"ಚಿತ್ರೋತ್ಸವಕ್ಕೆ ಕರೆದರೆ ಹೈದರಾಬಾದ್‌ನಲ್ಲಿ ಇರೋದು ಟೈಮ್ ಇಲ್ಲ ಅಂತಾರೆ"; ರಶ್ಮಿಕಾ ವಿರುದ್ಧ ಕೆಂಡಾಮಂಡಲ
ಬೆಂಗಳೂರು ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ನಲ್ಲಿ ಉಪಮುಖ್ಯಮಂತ್ರಿ ಕೊಟ್ಟ ಹೇಳಿಕೆ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದೆ. ಸ್ಯಾಂಡಲ್‌ವುಡ್‌ನ ನಟ್ಟು ಬೋಲ್ಡ್ ಟೈಟ್ ಮಾಡಬೇಕು ಮಾಡೋದು ಗೊತ್ತಿದೆ ಅನ್ನೋ ಡಿಕೆಶಿ ಹೇಳಿಕೆ ಕೆಲವರ ಕಣ್ಣುಗಳನ್ನು ಕೆಂಪು ಮಾಡುವಂತೆ ಮಾಡಿದೆ. ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದಿಂದ ಡಿಕೆಶಿ ಹೇಳಿಕೆಗೆ ವಿರೋಧವೂ ವ್ಯಕ್ತವಾಗುತ್ತಿದೆ.
ಮತ್ತೊಂದು ಕಾಂಗ್ರೆಸ್ ಪಕ್ಷದ ಮುಖಂಡರು ಡಿಕೆ ಶಿವಕುಮಾರ್ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಮಂಡ್ಯದ ಹಾಸಕ ಗಣಿಗ ರವಿಕುಮಾರ್ ಕೂಡ ಒಬ್ಬರು. ಸ್ಯಾಂಡಲ್‌ವುಡ್ ಪರವಾಗಿ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು, ನಿರ್ಮಾಪಕ ಹಾಗೂ ಕನ್ನಡ ಹೋರಾಟಗಾರ ಸಾರಾ ಗೋವಿಂದು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಚಿತ್ರರಂಗದ ವಿರುದ್ಧ ಗಣಿಕ ರವಿಕುಮಾರ್ ಗರಂ ಆಗಿದ್ದಾರೆ.

"ಸಿನಿಮಾದವರು ಬಾಯಿ ಮುಚ್ಕೊಂಡು ಇರಬೇಕು" ಅನ್ನುವ ಮಂಡ್ಯದ ಕಾಂಗ್ರೆಸ್ ಎಂಎಲ್‌ಎ ಗಣಿಗ ರವಿಕುಮಾರ್ ಹೇಳಿಕೆ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಇಷ್ಟೇ ಅಲ್ಲದೆ ನಟಿ ರಶ್ಮಿಕಾ ಮಂದಣ್ಣ, ಕಿಚ್ಚ ಸುದೀಪ್ ಸೇರಿದಂತೆ ಕನ್ನಡ ಚಿತ್ರರಂಗದ ಬಗ್ಗೆ ಗಣಿಗ ರವಿಕುಮಾರ್ ಕಿಡಿ ಕಾರಿದ್ದಾರೆ. ಅದರಲ್ಲೂ ಬೆಂಗಳೂರು ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ಗೆ ಆಹ್ವಾನ ನೀಡಿದರೂ ರಶ್ಮಿಕಾ ಮಂದಣ್ಣ ಬಾರದೆ ಇದ್ದಿದ್ದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ಕಿಚ್ಚ ಸುದೀಪ್ ಬಗ್ಗೆ ಗಣಿಗ ರವಿಕುಮಾರ್ ಹೇಳಿದ್ದೇನು? ತಿಳಿಯುವುದಕ್ಕೆ ಮುಂದೆ ಓದಿ.
ಕಳೆದ ವರ್ಷ ನಡೆದ ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ರಶ್ಮಿಕಾ ಮಂದಣ್ಣರನ್ನು ವಿಶೇಷ ಅತಿಥಿಯಾಗಿ ಆಹ್ವಾನ ನೀಡಲಾಗಿತ್ತು. ಆದರೆ, ಆ ವೇಳೆ ರಶ್ಮಿಕಾ ಮಂದಣ್ಣ ಹೈದರಾಬಾದ್‌ನಲ್ಲಿ ಇದ್ದೇನೆ. ನನಗೆ ಸಮಯವಿಲ್ಲ ಎಂದು ಹೇಳಿದ್ದರಂತೆ. ಈ ವಿಷಯವನ್ನು ಶಾಸಕ ಗಣಿಗ ರವಿಕುಮಾರ್ ಪ್ರಸ್ತಾಪ ಮಾಡಿ ಇವರಿಗೆ ಬುದ್ಧಿ ಕಲಿಸಬೇಕಲ್ವಾ? ಎಂದು ಕಿಡಿಕಾರಿದ್ದಾರೆ. ಈ ಹೇಳಿಕೆ ಕೂಡ ಈಗ ಸಂಚಲನ ಸೃಷ್ಟಿಸಿದೆ.
ಇನ್ನು ಕಿಚ್ಚ ಸುದೀಪ್‌ಗೂ ಪರೋಕ್ಷವಾಗಿ ಕಿಡಿಕಾರಿದ್ದಾರೆ. ಕನ್ನಡದ ನಟರು ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರಿಗೆ ನಾವು ಪ್ರಶಸ್ತಿ ನೀಡಿದರೆ, ಟ್ವೀಟ್ ಮೂಲಕ ಬೇಡ ಅಂತ ಹೇಳ್ತಾರೆ. ಅದರೇ ಹಿಂದಿಯವರು ನೀಡಿದರೆ ಹಿಂದೆ ಮುಂದೆ ನೋಡದೇ ತೆಗೆದುಕೊಳ್ಳುತ್ತೀರಿ. ನಿಮ್ಮ ಪಾಲಿಗೆ ಕನ್ನಡ ಅಂದರೆ ಅಷ್ಟೊಂದು ಬೇಡವಾಯಿತೇ? ಎಂದು ಕಿಚ್ಚ ಸುದೀಪ್ ಹೆಸರು ಎತ್ತದೆ ಕಿಡಿಕಾರಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್ ಇನ್ನೂ ಪ್ರತಿಕ್ರಿಯೆ ನೀಡಲ್ಲ.

ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಕೂಡ ಡಿಕೆ ಶಿವಕುಮಾರ್ ಹೇಳಿಕೆಯನ್ನು ಕಂಡಿಸಿದ್ದರು. ಅಧಿಕಾರದ ದರ್ಪದಿಂದ ಹೀಗೆ ಮಾತಾಡಿರಬೇಕು ಎಂದು ಕೇಳಿಕೆ ನೀಡಿದ್ದರು. ಅದಕ್ಕೂ ತಿರುಗೇಟು ಕೊಟ್ಟಿದ್ದಾರೆ. ಆಂಧ್ರ ಪ್ರದೇಶದಿಂದ ಬಂದ ನರಸಿಂಹಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಮಾತಾಡುತ್ತಾರೆ. ಆಂಧ್ರ ಪ್ರದೇಶದಿಂದ ಬಂದು ನಮ್ಮ ಬಗ್ಗೆ ಮಾತಾಡುತ್ತಾರೆ. ಇತ್ತೀಚೆಗೆ ನಡೆದ ಸಿಸಿಎಲ್ ಪಂದ್ಯವನ್ನು ಇವರು ನಿಲ್ಲಿಸಬೇಕಿತ್ತು. ಕನ್ನಡ ಚಿತ್ರರಂಗಕ್ಕೆ ಇದು ಕೊನೆಯ ವಾರ್ನಿಂಗ್. ಫಿಲ್ಮ್ ಚೇಂಬರ್ ಇನ್ನೂ ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಗಣಿಗ ರವಿಕುಮಾರ್ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.
ಡಿಕೆಶಿಯ ನಟ್ಟು ಬೋಲ್ಟ್ ಹೇಳಿಕೆ ವಿವಾದ ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸಿದೆ. ಕೆಲವರು ಈ ಹೇಳಿಕೆಯನ್ನು ವಿವಾದ ಮಾಡುತ್ತಿದ್ದಾರೆ. ಮತ್ತೆ ಕೆಲವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಒಟ್ನಲ್ಲಿ ಡಿಕೆಶಿ ಹೇಳಿಕೆಗೆ ಕನ್ನಡ ಚಿತ್ರರಂಗ ಅಪ್‌ಸೆಟ್ ಆಗಿರುವುದಂತೂ ನಿಜ. ಸದ್ಯ ಪರ-ವಿರೋಧ ಚರ್ಚೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ರೂಪ ಪಡೆದುಕೊಳ್ಳುತ್ತೋ? ಅನ್ನೋದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ.


Click it and Unblock the Notifications











