KGF 3: ಸದ್ದಿಲ್ಲದೆ ಶುರುವಾಯಿತೇ 'ಕೆಜಿಎಫ್ 3'? ಕಿರಿಕ್ ಕೀರ್ತಿ ಬಳಿ ಮಾಳವಿಕಾ ಅವಿನಾಶ್ ಬಿಟ್ಟುಕೊಟ್ಟ ಗುಟ್ಟೇನು?
ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಲಿಸ್ಟ್‌ನಲ್ಲಿ 'ಕೆಜಿಎಫ್ 3' ಮೊದಲ ಸ್ಥಾನದಲ್ಲಿದೆ. ಮತ್ತೆ ಪ್ರಶಾಂತ್ ನೀಲ್ ಹಾಗೂ ಯಶ್ ಕಾಂಬಿನೇಷನ್‌ನಲ್ಲಿ ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಯಶ್ ಹಾಗೂ ಪ್ರಶಾಂತ್ ನೀಲ್ ಇಬ್ಬರ ಲೈನ್ ಅಪ್‌ಗಳನ್ನು ನೋಡಿದರೆ, ಸದ್ಯದಲ್ಲಿ 'ಕೆಜಿಎಫ್ ಚಾಪ್ಟರ್ 3' ಶುರುವಾಗುವ ಹಾಗೇ ಕಾಣಿಸುತ್ತಿಲ್ಲ.
ಇತ್ತ ಹೊಂಬಾಳೆ ಫಿಲ್ಮ್ಸ್ ಕೂಡ ಸಾಲು ಸಾಲು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಅದರಲ್ಲಿ ಪ್ರಭಾಸ್ ಜೊತೆಗೆ ಮೂರು ಸಿನಿಮಾಗಳು ಸೇರಿಕೊಂಡಿವೆ. ಹೀಗಾಗಿ ಸದ್ಯಕ್ಕೆ 'ಕೆಜಿಎಫ್ 3' ಶುರುವಾಗ ಬಗ್ಗೆ ನಿರ್ಮಾಣ ಸಂಸ್ಥೆ ಕೂಡ ಸುಳಿವನ್ನು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಯಶ್ ಫ್ಯಾನ್ಸ್ ಕೂಡ 'ಕೆಜಿಎಫ್ ಚಾಪ್ಟರ್ 3' ಬಗ್ಗೆ ಮಾತಾಡುವುದನ್ನು ನಿಲ್ಲಿಸಿದ್ದರು. ಆದ್ರೀಗ ಈ ಸಿನಿಮಾ ಬಗ್ಗೆ ಸಹಿ ಸುದ್ದಿಯೊಂದು ಸಿಗುವ ಹಾಗೆ ಕಾಣಿಸುತ್ತಿದೆ.

'ಕೆಜಿಎಫ್' ಸೀರಿಸ್‌ನಲ್ಲಿ ನಟಿಸಿರುವ ಮಾಳವಿಕಾ ಅವಿನಾಶ್ ಇತ್ತೀಚೆಗೆ ಕಿರಿಕ್ ಕೀರ್ತಿ ಯೂಟ್ಯೂಬ್ ಚಾನೆಲ್‌ನಲ್ಲಿ ಸಂದರ್ಶನ ನೀಡಿದ್ದಾರೆ. ಈ ವೇಳೆ ಕಿರಿಕ್ ಕೀರ್ತಿ 'ಕೆಜಿಎಫ್ 3' ಬರುತ್ತಾ? ಅಂತ ಪ್ರಶ್ನೆ ಮಾಡಿದ್ದರು. ಆ ಪ್ರಶ್ನೆ ಮಾಳವಿಕಾ ಅವಿನಾಶ್ ಕೊಟ್ಟ ಉತ್ತರ ಯಶ್ ಅಭಿಮಾನಿಗಳನ್ನು ಖುಷಿಯಲ್ಲಿ ತೇಲಿಸುವುದರಲ್ಲಿ ಅನುಮಾನವೇ ಇಲ್ಲ. ಅಷ್ಟಕ್ಕೂ 'ಕೆಜಿಎಫ್ 3' ಬಗ್ಗೆ ಏನು ಹೇಳಿದ್ದಾರೆ ಅನ್ನೋದನ್ನು ನೋಡುವುದಾರೇ.
ಕಿರಿಕ್ ಕೀರ್ತಿ ಜೊತೆಗಿನ ಸಂದರ್ಶನದಲ್ಲಿ 'ಕೆಜಿಎಫ್' ಸಿನಿಮಾ ಕನ್ನಡ ಚಿತ್ರರಂಗದ ಮೇಲೆ ಬೀರಿದ ಪ್ರಭಾವದ ಬಗ್ಗೆ ಮಾತಾಡಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಕನ್ನಡ ಚಿತ್ರರಂಗವನ್ನು ನೋಡುವ ರೀತಿ ಹೇಗಿತ್ತು. ಅದು ಹೇಗೆ ಬದಲಾಗಿದೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಪ್ರಕಾಶ್ ರಾಜ್ ಹಾಗೂ ಮಾಳವಿಕಾ ಅವಿನಾಶ್ ಪಾತ್ರಗಳು ಎದುರು ಬದುರು ಬಂದಾಗ ಏನಾಯ್ತು? ಅದಕ್ಕೆ ಯಶ್ ಹಾಸ್ಯ ಚಟಾಕಿ ಹಾರಿದ್ದು ಯಾಕೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ.
ಮಾಳವಿಕಾ ಅವಿನಾಶ್ ಹಾಗೂ ಪ್ರಕಾಶ್ ರಾಜ್ ಇಬ್ಬರೂ ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಉಳ್ಳವರು. ಆದರೆ, ರಾಜಕೀಯದ ವಿಚಾರಕ್ಕೆ ಬಂದರೆ, ಇಬ್ಬರ ವಿಚಾರ ಧಾರೆಗಳು ಬೇರೆ ಬೇರೆನೇ. ಈ ಕಾರಣಕ್ಕೆ ಸಿನಿಮಾದಿಂದ ಆಚೆ ಇಬ್ಬರು ವಿರೋಧಿಗಳ ಹಾಗೆ ವರ್ತಿಸುತ್ತಾರೆ. ಹೀಗಿರುವಾಗ 'ಕೆಜಿಎಫ್ 2'ನಲ್ಲಿ ಒಟ್ಟಿಗೆ ನಟಿಸುವುದಕ್ಕೆ ಎದುರು ಬದುರಾದಾಗ ಯಶ್ ಏನು ಹೇಳೀದ್ದರು ಅನ್ನೋದನ್ನು ರಿವೀಲ್ ಮಾಡಿದ್ದಾರೆ.

