"ನನ್ನ ಮಗಳು ಆರಾಮಾಗಿ ಶೂಟಿಂಗ್ ಮುಗಿಸಲು ಕಾರಣ ಡಿ ಬಾಸ್, ತರುಣ್ ಸುಧೀರ್" - ನಟಿ ಮಾಲಾಶ್ರೀ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಬಹುತೇಕ ಶೂಟಿಂಗ್ ಮುಗಿಸಿದೆ. ಅದರಲ್ಲೂ ದರ್ಶನ್ ಭಾಗದ ಶೂಟಿಂಗ್ ಬಹುತೇಕ ಮುಗಿದಿದ್ದು, ಹಾಡುಗಳ ಚಿತ್ರೀಕರಣ ಬಾಕಿ ಉಳಿದಿದೆ. ಸುಮಾರು 71 ದಿನಗಳ ಕಾಲ ದರ್ಶನ್ ಶೂಟಿಂಗ್ ಮಾಡಿದ್ದಾರೆ.
ಇನ್ನು ಹಾಡುಗಳ ಚಿತ್ರೀಕರಣ ಬಾಕಿ ಉಳಿದಿದ್ದು, ಅದು ಮುಗಿದರೇ ದರ್ಶನ್ 'ಕಾಟೇರ' ಸಿನಿಮಾದ ಶೂಟಿಂಗ್ ಮುಗಿಸಿದಂತೆ. ಇದೇ ಖುಷಿಯಲ್ಲಿ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ತರುಣ್ ಸುಧೀರ್ ಸೇರಿದಂತೆ ಇಡೀ ಚಿತ್ರತಂಡ ಮಾಧ್ಯಮದ ಮುಂದೆ ಪ್ರತ್ಯಕ್ಷ ಆಗಿತ್ತು.

ಈ ವೇಳೆ ಕನಸಿನ ರಾಣಿ ಮಾಲಾಶ್ರೀ ಕೂಡ ಬಂದಿದ್ದರು. 'ಕಾಟೇರ' ಸಿನಿಮಾ ಮೂಲಕವೇ ಮಾಲಾಶ್ರೀ ಪುತ್ರಿ ಆರಾಧನಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚೊಚ್ಚಲ ಸಿನಿಮಾದಲ್ಲಿ ಮಗನ ನಟನೆಯನ್ನು ಕಂಡು ಮಾಲಾಶ್ರೀ ಫುಲ್ ಖುಷಿಯಾಗಿದ್ದು, ದರ್ಶನ್ ಹಾಗೂ ತರುಣ್ ಸುಧೀರ್‌ಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಈ ವೇಳೆ ಮಾಲಾಶ್ರೀ ಮಾತಿನ ಹೈಲೈಟ್ ಇಲ್ಲಿದೆ.
ಮಾಲಾಶ್ರೀ ಮಗಳ ಮೊದಲ ಸಿನಿಮಾ ಬಗ್ಗೆ ಥ್ರಿಲ್ ಆಗಿದ್ದರು. "ನನ್ನ ಮಗಳು ಮೊದಲ ಬಾರಿಗೆ ಕಾಟೇರ ಸಿನಿಮಾ ನಟನೆ ಮಾಡಿ ಅದರ ಪ್ರೆಸ್ ಮೀಟ್‌ನಲ್ಲಿ ಕೂತಿದ್ದಾಳೆ. ಅದರಲ್ಲಿ ನಾನು ಕೂಡ ಇದ್ದೇನೆ. ಅದು ನನಗೆ ಹೆಮ್ಮೆ ಎನಿಸಿದೆ. ಓಪನಿಂಗ್ ಡೇ.. ರಾಧನಾ ರಾಮ್ ಆಗಿ ಎಲ್ಲರಿಗೂ ಗೊತ್ತಿತ್ತು. ಈಗ ಆರಾಧನಾ ಅನ್ನೋ ಹೆಸರಿನಲ್ಲಿ ಮುಂದುವರೆಯುತ್ತಾಳೆ." ಎಂದು ಅವರ ಹೆಸರಿನ ಬಗ್ಗೆ ಕ್ಲಾರಿಟಿ ನೀಡಿದ್ರು.

