"ಕನ್ನಡ ಚಿತ್ರರಂಗದ ನೆಕ್ಸ್ಟ್‌ ವರ್ಷನ್ ಹೀರೋನೇ ಧ್ರುವ": ಸಾಹಸ ನಿರ್ದೇಶಕ ರವಿವರ್ಮಾ ಹೀಗಂದಿದ್ಯಾಕೆ?

ಕನ್ನಡ ಚಿತ್ರರಂಗದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್' ಬಿಡುಗಡೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ಭರ್ಜರಿ ಆಕ್ಷನ್ ಸೀನ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಇದೇ ಸಿನಿಮಾ ಕೆಲಸ ಮಾಡಿರುವ ರವಿವರ್ಮಾ 'ಮಾರ್ಟಿನ್' ಸಿನಿಮಾದ ಆಕ್ಷನ್ ಸೀಕ್ವೆನ್ಸ್‌ನ ಕೆಲವು ಗುಟ್ಟನ್ನು ಬಿಟ್ಟು ಕೊಟ್ಟಿದ್ದಾರೆ.

ಎಪಿ ಅರ್ಜುನ್ ನಿರ್ದೇಶನದ 'ಮಾರ್ಟಿನ್' ಸಿನಿಮಾವನ್ನು ದುಬಾರಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಉದಯ್ ಕೆ ಮೆಹ್ತಾ ಈ ಸಿನಿಮಾದ ನಿರ್ಮಾಪಕರಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ ಅನ್ನೋ ಮಾತು ಕೇಳಿಬರುತ್ತಿದೆ. ಕೇವಲ ಆಕ್ಷನ್ ಸೀನ್‌ಗಳಿಗಾಗಿಯೇ 8 ರಿಂದ 10 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಲಾಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ.

Martin action director Ravi Varma says Dhruva Sarja is Next version hero

ಇತ್ತೀಚೆಗೆ ಆಕ್ಷನ್ ಡೈರೆಕ್ಟರ್ ರವಿವರ್ಮಾ ಕನ್ನಡ ಪಿಕ್ಚರ್ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಇದರಲ್ಲಿ ಧ್ರುವ ಸರ್ಜಾ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಸಿನಿಮಾದ ಆಕ್ಷನ್ ಸೀಕ್ವೆನ್ಸ್ ಬಗ್ಗೆ ಕೆಲವು ಸಂಗತಿಗಳನ್ನು ರಿವೀಲ್ ಮಾಡಿದ್ದಾರೆ. ಅಲ್ಲದೆ, ಧ್ರುವ ಸರ್ಜಾ ಕನ್ನಡ ಚಿತ್ರರಂಗದ ನೆಕ್ಸ್ಟ್‌ ವರ್ಷನ್ ಹೀರೋ ಎಂದು ಹೇಳಿದ್ದಾರೆ.

"ನಿಜವಾಗಲೂ ಧ್ರುವ ಸರ್ಜಾಗೆ ದೊಡ್ಡ ಥ್ಯಾಂಕ್ಸ್ ಹೇಳಬೇಕು. ಎಲ್ಲಾ ರೀತಿಯಿಂದಲೂ ನಿಂತು ಸಪೋರ್ಟ್ ಮಾಡಿ, ನೀವು ಮಾಡಿ ಮಾಸ್ಟರ್ ಅಂತ ಹೇಳಿದ್ರು. ಅದೇ ರೀತಿ ನಿರ್ಮಾಪಕರು ಎಲ್ಲೂ ಕಾಂಪ್ರಮೈಸ್ ಆಗಿಲ್ಲ. ಒಂದೊಂದು ಚೇಸ್ ಕೂಡ ಕಮ್ಮಿ ಅಂದರೂ 8 ಕೋಟಿ, 10 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಿದ್ದಾರೆ. ಕ್ಲೈಮ್ಯಾಕ್ಸ್ ಸೀಕ್ವೆನ್ಸ್‌ಗೆ ಅಷ್ಟು ಹಣ ಖರ್ಚು ಮಾಡಿದ್ದಾರೆ. ಇನ್ನೊಂದು ಮುಂಬೈನಲ್ಲಿ ಚೇಸಿಂಗ್ ಸೀನ್ ಮಾಡಿದ್ದೇವೆ. ಅದಕ್ಕೆ 8 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ." ಎಂದು ಸಾಹಸ ನಿರ್ದೇಶಕ ರವಿವರ್ಮಾ ಹೇಳಿದ್ದಾರೆ.