"ಯಶ್ ಹೆಚ್ಚು ನಗಾಡಿದ್ದು, ಅಕ್ಕ ನಿನ್ನ ಜೊತೆ ಪಾರ್ಟ್ ಮಾಡ್ತಾ ಇರೋದು ಯಾರು ಗೊತ್ತಾ? ಎಂಜಾಯ್ ಎಂಜಾಯ್ ಅಂತ ನಕ್ಕಿದ್ದ. ಆದರೆ, ಕೆಜಿಎಫ್ ಕನ್ನಡ ಸಿನಿಮಾವನ್ನು ಚೇಂಜ್ ಮಾಡಿದೆ. ತಮಿಳು, ತೆಲುಗಿಗೆ ಹೋದಾಗ ಕನ್ನಡನಾ ಅಂತ ನೋಡೋರು. ಇವತ್ತು ಹಂಗಾ ಇದೆ. ರಾಕಿಭಾಯ್ ಅಂದರೆ, ಇಡೀ ಪ್ರಪಂಚ ತಿರುಗಿ ನೋಡುತ್ತೆ."" ಎಂದು ಮಾಳವಿಕ ಅವಕಾಶ್ ಆ ಘಳಿಗೆಯನ್ನು ಕಿರಿಕ್ ಕೀರ್ತಿ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.
ಇದೇ ವೇಳೆ ಈಗಾಗಲೇ 'ಕೆಜಿಎಫ್ 3'ಯಲ್ಲಿ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ. ಅವರು ಕೊಟ್ಟಿರುವ ಮಾಹಿತಿ ಅಚ್ಚರಿ ಮೂಡಿಸಿದೆ. ಅದ್ಯಾವಾಗ 'ಕೆಜಿಎಫ್ 3' ಶುರು ಮಾಡಿದರು ಅಂತಾನೂ ಅನಿಸಬಹುದು. ಕಿರಿಕ್ ಕೀರ್ತಿ ಸಂದರ್ಶನದಲ್ಲಿ ಮಾಳವಿಕಾ ಅವಿನಾಶ್ ತಮಾಷೆಗೆ ಹೀಗೆ ಹೇಳಿದ್ದಾರೋ? ಇಲ್ಲ ನಿಜಕ್ಕೂ ಶೂಟಿಂಗ್ ಆಗಿದೆಯೋ ಗೊತ್ತಾಗುತ್ತಿಲ್ಲ. ಕೆಜಿಎಫ್ 3 ಬಗ್ಗೆ ಏನು ಹೇಳಿದ್ದಾರೆ ಅಂತ ನೋಡುವುದಾರೇ, "ಕೆಜಿಎಫ್ 3 ನಾನು ಶೂಟಿಂಗ್ ಮಾಡಿದ್ದೀನಿ. ಅದೆಂಥಾ ಸೆಟ್ಟು ಗೊತ್ತಾ? ಆ ಸೆಟ್ಟು ಹೆಂಗಿತ್ತು? ಅಬ್ಬಾ ಲೈಬ್ರರಿ ಅಂದರೆ ಅದು. ಯಾವುದೋ ಮಮ್ಮಿ ಪಿಚ್ಚರ್‌ನಲ್ಲಿ ನೋಡಿದ ಹಾಗಿತ್ತು. ನಮ್ಮನ್ನ ಹಾಗೂ ನಮ್ಮ ಪರಮಾಪ್ತ ಸ್ನೇಹಿತರನ್ನು ಮತ್ತೆ ಸೇರಿಸಿ, ನಾಗಾಭರಣರನ್ನು ಕರೆಸಿದ್ದರು. ನಮ್ಮ ಗೋವಿಂದು ಇರಲಿಲ್ಲ. ಪ್ರಶಾಂತ್ ಅವರದ್ದು ಅದೇನು ಕಲ್ಪನೆ" ಎಂದು ಮಾಳವಿಕ ಹೇಳಿಕೊಂಡಿದ್ದಾರೆ.


Click it and Unblock the Notifications











