ನಾವೆಲ್ಲರೂ ಜತೆಯಾಗಿದ್ದೇವೆ, ಶೀಘ್ರವೇ ಚಿತ್ರೀಕರಣ ಆರಂಭಿಸುತ್ತೇವೆ: ಶಿವರಾಜ್ ಕುಮಾರ್ ಭರವಸೆ

ಚಿತ್ರರಂಗ ಎದುರಿಸುತ್ತಿರುವ ಸಂಕಷ್ಟಗಳು, ಚಿತ್ರೀಕರಣ ನಡೆಯದೆ ಇರುವುದರಿಂದ ಕಾರ್ಮಿಕರು ಅನುಭವಿಸುತ್ತಿರುವ ತೊಂದರೆಗಳು ಹಾಗೂ ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಟ ಶಿವರಾಜ್ ಕುಮಾರ್ ಅವರ ನಿವಾಸದಲ್ಲಿ ಕನ್ನಡ ಚಿತ್ರೋದ್ಯಮದ ವಿವಿಧ ವಿಭಾಗಗಳ ಪ್ರಮುಖರು ಶುಕ್ರವಾರ ಸಭೆ ನಡೆಸಿದರು.

Recommended Video

ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗೋನೆ ಲೀಡರ್ | Shivarajkumar | Filmibeat Kannada

ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಸಂಬಂಧ ಶಿವರಾಜ್ ಕುಮಾರ್ ನೇತೃತ್ವದಲ್ಲಿ ನಿಯೋಗವೊಂದು ಸರ್ಕಾರವನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು. ಅದಕ್ಕೂ ಮುನ್ನ ಚಿತ್ರರಂಗದ ಕಾರ್ಮಿಕರಿಗೆ ನೆರವಾಗುವಂತೆ ಕೆಲವು ಪ್ರಮುಖ ಅಂಶಗಳನ್ನು ಚರ್ಚಿಸಿ ಪಟ್ಟಿಮಾಡಲು ನಿರ್ಧರಿಸಲಾಯಿತು.

ಐದಾರು ತಿಂಗಳಿನಿಂದ ಸಿನಿಮಾ ಚಟುವಟಿಕೆಗಳಿಲ್ಲದೆ ಸಾಮಾನ್ಯ ಕಾರ್ಮಿಕರು, ತಂತ್ರಜ್ಞರು, ಕಲಾವಿದರ ಜೀವನ ಕಷ್ಟದಲ್ಲಿದೆ. ಹೀಗಾಗಿ ಈಗಿನ ಸವಾಲುಗಳ ನಡುವೆ ಮತ್ತೆ ಚಿತ್ರೀಕರಣ ಆರಂಭಿಸಲು ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಹಾಗೂ ಕಾರ್ಮಿಕರಿಗೆ ಚಿತ್ರರಂಗ ಮತ್ತು ಸರ್ಕಾರದ ಕಡೆಯಿಂದ ಹೇಗೆ ನೆರವಾಗಬಹುದು ಎಂಬ ಬಗ್ಗೆ ಚರ್ಚೆ ನಡೆಸಲಾಯಿತು. ಮುಂದೆ ಓದಿ...

ಎರಡು ಮೂರು ದಿನದಲ್ಲಿ ತೀರ್ಮಾನ

ಎರಡು ಮೂರು ದಿನದಲ್ಲಿ ತೀರ್ಮಾನ

ಚಿತ್ರರಂಗದ ಎಲ್ಲ ವಿಭಾಗದವರೂ ಉದ್ಯಮದ ಕುರಿತು ಚರ್ಚಿಸಲು ಮನೆಗೆ ಬಂದಿರುವುದು ಖುಷಿಯ ಸಂಗತಿ. ಈ ಸಮಯದಲ್ಲಿ ಎಲ್ಲರೂ ಒಟ್ಟಿಗೆ ಬಂದು ಕಷ್ಟಗಳನ್ನು ಹೇಳಿದ್ದಾರೆ. ಅದರಲ್ಲಿ ಮುಖ್ಯವಾಗಿ ಈಗಿನ ಪರಿಸ್ಥಿತಿಯಲ್ಲಿ ಯಾವ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು ಎಂಬುದನ್ನು ವಾಣಿಜ್ಯ ಮಂಡಳಿಯಲ್ಲಿ ಚರ್ಚಿಸಿ ಎರಡು ಮೂರು ದಿನಗಳಲ್ಲಿ ತೀರ್ಮಾನಿಸುತ್ತೇವೆ ಎಂದು ಶಿವರಾಜ್ ಕುಮಾರ್ ತಿಳಿಸಿದರು.

ಮಾದರಿಯಾದ ಸುದೀಪ್

ಮಾದರಿಯಾದ ಸುದೀಪ್

ಚಿತ್ರರಂಗ ಈಗ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಬಗೆಹರಿಸಲು ಏನು ಮಾಡಬೇಕಿದೆ, ಆರ್ಥಿಕವಾಗಿ ಸರ್ವೈವ್ ಆಗಲು ಏನು ಮಾಡಬೇಕು ಎಂಬ ಬಗ್ಗೆ ಚರ್ಚಿಸುತ್ತಿದ್ದೇವೆ. ಈ ವರ್ಷ ಎಷ್ಟು ಸಿನಿಮಾಗಳ ಚಿತ್ರೀಕರಣ ನಡೆಯುತ್ತದೆ ಮತ್ತು ಎಷ್ಟರಮಟ್ಟಿಗೆ ನಡೆಯುತ್ತದೆ ಗೊತ್ತಿಲ್ಲ. ಸುದೀಪ್ ಈಗಾಗಲೇ ಚಿತ್ರೀಕರಣ ಶುರುಮಾಡಿ ಒಳ್ಳೆಯ ಉದಾಹರಣೆ ನೀಡಿದ್ದಾರೆ. ಅವರು ತೆಗೆದುಕೊಂಡಿರುವ ಮುನ್ನೆಚ್ಚರಿಕೆ ಕ್ರಮಗಳು ಮಾದರಿಯಾಗಿದೆ. ಅದನ್ನು ಗಮನದಲ್ಲಿಟ್ಟುಕೊಂಡು ನಾವು ಮುಂದೆ ಸಾಗಬೇಕು ಎಂದರು.

