"ನನ್ನ ಮೊದಲ ಸಿನಿಮಾಗೆ ಮೊದಲು ಕನ್ನಡಿ ಹಿಡಿದಿದ್ದೇ ಬೆಳ್ಳುಳ್ಳಿ ಕಬಾಬ್ ಚಂದ್ರು"- ನಟಿ ಮಾಲಾಶ್ರೀ

ಇತ್ತೀಚೆಗೆ ಸೋಶಿಯಲ್ ಮೀಡಿಯಾ ಕ್ರೇಜ್ ಹೆಚ್ಚಿರುವುದರಿಂದ ಪ್ರತಿಭೆ ಇರೋರು ರಾತ್ರೋ ರಾತ್ರಿ ಸ್ಟಾರ್‌ಗಳಾಗುತ್ತಿದ್ದಾರೆ. ಹೀಗೆ ಸ್ಟಾರ್‌ಗಳಾದವರು ಸೋಶಿಯಲ್ ಮೀಡಿಯಾದಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಇತ್ತೀಚೆಗೆ ಬೆಳ್ಳುಳ್ಳಿ ಕಬಾಬ್ ಮಾಡಿ ಫೇಮಸ್ ಆಗಿರುವ ಚಂದ್ರು ಕೂಡ ಜನಪ್ರಿಯರಾಗಿದ್ದರು.

ಬೆಳ್ಳುಳ್ಳಿ ಕಬಾಬ್ ಚಂದ್ರು ಹಾಗೂ ರಾಹುಲ್ ಇಬ್ಬರೂ ಜನಪ್ರಿಯತೆ ಪೀಕ್‌ನಲ್ಲಿತ್ತು. ಇದೇ ಜೋಷ್‌ನಲ್ಲಿ ಚಂದ್ರು ತಮ್ಮದೇ ಒಂದು ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಈ ಚಾನೆಲ್‌ಗೆ ಕನಸಿನ ರಾಣಿ ಮಾಲಾಶ್ರೀ ಸಂದರ್ಶನವನ್ನೂ ನೀಡಿದ್ದಾರೆ. ಇದರಲ್ಲಿ ತಮ್ಮ ಮೊದಲ ಸಿನಿಮಾದಿಂದ ಚಂದ್ರು ಕೆಲಸ ಮಾಡುತ್ತಿದ್ದದನ್ನು ನೆನಪಿಸಿಕೊಂಡಿದ್ದಾರೆ.

Malashree revealed about Bellulli Kabab Chandru and cooking talent

ಬೆಳ್ಳುಳ್ಳಿ ಕಬಾಬ್ ಚಂದ್ರು ಹೋಟೆಲ್ ಆರಂಭ ಮಾಡುವುದಕ್ಕೂ ಮುನ್ನ ಮೇಕಪ್ ಆರ್ಟಿಸ್ಟ್ ಆಗಿದ್ದರು. ಸಾಕಷ್ಟು ಕನ್ನಡ ಸಿನಿಮಾಗಳಿಗೆ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದರು. ಕನಸಿನ ರಾಣಿ ಮಾಲಾಶ್ರೀ ನಟಿಸಿದ ಮೊದಲ ಸಿನಿಮಾ 'ನಂಜುಂಡಿ ಕಲ್ಯಾಣ'ದಿಂದಲೂ ಚಂದ್ರು ಮೇಕಪ್ ಆರ್ಟಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಮಾಲಾಶ್ರೀ ಹೇಳಿಕೊಂಡಿದ್ದಾರೆ.

