70ರ ದಶಕದ ಬೆಂಗಳೂರಿನ ಚಿಕ್ಕಪೇಟೆ,ಆರ್‌ಕೆ ಮಾರ್ಕೆಟ್‌ನಲ್ಲಿ 'KD' ಖದರ್: ಧ್ರುವ ಎಂಟ್ರಿ ಭರ್ಜರಿ ಸೆಟ್ ರೆಡಿ!

2023 ಸ್ಯಾಂಡಲ್‌ವುಡ್‌ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪಾಲಿಗೆ ಅದೃಷ್ಟದ ವರ್ಷ ಆಗುತ್ತಾ? ಸದ್ಯಕ್ಕೆ ಇದೇ ಚರ್ಚೆ. ಯಾಕಂದ್ರೆ, ಒಂದ್ಕಡೆ 'ಮಾರ್ಟಿನ್'.. ಇನ್ನೊಂದು 'KD' ಸಿನಿಪ್ರೇಮಿಗಳಲ್ಲಿ ಕ್ರೇಜ್ ಹುಟ್ಟಾಕುತ್ತಿದೆ.

'ಮಾರ್ಟಿನ್' ಹಾಗೂ 'KD' ಎರಡೂ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಈ ವರ್ಷ ಧ್ರುವ ಸರ್ಜಾಗೆ ಲಾಭ ಹೆಚ್ಚು. ಕನ್ನಡದಲ್ಲಿ ಸ್ಪರ್ಧೆ ಒಡ್ಡುವುದಕ್ಕೆ 'ಕಬ್ಜ' ಬಿಟ್ಟರೆ ಬೇರೆ ಯಾವುದೇ ಪ್ಯಾನ್ ಇಂಡಿಯಾ ಸಿನಿಮಾವಿಲ್ಲ. ಈ ಕಾರಣಕ್ಕೆ ಜೋಗಿ ಪ್ರೇಮ್ ನಿರ್ದೇಶಿಸುತ್ತಿರುವ 'KD' ಶೂಟಿಂಗ್ ಕೂಡ ಫುಲ್ ಸ್ವಿಂಗ್‌ನಲ್ಲಿ ನಡೆಯುತ್ತಿದೆ.

'KD' ಪ್ಯಾನ್ ಇಂಡಿಯಾ ಸಿನಿಮಾ ಆಗಿರೋದ್ರಿಂದ ಬೃಹತ್ ಸೆಟ್‌ಗಳನ್ನು ಹಾಕಿ ಸಿನಿಮಾ ಮಾಡಲಾಗುತ್ತಿದೆ. ಈಗ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಹಾಗಿದ್ದರೆ, 'KD' ಸಿನಿಮಾ ಸೆಟ್ಟಿನ ಬಗ್ಗೆ ಆಗುತ್ತಿರೋ ಚರ್ಚೆ ಏನು? ಸೆಟ್ಟಿನ ವಿಶೇಷತೆಯೇನು? ಇಲ್ಲಿದೆ ಡಿಟೈಲ್ಸ್.

12 ಎಕರೆಯಲ್ಲಿ 'KD' ಸೆಟ್ ನಿರ್ಮಾಣ

12 ಎಕರೆಯಲ್ಲಿ 'KD' ಸೆಟ್ ನಿರ್ಮಾಣ

ಧ್ರುವ ಸರ್ಜಾ ನಟನೆಯ ಎರಡನೇ ಪ್ಯಾನ್ ಇಂಡಿಯಾ ಸಿನಿಮಾ 'KD' ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಆಗುತ್ತಿರೋದು ಗೊತ್ತೇ ಇದೆ. ಪ್ರೇಮ್ ನಿರ್ದೇಶನ ಅಂದ್ಮೇಲೆ ವಿಜ್ಯೂವಲ್ ಹಾಗೂ ಮ್ಯೂಸಿಕಲ್ ಟ್ರೀಟ್‌ಗೇನು ಕಮ್ಮಿಯಿರಲ್ಲ. ಈ ಹಿಂದೆ ಹೇಳಿದಂತೆ ಸುಮಾರು 12 ಎಕರೆ ಪ್ರದೇಶದಲ್ಲಿ ಬೃಹತ್ ಸೆಟ್‌ ಅನ್ನು ನಿರ್ಮಾಣ ಮಾಡಲಾಗಿದ್ಯಂತೆ. ಇದು ಸಿನಿಪ್ರಿಯರಿಗೆ ಕಣ್ಣುಗಳಿಗೆ ಸಖತ್ ಕಿಕ್ ಕೊಡಲಿದೆ ಅನ್ನೋ ಮಾತು ಓಡಾಡುತ್ತಿದೆ.

