"ನನ್ನ ನಿನ್ನೆ, ಇಂದು ಮತ್ತು ಎಂದೆಂದಿಗೂ ನೀನೆ": ಪತಿ ಪುಣ್ಯತಿಥಿಯಂದು ಮೇಘನಾ ರಾಜ್ ಭಾವುಕ

ಮೂರು ವರ್ಷಗಳ ಹಿಂದೆ ಇದೇ ದಿನ (ಜೂನ್ 7) ಕನ್ನಡ ಚಿತ್ರರಂಗ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ದಿಢೀರನೇ ಅಪಾರ ಅಭಿಮಾನಿಗಳನ್ನು ಅಗಲಿದ್ದರು. ತೀವ್ರ ಹೃದಯಾಘಾತದಿಂದ ಚಿರಂಜೀವಿ ಸರ್ಜಾ ಕೊನೆಯುಸಿರೆಳೆದಿದ್ದರು.

ಈ ಘಟನೆ ಚಿರಂಜೀವಿ ಸರ್ಜಾ ಕುಟುಂಬಕ್ಕೆ, ಪತ್ನಿ ಮೇಘನಾ ಹಾಗೂ ಅಭಿಮಾನಿಗಳಿಗೆ ಬರಸಿಡಿಲಿನಂತೆ ಬಂದೆರಗಿತ್ತು. ಅಂದಿನಿಂದಲೂ ಮೇಘನಾ ರಾಜ್ ಪತ್ನಿಯ ನೆನಪಿನಲ್ಲೇ ಜೀವನ ಸಾಗಿಸುತ್ತಿದ್ದಾರೆ. ನೋವುಗಳನ್ನು ಮರೆತು ಹೊಸ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಪ್ರಯತ್ನ ಪಡುತ್ತಿದ್ದಾರೆ.

Meghana Raj post on instagram about Chiranjeevi Sarja on his 3rd death anniversary

ಇಂದು ಚಿರಂಜೀವಿ ಸರ್ಜಾ ಅವರ ಮೂರನೇ ಪುಣ್ಯತಿಥಿ. ಅವರ ಸಮಾಧಿ ಬಳಿಕ ಪೂಜೆ ಪುನಸ್ಕಾರಗಳು ನಡೆದಿವೆ. ಸಹೋದರ ಧ್ರುವ ಸರ್ಜಾ, ಪುತ್ರ ರಾಯನ್ ಸೇರಿದಂತೆ ಇಡೀ ಕುಟುಂಬವೇ ಪುಣ್ಯತಿಥಿಯಲ್ಲಿ ಭಾಗಿಯಾಗಿದೆ. ಇದೇ ವೇಳೆ ಮೇಘನಾ ರಾಜ್ ಪತಿ ಚಿರಂಜೀವಿ ಸರ್ಜಾರನ್ನು ನೆನೆದು ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ.

"ನಿನ್ನೆ, ಇಂದು ಎಂದೆಂದಿಗೂ ನೀನೇ"

ಪತಿಯ ಪುಣ್ಯತಿಥಿಯಂದು ಮೇಘನಾ ರಾಜ್ ಇಬ್ಬರೂ ಜೊತೆಗಿರುವ ಹಳೆಯ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಚಿರು ಜೊತೆ ಕಳೆದ ನೆನಪಿನ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ಭಾವುಕರಾಗಿ ಒಂದೇ ಸಾಲಿನಲ್ಲಿ ಚಿರು ನೆನಪನ್ನು ವಿವರಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಹಳೆಯ ಫೋಟೊವನ್ನು ಶೇರ್ ಮಾಡಿದ್ದು, "ನನ್ನ ನಿನ್ನೆಗಳು, ಇಂದು ಮತ್ತು ಎಂದೆಂದಿಗೂ ನೀನೆ" ಎನ್ನುವ ಅರ್ಥದಲ್ಲಿ ಕೆಲವು ಪದಗಳನ್ನು ಬರೆದು ಶೇರ್ ಮಾಡಿದ್ದಾರೆ. ಮೇಘನಾ ರಾಜ್ ಬರೆದ ಈ ಸಾಲುಗಳಿಗೆ ನೆಟ್ಟಿಗರು ಹಾಗೂ ಚಿರಂಜೀವಿ ಸರ್ಜಾ ಅಭಿಮಾನಿಗಳು ಕೂಡ ಎಮೋಷನಲ್ ಆಗಿ ಕಮೆಂಟ್‌ಗಳನ್ನು ಮಾಡಿದ್ದಾರೆ.

