"ದರ್ಶನ್-ಸುದೀಪ್ ನಡುವೆ ತಂದಿಡುವ ಕೆಲಸ ಮಾಡುವವರು ತುಂಬಾನೇ ಜನರು ಇದ್ದಾರೆ"; ಮೈಕೋ ನಾಗರಾಜ್
ಈ ವರ್ಷ ಸ್ಯಾಂಡಲ್‌ವುಡ್‌ಗೆ ರೆಕಾರ್ಡ್ ಬ್ರೇಕ್ ಮಾಡುವಂತಹ ಸಿನಿಮಾಗಳು ಬಂದಿಲ್ಲ. ಒಂದೆರಡು ಸಿನಿಮಾಗಳು ಬಂದಿದ್ದು ಬಿಟ್ಟರೆ, ಇನ್ನೂ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಚಮತ್ಕಾರ ಮಾಡುವಂತ ಸಿನಿಮಾ ಬಂದಿಲ್ಲ. ಈ ಮಧ್ಯೆ ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ. ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುವುದೂ ಕೂಡ ನಿಂತಿಲ್ಲ. ಸ್ಯಾಂಡಲ್‌ವುಡ್‌ನಲ್ಲಿ ಇಂತಹ ನೂರಂಟು ಸಮಸ್ಯೆಗಳು ಇವೆ.
ಇರುವ ಬೆರಳೆಣಿಕೆಯಷ್ಟು ಸೂಪರ್‌ಸ್ಟಾರ್‌ಗಳ ಮೇಲೆ ಸ್ಯಾಂಡಲ್‌ವುಡ್ ಗಟ್ಟಿಯಾಗಿ ನಿಂತಿದೆ. ಆದರೆ, ಕೆಲವರು ವರ್ಷಕ್ಕೆ ಒಂದೂ ಸಿನಿಮಾನೂ ಮಾಡುತ್ತಿಲ್ಲ. ಇನ್ನೊಬ್ಬರು ಜೈಲಿನಲ್ಲಿದ್ದಾರೆ. ಮತ್ತೊಬ್ಬರ ಕೆಲವರು ಆಗೊಂದು ಈಗೊಂದು ಸಿನಿಮಾ ಮಾಡಿಕೊಂಡು ಆರಾಮಾಗಿ ಇದ್ದಾರೆ. ಪರಿಸ್ಥಿತಿ ಹೀಗಿರುವಾಗ ಕೆಲವರು ವಿವಾದಗಳನ್ನು ಸೃಷ್ಟಿಸುವುದಕ್ಕೆ ನೋಡುತ್ತಾರೆ. ಕೆಲವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಿತ್ತಾಡುತ್ತಾರೆ.

ಅದಲ್ಲೂ ದರ್ಶನ್ ಜೈಲಿನಲ್ಲಿ ಇರುವುದು ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟ. ಈ ಬಗ್ಗೆ ಕನ್ನಡ ಚಿತ್ರರಂಗದ ಹಿರಿಯ ನಟ ಮೈಕೋ ನಾಗರಾಜ್ ಈ ಸಂಜೆ ನೀಡಿದ ಸಂದರ್ಶನದಲ್ಲಿ ಓಪನ್ ಆಗಿ ಮಾತಾಡಿದ್ದಾರೆ. ದರ್ಶನ್ ಸ್ವಭಾವ ಹೇಗಿದೆ? ದರ್ಶನ್ ಹಾಗೂ ಸುದೀಪ್ ಬೇರೆಯಾಗಿದ್ದರ ಬಗ್ಗೆ ಮಾತಾಡಿದ್ದಾರೆ. ಈ ಸಂದರ್ಶನದಲ್ಲಿ ಏನು ಹೇಳಿದ್ದಾರೆ? ಅನ್ನೋದನ್ನು ನೋಡುವುದಾರೇ,