70ರ ದಶಕದ ಚಿಕ್ಕಪೇಟೆ,ಮಾರ್ಕೆಟ್ ನಿರ್ಮಾಣ

70ರ ದಶಕದ ಚಿಕ್ಕಪೇಟೆ,ಮಾರ್ಕೆಟ್ ನಿರ್ಮಾಣ

'KD' ಸಿನಿಮಾ ಸೆಟ್ಟಿನ ಬಗ್ಗೆ ಕೆಲವು ದಿನಗಳಿಂದ ಚರ್ಚೆ ನಡೆಯುತ್ತಲೇ ಇತ್ತು. ಅದಕ್ಕೆ ತಕ್ಕಂತೆ ಈಗ 70ರ ದಶಕದಲ್ಲಿ ಬೆಂಗಳೂರಿನ ಎರಡು ಪ್ರಮುಖ ಏರಿಯಾಗಳನ್ನು ಮರುಸೃಷ್ಟಿಸಲಾಗಿದೆ ಎನ್ನಲಾಗಿದೆ. 1970ರಲ್ಲಿ ಬೆಂಗಳೂರಿನ ಚಿಕ್ಕಪೇಟೆ ಹಾಗೂ ಕೆಆರ್ ಮಾರ್ಕೆಟ್‌ನ ಕೆಲವು ಏರಿಯಾಗಳು ಹೇಗಿತ್ತು? ಹಾಗೇ ಸೆಟ್ಟು ಹಾಕಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ 70 ದಶಕದ ಬೆಂಗಳೂರನ್ನು 'KD' ಸಿನಿಮಾದಲ್ಲಿ ನೋಡ್ಬಹುದು. ಇದೇ ಫೆಬ್ರವರಿ 27ರಿಂದ ಇದೇ ಸೆಟ್ಟಿನಲ್ಲಿ ಶೂಟಿಂಗ್ ಆರಂಭ ಆಗಲಿದೆ. ಈಗಾಗಲೇ 19 ದಿನಗಳ ಕಾಲ ಶೂಟಿಂಗ್ ನಡೆದಿದ್ದು, ಧ್ರುವ ಸರ್ಜಾ ಜೊತೆ ಬಾಲಿವುಡ್ ನಟ ಸಂಜಯ್ ದತ್ ಎಂಟ್ರಿ ಕೊಟ್ಟಿದ್ದಾಗಿದೆ.

ಈ ಹಿಂದೆನೇ ಸುದ್ದಿಯಾಗಿತ್ತು.

ಈ ಹಿಂದೆನೇ ಸುದ್ದಿಯಾಗಿತ್ತು.

'KD' ಸಿನಿಮಾಗಾಗಿ 70ರ ದಶಕದ ಸೆಟ್ ನಿರ್ಮಾಣ ಮಾಡುತ್ತಿರುವ ಬಗ್ಗೆ ಸುದ್ದಿಯಾಗಿತ್ತು. ಬೆಂಗಳೂರಿನ ಸುಂಕದಕಟ್ಟೆ ಸಮೀಪವಿರುವ ಸೀಗೇನಹಳ್ಳಿ ಬಳಿ 18 ಕೋಟಿ ರೂ. ವೆಚ್ಚದಲ್ಲಿ ಸೆಟ್ ನಿರ್ಮಾಣ ಮಾಡಲಾಗುತ್ತಿದೆ ಎಂದು ವರದಿಯಾಗಿತ್ತು. ಅದರಂತೆ ಈಗ 70ರ ದಶಕದ ಚಿಕ್ಕಪೇಟೆ ಹಾಗೂ ಕೆಆರ್ ಮಾರ್ಕೆಟ್ ನಿರ್ಮಾಣ ಆಗಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಜೋಗಿ ಪ್ರೇಮ್ ಹಾಗೂ ನಿರ್ಮಾಣ ಸಂಸ್ಥೆ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ,

'KD' 70ರ ದಶಕದ ಕಥೆ

'KD' 70ರ ದಶಕದ ಕಥೆ

'KD' ಸಿನಿಮಾ ಬಹುತೇಕ ಸೆಟ್ಟಿನಲ್ಲಿಯೇ ನಿರ್ಮಾಣಗೊಳ್ಳಲಿದೆ. ಯಾಕಂದ್ರೆ, ಈ ಸಿನಿಮಾ ಕಡೆ 70 ದಶಕದಲ್ಲಿ ಸಾಗುತ್ತೆ. ಧ್ರುವ ಸರ್ಜಾ ಈ ಸಿನಿಮಾದಲ್ಲಿ ಕಾಳಿದಾಸನಾಗಿ ಕಾಣಿಸಿಕೊಳ್ಳಲಿದ್ದು, ಇದೊಂದು ಭೂಗತಲೋಕದ ಹಿನ್ನೆಲೆಯನ್ನು ಹೊಂದಿದೆ. ಹೀಗಾಗಿ ಇಡೀ ಸಿನಿಮಾ ಕುತೂಹಲವನ್ನು ಕೆರಳಿಸಿದೆ. ಅಲ್ಲದೆ ದುಬಾರಿ ಸೆಟ್ಟುಗಳನ್ನು ತೆರೆಮೇಲೆ ಹೇಗೆ ಕಾಣುತ್ತೆ? 70ರ ದಶಕದ ಮೆಜೆಸ್ಟಿಕ್ ಹಾಗೂ ಕೆಆರ್ ಮಾರ್ಕೆಟ್ ಹೇಗಿರುತ್ತೆ? ಅನ್ನೋದು ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ.

More from Filmibeat

English summary
Massive 1970s Bengaluru Majestic and Market Sets in 12 Acres for Dhruva Sarja Film KD, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X