ಎತ್ತಿನ ಹೊಟ್ಟೆ ಮೇಲೆ ಅಭಿಷೇಕ್-ಅವಿವಾ ಭಾವಚಿತ್ರ: ಬೀಗರ ಔತಣಕೂಟದಲ್ಲಿ ಮಂಡ್ಯ ಹೈಕ್ಳ ಅಭಿಮಾನ!

ಮಂಡ್ಯ ಜಿಲ್ಲೆ, ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಇಂದು (ಜೂನ್ 16) ಸಂಭ್ರಮವೋ ಸಂಭ್ರಮ. ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಅವರ ಬೀಗರ ಔತನಕೂಟದ ಹಿನ್ನೆಲೆಯಲ್ಲಿ 50-60 ಸಾವಿರ ಜನರು ಸೇರಿದ್ದರು.

ಮಂಡ್ಯದ ಜನತೆ ಹಾಗೂ ಅಂಬರೀಶ್ ಅಭಿಮಾನಿಗಳಿಗಾಗಿ ಈ ಬೀಗರ ಔತಣಕೂಟವನ್ನು ಏರ್ಪಡಿಸಲಾಗಿತ್ತು. ಅಂಬರೀಶ್ ಆಸೆಯಂತೆ ಮಗನ ಮದುವೆಗೆ ಮಂಡ್ಯದ ಜನತೆಗೆ ಬೊಂಬಾಟ್ ಬಾಡೂಟ ಹಾಕಿಸಿದ್ದಾರೆ. ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿ ನಾನ್ ವೆಜ್ ಊಟ ಸವಿದಿದ್ದಾರೆ.

Mandya fan Teja Gowda draw Abhishek Ambareesh and Aviva Bidapa picture on his Ox

ಇದೇ ವೇಳೆ ಮಂಡ್ಯದ ಅಭಿಷೇಕ್ ಅಂಬರೀಶ್ ಹಾಗೂ ರೆಬೆಲ್‌ಸ್ಟಾರ್ ಅಭಿಮಾನಿಗಳು ತಮ್ಮ ಅಭಿಮಾನವನ್ನು ವಿಶೇಷವಾಗಿ ತೋರಿಸಿದ್ದಾರೆ. ಅಭಿ ಹಾಗೂ ಅವಿವಾ ಫೋಟೊವನ್ನು ಎತ್ತಿನ ಮೇಲೆ ಚಿತ್ರಿಸಿಕೊಂಡು ಕರೆದುಕೊಂಡಿ ಬಂದಿದ್ದರು. ಇದು ಔತಣಕೂಟದ ಹೈಲೈಟ್‌ಗಳಲ್ಲೊಂದು.

ಎತ್ತಿನ ಹೊಟ್ಟೆ ಮೇಲೆ ಅಭಿ-ಅವಿವಾ ಭಾವಚಿತ್ರ

ಅಭಿಷೇಕ್ ಅಂಬರೀಶ್ ದಂಪತಿ ಹಾಗೂ ಸುಮಲತಾ ಅಂಬರೀಶ್ ಇಡೀ ಮಂಡ್ಯದ ಜನತೆ ಬೀಗರ ಔತಣಕೂಟಕ್ಕೆ ಆಹ್ವಾನ ನೀಡಿದ್ದರು. ಅದರಂತೆ ಅಂಬರೀಶ್ ಅಭಿಮಾನಿಗಳು ಹಾಗೂ ಮಂಡ್ಯದ ಜನತೆ ಬೀಗರ ಔತಣಕೂಟಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಬಂದಿದ್ದಾರೆ. ಇದೇ ವೇಳೆ ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ನೆನೆದಿದ್ದಾರೆ.

ಇನ್ನೊಂದು ಕಡೆ ಮಂಡ್ಯದ ಚೀರನಹಳ್ಳಿಯ ತೇಜಗೌಡ ಎಂಬು ರೆಬೆಲ್ ಸ್ಟಾರ್ ಅಭಿಮಾನಿ ವಿಶೇಷವಾಗಿ ತಮ್ಮ ಅಭಿಮಾನವನ್ನು ತೋರಿಸಿದ್ದಾರೆ. ಎತ್ತಿನ ಹೊಟ್ಟೆ ಮೇಲೆ ಅಭಿ ಹಾಗೂ ಅವಿವಾ ಚಿತ್ರವನ್ನು ಬರೆಸಿದ್ದರು. ಅಲ್ಲದೆ ಎತ್ತಿಗೆ ಸಿಂಗಾರ ಮಾಡಿ ಗೆಜ್ಜಲಗೆರೆ ಔತಣಕೂಟದ ಸ್ಥಳಕ್ಕೂ ಕರೆದುಕೊಂಡು ಬಂದಿದ್ದರು. ಇದು ಕಾರ್ಯಕ್ರಮ ಹೈಲೈಟ್ ಆಗಿತ್ತು.