ದರ್ಶನ್ ಜೊತೆಗೆ ನಟ ಮೈಕೋ ನಾಗರಾಜ್ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಕರಿಯ' ಹಾಗೂ 'ಕಿಟ್ಟಿ' ಸಿನಿಮಾದಲ್ಲಿ ಇಬ್ಬರೂ ನಟಿಸಿದ್ದು, ಅವರ ವ್ಯಕ್ತಿತ್ವದ ಬಗ್ಗೆ ಮಾತಾಡಿದ್ದಾರೆ. "ನಾನು ನೋಡಿದ ದರ್ಶನ್ ತುಂಬಾನೇ ಒಳ್ಳೆಯ ವ್ಯಕ್ತಿ. ಸಹಾಯ ಮನೋಭಾವ ಇರುವ ವ್ಯಕ್ತಿ. ನಾನು ಕ್ಲೀನ್ ಆಗಿರುವ ಅಕ್ಕಿ ತೆಗೆದುಕೊಂಡು ಬಂದರೆ, ಒಂದೆರಡು ಕಲ್ಲುಗಳು ಇರುತ್ತವಷ್ಟೇ. ಅದನ್ನು ತೆಗೆದು ಹಾಕಬೇಕು ಅಷ್ಟೇ. ಹಾಗಾಗಿ ಅಕ್ಕಿನೇ ನಾವು ಕಳಪೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ಈ ಘಟನೆ ಬಗ್ಗೆ ನನಗೆ ಗೊತ್ತಿಲ್ಲ. ಗೊತ್ತಿಲ್ಲದೆ ಮಾತಾಡುವುದು ತಪ್ಪಾಗುತ್ತದೆ. ನನ್ನ ಪ್ರಕಾರ ದರ್ಶನ್ ಏನು ತಪ್ಪು ಮಾಡಿದರು ಅಂದರೆ, ಸುತ್ತಮುತ್ತ ಇರೋರೆಲ್ಲ ನನ್ನವರು ಅಂದುಕೊಂಡಿದ್ದರು. ದರ್ಶನ್ ಯಾರೆಲ್ಲ ಸಹಾಯ ಮಾಡಿದಾರೋ ಅವರು ಯಾರೂ ಇವತ್ತು ಅವರ ಹಿಂದೆ ಇಲ್ಲ." ಎಂದು ಮೈಕೋ ನಾಗರಾಜ್ ಹೇಳಿದ್ದಾರೆ.
ದರ್ಶನ್‌ಗೆ ಈಗ ಶನಿ ಮಹಾತ್ಮ ಹೆಗಲೇರಿರಬಹುದು. ಆದರೆ, ಬಿಟ್ಟು ಹೋದಮೇಲೆ ಅದಕ್ಕಿಂತ ಹತ್ತು ಪಟ್ಟು ಮೇಲಕ್ಕೆ ಬರುತ್ತಾರೆಂದು ಹೇಳಿದ್ದಾರೆ. "ದರ್ಶನ್ ಮರ್ಡರ್ ಮಾಡಿದ್ದಾರೋ ಇಲ್ವೋ ನನಗೆ ಗೊತ್ತಿಲ್ಲ. ಅದರ ಬಗ್ಗೆ ನಾನು ಮಾತಾಡುವುದಿಲ್ಲ. ಶನಿಮಹಾತ್ಮ ಹೆಗಲು ಏರಿಕೊಂಡರೆ ಅಂತ ವಿಕ್ರಮಾದಿತ್ಯರನ್ನೇ ಬಿಡಲಿಲ್ಲ. ಈಶ್ವರನನ್ನು ಬಿಟ್ಟಿಲ್ಲ. ಯಾವ ದೇವರನ್ನೂ ಬಿಟ್ಟಿಲ್ಲ. ದರ್ಶನ್ ಲೆಕ್ಕನಾ? ಇವತ್ತು ದರ್ಶನ್ ಬ್ಯಾಡ್ ಲಕ್, ಶನಿಮಹಾತ್ವ ದರ್ಶನ್ ಹೆಗಲೇರಿಕೊಂಡಿರಬಹುದು. ಶನಿಮಹಾತ್ಮ ಬಿಟ್ಟು ಹೋಗುತ್ತಾನೆ. ದರ್ಶನ್ ಅದಕ್ಕಿಂತ ಹತ್ತು ಪಟ್ಟು ಮೇಲೆ ಬರಲಿಲ್ಲ. ಅದರೆ, ಮೀಸೆ ತೆಗೆಸಿಕೊಳ್ಳುತ್ತೇನೆ." ಎಂದಿದ್ದಾರೆ.

