ಮೇಘನಾ ರಾಜ್ 2ನೇ ಮದುವೆ: "ಪ್ರಶ್ನೆಯನ್ನು ಪ್ರಶ್ನೆಯಾಗಿಯೇ ಇರಲಿ" ಎಂದು ಮೌನ ಮುರಿದ ನಟಿ

ಸೋಶಿಯಲ್ ಮೀಡಿಯಾ ಬಂದ್ಮೇಲೆ ಸೆಲೆಬ್ರಿಟಿಗಳಿಗೆ ನಿದ್ದೆನೇ ಹಾಳಾಗಿ ಹೋಗಿದೆ. ಅವರ ಬಗ್ಗೆ ಪ್ರತಿ ದಿನ ಒಂದಲ್ಲ ಒಂದು ವಿಷಯದ ಬಗ್ಗೆ ಚರ್ಚೆ ಮಾಡುತ್ತಲೇ ಇರುತ್ತಾರೆ. ಮದುವೆ, ವಿಚ್ಛೇದನ, ಲವ್ ಸ್ಟೋರಿ, ಅಫೇರ್ ಅಂತ ಚರ್ಚೆಯಾಗುತ್ತಲೇ ಇರುತ್ತೆ. ಮೊದಲ ಮೊದಲು ಸ್ಟಾರ್‌ಗಳು ಕೂಡ ಇಂತಹ ವಿಷಯಗಳ ಬಗ್ಗೆ ಖಾರವಾಗಿ ಪ್ರತಿಕ್ರಿಯೆ ನೀಡುತ್ತಿದ್ದರು. ಆದ್ರೀಗ ಅವರಿಗೂ ಅಭ್ಯಾಸವಾಗಿ ಹೋಗಿದೆ. ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುವುದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗುತ್ತಿಲ್ಲ.

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ನಟಿ ಮೇಘನಾ ರಾಜ್ ಎರಡನೇ ಮದುವೆ ಬಗ್ಗೆ ಕೆದುಕುತ್ತಲೇ ಇರುತ್ತಾರೆ. ಇನ್ನೇನು ಮೇಘನಾ ಎರಡನೇ ಮದುವೆ ಆಗೇ ಬಿಟ್ಟರು ಎನ್ನುವ ಮಟ್ಟಿಗೆ ಕಮೆಂಟ್‌ಗಳನ್ನು ಮಾಡಿದ್ದು ಇದೆ. ಸಾಲದ್ದಕ್ಕೆ ಕನ್ನಡದ ಮತ್ತೊಬ್ಬ ನಟನೆ ಹೆಸರನ್ನು ತಳುಕು ಹಾಕಿ, ಅದಕ್ಕೊಂದಿಷ್ಟು ಉಪ್ಪಿ ಖಾರ ಸೇರಿಸಿ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್‌ಗಳನ್ನು ಪಾಸ್ ಮಾಡಿದ್ದರು. ಇಂತಹ ಸುದ್ದಿಗಳ ಬಂದಾಗ ಪರೋಕ್ಷವಾಗಿ ಅದೇ ಸೋಶಿಯಲ್ ಮೀಡಿಯಾದಲ್ಲಿ ಮೇಘನಾ ರಾಜ್ ಪ್ರತಿಕ್ರಿಯೆ ನೀಡಿ ಸುಮ್ಮನಾಗಿದ್ದರು.

Meghana Raj on second marriage with Vijay Raghavendra she says let the question remain a question

ಚಿರಂಜೀವಿ ಸರ್ಜಾ ಅಗಲಿಕೆ ಬಳಿಕ ಮೇಘನಾ ರಾಜ್ ಆ ನೋವಿನಿಂದ ಹೊರ ಬರುವುದಕ್ಕೆ ಸಾಕಷ್ಟು ಸಮಯ ತೆಗೆದುಕೊಂಡಿದ್ದರು. ಪುತ್ರ ರಾಯನ್‌ನಲ್ಲಿ ತನ್ನ ನೋವನ್ನು ಮರೆತು ಖುಷಿಯಿಂದ ಮುಂದಿನ ಜೀವನ ನಡೆಸುತ್ತಿದ್ದಾರೆ. ಈ ವೇಳೆ ಕೆಲವರು ಮೇಘನಾ ರಾಜ್ ಎರಡನೇ ಮದುವೆ ಆಗಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಕೆಲವರು ಕನ್ನಡ ನಟ ವಿಜಯ್ ರಾಘವೇಂದ್ರ ಅವರೊಂದಿಗೆ ಎರಡನೇ ಮದುವೆ ಅಂತ ಸುದ್ದಿಗಳನ್ನು ಹಬ್ಬಿಸುವುದಕ್ಕೆ ಶುರು ಮಾಡಿದ್ದರು. ಆದರೆ, ಇಂತಹ ಸುದ್ದಿಗಳಿಗೆ ಮೇಘನಾ ರಾಜ್ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿರಲಿಲ್ಲ.

