"ಅವರಿಗೆ ಅವರ ಹೀರೋಗಿಂತ ನಾನು ಅಂದರೇನೆ ಇಷ್ಟ"; ದ್ವೇಷ ಮಾಡೋರಿಗೆ 'ಮಾರ್ಟಿನ್' ವಾರ್ನಿಂಗ್

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್' ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ಮೊದಲ ಮೂರು ದಿನ ಉತ್ತಮ ಗಳಿಕೆ ಕಂಡಿದೆ. ಇದೇ ಖುಷಿಯಲ್ಲಿ ನಿರ್ಮಾಪಕರೊಬ್ಬರನ್ನು ಬಿಟ್ಟು ಉಳಿದ ತಂಡ ಸಕಸ್ಸ್ ಮೀಟ್‌ನಲ್ಲಿ ಭಾಗಿಯಾಗಿತ್ತು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ನಿರ್ದೇಶಕ ಎಪಿ ಅರ್ಜುನ್ ಸೇರಿದಂತೆ ಇಡೀ ತಂಡ ಖುಷಿಯಲ್ಲಿ ತೇಲಾಡುತ್ತಿತ್ತು.

'ಮಾರ್ಟಿನ್' ರಿಲೀಸ್ ವೇಳೆ ಕೆಲವರು ಸಿನಿಮಾ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದರು. 'ಮಾರ್ಟಿನ್' ಸಿನಿಮಾ ಬಗ್ಗೆ ಅಪಪ್ರಚಾರ ಮಾಡಿದ್ದರು ಅನ್ನೋ ಆರೋಪ ಕೇಳಿ ಬಂದಿತ್ತು. ಸಿನಿಮಾ ಬಿಡುಗಡೆಗೂ ಮುನ್ನ ಹಾಗೂ ಬಿಡುಗಡೆಯ ನಂತರ ಒಂದಿಷ್ಟು ನೆಗೆಟಿವ್ ಕಾಮೆಂಟ್‌ಗಳು ಹರಿದಾಡಿದ್ದವು. ಇಂದು ಆ ಎಲ್ಲಾ ಪ್ರಶ್ನೆಗಳಿಗೂ ಧ್ರುವ ಉತ್ತರ ಕೊಟ್ಟದ್ದಾರೆ.

Martin star Dhruva Sarja says haters love me more than their favorite hero

ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಕೆಲ ಕಿಡಿಗೇಡಿಗಳು ಸಿನಿಮಾ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದರು. ಸಿನಿಮಾ ಚೆನ್ನಾಗಿಲ್ಲ ಅಂತ ಅಪಪ್ರಚಾರ ಮಾಡಿದ್ದರು. ಆ ತಂತ್ರಗಳು ಕರ್ನಾಟಕದ ಜನರ ಮುಂದೆ ವರ್ಕ್‌ಔಟ್ ಆಗಿಲ್ಲ ಎಂದು ಧ್ರುವ ಸರ್ಜಾ ಹೇಳಿದ್ದಾರೆ. "ನಿಮ್ಮವರೆಗೂ ಸುದ್ದಿ ಬಂದಿದೆ ಅಂದರೆ, ಅದು ಸುಳ್ಳಾ ನಿಜನಾ ಅನ್ನೋದು ನಿಮಗೆ ಗೊತ್ತಿರುತ್ತೆ. ನಾನು ಆಗಲೇ ಸೂಕ್ಷ್ಮವಾಗಿ ಹೇಳಿದೆ. ಕರ್ನಾಟಕದ ಜನರಿಗೆ ಸ್ವಂತ ಬುದ್ಧಿಯಿದೆ. ಸಿನಿಮಾ ಎಲ್ಲರೂ ನೋಡುತ್ತಿದ್ದಾರೆ. ಅವರು ಆಶೀರ್ವಾದ ಮಾಡುತ್ತಿದ್ದಾರೆ. ಯಾರೂ ಏನೂ ಮಾಡುವುದಕ್ಕೆ ಆಗುವುದಿಲ್ಲ." ಎಂದು ಧ್ರುವ ಸರ್ಜಾ ಖಡಕ್ ಸಂದೇಶ ರವಾನಿಸಿದ್ದಾರೆ.

