ಯಶಸ್ಸಿನ ನಂತರ ಬರಲಿದೆ 'ಬೀರ್ ಬಲ್' ಸರಣಿಯ ಮತ್ತೆರಡು ಚಿತ್ರಗಳು

'ಬೀರ್ ಬಲ್ ಟ್ರೈಲಜಿ'ಯ ಮೊದಲ ಭಾಗಕ್ಕೆ ದೊರೆತಿರುವ ಪ್ರತಿಕ್ರಿಯೆಯಿಂದ ಪುಳಕಿತರಾಗಿರುವ ನಟ, ನಿರ್ದೇಶಕ ಎಂ.ಜಿ ಶ್ರೀನಿವಾಸ್, ಅದರ ಮುಂದಿನ ಎರಡು ಭಾಗಗಳನ್ನು ಶುರುಮಾಡಲು ಮುಂದಾಗಿದ್ದಾರೆ.

Recommended Video

ಜಗ್ಗೇಶ್ ಸಂಭಾವನೆ ಹೆಚ್ಚಾಗಲು ಅಂಬರೀಷ್ ಹೇಗೆ ಕಾರಣ ಗೊತ್ತಾ? | Jaggesh | Ambareesh

'ಬೀರ್ ಬಲ್' ಚಿತ್ರವು ಒಟ್ಟು ಮೂರು ಭಾಗಗಳನ್ನು ಹೊಂದಿದೆ ಎಂದು ಶ್ರೀನಿವಾಸ್, ಚಿತ್ರದ ಬಿಡುಗಡೆ ಸಂದರ್ಭದಲ್ಲಿಯೇ ಹೇಳಿದ್ದರು. ಆದರೆ ಮೊದಲ ಭಾಗ ಬಿಡುಗಡೆಯಾದಾಗ ಪ್ರೇಕ್ಷಕರಿಂದ ಅಷ್ಟೇನೂ ಉತ್ತಮ ಪ್ರತಿಕ್ರಿಯೆ ಬಂದಿರಲಿಲ್ಲ. ಲಾಕ್ ಡೌನ್ ಅವಧಿಯಲ್ಲಿ ಮನೆಯಲ್ಲಿ ಕುಳಿತ ಜನರು, ಒಟಿಟಿ ಮೂಲಕ ಸಿನಿಮಾ ಮೆಚ್ಚಿಕೊಂಡಿದ್ದಾರೆ. ಅಮೆಜಾನ್ ಪ್ರೈಮ್‌ನಲ್ಲಿ 2.50 ಕೋಟಿಗೂ ಹೆಚ್ಚು ವೀಕ್ಷಣೆಗೆ ಒಳಪಟ್ಟಿರುವುದು 'ಬೀರ್ ಬಲ್ ಟ್ರೈಲಜಿ'ಯ ಸಾಧನೆ.

ಈ ಚಿತ್ರ ಕೊರಿಯನ್ ಚಿತ್ರವನ್ನು ಆಧರಿಸಿದೆ ಎಂಬ ಮಾತುಗಳು ಕೇಳಿಬಂದರೂ, ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪರಭಾಷಿಕರೂ ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಈಗ ಬಿಡುಗಡೆಯಾಗಿರುವುದು 'ಬೀರ್ ಬಲ್ ಟ್ರೈಲಜಿ- ಕೇಸ್ 1 ಫೈಂಡಿಂಗ್ ವಜ್ರಮುನಿ'.

MG Srinivas Ready To Make Two More Parts Of Birbal Trilogy Movie

ಇನ್ನೂ ಎರಡು ಥ್ರಿಲ್ಲರ್ ಭಾಗಗಳು ಈ ಚಿತ್ರದಲ್ಲಿದ್ದು, 'ಬೀರ್ ಬಲ್ ಟ್ರೈಲಜಿ' ಎಂಬ ಶೀರ್ಷಿಕೆ ಎಲ್ಲದಕ್ಕೂ ಕಾಮನ್ ಆಗಿ ಇರಲಿದೆ. ಎರಡನೆಯ ಭಾಗ 'ಅವ್ರನ್ ಬಿಟ್, ಇವ್ರನ್ ಬಿಟ್ ಅವ್ರ್ಯಾರು? ಎಂಬ ಉಪ ಶೀರ್ಷಿಕೆ ಹೊಂದಿರಲಿದೆ. ಮೂರನೇ ಭಾಗ 'ತುರೆಮಣೆ' ಎಂಬ ಉಪ ಶೀರ್ಷಿಕೆ ಹೊಂದಿರಲಿದೆ.

MG Srinivas Ready To Make Two More Parts Of Birbal Trilogy Movie

ಈ ನಡುವೆ ಶ್ರೀನಿ 'ಓಲ್ಡ್ ಮಾಂಕ್' ಎಂಬ ಚಿತ್ರ ಮಾಡುತ್ತಿದ್ದಾರೆ. ಇದು ರೊಮ್ಯಾಂಟಿಕ್ ಕಾಮಿಡಿ ಚಿತ್ರ. ಈ ಸಿನಿಮಾ ಮುಗಿದ ಬಳಿಕ ಅವರು 'ಬೀರ್ ಬಲ್' ಸರಣಿಯನ್ನು ಮುಂದುವರಿಸಲಿದ್ದಾರೆ. ಉಪೇಂದ್ರ ಅಭಿನಯದ 'ಟೋಪಿವಾಲಾ' ಚಿತ್ರದ ನಿರ್ದೇಶಿಸಿದ್ದ ಶ್ರೀನಿವಾಸ್, ನಂತರ ತಾವೇ ನಾಯಕರಾಗಿ 'ಶ್ರೀನಿವಾಸ ಕಲ್ಯಾಣ' ಚಿತ್ರ ಮಾಡಿದ್ದರು.

More from Filmibeat

English summary
Actor director MG Srinivas got very positive response for the first part of Birbal Trilogy is looking towards another two parts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X