"ನಾನು ಯಾರನ್ನೂ ನೋಡಿ ಕಣ್ಣಲ್ಲಿ ನೀರು ಹಾಕಿಲ್ಲ.. ರಜನಿ ಸರ್ ನೋಡಿ ದೇವರು ಕಂಡಂತಾಯ್ತು"-ಮೇಘನಾ ರಾಜ್

ಸೂಪರ್‌ಸ್ಟಾರ್ ರಜನಿಕಾಂತ್ 'ಜೈಲರ್ 2' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 'ಜೈಲರ್' ಅಂತಹ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾದ ಬಳಿಕ ಅದೇ ತಂಡ ಸೀಕ್ವೆಲ್‌ಗೆ ಮುಂದಾಗಿದೆ. ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾದ ಶೂಟಿಂಗ್ ಈಗಾಗಲೇ ಮುಗಿದಿದೆ. ಇನ್ನೇನು ಬಿಡುಗಡೆಗೆ ಬೇಕಿರೋ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ರಜನಿಕಾಂತ್ ಸಿನಿಮಾ ಅಂದರೆ, ನಿರೀಕ್ಷೆಗಳು ಗರಿಗೆದರುತ್ತವೆ. ಸೂಪರ್‌ಸ್ಟಾರ್ ರಜನಿ ಖದರ್ ಅಂತಹದ್ದು. ಅವರ ಸ್ಟೈಲ್‌ಗೆ, ಮ್ಯಾನರಿಸಂ ಫಿದಾ ಅಭಿಮಾನಿಗಳಿಗೆ ಲೆಕ್ಕವೇ ಇಲ್ಲ. ಒಂದು ಸಿನಿಮಾದಲ್ಲಿ ರಜನಿಕಾಂತ್ ಸುಮ್ಮನೆ ಕಾಣಿಸಿಕೊಂಡರೂ ಸಾಕು ಫ್ಯಾನ್ಸ್ ಇನ್ನಿಲ್ಲದಂತೆ ಸಂಭ್ರಮಿಸಿ ಬಿಡುತ್ತಾರೆ. ಇನ್ನು 'ಜೈಲರ್' ಅಂತಹ ಮೆಗಾ ಬ್ಲಾಕ್‌ಬಸ್ಟರ್ ಕೊಟ್ಮೇಲೆ 'ಜೈಲರ್ 2' ಬಗ್ಗೆ ನಿರೀಕ್ಷೆ ಇಲ್ಲದೆ ಇರುತ್ತಾ? ಎಲ್ಲರ ಕಣ್ಣೂ 'ಜೈಲರ್ 2' ಮೇಲಿದೆ.

Meghana Raj said that she saw God in Rajinikanth while shooting Jailer 2

ಇನ್ನು ಕನ್ನಡಿಗರಿಗೂ 'ಜೈಲರ್ 2' ಮೇಲೆ ನಿರೀಕ್ಷೆಗಳು ಇರುವುದಕ್ಕೆ ಕಾರಣವಿದೆ. ಈ ಸಿನಿಮಾದಲ್ಲಿ ಕನ್ನಡದ ಕಲಾವಿದರು ಕೂಡ ನಟಿಸಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಜೊತೆಗೆ ಮೇಘನಾ ರಾಜ್‌ ಕೂಡ ಪ್ರಮುಖ ಪಾತ್ರವೊಂದರಲ್ಲಿ ನಟಿಸಿ ಬಂದಿದ್ದಾರೆ. ಇತ್ತೀಚೆಗೆ ಮೇಘನಾ ರಾಜ್ ಸೂಪರ್‌ಸ್ಟಾರ್‌ ರಜನಿಕಾಂತ್ ಅವರೊಂದಿಗೆ ನಟಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ. "ದೇವರನ್ನು ನೋಡಿದ ಹಾಗೆ ಆಯ್ತು" ಎಂದು ಹೇಳಿದ್ದಾರೆ.

21 ದಿನಗಳು ಶೂಟಿಂಗ್

ಸೂಪರ್‌ಸ್ಟಾರ್ ರಜನಿಕಾಂತ್ ಜೊತೆ ನಟಿಸಬೇಕು ಅನ್ನೋದು ಹಲವು ನಟಿಯರ ಕನಸು. ಅವರಲ್ಲಿ ಕೆಲವರಿಗೆ ಮಾತ್ರ ಆ ಅವಕಾಶ ಸಿಗುತ್ತೆ. ಅಂತಹವರಲ್ಲಿ ಕನ್ನಡದ ನಟಿ ಮೇಘನಾ ರಾಜ್ ಕೂಡ ಒಬ್ಬರು. 'ಜೈಲರ್ 2'ನಲ್ಲಿ ಸುಮಾರು 21 ದಿನಗಳ ಕಾಲ ಶೂಟಿಂಗ್ ಮುಗಿಸಿ ಬಂದಿದ್ದಾರೆ. ರಜನಿಕಾಂತ್ ಜೊತೆ ನಟಿಸಿದ ಆ ಹ್ಯಾಂಗ್‌ ಓವರ್‌ನಲ್ಲಿಯೇ ಇದ್ದಾರೆ. ರಜನಿ ಸಿನಿಮಾಲ್ಲಿ ನಟಿಸಿದ್ದು, ದೇವರ ಜೊತೆ ಕೆಲಸ ಮಾಡಿ ಬಂದಂತೆ ಅನುಭವ ಆಗಿದೆ ಎಂದು ಹೇಳಿದ್ದಾರೆ.

