ಮೊದಲನೇ ಸಿನಿಮಾದ ಮೊದಲ ಟಿಕೆಟ್ ಖರೀದಿಸಿದ ಮಾಲಾಶ್ರೀ ಪುತ್ರಿ: 'ಕಾಟೇರ' ಬಗ್ಗೆ ಹೇಳಿದ್ದೇನು?

ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕಾಟೇರ' ಸಿನಿಮಾದ ಹವಾ ಕ್ಷಣ ಕ್ಷಣಕ್ಕೂ ಜೋರಾಗುತ್ತಲೇ ಇದೆ. ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ಕ್ಷಣಗಳು ಬಾಕಿಯಿದೆ. ಕೊನೆಯ ಹಂತದಲ್ಲಿ 'ಕಾಟೇರ' ಸಿನಿಮಾದ ಪ್ರಚಾರ ಕೆಲಸ ಜೋರಾಗಿಯೇ ಸಾಗುತ್ತಿದೆ. ಇಡೀ ಚಿತ್ರತಂಡ ಸಿನಿಮಾ ಬಿಡುಗಡೆಯಾಗುತ್ತಿರುವ ಸಂಭ್ರಮದಲ್ಲಿದೆ.

'ಕಾಟೇರ' ದರ್ಶನ್ ವೃತ್ತಿ ಬದುಕಿನ ವಿಶಿಷ್ಠ ಸಿನಿಮಾ. ಈ ಹಿಂದೆ ಬಂದ 55 ಸಿನಿಮಾಗಳ ಪೈಕಿ ಇದು ವಿಭಿನ್ನವಾಗಿ ನಿಲ್ಲುತ್ತೆ ಅಂತ ಚಿತ್ರತಂಡವೇ ಹೇಳಿಕೊಂಡಿದೆ. ಈ ಬಾರಿ ದರ್ಶನ್‌ಗೆ ನಾಯಕಿಯಾಗಿ ಕನಸಿನ ರಾಣಿ ಮಾಲಾಶ್ರೀ ಪುತ್ರಿ ಆರಾಧನಾ ನಟಿಸಿದ್ದಾರೆ. ಇದು ಅವರ ಮೊದಲ ಸಿನಿಮಾ ಕೂಡ ಹೌದು.

Malashree daughter Aradhana got her first movie kaatera ticket video viral

ಒಂದ್ಕಡೆ ಹೊಸ ಲುಕ್‌ನಲ್ಲಿ ದರ್ಶನ್ ನೋಡುವುದಕ್ಕೆ ಕಾತುರರಾಗಿದ್ದರೆ, ಇನ್ನೊಂದು ಕಡೆ ಕನಸಿನ ರಾಣಿ ಮಾಲಾಶ್ರೀ ಪುತ್ರಿಯನ್ನು ತೆರೆಮೇಲೆ ನೋಡುವುದಕ್ಕೆ ಅಷ್ಟೇ ಕುತೂಹಲ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ತನ್ನ ಮೊದಲ ಸಿನಿಮಾದ ಮೊದಲ ಟಿಕೆಟ್ ಖರೀದಿ ಮಾಡಿ ಆರಾಧನಾ ಸಂಭ್ರಮ ಪಟ್ಟಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಮೊದಲ ಟಿಕೆಟ್ ಖರೀದಿ ಮಾಡಿದ ಬಳಿಕ ಆರಾಧನಾ ವಿಡಿಯೋದಲ್ಲಿ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಮಿಡ್‌ ನೈಟ್ ಶೋ ನೋಡುವುದಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ಆರಾಧನಾ ಅಷ್ಟೇ ದರ್ಶನ್ ಅಭಿಮಾನಿಗಳು ಕೂಡ ನಟಿಯನ್ನು ಭೇಟಿ ಮಾಡುವುದಕ್ಕೆ ಎದುರು ನೋಡುತ್ತಿದ್ದಾರೆ.

