Martin Teaser: ಧ್ರುವ 'ಮಾರ್ಟಿನ್' ಅಲ್ಲ 'ಅರ್ಜುನ್'.. ಅಂದ್ಮೇಲೆ 'ಮಾರ್ಟಿನ್' ಯಾರು?
ಬಹಳ ದಿನಗಳಿಂದ ಇದೊಂದು ಟೀಸರ್‌ಗಾಗಿ ಸ್ಯಾಂಡಲ್‌ವುಡ್ ಕಾದು ಕೂತಿತ್ತು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮೊದಲ ಪ್ಯಾನ್ ಇಂಡಿಯಾ ಸಿನಿಮಾದ ಟೀಸರ್ ಯಾವಾಗ ಬರುತ್ತೆ ಅಂತ ಕಾದು ಕೂತಿದ್ದರು. ಕೊನೆಗೂ ಆ ಕಾಯುವಿಕೆ ಈಗ ಮುಗಿದಿದೆ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್' ಟೀಸರ್ ರಿಲೀಸ್ ಆಗಿದೆ. ಧ್ರುವ ಸರ್ಜಾ ಹಾಗೂ ಎಪಿ ಅರ್ಜುನ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರೋ ಈ ಸಿನಿಮಾ ಟೀಸರ್ ಆಕ್ಷನ್ ಪ್ರಿಯರಿಗೆ ಕಿಕ್ ಕೊಟ್ಟಿದೆ.
'ಮಾರ್ಟಿನ್' ಪ್ಯಾನ್ ಇಂಡಿಯಾ ಸಿನಿಮಾ ಅಂದಾಗ ಎಲ್ಲರ ಕಣ್ಣು ಇದರ ಮೇಲಿತ್ತು. ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಮಾಡಿದಾಗಲೂ ಕುತೂಹಲ ಮತ್ತಷ್ಟು ಹೆಚ್ಚಾಗಿತ್ತು. ಆದರೂ, ಧ್ರುವ ಸರ್ಜಾ ಅಭಿಮಾನಿಗಳಿಗೆ ಟೀಸರ್ ನೋಡುವವರೆಗೂ ನೆಮ್ಮದಿ ಇರಲಿಲ್ಲ. ಸದ್ಯಕ್ಕೀಗ ನಿರೀಕ್ಷೆ ಮಾಡಿದಂತೆ ಟೀಸರ್ ರಿಲೀಸ್ ಆಗಿದ್ದು, ಸಖತ್ ಕಿಕ್ ಕೊಟ್ಟಿದೆ, ಕನ್ನಡದಿಂದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕಿಕ್ ಕೊಡೋದು ಗ್ಯಾರಂಟಿ ಅನ್ನೋ ಭರವಸೆಯನ್ನು ಮೂಡಿಸಿದೆ. ಇದೇ ವೇಳೆ ಧ್ರುವ ಸರ್ಜಾ ಬೇರೆ ನಾನು 'ಮಾರ್ಟಿನ್' ಅಲ್ಲ ಅಂತ ಹೇಳಿದ್ದಾರೆ. ಹಾಗಿದ್ರೆ, 'ಮಾರ್ಟಿನ್' ಯಾರು? ಟೀಸರ್‌ನಲ್ಲಿ ಏನಾದರೂ ಸುಳಿವು ಇದೆಯಾ? ಅನ್ನೋ ಪ್ರಶ್ನೆ ಎದ್ದಿದೆ.

ಹೇಗಿದೆ 'ಮಾರ್ಟಿನ್' ಟೀಸರ್?
ಧ್ರುವ ಸರ್ಜಾ ಇದ್ಮೇಲೆ ಆಕ್ಷನ್ ಇರಬೇಕು. ಆಕ್ಷನ್ ಇದ್ಮೇಲೆ ಧ್ರುವ ಇರಲೇಬೇಕು. 2 ನಿಮಿ 33 ಸೆಕೆಂಡುಗಳ ಈ ಟೀಸರ್‌ನಲ್ಲಿ ಸಂಪೂರ್ಣವಾಗಿ ಆಕ್ಷನ್ ತುಣುಕುಗಳೇ ಎದ್ದು ಕಾಣುತ್ತವೆ. ಪಾಕಿಸ್ತಾನದ ಜೈಲಿನಿಂದ ಆರಂಭ ಆಗುವ ಈ ಟೀಸರ್ ಆರಂಭದಲ್ಲೇ ಕುತೂಹಲ ಕೆರಳಿಸುತ್ತೆ. ಧ್ರುವ ಪಾಕಿಸ್ತಾನ ಜೈಲಿಗೆ ಹೋಗಿದ್ದೇಕೆ? ಪಾಕಿಸ್ತಾನಕ್ಕೂ ಈ ಸಿನಿಮಾಗೂ ಏನು ಸಂಬಂಧ? ಅನ್ನೋ ಪ್ರಶ್ನೆ ಮೂಡುತ್ತೆ. ಅದಕ್ಕೆಲ್ಲಾ ಉತ್ತರ ಸಿನಿಮಾದಲ್ಲೇ ಸಿಗಲಿದೆ.
ಇದು ಬಿಟ್ಟು ಧ್ರುವ ಇಂಟ್ರುಕ್ಷನ್ ಕೂಡ ರಗಡ್ ಆಗಿದೆ. "ಇಂತಹ ಕ್ರೂರ ವ್ಯಕ್ತಿಯನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ. ಅಲ್ಲದೆ ಇದಕ್ಕಿಂತ ಅಪಾಯ ಏನು ಅಂದರೆ, ಅವನು ಇಂಡಿಯನ್" ಅನ್ನೋ ಡೈಲಾಗ್ ಮತ್ತಷ್ಟು ಕೆರಳಿಸುತ್ತೆ. ಇದರೊಂದಿಗೆ ಧ್ರುವ ಸರ್ಜಾ ದೈತ್ಯ ದೇಹ. ಬುಲೆಟ್ ಸದ್ದು, ಆಕ್ಷನ್ ಕಿಕ್, ಗನ್‌ಗಳ ಖಾರುಬಾರು, ಕಾರ್ ಚೇಜು ಎಲ್ಲವೂ ಇದೊಂದು ಬೇರೆ ಲೆವೆಲ್ ಸಿನಿಮಾ ಅನ್ನೋದನ್ನು ಹೇಳುತ್ತಿದೆ. ಟೀಸರ್ ಅಂತೂ ಒಂದು ಹಾಲಿವುಡ್ ಸಿನಿಮಾವನ್ನು ನೆನಪಿಸುತ್ತಿದೆ.