ಇತ್ತೀಚೆಗೆ ಮೇಘನಾ ರಾಜ್ ಒಂದು ಖಾಸಗಿ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ವೇಳೆ ಫಸ್ಟ್ ಡೇ ಫಸ್ಟ್ ಶೋ ಯೂಟ್ಯೂಬ್ ಚಾನೆಲ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಆಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಎರಡನೇ ಮದುವೆ ಬಗ್ಗೆ ಎದ್ದಿರುವ ಸುದ್ದಿ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಈ ಹಿಂದೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಾಕಿ ಪೋಸ್ಟ್ ಬಗ್ಗೆನೂ ಪ್ರತಿಕ್ರಿಯೆ ನೀಡಿದ್ದಾರೆ.

ಎರಡನೇ ಮದುವೆ ಬಗ್ಗೆ ಚರ್ಚೆ ಹೆಚ್ಚಾಗುತ್ತಿದ್ದಂತೆ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮೇಘನಾ ರಾಜ್ ಒಂದು ಪೋಸ್ಟ್ ಮಾಡಿದ್ದರು. ಮತ್ತೊಮ್ಮೆ ತನಗೆ ಪಾರ್ಟ್ನರ್ ಬೇಕು ಅಂದರೆ, ಅದನ್ನು ಚಿರುನೇ ಗೈಡ್ ಮಾಡುತ್ತಾರೆ ಎಂಬ ಅರ್ಥದಲ್ಲಿ ಪೋಸ್ಟ್ ಹಾಕಿದ್ದರು. ಅದು ಕೆಲ ನೆಟ್ಟಿಗರಿಗೆ ಸರಿಯಾಗಿ ಅರ್ಥ ಆಗಿರಲಿಲ್ಲ. ಹೀಗಾಗಿ ಮೇಘನಾ ರಾಜ್ ಎರಡನೇ ಮದುವೆ ರೆಡಿ ಎಂದು ಗುಲ್ಲೆಬ್ಬಿಸಿದ್ದರು. ಅದಕ್ಕೆ ಪೋಸ್ಟ್‌ಗೆ ಈಗ ಪ್ರತಿಕ್ರಿಯಿಸಿದ್ದಾರೆ.

Meghana Raj on second marriage with Vijay Raghavendra she says let the question remain a question

'ಫಸ್ಟ್ ಡೇ ಫಸ್ಟ್ ಶೋ' ಯೂಟ್ಯೂಬ್ ಚಾನೆಲ್‌ ಸಂದರ್ಶನದಲ್ಲಿ "ನಾನು ಏನು ಉತ್ತರ ಕೊಟ್ಟಿದ್ದೀನಿ ಅಂತ ಅರ್ಥ ಆಗಿಲ್ಲ. ಆದರೂ ಕಮೆಂಟ್ ಹಾಕಿದ್ದಾರೆ. ಅದರ ಬಗ್ಗೆ ನಾನು ಇವತ್ತು ಏನಾದರೂ ಉತ್ತರ ಕೊಟ್ಟರೆ ಅದಕ್ಕೂ ಇನ್ನೊಂದು ಕಮೆಂಟ್ ಹಾಕುತ್ತಾರೆ. ಕಮೆಂಟ್ ಮಾಡುವವರಿಗೆ ಸಹಾಯ ಮಾಡುವುದಕ್ಕೆ ನನಗೆ ಇಷ್ಟವಿಲ್ಲ. ಹಾಗಾಗಿ ಪ್ರಶ್ನೆಯನ್ನು ಪ್ರಶ್ನೆಯಾಗಿಯೇ ಇಟ್ಟು ಬಿಡೋಣ." ಎಂದು ನಟಿ ಮೇಘನಾ ರಾಜ್ ಕ್ಲಿಯರ್ ಕಟ್ ಆಗಿ ಉತ್ತರ ಕೊಟ್ಟಿದ್ದಾರೆ.

ಇನ್ನು ಸಾಲದ್ದಕ್ಕೆ ವಿಜಯ್ ರಾಘವೇಂದ್ರ ಜೊತೆ ಮೇಘನಾ ರಾಜ್ ಎರಡನೇ ಮದುವೆ ಅಂತಾನೂ ಸುದ್ದಿ ಹಬ್ಬಿಸಿದ್ದರು. ಈ ವಿಷಯಕ್ಕೂ ಮೇಘನಾ ರಾಜ್ ಎಲ್ಲೂ ಉತ್ತರ ಕೊಡುವುದಕ್ಕೆ ಹೋಗಲಿಲ್ಲ. "ನಾನು ಏನೂ ಹೇಳ್ತಿಲ್ಲ. ಎಲ್ಲ ಹೇಳ್ತಿರೋದು ಜನಾನೇ. ಅವರಿಗೆ ಎಷ್ಟು ಖುಷಿ ಆಗುತ್ತೋ ಅಷ್ಟು ಹೇಳಲಿ." ಎಂದು ನಟಿ ಮೇಘನಾ ರಾಜ್ ಮದುವೆ ಬಗ್ಗೆ ಚರ್ಚೆ ಮಾಡುತ್ತಿರುವವರಿಗೆ ಪರೋಕ್ಷವಾಗಿ ತಿರುಗೇಟು ಕೊಟ್ಟಿದ್ದಾರೆ.

More from Filmibeat

English summary
Meghana Raj on second marriage with Vijay Raghavendra she says let the question remain a question.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X