ಇನ್ನು 6 ತಿಂಗಳಲ್ಲಿ ಈ ಸಿನಿಮಾಗಳು ರಿಲೀಸ್ ಆದರೆ ಸ್ಯಾಂಡಲ್‌ವುಡ್ ಗೆಲ್ಲುತ್ತಾ? ₹1000 ಕೋಟಿ ಲಾಭ ಮಾಡುತ್ತಾ?

ಕಳೆದ ವರ್ಷದಿಂದ ಕನ್ನಡ ಚಿತ್ರರಂಗ ನಷ್ಟದಲ್ಲಿ ಸಾಗುತ್ತಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 'ಕಾಂತಾರ' ಸದ್ದು ಮಾಡಿದ್ದೇ ಕೊನೆ. ಅದು ಬಿಟ್ಟರೆ, ಕಳೆದ ವರ್ಷ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಕರ್ನಾಟಕ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನು ಬರೆದಿತ್ತು. ಈ ಸಿನಿಮಾ ನೋಡಲು ಥಿಯೇಟರ್‌ಗೆ ಜನ ಬಂದಿದ್ದರು.

ಕನ್ನಡಿಗರಿಗಾಗಿಯೇ ಮಾಡಿದ್ದ ಸಿನಿಮಾಗಳಲ್ಲಿ 'ಕಾಟೇರ' ಬಿಟ್ಟರೆ, ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಮತ್ತೊಂದು ಸಿನಿಮಾ ಕಣ್ಮುಂದೆ ಇಲ್ಲ. 2024ರಲ್ಲಾದರೂ, ಕನ್ನಡ ಚಿತ್ರರಂಗದಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಆಗಬಹುದು ಎಂಬ ನಿರೀಕ್ಷೆಯಿತ್ತು. ಮತ್ತೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಬಹುದು ಎಂಬ ನಿರೀಕ್ಷೆ ಇತ್ತು. ಅದೂ ಈಗ ಸುಳ್ಳಾಗಿದೆ.

2024 Kannada Industry second half

ತೀವ್ರ ಸಂಕಷ್ಟ ಎದುರಿಸುತ್ತಿರುವ ಕನ್ನಡ ಚಿತ್ರರಂಗ 2024ರ ಮೊದಲ ಆರು ತಿಂಗಳು ನಿರಾಸೆಯನ್ನೇ ಮೂಡಿಸಿದೆ. ಪಕ್ಕದ ಮಲಯಾಳಂ ಚಿತ್ರರಂಗ 1000 ಕೋಟಿ ರೂ. ಅಧಿಕ ಲಾಭ ಮಾಡಿ ಯಶಸ್ವಿ ಚಿತ್ರರಂಗ ಎನಿಸಿಕೊಂಡರೆ, ಕನ್ನಡ ಚಿತ್ರರಂಗ 100 ಕೋಟಿ ರೂಪಾಯಿ ಲಾಭ ಮಾಡುವುದಕ್ಕೂ ಹೆಣಗಾಡಿದೆ. ಆದರೆ, ದ್ವಿತೀಯಾರ್ಧದಲ್ಲಿ ಒಳ್ಳೊಳ್ಳೆ ಸಿನಿಮಾಗಳು ರಿಲೀಸ್ ಆಗಬಹುದು ಅನ್ನುವ ನಿರೀಕ್ಷೆಯಿದೆ.ಇನ್ನು ಉಳಿದ 6 ತಿಂಗಳಲ್ಲಿ ರಿಲೀಸ್ ಆಗಬಹುದು ಅಂತ ನಿರೀಕ್ಷೆಯಲ್ಲಿರುವ ಸಿನಿಮಾಗಳ ಪಟ್ಟಿ ಹೀಗಿದೆ.

