'ದಂಡುಪಾಳ್ಯ' ಡೈರೆಕ್ಟರ್‌ಗೆ ಗ್ರೀನ್ ಸಿಗ್ನಲ್ ಕೊಟ್ಟ ಗಣೇಶ್: ಬಹುಭಾಷಾ ನಟಿ ಕನ್ನಡಕ್ಕೆ ಎಂಟ್ರಿ.. ಯಾರೀ ಮಾಳವಿಕಾ?

2023ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಯಾಕೋ ಸೈಲೆಂಟ್ ಆಗಿದ್ದಾರೆ. ಅರ್ಧ ವರ್ಷ ಕಳೆದರೂ ಒಂದ ಒಂದು ಸಿನಿಮಾ ರಿಲೀಸ್ ಮಾಡಿಲ್ಲ. ಅವರ ಅಭಿಮಾನಿಗಳು ಗಣೇಶ್ ಸಿನಿಮಾ ನೋಡುವುದಕ್ಕೆ ಎದುರು ನೋಡುತ್ತಿದ್ದಾರೆ. ಈ ಮಧ್ಯೆ ಅಭಿಮಾನಿಗಳಿಗೆ ಹೊಸ ಸುದ್ದಿಯೊಂದು ಸಿಕ್ಕಿದೆ.

ಗಣೇಶ್ ಕೈಯಲ್ಲಿ ಒಂದಲ್ಲ ಎರಡೆರಡು ಸಿನಿಮಾಗಳಿವೆ. ಪ್ರೀತಂ ಗುಬ್ಬಿ ನಿರ್ದೇಶಿಸುತ್ತಿರುವ 'ಬಾನದಾರಿಯಲ್ಲಿ' ಬಹುತೇಕ ಶೂಟಿಂಗ್ ಮುಗಿದೆ. ಇನ್ನೊಂದು 'ದಿ ಸ್ಟೋರಿ ಆಫ್ ರಾಯಘಡ' ಶೂಟಿಂಗ್ ಹಂತದಲ್ಲಿದೆ. ಈ ಮಧ್ಯೆ ಮತ್ತೊಂದು ಸಿನಿಮಾ ಶೀಘ್ರದಲ್ಲೇ ಟೇಕ್ ಆಫ್ ಆಗಲಿದೆ.

Ganesh-Malavika Nair- Kannada Movie

ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ ಶ್ರೀನಿವಾಸ್ ರಾಜು. ಇವರೊಂದಿಗೆ ಗೋಲ್ಡನ್ ಸ್ಟಾರ್ ಗಣೇಶ್ ಕೈ ಜೋಡಿಸಿದ್ದು, ಶೀಘ್ರದಲ್ಲೇ ಈ ಪ್ರಾಜೆಕ್ಟ್ ಗ್ರ್ಯಾಂಡ್ ಆಗಿ ಅನೌನ್ಸ್ ಆಗುತ್ತಿದೆ. ಅದಕ್ಕೂ ಮುನ್ನ ಈ ಸಿನಿಮಾಗೆ ಹೀರೊಯಿನ್ ಯಾರು ಅನ್ನೋದು ರಿವೀಲ್ ಆಗಿದೆ. ಆಕೆಯೇ ಮಲಯಾಳಂ ನಟಿ ಮಾಳವಿಕಾ ನಾಯರ್. ಅಷ್ಟಕ್ಕೂ ಈ ಮಲಯಾಳಂ ಬೆಡಗಿ ಯಾರು? ಯಾವ್ಯಾವ ಸಿನಿಮಾದಲ್ಲಿ ನಟಿಸಿದ್ದಾರೆ ಅನ್ನೋ ಡಿಟೈಲ್ಸ್ ಇಲ್ಲಿದೆ.

ಮಾಳವಿಕಾ ನಾಯರ್ ಹಿನ್ನೆಲೆ ಏನು?

