ಒಂದೇ ದಿನ ಕನ್ನಡದ ಇಬ್ಬರು ನಟಿಯರ ಮೇಲೆ ಬಿತ್ತು ಕಿಡಿಗೇಡಿಗಳ ವಕ್ರದೃಷ್ಟಿ

ಲಾಕ್ ಡೌನ್ ಅವಧಿಯಲ್ಲಿ ಸಿನಿಮಾ ಚಟುವಟಿಕೆಗಳಿಲ್ಲದ ಕಾರಣ ನಟ ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಪೋಸ್ಟ್‌ಗಳನ್ನು ಮಾಡುತ್ತಾ, ಲೈವ್‌ನಲ್ಲಿ ಅಭಿಮಾನಿಗಳ ಜತೆ ಮಾತನಾಡುತ್ತಾ ಅವರು ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಿರುವುದರಿಂದ ಕೆಲವರು ಮತ್ತೆ ತಮ್ಮ ಸಿನಿ ವೃತ್ತಿ ಕಾರ್ಯಕ್ಕೆ ಮರಳಿದ್ದಾರೆ.

Recommended Video

ಇಬ್ಬರ ಮನಸ್ಸಿಗೆ ಇಷ್ಟೊಂದು ನೋವು ಕೊಟ್ಟಿದ್ದು ಯಾರು..? | Srii Murali | Mahesh Kumar Director

ಸ್ಟಾರ್‌ಗಳಿಗೆ ಸಾಮಾಜಿಕ ಜಾಲತಾಣ ತಮ್ಮ ಪ್ರಚಾರಕ್ಕೆ ಸಿಗುವ ದೊಡ್ಡ ವೇದಿಕೆ. ಅದಕ್ಕಾಗಿ ಫೇಸ್‌ಬುಕ್, ಟ್ವಿಟ್ಟರ್ ಇನ್‌ಸ್ಟಾಗ್ರಾಂಗಳಲ್ಲಿ ಸದಾ ಬಿಜಿಯಾಗಿರುತ್ತಾರೆ. ಆದರೆ ಕಿಡಿಗೇಡಿಗಳು ಅವರ ಸಾಮಾಜಿಕ ಜಾಲತಾಣ ಖಾತೆಗಳ ಮೇಲೆ ಆಗಾಗ್ಗೆ ಕಿಡಿಗೇಡಿಗಳ ಕಣ್ಣು ಬೀಳುವುದಿದೆ. ಖಾತೆಗಳನ್ನು ಹ್ಯಾಕ್ ಮಾಡಿ ಅಲ್ಲಿ ಅಸಭ್ಯ, ಚಿತ್ರ ವಿಚಿತ್ರ ಪೋಸ್ಟ್‌ಗಳನ್ನು ಹಾಕುತ್ತಾರೆ. ಅವರ ಖಾತೆಯಿಂದ ಬೇರೆ ಪ್ರಸಿದ್ಧ ವ್ಯಕ್ತಿಗಳಿಗೆ ಸಂದೇಶಗಳನ್ನು ಕಳುಹಿಸುತ್ತಾರೆ, ಹ್ಯಾಕ್ ಮಾಡುವುದರಲ್ಲಿಯೇ ಪರಿಣತರಾದ ಸಾಕಷ್ಟು ಮಂದಿ ಇದ್ದಾರೆ. ಹೀಗೆ ಇಂತಹ ದುಷ್ಕರ್ಮಿಗಳು ಒಂದೇ ದಿನ ಕನ್ನಡದ ಇಬ್ಬರು ನಟಿಯರ ಇನ್‌ಸ್ಟಾಗ್ರಾಂ ಖಾತೆಗಳನ್ನು ಹ್ಯಾಕ್ ಮಾಡಿದ್ದಾರೆ. ಮುಂದೆ ಓದಿ...

ಮಾನ್ವಿತಾ ಖಾತೆ ಹ್ಯಾಕ್

ಮಾನ್ವಿತಾ ಖಾತೆ ಹ್ಯಾಕ್

ಟಗರು ಪುಟ್ಟಿ ಎಂದೇ ಹೆಸರಾದ ನಟಿ ಮಾನ್ವಿತಾ ಹರೀಶ್ ಅವರ ಇನ್‌ಸ್ಟಾಗ್ರಾಂ ಖಾತೆಯನ್ನು ಕಿಡಿಗೇಡಿಗಳು ಶನಿವಾರ ಹ್ಯಾಕ್ ಮಾಡಿದ್ದರು. ಅವರ ಫೇಸ್ ಬುಕ್ ಖಾತೆಯನ್ನು ಕೂಡ ಹ್ಯಾಕ್ ಮಾಡಲಾಗಿತ್ತು. ಅದರ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ.