"ನನ್ನ ದೇವರನ್ನು ನೋಡಿದ ಹಾಗೆ ಅನಿಸ್ತು"

ರಜನಿಕಾಂತ್ ಅವರನ್ನು ನೋಡಿದ ಬಳಿಕ ನನ್ನ ದೇವರು ನೋಡಿದ ಹಾಗಾಯ್ತು ಎಂದು ಮೇಘನಾ ರಾಜ್ ಹೇಳಿದ್ದಾರೆ. "ನಾನು ಒಂದೇ ಲೈನ್‌ನಲ್ಲಿ ಹೇಳಬೇಕು ಅಂದರೆ, ಅವರ ಕ್ಷೇತ್ರದಲ್ಲಿ ಯಾರಿಗೋ ಇಬ್ಬರು ದೇವರು ಅಂತ ಅನಿಸಿರುತ್ತೆ. ನನಗೆ ಅವರ ಬಗ್ಗೆ ಅನಿಸಿರೋದು ಅದು. ನನಗೆ ದೇವರ ಜೊತೆ ಕೆಲಸ ಮಾಡಿ ಬಂದಂತೆ ಅನಿಸುತ್ತಿದೆ. ನಾನು ಇದನ್ನು ಮನ:ಸ್ಪೂರ್ತಿಯಾಗಿ ಹೇಳುತ್ತಿದ್ದೇನೆ. ನಾನು ಬಿಗ್ ಬಿಗ್ ಫ್ಯಾನ್ ನಾನು. ನಾನು ಯಾರನ್ನೂ ನೋಡಿ ಕಣ್ಣಲ್ಲಿ ನೀರು ಹಾಕಿಲ್ಲ. ಅವರನ್ನು ನೋಡಿದ ಆ ಕ್ಷಣ ನನಗೆ ತುಂಬಾನೇ ಸ್ಪೆಷಲ್. ನನ್ನ ದೇವರನ್ನು ನೋಡಿದ ಹಾಗೆ ಅನಿಸಿತು" ಎಂದು ಮೇಘನಾ ರಾಜ್ ಹೇಳಿದ್ದಾರೆ.

Meghana Raj said that she saw God in Rajinikanth while shooting Jailer 2

ರಜನಿ ಜೊತೆ ಚೊಚ್ಚಲ ಸಿನಿಮಾ

ಮೇಘನಾ ರಾಜ್ ಸಿನಿಮಾಗಳಲ್ಲಿ ಈಗ ಹೆಚ್ಚು ಆಕ್ಟಿವ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ ರಜನಿಕಾಂತ್ ಸಿನಿಮಾದಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕಿರೋದು ಅವರ ಕರಿಯರ್‌ನ ಟರ್ನಿಂಗ್ ಪಾಯಿಂಟ್ ಆಗಬಹುದು. ಸದ್ಯ ಇದೇ ಮೊದಲ ಬಾರಿಗೆ ರಜನಿ ಜೊತೆ ನಟಿಸಿದ ಖುಷಿಯಲ್ಲಿ ಇದ್ದಾರೆ. 'ಜೈಲರ್ 2' ರಿಲೀಸ್ ಆದ್ಮೇಲೆ ಮೇಘನಾ ರಾಜ್ ಪಾತ್ರವೇನು ಅನ್ನೋದು ಗೊತ್ತಾಗಲಿದೆ.

ಮೇಘನಾ ಕೈಯಲ್ಲಿರೋ ಸಿನಿಮಾಗಳು

ಮೇಘನಾ ರಾಜ್ ಕನ್ನಡ ಸೇರಿದಂತೆ ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಲಯಾಳಂನಲ್ಲೂ ಜನಪ್ರಿಯರಾಗಿರುವ ಮೇಘನಾ 'ಓಟ್ಟಕೊಂಬನ್' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಜನಿಕಾಂತ್ ಜೊತೆ 'ಜೈಲರ್ 2' ಸಿನಿಮಾ ಕಂಪ್ಲೀಟ್ ಆಗಿದೆ. ಹಾಗೇ ಕನ್ನಡದಲ್ಲಿ ಕೋಮಲ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ ಸಿನಿಮಾರಂಗದಲ್ಲಿ ಮತ್ತೆ ಆಕ್ಟಿವ್ ಆಗಿದ್ದರೆ.

English summary
Meghana Raj said that she saw God in Rajinikanth while shooting Jailer 2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X