ಈ ವರ್ಷ, ಈ ಸಿನಿಮಾಗಳಲ್ಲಿ ಯಾವುದು ಕನ್ನಡ ಚಿತ್ರರಂಗದ ಮರ್ಯಾದೆ ಉಳಿಸಬಹುದು?

'ಕಾಂತಾರ' ಸಿನಿಮಾ ಬಳಿಕ ಕನ್ನಡ ಚಿತ್ರರಂಗ ಮಕಾಡೆ ಮಲಗಿದ್ದು ಗೊತ್ತೇ ಇದೆ. ಅದರಲ್ಲಿ ಮಧ್ಯದಲ್ಲಿ ದರ್ಶನ್ ನಟಿಸಿದ 'ಕಾಟೇರ' ಸಿನಿಮಾ ಬಿಟ್ಟೆ ಮತ್ಯಾವುದೂ ಮೆಗಾ ಬ್ಲಾಕ್‌ ಬಸ್ಟರ್ ಹಿಟ್ ಆಗಿಲ್ಲ. ಹೀಗಾಗಿ ಕಳೆದ ಒಂದೂವರೆ ವರ್ಷದಿಂದ ಕನ್ನಡ ಚಿತ್ರರಂಗದ ಕಡೆ ಯಾರೂ ತಿರುಗಿ ಕೂಡ ನೋಡುತ್ತಿಲ್ಲ. ಇದೆಲ್ಲ ಪ್ಯಾನ್ ಇಂಡಿಯಾ ಎಫೆಕ್ಟ್ ಅಂತ ಕೆಲವರು ದೂರುವುದು ಇಂದಿಗೂ ಮುಂದುವರೆದಿದೆ.

'ಕೆಜಿಎಫ್ 2', 'ಕಾಂತಾರ' ಬಳಿಕ ಕನ್ನಡ ಚಿತ್ರರಂಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಆದರೆ, ಆ ಎರಡು ಸಿನಿಮಾಗಳ ಬಳಿಕ ಸ್ಯಾಂಡಲ್‌ವುಡ್ ಅಷ್ಟೇ ಬೇಗ ಸೈಲೆಂಟ್ ಆಗಿದೆ. ಸದ್ಯಕ್ಕೆ ಕನ್ನಡ ಚಿತ್ರರಂಗವನ್ನು ಮೇಲೆ ಎತ್ತುವುದಕ್ಕೆ ಮತ್ತೆ ಪ್ಯಾನ್ ಇಂಡಿಯಾ ಸಿನಿಮಾಗಳೇ ಬೇಕಾಗಿವೆ. ಅಂತಹ ಸಿನಿಮಾಗಳು ಸದ್ಯಕ್ಕೆ ಯಾವುದಿದೆ?

Martin KD Max UI Bheema these kannada movies may release this year

'ಮಾರ್ಟಿನ್'

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 'ಮಾರ್ಟಿನ್' ಅವತಾರದಲ್ಲಿ ಥಿಯೇಟರ್‌ಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದ್ದಾರೆ. ಒಂದಿಷ್ಟು ದಿನ ಕಾದು ಕಾದು ಸುಸ್ತಾಗಿದ್ದ ಫ್ಯಾನ್ಸ್‌ಗೆ 'ಮಾರ್ಟಿನ್' ರಿಲೀಸ್ ಡೇಟ್ ಅನೌನ್ಸ್ ಆಗಿದ್ದೇ ಒಂದು ಸಂತಸ. ಧ್ರುವ ಸರ್ಜಾ, ನಿರ್ದೇಶಕ ಎಪಿ ಅರ್ಜುನ್, ನಿರ್ಮಾಪಕ ಉದಯ್ ಮೆಹ್ತಾಗೆ ಸೇರಿದಂತೆ ಹಲವು ಮಂದಿಗೆ ಮೊದಲ ಪ್ಯಾನ್ ಇಂಡಿಯಾ ಎಕ್ಸ್‌ಪಿರೀಯನ್ಸ್. ಹೀಗಾಗಿ 'ಕೆಜಿಎಫ್‌'ನಂತೆ ಮೊದಲ ಯತ್ನದಲ್ಲೇ ಯಶಸ್ಸು ಸಿಕ್ಕರೆ, ಈ ತಂಡಕ್ಕಷ್ಟೇ ಅಲ್ಲ ಚಿತ್ರರಂಗಕ್ಕೆ ಮತ್ತೆ ಚೈತನ್ಯ ಬರುತ್ತೆ.

'ಯುಐ'

'ಕಬ್ಜ' ಬಳಿಕ ಉಪೇಂದ್ರ ಅವರ ಮತ್ತೊಂದು ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿದೆ. ಅದುವೇ 'ಯುಐ'. ಉಪ್ಪಿ ಡೈರೆಕ್ಷನ್‌ಗೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಫ್ಯಾನ್ಸ್ ಇದ್ದಾರೆ. ಆ ಫ್ಯಾನ್ ಫಾಲೋವಿಂಗ್ 'ಯುಐ' ಮೂಲಕ ದೇಶವ್ಯಾಪಿ ವ್ಯಾಪಿಸಬೇಕಿದೆ. 'ಯುಐ' ಏನಾದರೂ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ದಾಖಲೆ ಬರೆದರೆ, ಸ್ಯಾಂಡಲ್‌ವುಡ್ ಶೈನ್ ಆಗುವುದರಲ್ಲಿ ಡೌಟೇ ಇಲ್ಲ. ಈ ವರ್ಷವೇ 'ಯುಐ' ರಿಲೀಸ್ ಆಗುತ್ತಾ? ಇನ್ನೂ ಕ್ಲಾರಿಟಿ ಇಲ್ಲ.