ಈ ಸಂದರ್ಭದಲ್ಲಿ ದುಡುಕಬಾರದು

ಈ ಸಂದರ್ಭದಲ್ಲಿ ದುಡುಕಬಾರದು

ಯಾವ ಸಿನಿಮಾವನ್ನು ಯಾವಾಗ ಶುರುಮಾಡಬಹುದು ಎಂಬುದನ್ನು ಕುಳಿತು ಚರ್ಚಿಸಿ ತೀರ್ಮಾನಿಸಿ ನಂತರ ಸರ್ಕಾರದ ಮುಂದೆ ಹೋಗಬೇಕು. ಈ ಸಮಯದಲ್ಲಿ ನಾವು ದುಡುಕಬಾರದು. ದುಡುಕಿ ಅನಾಹುತ ಆಗಬಾರದು. ನಾವೆಲ್ಲ ಕಲಾವಿದರೂ, ನಿರ್ಮಾಪಕರು, ಪ್ರದರ್ಶಕರು, ತಂತ್ರಜ್ಞರು ಎಲ್ಲರೂ ಜತೆಯಾಗಿ ಹೋಗಬೇಕು. ನಾವೆಲ್ಲರೂ ಒಂದೇ ಕುಟುಂಬ. ಯಾರೇ ಆದರೂ ಉದ್ಯಮಕ್ಕಾಗಿ ಫೈಟ್ ಮಾಡಲು ಒದ್ದಾಡುತ್ತಾರೆ. ನಮ್ಮವರು ಯಾರೂ ಮನಸ್ಸಲ್ಲಿ ಏನೋ ಇಟ್ಟುಕೊಂಡು ಮಾಡುವುದಿಲ್ಲ. ನಮ್ಮ ಮಾತಿಗೆ ಗೌರವ ನೀಡುತ್ತಾರೆ. ಅವರ ಪ್ರೀತಿ ವಿಶ್ವಾಸವಿದೆ. ಅದರಂತೆ ಎಲ್ಲರೂ ಜತೆಗೂಡಿ ಬಂದಿದ್ದಾರೆ. ಅವರ ಜತೆಯಲ್ಲಿ ನಾನೂ ಇದ್ದೇನೆ ಎಂದರು.

ನಾವೆಲ್ಲರೂ ಜತೆಯಲ್ಲಿದ್ದೇವೆ

ನಾವೆಲ್ಲರೂ ಜತೆಯಲ್ಲಿದ್ದೇವೆ

ಈ ಸಮಸ್ಯೆಯನ್ನು ಹೇಗಾದರೂ ಪರಿಹರಿಸಬೇಕು. ಅಮಿತಾಬ್ ಬಚ್ಚನ್ ಒಂದು ವಿಡಿಯೋ ಮೂಲಕ ಇಡೀ ಉದ್ಯಮಕ್ಕೆ ಮಾದರಿಯಾಗಿದ್ದರು. ಹಾಗೆಯೇ ನಾವು ಕನ್ನಡ ಉದ್ಯಮಕ್ಕೆ ಮಾದರಿಯಾಗಬೇಕು. ಯಾರೂ ಬೇರೆ ಯಾವುದೇ ರೀತಿಯ ಆತುರದ ಪ್ರಯತ್ನ ಮಾಡಬೇಡಿ. ನಾವೆಲ್ಲರೂ ಜತೆಯಲ್ಲಿ ಇದ್ದೇವೆ. ಆದಷ್ಟು ಬೇಗ ಶೂಟಿಂಗ್ ಶುರುವಾಗುತ್ತದೆ. ಒಂದೇ ಸಲ ಚಿತ್ರೀಕರಣ ಆರಂಭವಾಗುತ್ತದೆ ಎಂದು ಭರವಸೆ ನೀಡುವುದಿಲ್ಲ. ಹಂತ ಹಂತವಾಗಿ ಶುರುವಾಗಲಿದೆ. ನಾವು ಧೈರ್ಯವಾಗಿ ಎದುರಿಸಬೇಕು. ಕೊರೊನಾ ದೊಡ್ಡ ವಿಷಯವಲ್ಲ. ನಾವು ನಿಯಮಗಳನ್ನು ಸರಿಯಾಗಿ ಪಾಲಿಸಬೇಕು. ಆಗ ಕೊರೊನಾದಿಂದ ಏನೂ ಮಾಡಲು ಆಗೊಲ್ಲ. ಸರ್ಕಾರದ ಜತೆಯಾಗಿ ಸಾಗೋಣ. ಎಲ್ಲರೂ ಖುಷಿಯಾಗಿರಿ ಎಂದು ಶಿವರಾಜ್ ಕುಮಾರ್ ಚಿತ್ರರಂಗದ ಕಾರ್ಮಿಕರು, ಕಲಾವಿದರು ಮತ್ತು ತಂತ್ರಜ್ಞರಿಗೆ ಧೈರ್ಯ ತುಂಬಿದ್ದಾರೆ.

More from Filmibeat

English summary
Seniors of Kannada film industry including all departments held a meeting at Shiva Rajkumar's residence to discuss about the challenges of workers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X