"ಈ ಸ್ಥಾನಕ್ಕೆ ಬರೋಕೆ ಮನಸ್ಸು ಕಾರಣ"

ಮೇಕಪ್ ಆರ್ಟಿಸ್ಟ್ ಆಗಿದ್ದವರು ಹೋಟೆಲ್ ಉದ್ಯಮಿ ಆಗಿರುವುದಕ್ಕೆ ಮಾಲಾಶ್ರೀ ಹರ್ಷ ವ್ಯಕ್ತಪಡಿಸಿದ್ದಾರೆ. ನಿಜವಾಗಲೂ ಚಂದ್ರು ಇಂತಹದ್ದೊಂದು ಸ್ಥಾನಕ್ಕೆ ಬಂದಿರೋದಕ್ಕೆ ಕಾರಣ ಅವರ ಒಳ್ಳೆಯ ಮನಸ್ಸು, ಅವರ ಒಳ್ಳೆಯ ಗುಣ, ಅವರ ಒಳ್ಳೆಯ ಕೈ, ಅವರು ಪ್ರೀತಿಯಿಂದ ಮಾಡುವ ಕೆಲಸ ನಿಜವಾಗಲೂ ಸಕ್ಸಸ್ ಆಗೇ ಆಗುತ್ತೆ. ನನಗೆ ನಿಜಕ್ಕೂ ನಂಬುವುದಕ್ಕೆ ಆಗುತ್ತಿಲ್ಲ. ಚಂದ್ರ ಇಂತಹದ್ದೊಂದು ಪ್ರಯತ್ನ ಮಾಡಿ ಈ ಹಂತಕ್ಕೆ ಬಂದಿರೋದು ಖುಷಿಕೊಟ್ಟಿದೆ." ಎಂದು ಚಂದ್ರು ಅವರ ನಿಮ್ಮ ಮನೆ ಕಿಚನ್ ಯೂಟ್ಯೂಬ್ ಚಾನೆಲ್‌ನಲ್ಲಿ ಮಾಲಾಶ್ರೀ ಹೇಳಿದ್ದಾರೆ.

Malashree revealed about Bellulli Kabab Chandru and cooking talent

"ನನಗೆ ಮೊದಲ ಕನ್ನಡಿ ತೋರಿಸಿದ್ದೇ ಚಂದ್ರು"

ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಬೆಳ್ಳುಳ್ಳಿ ಕಬಾಬ್ ಚಂದ್ರು ಬಗ್ಗೆ ಮಾಲಾಶ್ರೀ ಓಪನ್ ಆಗಿ ಮಾತಾಡಿದ್ದಾರೆ. ಅವರ ಮೊದಲ 'ನಂಜುಂಡಿ ಕಲ್ಯಾಣ' ಸಿನಿಮಾಗೆ ಮೊದಲು ಕನ್ನಡಿ ಹಿಡಿದಿದ್ದೇ ಅವರು ಎಂದು ಹೇಳಿದ್ದಾರೆ. "ನಾನು ಕನ್ನಡ ಚಿತ್ರರಂಗಕ್ಕೆ ಕಾಲಿ ಇಟ್ಟಲ್ಲಿಂದ ಚಂದ್ರು ನನಗೆ ಪರಿಚಯ. ಹೇಗೆ ಅಂದರೆ, ನಂಜುಂಡಿ ಕಲ್ಯಾಣ ಸಿನಿಮಾದ ಮೊದಲ ದಿನ ನನಗೆ ಮೊದಲು ಕನ್ನಡಿ ತೋರಿಸಿದ್ದೇ ಚಂದ್ರು. ನನಗೆ ಮೊದಲ ದಿನ ಭಾಷೆ ಬರುತ್ತಿರಲಿಲ್ಲ. ಅವನೇ ಭಯ ಪಡೆಬೇಡಿ. ಸುತ್ತಮುತ್ತ ಇರೋರೆಲ್ಲ ಅದ್ಭುತ ಜನ ಎಂದಿದ್ದರು. ಪ್ರತಿ ಹಂತದಲ್ಲೂ ನನ್ನನ್ನು ನಗಿಸುತ್ತಿದ್ದರು. ಆಮೇಲೆ ನನ್ನ ಪರ್ಸನಲ್ ಮೇಕಪ್ ಮ್ಯಾನ್ ಆಗಿದ್ದು." ಎಂದು ಮಾಲಾಶ್ರೀ ಹೇಳಿದ್ದಾರೆ.