'ಮ್ಯಾಕ್ಸ್'

'ವಿಕ್ರಾಂತ್ ರೋಣ' ಬಳಿಕ ಕಿಚ್ಚ ಸುದೀಪ್ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಮ್ಯಾಕ್ಸ್'. ಇತ್ತೀಚೆಗಷ್ಟೇ ಟೀಸರ್ ರಿಲೀಸ್ ಆಗಿ ಸದ್ದು ಮಾಡಿತ್ತು. ಈ ಕಾರಣಕ್ಕೆ ಇದೇ ವರ್ಷ ರಿಲೀಸ್ ಆಗುತ್ತೆ ಅನ್ನೋ ನಂಬಿಕೆ ಕಿಚ್ಚನ ಫ್ಯಾನ್ಸ್‌ಗಿದೆ. ಟೀಸರ್ ನೋಡಿದ್ಮೇಲೆ ಇದೊಂದು ಪ್ರಾಮಿಸಿಂಗ್ ಸಿನಿಮಾ ಆಗಬಹುದು ಅನ್ನೋ ನಂಬಿಕೆ ಹುಟ್ಟಿಕೊಂಡಿದೆ.

Martin KD Max UI Bheema these kannada movies may release this year

'ಕೆಡಿ'

ಇದೇ ವರ್ಷ ಧ್ರುವ ಸರ್ಜಾ ನಟನೆಯ ಮತ್ತೊಂದು ಸಿನಿಮಾ ರಿಲೀಸ್ ಆಗುತ್ತಿದೆ. ಅದುವೇ 'ಕೆಡಿ'. ಈಗ ರಿಲೀಸ್‌ಗೆ ರೆಡಿಯಾಗಿರುವ 'ಮಾರ್ಟಿನ್‌'ನಷ್ಟೇ 'ಕೆಡಿ' ಕೂಡ ದೊಡ್ಡ ಮಟ್ಟಕ್ಕೆ ಹೈಪ್ ಕ್ರಿಯೇಟ್ ಮಾಡುತ್ತೆ. ಜೋಗಿ ಪ್ರೇಮ್ ನಿರ್ದೇಶನವಿದ್ದು, ಈಗಾಗಲೇ ಸಿನಿಮಾದ ಒಂದು ಹಂತಕ್ಕೆ ಪ್ರೇಕ್ಷಕರನ್ನು ತಲುಪಿದೆ. ಅಲ್ಲದೆ ಡಿಸೆಂಬರ್‌ಗೆ ರಿಲೀಸ್ ಅಂತನೂ ಟೀಮ್ ಅನೌನ್ಸ್ ಮಾಡಿದೆ. ಈ ಕಾರಣಕ್ಕೆ ವರ್ಷದ ಕೊನೆಯಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಕ್ಸಸ್ ನಿರೀಕ್ಷಿಸಬಹುದು.

'ಭೈರತಿ ರಣಗಲ್'

ಇನ್ನು ಶಿವರಾಜ್‌ಕುಮಾರ್ ಹಾಗೂ ನರ್ತನ್ ಕಾಂಬಿನೇಷನ್ ಸಿನಿಮಾ ಭೈರತಿ ರಣಗಲ್ ಕೂಡ ಇದೇ ವರ್ಷ ರಿಲೀಸ್ ಆಗುತ್ತಿದೆ. ಈ ಸಿನಿಮಾದ ತುಣುಕುಗಳು ಕೂಡ ಸಿನಿಪ್ರಿಯರಿಗೆ ಕಿಕ್ ಕೊಟ್ಟಿದೆ. ಈ ಸಿನಿಮಾ ಕೂಡ ಕನ್ನಡ ಚಿತ್ರರಂಗದ ಮರ್ಯಾದೆ ಉಳಿಸಬಹುದು.

'ಭೀಮ'- 'ಕೃಷ್ಣಂ ಪ್ರಣಯ ಸಖಿ'

ಪ್ಯಾನ್ ಇಂಡಿಯಾ ಸಿನಿಮಾಗಳ ಜೊತೆ ಕನ್ನಡಿಗರಿಗಾಗಿಯೇ ನಿರ್ಮಾಣಗೊಂಡಿರುವ ಎರಡು ಸಿನಿಮಾಗಳಿವೆ. ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ 'ಭೀಮ'. ಇನ್ನೊಂದು ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ 'ಕೃಷ್ಣಂ ಪ್ರಣಯ ಸಖಿ'. ಇವೆರಡರಲ್ಲಿ 'ಭೀಮ' ಮಾಸ್ ಆಡಿಯನ್ಸ್‌ಗಾದರೆ, 'ಕೃಷ್ಣಂ ಪ್ರಣಯ ಸಖಿ' ಕ್ಲಾಸ್ ಆಡಿಯನ್ಸ್‌ಗೆ. ಹೀಗಾಗಿ ಮುಂದಿನ ಐದು ತಿಂಗಳಲ್ಲಿ ಈ ಆರು ಸಿನಿಮಾಗಳು ತೆರೆಕಂಡರೆ, ಒಂದಾದರೂ ಸಿನಿಮಾ ಕನ್ನಡ ಚಿತ್ರರಂಗದ ಮರ್ಯಾದೆಯನ್ನು ಉಳಿಸಬಹುದು.

More from Filmibeat

English summary
Martin KD Max UI Bheema these kannada movies may release this year
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X