Mandya fan Teja Gowda draw Abhishek Ambareesh and Aviva Bidapa picture on his Ox

ಸುಮಲತಾ-ಅಭಿ-ಅವಿವಾ ಫುಲ್ ಖುಷ್

ತೇಜಗೌಡನ ಅಭಿಮಾನಕ್ಕೆ ಸುಮಲತಾ ಅಂಬರೀಶ್, ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಪತ್ನಿ ಅವಿವಾ ಬಿದ್ದಪ್ಪ ಫಿದಾ ಆಗಿದ್ದಾರೆ. ಹೀಗಾಗಿ ಅಭಿಮಾನಿ ಹಾಗೂ ಎತ್ತಿನ ಬಳಿ ತೆರಳಿ ಸಂಭ್ರಮಿಸಿದ್ದಾರೆ. ಬ್ಯುಸಿ ವೇಳೆನೂ ಅಭಿಮಾನಿಗಳೊಂದಿಗೆ ಕೆಲ ಯೋಗಕ್ಷೇತ್ರ ವಿಚಾರಿಸಿದ್ದಾರೆ.

ಹಾಗೇ ಸಿಂಗಾರಗೊಂಡು ಬಂದಿದ್ದ ಎತ್ತಿನ ಮುಂದೆ ನಿಂತು ಅಭಿಷೇಕ್,ಅವಿವಾ ಹಾಗೂ ಸುಮಲತಾ ಅಂಬರೀಶ್ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ರೆಬೆಲ್ ಸ್ಟಾರ್ ಅಭಿಮಾನಿಯ ಅಭಿಮಾನಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಬೆಳಗ್ಗೆಯಿಂದಲೂ ಅಭಿಮಾನಿಗಳೊಂದಿಗೆ ಅಭಿ

ಮಂಡ್ಯದ ಮದ್ದೂರು ತಾಲೂಕಿನ ಗೆಜ್ಜಲಗೆರೆಯ ಸುಮಾರು 15 ಎಕ್ಕರೆ ಪ್ರದೇಶದಲ್ಲಿ ಈ ಬೀಗರ ಔತಣ ಕೂಟವನ್ನು ಹಮ್ಮಿಕೊಳ್ಳಲಾಗಿತ್ತು. ಹೀಗಾಗಿ ಬೆಳಗ್ಗೆನೇ ಪತ್ನಿ ಅವಿವಾ ಬಿದ್ದಪ್ಪ ಜೊತೆ ಬೆಂಗಳೂರಿನಿಂದ ಗೆಜ್ಜಲಗೆರೆಗೆ ತೆರಳಿದ್ದರು.

ಬೆಳಗ್ಗೆ 11 ಗಂಟೆಯಿಂದಲೇ ಮಂಡ್ಯದ ಅಭಿಮಾನಿಗಳಿಂದ ಅಶೀರ್ವಾದ ಪಡೆದುಕೊಂಡರು. ಕೈ ಕೊಟ್ಟ ಧನ್ಯವಾದಗಳನ್ನು ಅರ್ಪಿಸಿದರು. ಊಟದ ಸ್ಥಳಕ್ಕೆ ತೆರಳಿ ಅಭಿಮಾನಿಗಳನ್ನು ಹಾಗೂ ಮಂಡ್ಯದ ಜನತೆಯನ್ನು ಮಾತಾಡಿಸಿದರು. ಇವರಿಗೆ ಪತ್ನಿ ಅವಿವಾ ಬಿದ್ದಪ್ಪ ಹಾಗೂ ಸುಮಲತಾ ಅಂಬರೀಶ್ ಕೂಡ ಸಾಥ್ ಕೊಟ್ಟಿದ್ದರು.

More from Filmibeat

English summary
Mandya fan Teja Gowda draw Abhishek Ambareesh and Aviva Bidapa picture on his Ox photo goes viral, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X