್ರಮಗಳೆಲ್ಲ ಕಾಲ ಬದಲಾದಂತೆ ಬದಲಾಗುತ್ತಿದೆ." ಎನ್ನುತ್ತಾರೆ ಆರ್. ಚಂದ್ರು.
ಥಿಯೇಟರ್ ಮುಂದೆ ಸೆಲೆಬ್ರೆಷನ್ ಮಾತ್ರ ಇನ್ಮುಂದೆ ಮರೀಚೆಕೆಯಾಗಬಹುದು. ಫಸ್ಟ್ ಡೇ ಫಸ್ಟ್ ಶೋ ಚಿತ್ರಮಂದಿರದ ಒಳಗೆ ಸ್ಕ್ರೀನ್ ಮುಂದೆ ಆಗುತ್ತಿದ್ದ ಸಂಭ್ರಮ ಕಮ್ಮಿ ಆಗಬಹುದು. ಕೇವಲ ಕನ್ನಡ ಸಿನಿಮಾಗಳಷ್ಟೇ ಪ್ರದರ್ಶನ ಕಾಣುತ್ತಿದ್ದ ಕಡೆ ಹಲವು ಭಾಷೆಯ ಸಿನಿಮಾಗಳು ಪ್ರದರ್ಶನ ಆಗುತ್ತವೆ ಅಷ್ಟೇ.


Click it and Unblock the Notifications