ಧ್ರುವ 'ಮಾರ್ಟಿನ್' ಅಲ್ಲ.. ಅರ್ಜುನ್!
ಟೀಸರ್ ರಿಲೀಸ್ ವೇಳೆ ಧ್ರುವ ಸರ್ಜಾ ಹೇಳಿದ ಮಾತು ಸಿನಿಪ್ರಿಯರಿಗೆ ಕಿಕ್ ಕೊಟ್ಟಿದೆ. ವೇದಿಕೆ ಮೇಲೆ ಧ್ರುವ ಒಂದು ಸೀಕ್ರೆಟ್ ಅನ್ನು ಬಿಚ್ಚಿಟ್ಟಿದ್ದಾರೆ. " ಈ ಸಿನಿಮಾದಲ್ಲಿ ನಾನು ಮಾರ್ಟಿನ್ ಅಲ್ಲ. ನನ್ನ ಹೆಸರು ಅರ್ಜುನ್. ಹಾಗಿದ್ರೆ ಮಾರ್ಟಿನ್ ಯಾರು?" ಅಂತ ಪ್ರಶ್ನೆ ಮಾಡುವ ಮೂಲಕ ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲವನ್ನು ಕೆರಳಿಸಿದ್ದಾರೆ. ಹೀಗಾಗಿ ಧ್ರುವ ಅಭಿಮಾನಿಗಳು ಹಾಗೂ ಸಿನಿಪ್ರಿಯರು ಮಾರ್ಟಿನ್ ಹುಡುಕುವುದಕ್ಕೆ ಶುರು ಮಾಡಿದ್ದಾರೆ.
'ಮಾರ್ಟಿನ್' ಟೀಸರ್ 2.33 ನಿಮಿಷ ಇದ್ದರೂ ಸಖತ್ ಫಸ್ಟ್ ಇದೆ ಅಂತ ಅನಿಸುತ್ತೆ. ಸತ್ಯ ಹೆಗಡೆ ಕ್ಯಾಮರಾವರ್ಕ್, ರವಿ ಬಸ್ರೂರು ಬ್ರ್ಯಾಕ್‌ಗ್ರೌಂಡ್ ಮ್ಯೂಸಿಕ್ ಹಾಗೂ ಕೆ ಎಂ ಪ್ರಕಾಶ್ ಎಡಿಟಿಂಗ್ ಈ ಟೀಸರ್‌ನಲ್ಲಿ ಎದ್ದು ಕಾಣುತ್ತೆ. ಇನ್ನು ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಟೀಸರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ಮಂದಿ ಈ ಸಿನಿಮಾದ ಟೀಸರ್ ಅನ್ನು ನೋಡಿದ್ದಾರೆ. ಮತ್ತೊಂದು ವಿಶೇಷ ಅಂದ್ರೆ, 'ಮಾರ್ಟಿನ್' ಸಿನಿಮಾಗೆ ಕಥೆ ಬರೆದಿದರೋ ಅರ್ಜುನ್ ಸರ್ಜಾ. ಹೀಗಾಗಿ ಈ ಸಿನಿಮಾದಲ್ಲಿ ಅರ್ಜುನ್ ಸರ್ಜಾ ಏನಾದರೂ ಮಾರ್ಟಿನ್ ಆಗಿ ಸ್ಪೆಷಲ್ ಎಂಟ್ರಿ ಕೊಡ್ತಾರಾ ಅನ್ನೋ ಡೌಟ್ ಕೂಡ ಇದೆ.


Click it and Unblock the Notifications











