"ನಾವು ಒಮ್ಮೆ ಒಟ್ಟಿಗೆ ಕಂಡ ಕನಸನ್ನು ನಾನು ಜೀವಂತಗೊಳಿಸಿದ್ದೇನೆ"; ಎಂದು ಚಿರುಗೆ ಆನಿವರ್ಸರಿ ವಿಶ್ ಮಾಡಿದ ಮೇಘನಾ ರಾಜ್

ಮೇಘನಾ ರಾಜ್‌ಗೆ ಈ ದಿನ (ಮೇ 2) ಮರೆಯಲಾಗದ ದಿನ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿ ಚಿರಂಜೀವಿ ಸರ್ಜಾ ಸಪ್ತಪದಿ ತುಳಿದಿದ್ದ ದಿನ. ಚಿರಂಜೀವಿ ಹಾಗೂ ಮೇಘನಾ ರಾಜ್ ಅವರ ವಿವಾಹ ವಾರ್ಷಿಕೋತ್ಸವ. ಈ ದಿನದಂದು ಮೇಘನಾ ರಾಜ್ ಪತಿ ಚಿರಂಜೀವಿ ಸರ್ಜಾರನ್ನು ಯಾವುದಾದರೂ ಒಂದು ವಿಷಯವನ್ನಿಟ್ಟುಕೊಂಡು ನೆನಪು ಮಾಡಿಕೊಳ್ಳುತ್ತಲೇ ಇರುತ್ತಾರೆ. ಈ ದಿನ ಇಬ್ಬರೂ ಒಟ್ಟಿಗೆ ಸೇರಿ ಕಂಡಿದ್ದ ಕನಸನ್ನು ಜೀವಂತಗೊಳಿಸಿದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.

ಚಿರು ಅಗಲಿಕೆ ಬಳಿಕ ಒಂದಿಷ್ಟು ದಿನ ಆ ನೋವಿನಿಂದ ಹೊರಬಂದು ಚೇತರಿಸಿಕೊಂಡಿದ್ದಾರೆ. ಮತ್ತೆ ಸಿನಿಮಾಗಳಲ್ಲಿ ನಟಿಸುವುದಕ್ಕೆ ಆರಂಭಿಸಿದ್ದಾರೆ. ನಿಧಾನವಾಗಿ ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಒಂದೊಂದು ಪ್ರಾಜೆಕ್ಟ್‌ಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡ, ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ನಟಿಯೀಗ ತಮಿಳು ಪ್ರಾಜೆಕ್ಟ್‌ನಲ್ಲೂ ನಟಿಸುತ್ತಿದ್ದಾರೆ. ಇದು ಅವರ ವೃತ್ತಿ ಬದುಕಿನ ಅತೀ ದೊಡ್ಡ ಪ್ರಾಜೆಕ್ಟ್ ಎನ್ನಬಹುದು.

Meghana Raj thanked late husband Chiranjeevi Sarja on wedding anniversary shares photo with Rajinikanth

ತಮ್ಮ ವಿವಾಹ ವಾರ್ಷಿಕೋತ್ಸವದಂದು ಅವರ ಸಾಧನೆಯನ್ನು ಹಂಚಿಕೊಂಡಿದ್ದಾರೆ. ಪತಿ ಚಿರಂಜೀವಿ ಸರ್ಜಾ ಅವರನ್ನು ನೆನೆದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಇಬ್ಬರೂ ಸೇರಿ ಅದೆಷ್ಟು ಕನಸುಗಳನ್ನು ಕಟ್ಟಿದ್ದರೋ? ಅದೆಲ್ಲವನ್ನು ಒಂದೊಂದಾಗಿಯೇ ಈಗ ಈಡೇರಿಸುತ್ತಿದ್ದಾರೆ. ಅದರಲ್ಲಿ ಒಂದು ಸೂಪರ್‌ಸ್ಟಾರ್ ರಜನಿಕಾಂತ್ ಅನ್ನೋದು ವಿಶೇಷ. ಅಷ್ಟಕ್ಕೂ ಇಬ್ಬರೂ ಸೇರಿ ಕಂಡಿರುವ ಆ ಕನಸು ಏನು? ಮೇಘನಾ ರಾಜ್ ಹಂಚಿಕೊಂಡಿರುವ ಫೋಟೊ, ವಿಡಿಯೋ ಹಾಗೂ ಪದಗಳ ಅರ್ಥವೇನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ನಟಿ ಮೇಘನಾ ರಾಜ್ ಇತ್ತೀಚೆಗೆ ಸೂಪರ್‌ಸ್ಟಾರ್ ರಜನಿಕಾಂತ್ ನಟಿಸುತ್ತಿರುವ 'ಜೈಲರ್ 2' ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಸಂದರ್ಶನವೊಂದರಲ್ಲಿ ಮೇಘನಾ ಈ ವಿಷಯವನ್ನು ಖಚಿತ ಪಡಿಸಿದ್ದರು. ತಮ್ಮ ಪಾತ್ರದ ಬಗ್ಗೆ ಒಂದೇ ಒಂದು ಸುಳಿವು ಬಿಟ್ಟು ಕೊಡದೇ ಹೋದರೂ, ರಜನಿಕಾಂತ್ ಸಿನಿಮಾದಲ್ಲಿ ನಟಿಸಿ ಬಂದಿದ್ದನ್ನು ಒಪ್ಪಿಕೊಂಡಿದ್ದರು. ಈಗ ಇದೇ ವಿಷಯವನ್ನು ಇಟ್ಟುಕೊಂಡು ಚಿರಂಜೀವಿ ಸರ್ಜಾಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ಕೋರಿದ್ದಾರೆ.

ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮೇಘನಾ ರಾಜ್ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಚಿರಂಜೀವಿ ಸರ್ಜಾ ಸೂಪರ್‌ಸ್ಟಾರ್‌ ರಜನಿಕಾಂತ್ ಜೊತೆಗಿನ ಕೆಲವು ಫೋಟೊಗಳೂ ಇವೆ. ಹಾಗೇ ಮೇಘನಾ ಕೂಡ ತಲೈವಾ ಭೇಟಿ ಮಾಡಿದ್ದು, ಅವರೊಂದಿಗೆ ಫೋಟೊ ಕ್ಲಿಕ್ಕಿಸಿ ಸಂಭ್ರಮಿಸಿದ ಕ್ಷಣವನ್ನು ಹಂಚಿಕೊಂಡಿದ್ದಾರೆ. ಅವರ ಪುತ್ರ, ತಂದೆ ಕೂಡ ಮೇಘನಾ ಹಂಚಿಕೊಂಡ ವಿಡಿಯೋದಲ್ಲಿ ಇರೋದನ್ನು ನೋಡಬಹುದು. ಹಾಗೇ ಚಿರುಗೆ "ಈ ಯಶಸ್ಸು, ಈ ಮೈಲಿಗಲ್ಲು, ಈ ಚಿತ್ರ ನಿಮಗೆ ಸೇರಿದ್ದು" ಎಂದು ಮೇಘನಾ ವಾರ್ಷಿಕೋತ್ಸವದ ಶುಭಾಶಯಗಳನ್ನು ಹೇಳಿದ್ದಾರೆ.

"ಈ ವಾರ್ಷಿಕೋತ್ಸವ ಕೇವಲ ಒಂದು ಡೇಟ್ ಅಷ್ಟೇ ಅಲ್ಲ ಚಿರು... ಅದು ಒಂದು ಭಾವನೆಯೇ ಸರಿ. ನಿಮ್ಮ ಮತ್ತು ನನ್ನ ಕನಸುಗಳು ಯಾವತ್ತು ಬೇರೆಯಾಗುವುದಿಲ್ಲ-ನಾವು ಒಂದೇ ಎಂದು ನಿರ್ಧರಿಸಿದ ದಿನವದು. ನಾನು ಇಡುವ ಪ್ರತಿಯೊಂದು ಹೆಜ್ಜೆಯಲ್ಲೂ ನೀವು ಇದ್ದೀರೆಂದು ಭಾವಿಸುತ್ತೇನೆ. ನೀವು ದೇವರಿಗೆ ಹೇಗೆ ಹತ್ತಿರವಾಗಿದ್ದಿರೋ, ಹಾಗೆ ನನಗೂ ಹತ್ತಿರವಾಗಿದ್ದೀರಿ. ನನ್ನೊಂದಿಗೆ ನೀವು ಬದುಕುತ್ತಿದ್ದೀರಿ. ನಾವೇ ನೀವಾಗುತ್ತಿದ್ದೀರಿ. ಅದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ.

ನೀವು ಅವರನ್ನು ಇನ್ನಿಲ್ಲದಂತೆ ಆರಾಧಿಸಿದ್ರಿ. ನಾನು ನನ್ನ ಕನಸು ಮನಸ್ಸಿನಲ್ಲೂ ಕಾಣಲು ಸಾಧ್ಯವಾಗದ ಭಾರತೀಯ ಚಿತ್ರರಂಗದ ದೇವರನ್ನು ಭೇಟಿ ಮಾಡುವಂತೆ ಮಾಡಿದ್ದೀರಿ. ಒನ್‌ ಅಂಡ್ ಓನ್ಲಿ ರಜನಿ ಸರ್ ಜೊತೆಗಿನ ಸಿನಿಮಾ ಅದು. ನಾವು ಸಾಧಿಸಿ ಬಿಟ್ಟೆವು. ಒಮ್ಮೆ ನಾವು ಒಟ್ಟಿಗೆ ಕಂಡ ಕನಸನ್ನು ಇಂದು ನಾನು ಜೀವಂತಗೊಳಿಸಿದ್ದೇನೆ ಎಂದು ನಾನು ಭಾವಿಸುತ್ತೇನೆ. ಯಾಕೆಂದರೆ ಈ ಯಶಸ್ಸು, ಈ ಮೈಲಿಗಲ್ಲು, ಈ ಸಿನಿಮಾ ನಿಮಗೆ ಸೇರಿದ್ದು. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು, ನನ್ನ ಬೇಬಿಮಾ" ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

English summary
Meghana Raj thanked late husband Chiranjeevi Sarja on wedding anniversary shares photo with Rajinikanth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X