ಇದೇ ಸಂದರ್ಶನದಲ್ಲಿ ಸಾಹಸ ದೃಶ್ಯಗಳಲ್ಲಿ ಧ್ರುವ ಸರ್ಜಾ ಹೇಗೆ ಕಾಣಿಸುತ್ತಾರೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಆಕ್ಷನ್ ಬೇರೆ ಲೆವೆಲ್‌ನಲ್ಲಿಯೇ ಇದೆ ಎಂದು ಹೇಳಿದ್ದಾರೆ. "ಆಕ್ಷನ್ ಬೇರೆ ಲೆವೆಲ್‌ನಲ್ಲಿದೆ. ನಾವು ನೀವೇ ಮಾತಾಡುತ್ತಿದ್ದೇವೆ. ನೆಕ್ಸ್ಟ್‌ ವರ್ಷನ್ ಏನು? ಅಂತ. ನೆಕ್ಸ್ಟ್‌ ವರ್ಷನ್‌ ಧ್ರುವ. ಕನ್ನಡ ಚಿತ್ರರಂಗದ ನೆಕ್ಸ್ಟ್‌ ವರ್ಷನ್ ಹೀರೋನೇ ಧ್ರುವ. ಇಲ್ಲವೇ ಇವರನ್ನು ಮೀರಿಸುವ ಇನ್ನೊಬ್ಬ ಹೀರೊ ಬರಬೇಕು ಅಷ್ಟೇ." ಎಂದು ರವಿವರ್ಮಾ ಹೇಳಿದ್ದಾರೆ.

Martin action director Ravi Varma says Dhruva Sarja is Next version hero

ಈ ಹಿಂದೆ 'ಮಾರ್ಟಿನ್' ಸಿನಿಮಾ ಝಲಕ್ ಒಂದು ರಿಲೀಸ್ ಆಗಿತ್ತು. ಅದನ್ನು ನೋಡಿ ಬಾಲಿವುಡ್ ಮಂದಿ ಸಿನಿಮಾ ಯಾವಾಗ ರಿಲೀಸ್ ಅಂತ ಕೇಳುತ್ತಿದ್ದರು ಎಂದು ರವಿವರ್ಮಾ ಹೇಳಿಕೊಂಡಿದ್ದಾರೆ. "ಬಾಲಿವುಡ್‌ನಲ್ಲಿ ನಾನು ಕೆಲಸ ಮಾಡುತ್ತೇನಲ್ಲ. ಯಾವಾಗ ಸಿನಿಮಾ ರಿಲೀಸ್ ಸರ್? ಸಿನಿಮಾ ಮುಗೀತಾ ಅಂತ ಕೇಳುತ್ತಿದ್ದಾರೆ. ಇಲ್ಲ, ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದೆ. ಸಿಜಿ ಎಲ್ಲ ಆಗಬೇಕು. ಪಕ್ಕಾ ಆಗದೆ ಬರೋದಿಲ್ಲ ಅಂತ ಹೇಳ್ಕೊಂಡು ಬಂದಿದ್ದೇನೆ." ಎಂದಿದ್ದಾರೆ.

ಬಾಲಿವುಡ್‌ನಲ್ಲಿ 'ಪುಷ್ಪ 2' ಸಿನಿಮಾಗೆ ಅದ್ಯಾವ ಮಟ್ಟಿಗೆ ಕಾಯುತ್ತಿದ್ದಾರೋ ಅದೇ ರೀತಿ 'ಮಾರ್ಟಿನ್' ಸಿನಿಮಾಗೂ ಕಾಯುತ್ತಿದ್ದಾರೆ ಎಂದು ಇದೇ ಸಂದರ್ಶನದಲ್ಲಿ ರವಿವರ್ಮಾ ಹೇಳಿದ್ದಾರೆ. ಒಟ್ನಲ್ಲಿ ರವಿವರ್ಮಾ 'ಮಾರ್ಟಿನ್' ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಕುತೂಹಲವನ್ನು ಹುಟ್ಟಾಕಿದ್ದಾರೆ.

More from Filmibeat

English summary
Ravi Varma about Dhruva Sarja and Martin movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X