ಧ್ರುವ ಸರ್ಜಾ 'ಮಾರ್ಟಿನ್'

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಈ ವರ್ಷದ ಆರಂಭದಲ್ಲಿಯೇ ರಿಲೀಸ್ ಆಗುತ್ತೆ ಎನ್ನಲಾಗಿತ್ತು. ಆದರೆ, ಇನ್ನೂ ಸಿನಿಮಾ ಕೆಲಸ ಮುಗಿದಿಲ್ಲ ಅನ್ನೋ ಮಾತು ಕೇಳಿ ಬರುತ್ತಿದೆ. ಇದು ಧ್ರುವ ಸರ್ಜಾ ನಟನೆಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರಿಂದ 'ಮಾರ್ಟಿನ್' ಮೇಲೆ ನಿರೀಕ್ಷೆ ದುಪ್ಪಟ್ಟಿದೆ. ಶೀಘ್ರದಲ್ಲಿಯೇ ಅಪ್‌ಡೇಟ್ ಕೊಡುವುದಾಗಿ ಚಿತ್ರತಂಡ ಹೇಳಿದ್ದು, 2024 ಸೆಕೆಂಡ್ ಹಾಫ್‌ನಲ್ಲಿಯೇ ರಿಲೀಸ್ ಆಗುವ ಸಾಧ್ಯತೆಯಿದೆ.

ಧ್ರುವ ಸರ್ಜಾ-ಪ್ರೇಮ್ ಸಿನಿಮಾ 'ಕೆಡಿ'

ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿರುವ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಕೆಡಿ'. ಧ್ರುವ ಸರ್ಜಾ ಹಾಗೂ ಪ್ರೇಮ್ ಕಾಂಬಿನೇಷನ್‌ನಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾವಿದು. ಪ್ರೇಮ್ ಈಗಾಗಲೇ ಇದೇ ವರ್ಷ ಸಿನಿಮಾ ರಿಲೀಸ್ ಎಂದು ಅನೌನ್ಸ್ ಮಾಡಿದ್ದಾರೆ. 'ಕೆಡಿ' ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರಿಂದ ಕೆವಿಎನ್‌ ಪ್ರೊಡಕ್ಷನ್ ದೊಡ್ಡ ಮಟ್ಟಕ್ಕೆ ರಿಲೀಸ್ ಆಗೋದು ಗ್ಯಾರಂಟಿ. ಹೀಗಾಗಿ ಈ ವರ್ಷ ಮುಗಿಯುವುದರೊಳಗೆ ಬಾಕ್ಸಾಫೀಸ್‌ನಲ್ಲಿ ಲಾಭ ನೋಡಬಹುದು ಅನ್ನೋ ನಿರೀಕ್ಷೆಯಿದೆ.

ಕಿಚ್ಚ ಸುದೀಪ್ 'ಮ್ಯಾಕ್ಸ್'

'ವಿಕ್ರಾಂತ್ ರೋಣ' ಬಳಿಕ ಕಿಚ್ಚ ಸುದೀಪ್ ಕಥೆಗಳ ಆಯ್ಕೆಯಲ್ಲಿ ಚೂಸಿಯಾಗಿದ್ದರು. ಆದರೂ, ಪ್ಯಾನ್ ಇಂಡಿಯಾ ಹೀರೊಗಳಿಗಿಂತ ಮುನ್ನ ಹೊಸ ಸಿನಿಮಾ 'ಮ್ಯಾಕ್ಸ್' ಅನ್ನು ಅನೌನ್ಸ್ ಮಾಡಿದ್ದರು. ಸದ್ಯಕ್ಕೀಗ 'ಮ್ಯಾಕ್ಸ್' ಸಿನಿಮಾ ಶೂಟಿಂಗ್ ಮುಗಿದಿದೆ. ಹೀಗಾಗಿ ಇದೇ ವರ್ಷ ಸಿನಿಮಾ ರಿಲೀಸ್ ಆಗಬಹುದು ಎಂಬ ನಿರೀಕ್ಷೆಯಿದೆ. ಇದು ಕೂಡ ಪ್ಯಾನ್ ಇಂಡಿಯಾ ರಿಲೀಸ್ ಆಗಿರುವುದರಿಂದ ಬಿಗ್ ರಿಲೀಸ್ ಎಕ್ಸ್‌ಪೆಕ್ಟ್ ಮಾಡಬಹುದು.