ಅಷ್ಟೇ ಅಲ್ಲದೆ ಹೇಟರ್ಸ್ ಬಗ್ಗೆನೂ ಮಾರ್ಮಿಕರವಾಗಿ ಮಾತಾಡಿದ್ದಾರೆ. ಅವರ ಹೀರೋಗಿಂತ ತಾನು ಅಂದರೆ ಇಷ್ಟ ಅಂತ ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ. "ತುಂಬಾ ಸಮಯದ ಸ್ಪೆಂಡ್ ಮಾಡಿ, ಪೆಟ್ರೋಲ್ ಹಾಕಿಸಿಕೊಂಡು, ಟೈಮ್ ಕೊಟ್ಟು ಚೆನ್ನಾಗಿಲ್ಲ ಅಂತ ಹೇಳುವುದಕ್ಕೆ ನಮಗೋಸ್ಕರ ಟೈಮ್ ಸ್ಪೆಂಡ್ ಮಾಡುತ್ತಿದ್ದಾರೆ ಅಂದರೆ, ಅವರಿಗೆ ಅವರ ಹೀರೋಗಿಂತ ನಾನು ಅಂದರೇನೆ ಇಷ್ಟ ಅಂತ ಹೇಳುವುದಕ್ಕೆ ಇಷ್ಟ ಪಡುತ್ತೇನೆ." ಎಂದಿದ್ದಾರೆ ಧ್ರುವ ಸರ್ಜಾ.

Martin star Dhruva Sarja says haters love me more than their favorite hero

ಇದೇ ವೇಳೆ ಮೇಲೆ ಯೂಟ್ಯೂಬರ್‌ಗಳು ಫೇಕ್ ವಿಮರ್ಶೆ ಮಾಡುವುದರಿಂದ ತಮ್ಮ ಸಿನಿಮಾಗೆ ಅನುಕೂಲ ಆಗಿದೆ ಎಂದಿದ್ದಾರೆ. ಹಾಗೇ ಬ್ಯಾಡ್ ಒಪಿನಿಯನ್ ನೋಡಿ ಸುಮಾರು ಅಂದುಕೊಂಡು ಹೋದವರು ಸಿನಿಮಾ ನೋಡಿದ ಮೇಲೆ ನಾವು ಕೇಳಿದ್ದು ಸುಳ್ಳು ಅಂದ್ಕೊಂಡು ಆಚೆ ಬಂದಿರೋರು ಇದ್ದಾರೆ ಎಂದು ಧ್ರುವ ಸರ್ಜಾ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ 'ಮಾರ್ಟಿನ್' ವಿಮರ್ಶೆ ಬಗ್ಗೆನೂ ಮಾತಾಡಿದ್ದಾರೆ. "ತುಂಬಾ ಚೆನ್ನಾಗಿ ವಿಮರ್ಶೆ ಬರೆದು ಗುಡ್. ಕೆಟ್ಟದಾಗಿ ವಿಮರ್ಶೆ ಬರೆದರೆ ಬ್ಯಾಡ್ ಅಂತ ಹೇಳುವ ಕ್ಯಾಟಗರಿ ನಮ್ಮದಲ್ಲ. ಎಲ್ಲತರ ಪಾಸಿಟಿವ್ ಆಗಿದ್ದರೂ ತಗೋತೀವಿ. ನೆಗೆಟಿವ್ ಆಗಿದ್ದರೂ ತಗೋತಿವಿ. ಆದರೆ, ಬೇಕು ಅಂತಾನೇ ಮಾಡುತ್ತಾರಲ್ಲ. ಅದನ್ನು ತೆಗೆದುಕೊಳ್ಳುವುದಿಲ್ಲ ಅಂತ ಹೇಳುವುದಕ್ಕೆ ಇಷ್ಟ ಪಡುತ್ತೇನೆ." ಎಂದು ಧ್ರುವ ಸರ್ಜಾ ಹೇಳಿದ್ದಾರೆ.

'ಮಾರ್ಟಿನ್' ಥಿಯೇಟರ್‌ನಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಖುಷಿಯಲ್ಲಿ ಧ್ರುವ ಸರ್ಜಾ ತಮ್ಮ ಅಭಿಮಾನಿಗಳಿಗೆ ಪ್ರಾಮಿಸ್ ಮಾಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತೇನೆ ಎಂದಿದ್ದಾರೆ. "ಈ ಸಿನಿಮಾ ನೋಡುವಾಗ ನನಗೆ ನನ್ನ ಫ್ಯಾನ್ಸ್‌ಗೆ ಮೋಸ ಮಾಡಿದ್ದೀನಿ. ಇನ್ಮುಂದೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಬೇಕು ಅಂತ ಅನಿಸಿತು. ಖಂಡಿತವಾಗಲೂ ಇನ್ಮುಂದೆ ಬ್ಯಾಕ್ ಟು ಬ್ಯಾಕ್ ಸಿನಿಮಾವನ್ನು ಮಾಡುತ್ತೇನೆ." ಎಂದಿದ್ದಾರೆ.

More from Filmibeat

English summary
Martin star Dhruva Sarja says haters love me more than their favorite hero
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X