ಮಾನ್ವಿತಾ ಖಾತೆಯಲ್ಲಿ ಹ್ಯಾಕರ್ಸ್ ಅಲರ್ಟ್

ಮಾನ್ವಿತಾ ಖಾತೆಯಲ್ಲಿ ಹ್ಯಾಕರ್ಸ್ ಅಲರ್ಟ್

'ನನ್ನ ಖಾತೆಯಿಂದ ಬಂದ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ. ನನ್ನ ಪ್ರೊಫೈಲ್ ಹ್ಯಾಕ್ ಆಗಿದೆ' ಎಂದು ಮಾನ್ವಿತಾ ತಿಳಿಸಿದ್ದಾರೆ. 'ಫೇಸ್‌ಬುಕ್ ಖಾತೆಯ ಲಿಂಕ್‌ಅನ್ನು ಬಹಳ ಕಷ್ಟಪಟ್ಟು ಸರಿಪಡಿಸಿದ್ದೇನೆ. ನನ್ನ ಪ್ರೊಫೈಲಿಂದ ಬಂದ ಯಾವುದೇ ಲಿಂಕ್‌ ಮೇಲೆ ಕ್ಲಿಕ್ ಮಾಡಬೇಡಿ' ಎಂದು ಮತ್ತೊಂದು ಹೇಳಿಕೆ ನೀಡಿದ್ದಾರೆ. ಅವರ ಇನ್‌ಸ್ಟಾಗ್ರಾಂ ಖಾತೆ ಬೇರೆ ಭಾಷೆಯಲ್ಲಿ ಪ್ರಕಟವಾಗುತ್ತಿತ್ತು. ಅದರ ಮೇಲೆ ಹ್ಯಾಕರ್ಸ್ ಅಲರ್ಟ್ ಎಂಬ ಸಂದೇಶ ಕೂಡ ಬಂದಿತ್ತು. ಈ ಖಾತೆಗಳನ್ನು ಸರಿಪಡಿಸಿಕೊಂಡಿದ್ದಾಗಿ ತಿಳಿಸಿದ್ದಾರೆ.

ಆಶಿಕಾ ಖಾತೆ ಹ್ಯಾಕ್

ಆಶಿಕಾ ಖಾತೆ ಹ್ಯಾಕ್

ನಟಿ ಆಶಿಕಾ ರಂಗನಾಥ್ ಅವರ ಇನ್‌ಸ್ಟಾಗ್ರಾಂ ಖಾತೆ ಕೂಡ ಶನಿವಾರ ಹ್ಯಾಕ್ ಆಗಿತ್ತು. ರಾತ್ರಿ ಅದನ್ನು ಸರಿಪಡಿಸಿದ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ. ಕೆಲವು ಸಮಯದ ಹಿಂದೆ ನನ್ನ ಅಕೌಂಟ್ ಹ್ಯಾಕ್ ಆಗಿದೆ. ಹೀಗಾಗಿ ನನ್ನ ಖಾತೆಯಿಂದ ಬರುವ ಯಾವುದೇ ಲಿಂಕ್‌ಅನ್ನು ಓಪನ್ ಮಾಡಬೇಡಿ ಎಂದು ಅವರು ಮನವಿ ಮಾಡಿದ್ದಾರೆ.

ಆಶಿಕಾ ಖಾತೆ ವಾಪಸ್

ಆಶಿಕಾ ಖಾತೆ ವಾಪಸ್

ಸಾಮಾಜಿಕ ಜಾಲತಾಣ ಪರಿಣತರ ಸಹಾಯದಿಂದ ಆಶಿಕಾ ತಮ್ಮ ಖಾತೆಯನ್ನು ಸರಿಪಡಿಸಿಕೊಂಡಿದ್ದಾರೆ. ತಮ್ಮ ಖಾತೆಯಿಂದ ಕಾಪಿ ರೈಟ್ ಉಲ್ಲಂಘನೆಯಾಗಿದೆ. ಸೂಕ್ತ ಪ್ರತಿಕ್ರಿಯೆ ನೀಡದೆ ಇದ್ದರೆ 24 ಗಂಟೆಯೊಳಗೆ ಖಾತೆ ನಿಷ್ಕ್ರಿಯವಾಗಲಿದೆ ಎಂಬ ಎಚ್ಚರಿಕೆಯನ್ನು ಅವರು ಶೇರ್ ಮಾಡಿದ್ದಾರೆ.

More from Filmibeat

English summary
Kannada actresses Manvitha Harish and Ashika Ranganath reported that their Instagram accounts were hacked by unknown hackers on Saturday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X