ಹಾಗೇ ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿದ ಮೊದಲ ಸಿನಿಮಾಗೆ ಮಾಲಶ್ರೀಯವರೇ ಲಿಫ್ಟ್ ಮಾಡಿದ್ದರು ಎಂದು ರಾಕ್‌ಲೈನ್ ಹೇಳಿದ್ದರು. ಅದಕ್ಕೆ ಮಾಲಾಶ್ರೀ ಕೂಡ ಮಗಳು ರಾಕ್‌ಲೈನ್ ಸಂಸ್ಥೆಯಲ್ಲಿ ಲಾಂಚ್ ಆಗುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. "ರಾಕ್‌ಲೈನ್ ವೆಂಕಟೇಶ್ ಅವರೇ ನಾನು ಲಿಫ್ಟ್ ಕೊಟ್ಟಿರಬಹುದು. ಆಮೇಲೆ ಎಂತಹ ಸಿನಿಮಾ ಮಾಡಿ, ಎಂತಹ ಒಂದು ಪೊಸಿಷನ್‌ನಲ್ಲಿ ಇದ್ದೀರಿ. ಅಂತ ಪ್ರಡ್ಯೂಸರ್ ಸಿನಿಮಾದಲ್ಲಿ ನನ್ನ ಮಗಳು ಲಾಂಚ್ ಆಗುತ್ತಿರುವುದು ತುಂಬಾ ಖುಷಿಯಾಗುತ್ತಿದೆ." ಎಂದಿದ್ದಾರೆ.
ಎಲ್ಲಕ್ಕಿಂತ ಹೆಚ್ಚಾಗಿ ಸ್ವತ: ದರ್ಶನ್ 'ಒನ್ ಟೇಕ್ ನಟಿ' ಅಂತ ಆರಾಧನಾಗೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಅದಕ್ಕೂ ಮುನ್ನ ಮಾತಾಡಿದ ಮಾಲಾಶ್ರೀ ದರ್ಶನ್ ಹಾಗೂ ತರುಣ್ ಸುಧೀರ್‌ಗೆ ಧನ್ಯವಾದಗಳನ್ನು ಅರ್ಪಿಸಿದರು."ಇವಳು ತುಂಬಾ ಟೆನ್ಷನ್ ಆಗುವಾಗ, ನನಗೆ ಅದಕ್ಕಿಂತ ಹೆಚ್ಚು ಟೆನ್ಷನ್ ಆಗುತ್ತಿತ್ತು. ಹೆಂಗಿರುತ್ತೆ? ಹೆಂಗಿರುತ್ತೆ? ಏನ್ಮಾಡ್ತಾಳೆ ಏನ್ಮಾಡ್ತಾಳೆ ಶೂಟಿಂಗ್‌ನಲ್ಲಿ ಅಂತ. ನೋಡಿದರೆ, ಫಸ್ಟ್ ಡೇ ಆರಾಮಾಗಿ ನಟಿಸಿದ್ದಳು. ಅದಕ್ಕೆ ಕಾರಣ ದರ್ಶನ್ ಸರ್. ಅವರು ನನ್ನ ಮಗಳಿಗೆ ಕಂಪರ್ಟ್ ಜೋನ್ ಕೊಟ್ಟಿದ್ದರು. ಹಾಗೇ ತರುಣ್ ಅವರು ಕೂಡ ಹ್ಯಾಂಡಲ್ ಮಾಡಿದ ರೀತಿಗೆ ಖುಷಿಯಾಗಿದೆ." ಎಂದಿದ್ದಾರೆ ಮಾಲಾಶ್ರೀ.


Click it and Unblock the Notifications