"ಶೂಟಿಂಗ್ ಪೋಸ್ಟ್‌ಪೋನ್ ಮಾಡಿದ್ದೆ"

ಮಾಲಾಶ್ರೀ ಅವರೇ ಹೇಳಿಕೊಂಡಿರುವ ಪ್ರಕಾರ, ಚಂದ್ರು ಇಲ್ಲದೆ ಒಂದೇ ಒಂದು ಸಿನಿಮಾವನ್ನು ಅವರು ಮಾಡಿಲ್ಲ. ಚಂದ್ರು ಸೆಟ್ಟಿನಲ್ಲಿ ಇದ್ದರೇನೆ ನಗು. ಒಂಥರಾ ಬೂಸ್ಟ್ ಇದ್ದ ಹಾಗೆ ಎಂದಿದ್ದಾರೆ. "ನಾನು ತೆಲುಗು ಶೂಟಿಂಗ್ ಮಾಡುವಾಗ ಚಂದ್ರ ಇಲ್ಲ. ಚಂದ್ರ ಅವರ ಮದುವೆ ನಡೆಯುತ್ತಿತ್ತು. ಅದಕ್ಕಾಗಿ ನಾನು ಶೂಟಿಂಗ್ ಡೇಟ್ ಅನ್ನು ಪೋಸ್ಟ್‌ಪೋನ್ ಮಾಡಿದ್ದು ಉಂಟು. ಚಂದ್ರ ಯಾವಾಗಲೂ ಜೊತೆಯಲ್ಲಿ ಇರಬೇಕು. ನಿಜಕ್ಕೂ ಹೇಳಬೇಕಂದ್ರೆ, ಚಂದ್ರ ಲಕ್ಕಿ ಹ್ಯಾಂಡ್. ಹಾಗೇ ರೆಸ್ಟೋರೆಂಟ್ ಕೂಡ ಅವರಿಗೆ ಲಕ್ಕಿನೇ ಆಯ್ತು." ಎಂದು ಮಾಲಾಶ್ರೀ ಹೇಳಿದ್ದಾರೆ.

ಮನೆಯಲ್ಲಿ ಬೆಳ್ಳುಳ್ಳಿ ಕಬಾಬ್ ಫೇಮಸ್

"ನನಗೆ ರಸಂ ಅಂದರೆ ತುಂಬಾನೇ ಇಷ್ಟ. ಹಾಗೇ ಮಟನ್ ಚಾಪ್ಸ್ ಚೆನ್ನಾಗಿರುತ್ತೆ ಅದನ್ನು ಮನೆಯಲ್ಲಿ ಟ್ರೈ ಮಾಡಿದ್ದೇನೆ. ಈಗ ಬೆಳ್ಳುಳ್ಳಿ ಕಬಾಬ್ ಫೇಮಸ್ ಆದ್ಮೇಲೆ ಮನೆಯಲ್ಲಿ ಕಬಾಬ್ ಅಂದರೆ, ಬೆಳ್ಳುಳ್ಳಿ ಕಬಾಬ್ ಮಾಡುತ್ತೇವೆ. ಬೇರೆ ಕಬಾಬ್ ಮಾಡುವುದನ್ನೇ ನಿಲ್ಲಿಸಿಬಿಟ್ಟಿದ್ದೇವೆ. ನನ್ನ ಮಗನಿಗೆ ಚಂದ್ರು ಹೋಟೆಲ್ ಕಬಾಬ್ ಅಂದರೆ ಇಷ್ಟ. ಅವರನು ಎರಡೂ ಕಡೆಯ ಕಬಾಬ್ ತಿಂದು ಮಾಕ್ಸ್ ಕೊಡುತ್ತಾನೆ." ಎಂದು ಚಂದ್ರು ಅಡುಗೆ ಬಗ್ಗೆ ಮಾಲಾಶ್ರೀ ಹೇಳಿದ್ದಾರೆ.

More from Filmibeat

English summary
Malashree about social media star Bellulli Kabab Chandru
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X