"ಎಂದೆಂದಿಗೂ ಚಿರು"

ಮೇಘನಾ ರಾಜ್ ಎಮೋಷನಲ್‌ ಆಗಿ ಫೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಹಾಗೂ ನೆಟ್ಟಿಗರು ನಟಿಗೆ ಸಮಾಧಾನಕರ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. "ಓ ಮೈ ಗಾಢ್.. ನನಗೆ ಅವರು ಇಲ್ಲಿ ಇಲ್ಲ ಅಂತ ಈಗ ಫೀಲ್ ಆಗುತ್ತಿದೆ" ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಎಂದೆಂದಿಗೂ ಚಿರು" ನೆನೆಪು ಮಾಡಿಕೊಂಡಿದ್ದಾರೆ.

39 ವರ್ಷದ ಚಿರಂಜೀವಿ ಸರ್ಜಾ ತೀವ್ರ ಹೃದಯಾಘಾತವಾಗಿತ್ತು. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ, ಯಾವುದೇ ಪ್ರಯೋಜನ ಆಗಿರಲಿಲ್ಲ. ಈ ನೋವಿನಿಂದ ಮೇಘನಾ ರಾಜ್ ಹೊರಬಂದು ಹೊಸ ಬದುಕು ಕಟ್ಟಿ ಕೊಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಪುತ್ರ ರಾಯನ್‌ ರಾಜ್ ಸರ್ಜಾನೇ ತನ್ನ ಪ್ರಪಂಚ ಎಂದು ಭಾವಿಸಿದ್ದಾರೆ.

ಮತ್ತೆ ಸಿನಿಮಾಗೆ ಮೇಘನಾ ಎಂಟ್ರಿ

ರಾಯನ್‌ಗೆ ಜನ್ಮ ನೀಡದ ಬಳಿಕ ಮೇಘನಾ ರಾಜ್ ಕೆಲವು ದಿನಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದರು. ಈಗ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಗೆಳೆಯ ಪನ್ನಾಗಭರಣ ನಿರ್ಮಿಸಿರುವ 'ತತ್ಸಮ ತದ್ಭವ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಶಾಲ್ ಆತ್ರೇಯ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.

'ತತ್ಸಮ ತದ್ಭವ' ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ಸಿನಿಮಾದಿಂದ ಮತ್ತೆ ಸಿನಿಪಯಣ ಆರಂಭ ಆಗಿದೆ. ಈ ಸಿನಿಮಾ ದೊಡ್ಡ ಮಟ್ಟಕ್ಕೆ ಹೆಸರು ಮಾಡಿದರೆ, ಮತ್ತೆ ಕನ್ನಡ ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಮೇಘನಾ ರಾಜ್ ಆಕ್ಟಿವ್ ಆಗಬಹುದು. 'ತತ್ಸಮ ತದ್ಭವ'ದ ಫಸ್ಟ್ ಲುಕ್ ಅದ್ಭುತವಾಗಿದ್ದು, ಟೀಸರ್, ಟ್ರೈಲರ್ ಹೇಗೆ ಇಂಪ್ರೆಸ್ ಮಾಡುತ್ತೆ ಅನ್ನೋ ಕುತೂಹಲವಿದೆ.

More from Filmibeat

English summary
Meghana Raj post on instagram about Chiranjeevi Sarja on his 3rd death anniversary, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X