2024 Kannada Industry second half

ದರ್ಶನ್ ಸಿನಿಮಾ 'ಡೆವಿಲ್'

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಮೇಲೆ ಎಲ್ಲರ ಕಣ್ಣಿದೆ. ದರ್ಶನ್ 'ಕಾಟೇರ' ಮೂಲಕ ಜನರನ್ನು ಮತ್ತೆ ಥಿಯೇಟರ್‌ಗೆ ಕರೆದುಕೊಂಡಿದ್ದರು. 'ಡೆವಿಲ್' ಮತ್ತೆ ಥಿಯೇಟರ್‌ಗಳಿಗೆ ಹೊಸ ಚೈತನ್ಯ ಕೊಡಬಹುದೇನೋ? ಅನ್ನೋ ನಿರೀಕ್ಷೆಯಿದೆ. ಆದರೆ, ಕೈ ಆಪರೇಷನ್ ಬಳಿಕ ಸಿನಿಮಾ ಶೂಟಿಂಗ್ ತಡವಾಗಿದೆ. ಈ ವರ್ಷ ಕ್ರಿಸ್‌ಮಸ್‌ಗೆ ಸಿನಿಮಾ ಬಿಡುಗಡೆ ಆಗುತ್ತೆ ಅಂತ ಸ್ವತ: ದರ್ಶನ್ ಕನ್ಫರ್ಮ್ ಮಾಡಿದ್ದಾರೆ.

ಉಪೇಂದ್ರ 'UI'

ರಿಯಲ್‌ಸ್ಟಾರ್ ಉಪೇಂದ್ರ ನಟನೆಯ ಸಿನಿಮಾಗಳಿಗಿಂತ ನಿರ್ದೇಶನದ ಸಿನಿಮಾಗಳಿಗೆ ಬೇಡಿಕೆ ಹೆಚ್ಚು. ಇದೂವರೆಗೆ ಉಪ್ಪಿ ಆಕ್ಷನ್ ಕಟ್ ಹೇಳಿದ ಸಿನಿಮಾಗಳು ಸೋತಿದ್ದು ಎರಡು ಮಾತ್ರ. ಹೀಗಾಗಿ 'UI' ಸಿನಿಮಾ ಮೇಲೆ ನಿರೀಕ್ಷೆಯಿದೆ. ಈ ಬಾರಿನೂ ಉಪ್ಪಿ ಕನ್ನಡಿಗರಿಗೆ ಮತ್ತೊಂದು ವಿಭಿನ್ನ ಸಿನಿಮಾ ಕೊಡೋದು ಪಕ್ಕಾ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಸಿನಿಮಾ ಇನ್ನು ಆರು ತಿಂಗಳೊಳಗೆ ರಿಲೀಸ್ ಆಗುತ್ತೆ ಅನ್ನುವ ಸುದ್ದಿ ಓಡಾಡುತ್ತಿದೆ.

ದುನಿಯಾ ವಿಜಯ್ 'ಭೀಮಾ'

'ಸಲಗ'ದಂತಹ ಸಕ್ಸಸ್‌ಫುಲ್ ಸಿನಿಮಾ ಕೊಟ್ಟ ಬಳಿಕ ದುನಿಯಾ ವಿಜಯ್ 'ಭೀಮಾ' ನಿರ್ದೇಶನಕ್ಕೆ ಕೈ ಹಾಕಿದ್ದರು. 'ಭೀಮಾ' ಸಿನಿಮಾ ಕೂಡ ಮುಗಿದಿದ್ದು, ಇದೇ ರಿಲೀಸ್ ಆಗೋದು ಪಕ್ಕಾ ಎನ್ನಲಾಗುತ್ತಿದೆ.

More from Filmibeat

English summary
Max, Martin, KD, Bheema, UI, Devil could mark a profitable era for Sandalwood in 2024 second half
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X