ಹಾಗ ದರ್ಶನ್ ಹಾಗೂ ಸುದೀಪ್ ನಡುವೆ ತಂದಿಡುವವರು ತುಂಬಾ ಜನರು ಇದ್ದಾರೆ. ಅದಕ್ಕೆ ಇಬ್ಬರೂ ಬೇರೆಯಾಗಿದ್ದಾರೆಂದು ಹೇಳಿದ್ದಾರೆ. "ದರ್ಶನ್ ಹಾಗೂ ಸುದೀಪ್ ನಡುವೆ ತಂದಿಡುವ ಕೆಲಸ ಮಾಡುವವರು ತುಂಬಾನೇ ಜನರು ಇದ್ದಾರೆ. ನಿಮ್ಮ ಜೊತೆ ಕೆಲಸ ಸಾಧಿಸಿಕೊಳ್ಳಬೇಕು ಅಂದರೆ, ಎಂತಹ ಕೆಲಸ ಬೇಕಾದರೂ ಮಾಡುತ್ತಾರೆ. ಮನಸ್ತಾಪ ಬರುತ್ತವೆ ಬಿಟ್ಟುಬಿಡಿ. ಅವರು ಬರುತ್ತವೆ. ಅವು ಹೋಗುತ್ತವೆ. ಅವರು ಇಬ್ಬರೇ ಸರಿ ಮಾಡಿಕೊಳ್ಳುತ್ತಾರೆ. ಮಧ್ಯದವರಿಂದಲೇ ಇದೆಲ್ಲ ಆಗುವುದು. ಸುದೀಪ್ ಅವರು ಎಂತಹ ಕಲಾವಿದ. ಮಹಾನ್ ಕಲಾವಿದ, ದರ್ಶನ್ ಅವರು ಬಗ್ಗೆ ಮಾತಾಡುತ್ತಾರೆ. ಅಣ್ಣ-ತಮ್ಮಂದಿನ ನಡುವೆ ಜಗಳ ಇರುತ್ತೆ. ದರ್ಶನ್ ಬಂದು ಸುದೀಪ್ ಮನೆ ಹಾಳು ಮಾಡುವುದಿಲ್ಲ. ಸುದೀಪ್ ಬಂದು ದರ್ಶನ್ ಮನೆ ಹಾಳು ಮಾಡುವುದಿಲ್ಲ. ಮಧ್ಯದವರು ಸುಮ್ಮನೆ ಇದ್ದರೆ ಏನೂ ಪ್ರಾಬ್ಲಮ್ ಆಗುವುದಿಲ್ಲ. ರಾಜ್‌ಕುಮಾರ್-ವಿಷ್ಣುವರ್ಧನ್ ಬಗ್ಗೆ ಏನೆಲ್ಲ ಮಾತಾಡಿದರು. ಅವರಿಬ್ಬರು ಚೆನ್ನಾಗಿರಲಿಲ್ವಾ? ರಾಜ್‌ಕುಮಾರ್ ಸತ್ತಾಗ ವಿಷ್ಣುವರ್ಧನ್ ಬರಲಿಲ್ವಾ? ವಿಷ್ಣುವರ್ಧನ್ ಸತ್ತಾಗ ರಾಜ್‌ಕುಮಾರ್ ಇದ್ದರೆ ಬರುತ್ತಿರಲಿಲ್ವಾ? ಇದನ್ನೆಲ್ಲ ಜನರು ಯಾಕೆ ರಬ್ಬರ್ ತರ ಎಳೆಯುತ್ತಾರೋ ಗೊತ್ತಾಗುತ್ತಿಲ್ಲ." ಎಂದು ಮೈಕೋ ನಾಗರಾಜ್ ಹೇಳಿದ್ದಾರೆ.
ಇನ್ನು ದರ್ಶನ್, ಪುನೀತ್, ಪ್ರೇಮ್ ಬಗ್ಗೆ ಕೆಟ್ಟದಾಗಿ ಮಾತಾಡಿರುವ ಕನಕಪುರ ಶ್ರೀನಿವಾಸ್ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. "ಕನಕಪುರ ಶ್ರೀನಿವಾಸ್ ಅವರೆ ಕಲಾವಿದರ ಬಗ್ಗೆ ಮಾತಾಡಬೇಡಿ. ಅದರಲ್ಲಿ ದರ್ಶನ್ ಅವರ ಬಗ್ಗೆ ಮಾತಾಡಿದ್ದು ತಪ್ಪು. ಪುನೀತ್ ಅವರ ಬಗ್ಗೆ ಮಾತಾಡಿದ್ದು ತಪ್ಪು. ಪ್ರೇಮ್ ಬಗ್ಗೆ ಮಾತಾಡಿದ್ದು ತಪ್ಪು ಪುನೀತ್ ಅವರ ಬಗ್ಗೆ ಮಾತಾಡುವುದಕ್ಕೆ ನಿಮಗೆ ಒಂದು ಕೂದಲಷ್ಟೂ ಇಲ್ಲ. ದೊಡ್ಡ ಆಲದ ಮರದ ಕೆಳಗೆ ಬೆಳೆದಿರುವಂತಹ ವ್ಯಕ್ತಿ ಅದು. ದೊಡ್ಡ ಯುನಿವರ್ಸಿಟಿ ಅದು" ಎಂದು ಹೇಳಿದ್ದಾರೆ.


Click it and Unblock the Notifications