ಮಾಲಿವುಡ್ ನಟಿ ಮಾಳವಿಕಾ ನಾಯರ್ ಈಗಾಗಲೇ ಮಲಯಾಳಂ ಹಾಗೂ ತೆಲುಗು ಸಿನಿಮಾಗಳಲ್ಲಿ ಚಿರಪರಿಚಿತರು. ಈ ಎರಡೂ ಚಿತ್ರರಂಗಕ್ಕೂ ಸಾಕಷ್ಟು ಚಿರಪರಿಚಿತರು. 2012ರಲ್ಲಲಿ ತೆರೆಕಂಡ ಮಲಯಾಳಂ ಸಿನಿಮಾ 'ಉಸ್ತಾದ್ ಹೋಟೆಲ್' ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಇಲ್ಲಿವರೆಗೂ ಸುಮಾರು 11 ವರ್ಷಗಳ ಕಾಲ ಹಲವು ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ.

Ganesh-Malavika Nair- Kannada Movie

ಮಲಯಾಳಂ ಸಿನಿಮಾ 'ಬ್ಲ್ಯಾಕ್ ಬಟರ್‌ಫ್ಲೈ', ತಮಿಳು ಸಿನಿಮಾ 'ಕುಕ್ಕೂ', ತೆಲುಗಿನ 'ಯವಡೆ ಸುಬ್ರಹ್ಮಣ್ಯಂ' ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ಮಾಳವಿಕಾ ನಾಯರ್ ನಟಿಸಿದ್ದಾರೆ. ಈಗ ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಗಣೇಶ್ ಹಾಗೂ ಶ್ರೀನಿವಾಸ್ ರಾಜು ಕಾಂಬಿನೇಷನ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ಶೂಟಿಂಗ್ ಶುರು

'ದಂಡುಪಾಳ್ಯ'ದಂತಹ ಭಯಾನಕ ಸಿನಿಮಾ ನಿರ್ದೇಶಿಸಿರೋ ಶ್ರೀನಿವಾಸ್ ರಾಜು ಇದೇ ಮೊದಲ ಬಾರಿಗೆ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ಮಾಳವಿಕಾ ನಾಯರ್‌ ಹೀರೊಯಿನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ, ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಅವರಲ್ಲಿ ಮಾಳವಿಕ ಕೂಡ ಒಬ್ಬರು ಎಂದು ಹೇಳಲಾಗುತ್ತಿದೆ.

ಈಗಾಗಲೇ ಈ ಸಿನಿಮಾ ಶೂಟಿಂಗ್ ಆರಂಭ ಆಗಿದೆ. ಗಣೇಶ್ ಸದ್ದಿಲ್ಲದೆ ಈ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಶೀಘ್ರದಲ್ಲಿ ಮಾಧ್ಯಮದ ಮುಂದೆ ಸಿನಿಮಾ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ನಿರ್ಧರಿಸಿದೆ. ಈ ಮಧ್ಯೆನೇ ಮಾಳವಿಕಾ ನಾಯರ್ ಹೆಸರು ರಿವೀಲ್ ಆಗಿದೆ.

ಫ್ಯಾಮಿಲಿ ರೊಮ್ಯಾಂಟಿಕ್ ಕಾಮಿಡಿ

ಶ್ರೀನಿವಾಸ್ ರಾಜು ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಗಣೇಶ್ ಜೊತೆಗೆ ಕಾಮಿಡಿ ಕಿಂಗ್ ಸಾಧು ಕೋಕಿಲಾ, ಗಿರಿ ಶಿವಣ್ಣ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಆದರೆ, ಮಾಳವಿಕಾ ನಾಯರ್ ಇನ್ನೂ ಚಿತ್ರತಂಡ ಸೇರಿಕೊಂಡಿಲ್ಲ. ಶೀಘ್ರದಲ್ಲೇ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಸಿನಿಮಾ ಬಗ್ಗೆ ಸುದ್ದಿ ಸಿಕ್ಕಿದ್ದು ಅವರ ಅಭಿಮಾನಿಗಳಿಗೆ ಖುಷಿಕೊಟ್ಟಿದೆ. ಆದರೆ, ಗೋಲ್ಡನ್ ಫ್ಯಾನ್ಸ್ ಅವರ 'ಬಾನದಾರಿಯಲ್ಲಿ' ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ. ಆದ್ರೆ ಇನ್ನೂ ಈ ಸಿನಿಮಾದ ರಿಲೀಸ್ ಡೇಟ್ ಅನ್ನು ಚಿತ್ರತಂಡ ಅನೌನ್ಸ್ ಮಾಡಿಲ್ಲ.

More from Filmibeat

English summary
Malayalam Actress Malavika Nair Kannada Debut with Golden Star Ganesh next Movie, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X