ಸೆಪ್ಟೆಂಬರ್ 13 ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ

ಸ್ಯಾಂಡಲ್‌ವುಡ್‌ನಲ್ಲಿ ಹೊಸಬರ ಸಿನಿಮಾ ಸೆಟ್ಟೇರುತ್ತಲೇ ಇರುತ್ತೆ. ಆದರೆ, ಚಿತ್ರೀಕರಣ ಮುಗಿದು ಬಿಡುಗಡೆ ಹಂತಕ್ಕೆ ಬರುವಾಗ ಅಸಲಿ ಚಾಲೆಂಜ್ ಎದುರಾಗುತ್ತೆ. ಇಂತಹದ್ದೇ ಒಂದಿಷ್ಟು ಸವಾಲುಗಳನ್ನು ಎದುರಿಸಿ ಬಂದಿರೋ ಸಿನಿಮಾವೇ 'ಸೆಪ್ಟೆಂಬರ್ 13'.

ಕೊರೊನಾದಂತಹ ಸಂಕಷ್ಟದ ವೇಳೆ ದಾದಿಯರು ಮಾಡಿದ ಸೇವೆ ಹಾಗೂ ತ್ಯಾಗದ ಸಾರುವ ಕಥೆಯನ್ನು ತೆರೆಮೇಲೆ ತರಲು ಮುಂದಾಗಿತ್ತು. ಅದುವೇ 'ಸೆಪ್ಟೆಂಬರ್ 13'. ಶೀಘ್ರದಲ್ಲಿಯೇ ಈ ಸಿನಿಮಾ ತೆರೆಗೆ ಬರಲು ಸಿದ್ಧತೆ ನಡೆಯುತ್ತಿದೆ.

ಹೊಸಬರ ಈ ಸಿನಿಮಾದ ಹೊಚ್ಚ ಹೊಸ ಪೋಸ್ಟರ್ ಅನ್ನು ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಮಮ್ಮುಟ್ಟಿ ಬಿಡುಗಡೆ ಮಾಡಿ, ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ನಿರ್ದೇಶಕ ಡಾ.ರಾಜ ಬಾಲಕೃಷ್ಣನ್ ಅವರಿಗೆ ಬೆಸ್ಟ್ ವಿಶ್ ಅನ್ನು ತಿಳಿಸಿದ್ದಾರೆ.

Malayalam Actor Mammootty Released Poster Of Kannada Movie September 13

ರುಬಿ ಫಿಲ್ಮಂಸ್ ನಡಿ ಮಾಜಿ ಶಾಸಕ ಇವಾನ್ ನಿಗ್ಲಿ ಕಥೆ ಬರೆದು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜನಪ್ರಿಯ ನಿರ್ದೇಶಕ ಡಾ.ರಾಜ ಬಾಲಕೃಷ್ಣನ್ ಈ ಸಿನಿಮಾಗೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಅಲ್ಲದೆ ಎಡಿಟಿಂಗ್, ಛಾಯಾಗ್ರಾಹಣ ಜವಾಬ್ದಾರಿಯನ್ನೂ ಇವರೇ ನಿಭಾಯಿಸಿದ್ದು, ಸಿನಿಮಾದಲ್ಲಿ ಖಳನಾಯಕನಾಗಿಯೂ ಬಣ್ಣ ಹಚ್ಚಿದ್ದಾರೆ.

Malayalam Actor Mammootty Released Poster Of Kannada Movie September 13

'ಸೆಪ್ಟಂಬರ್ 13' ಸಿನಿಮಾದಲ್ಲಿ ಹಿರಿಯ ಕಲಾವಿದರಾದ ವಿನಯ ಪ್ರಸಾದ್, ಜೈ ಜಗದೀಶ್, ಯಮುನಾ ಶ್ರೀನಿಧಿ ನಟಿಸಿದ್ದು, ಶ್ರೀಯಾರಿಧಿಬನ್ ನಾಯಕಿಯಾಗಿ ಈ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರೀಗೆ ಎಂಟ್ರಿ ಕೊಟ್ಟಿದ್ದಾರೆ. ಇವರನ್ನು ಬಿಟ್ಟರೆ ಇಡೀ ಸಿನಿಮಾ ಯುವ ಪ್ರತಿಭೆಗಳೆ ಹೆಚ್ಚಾಗಿ ನಟಿಸಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದು, ಶೀಘ್ರದಲ್ಲಿಯೇ ಸಿನಿಮಾವನ್ನು ತೆರೆಗೆ ಬರಲಿದೆ.

More from Filmibeat

English summary
Malayalam Actor Mammootty Released Poster Of Kannada Movie September 13, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X