"ನನ್ನ ಮೊದಲನೇ ಸಿನಿಮಾ ಮೊದಲನೇ ಟಿಕೆಟ್. ನಾಳೆ ಸಿದ್ದೇಶ್ವರ ಥಿಯೇಟರ್‌ಗೆ ಮಿಡ್ ನೈಟ್ ನಿಮ್ಮೆಲ್ಲರ ಜೊತೆ ನಾನು ಮೂವಿ ನೋಡುವುದಕ್ಕೆ ಬರುತ್ತಿದ್ದೇನೆ. ಸಿಗೋಣ" ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಕನಸಿನ ರಾಣಿ ಮಾಲಾಶ್ರೀ ಕನಸು 'ಕಾಟೇರ' ಸಿನಿಮಾ ಮೂಲಕ ಈಡೇರುತ್ತಿದೆ. ತಮ್ಮಂತೆಯೇ ಮಗಳನ್ನು ಸ್ಟಾರ್ ನಟಿಯನ್ನಾಗಿ ಮಾಡಬೇಕು ಅನ್ನೋ ಆಸೆಗೆ ಇನ್ನೇನು ಕೆಲವು ಕ್ಷಣಗಳು ಬಾಕಿ ಉಳಿದಿದೆ. ಅಲ್ಲದೆ ಕೋಟಿ ನಿರ್ಮಾಪಕ ದಿವಂಗತ ರಾಮು ಅವರ ಕನಸು ಕೂಡ ಇದೇ ಆಗಿತ್ತು. ಮಗಳನ್ನು ಟಾಪ್ ನಾಯಕಿಯನ್ನಾಗಿ ಮಾಡಬೇಕು ಎಂದಿತ್ತು.

Malashree daughter Aradhana got her first movie kaatera ticket video viral

ಆರಾಧನಾ ಮೊದಲ ಸಿನಿಮಾದಲ್ಲಿಯೇ ಜಾಕ್‌ಪಾಟ್ ಹೊಡೆದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂತಹ ನಟರೊಂದಿಗೆ ಮೊದಲ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ದರ್ಶನ್ ಹಾಗೂ ಆರಾಧನಾ ಜೋಡಿ ತೆರೆಮೇಲೆ ಹೇಗೆ ಕಾಣುತ್ತೆ? ಪ್ರೇಕ್ಷಕರು ಈ ಜೋಡಿಯನ್ನು ನೋಡಿ ಏನಂತಾರೆ? ಅನ್ನೋದನ್ನು ತಿಳಿದುಕೊಳ್ಳುವುದಕ್ಕೆ ಇಡೀ ಕನ್ನಡ ಚಿತ್ರರಂಗವೇ ಕಾದು ಕೂತಿದೆ.

'ಕಾಟೇರ' ಸಿನಿಮಾ ಸೆಟ್ಟೇರಿದಾಗ ಆರಾಧಾನಾ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸಿದ್ದರು. "ಇದು ಅನಿರೀಕ್ಷಿತವಾಗಿ ನನಗೆ ಸಿಕ್ಕಿದ ಆಫರ್. ಈಗ ಈ ಸಿನಿಮಾ ಮಾಡುತ್ತಿದ್ದೇನೆ. ದರ್ಶನ್ ಸರ್ ಅವರೊಂದಿಗೆ ಹಾಗೂ ರಾಕ್‌ಲೈನ್ ಪ್ರೊಡಕ್ಷನ್ ಅವರೊಂದಿಗೆ ಮಾಡುತ್ತಿದ್ದೇನೆ ಅಂತ ಅನಿಸುತ್ತಿದೆ. ನಾನು ತುಂಬಾ ಚಿಕ್ಕವಳಿದ್ದಾಗ ನಾಚಿಕೆ ಸ್ವಭಾವವಿತ್ತು. ಈಗ ತರಬೇತಿ ತೆಗೆದುಕೊಂಡು, ಆಸಕ್ತಿ ಇಟ್ಟುಕೊಂಡು ಬಂದಿದ್ದೇನೆ." ಎಂದು ಮೊದಲ ಸಿನಿಮಾ ಬಗ್ಗೆ ಮಾತಾಡಿದ್ದರು.

More from Filmibeat

English summary
Malashree daughter Aradhana took her first movie ticket
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X