'ಲವ್ ಮಾಕ್‌ಟೇಲ್-2' ಎಲ್ಲಿಯವರೆಗೆ ಬಂತು? 'ನಿಧಿಮಾ' ನೀಡಿದ ಮಾಹಿತಿ

ಲವ್ ಮಾಕ್‌ಟೇಲ್ ಯಶಸ್ಸಿನ ಬಳಿಕ ಆ ಖುಷಿಯಲ್ಲಿ ತೇಲಾಡುತ್ತಿರುವ ನಿರ್ದೇಶಕ, ನಿರ್ಮಾಪಕ, ನಟ ಡಾರ್ಲಿಂಗ್ ಕೃಷ್ಣ ಮತ್ತು ನಟಿ ಮಿಲನಾ ನಾಗರಾಜ್ ಅದರ ಎರಡನೆಯ ಭಾಗಕ್ಕೆ ಸಿದ್ಧತೆ ನಡೆಸಿರುವುದು ಗೊತ್ತಿರುವ ಸಂಗತಿ.

Recommended Video

ನಮ್ಮ ಬಳಿಯೂ CC ಕ್ಯಾಮರಾ ಇದೆ ಎಂದು ಫ್ಯಾನ್ಸ್ ಬೆಂಬಲಕ್ಕೆ ನಿಂತ ದರ್ಶನ್

'ಲವ್ ಮಾಕ್‌ಟೇಲ್' ಚಿತ್ರಕ್ಕೆ ದೊರಕಿರುವ ಬೆಂಬಲ ಈ ಜೋಡಿಯನ್ನು ಪುಳಕಿತಗೊಳಿಸಿದೆ. ಬಹುಶಃ ಕೊರೊಣಾ ವೈರಸ್ ಹಾವಳಿ ಶುರುವಾಗದಿದ್ದರೆ ಚಿತ್ರಮಂದಿರದಲ್ಲಿ ಈ ಸಿನಿಮಾ ಮತ್ತಷ್ಟು ಗಳಿಕೆ ಕಾಣುತ್ತಿತ್ತೇನೋ. ಏಕೆಂದರೆ ದಿನದಿಂದ ದಿನಕ್ಕೆ ಈ ಚಿತ್ರಕ್ಕೆ ಸಿಗುತ್ತಿದ್ದ ಪ್ರಚಾರ ಹೆಚ್ಚು ಜನರನ್ನು ಚಿತ್ರಮಂದಿರದತ್ತ ಕರೆತರುತ್ತಿತ್ತು. ಓಟಿಟಿ ಮತ್ತು ಕಿರುತೆರೆಯಲ್ಲಿ ಬಿಡುಗಡೆಯಾದ ಬಳಿಕವೂ ಅವರಿಗೆ ವ್ಯಾಪಕ ಪ್ರಶಂಸೆ ಸಿಗುತ್ತದೆ. ಇದನ್ನು ಚಿತ್ರಮಂದಿರದಲ್ಲಿಯೇ ನೋಡಬೇಕಿತ್ತು, ಮಿಸ್ ಮಾಡಿಕೊಂಡೆವು ಎಂದು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮುಂದೆ ಓದಿ.

ನಿಧಿಮಾಗೆ ಶುಭಾಶಯಗಳು

ನಿಧಿಮಾಗೆ ಶುಭಾಶಯಗಳು

ಏಪ್ರಿಲ್ 25 ನಟಿ ಮಿಲನಾ ನಾಗರಾಜ್ ಜನ್ಮದಿನ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ ಮಿಲನಾ ಜನಪ್ರಿಯತೆ ಹೆಚ್ಚಿರುವುದು 'ಲವ್ ಮಾಕ್‌ಟೇಲ್' ಮೂಲಕ. ಅವರನ್ನು 'ನಿಧಿಮಾ' ಎಂಬ ಪಾತ್ರದ ಮೂಲಕವೇ ಗುರುತಿಸುತ್ತಿದ್ದಾರೆ. ಸಾವಿರಾರು ಮಂದಿ ಮಿಲನಾ ಅವರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.

ತುಂಬಾ ಖುಷಿಯಾಗುತ್ತಿದೆ

ತುಂಬಾ ಖುಷಿಯಾಗುತ್ತಿದೆ

ಜನರ ಹಾರೈಕೆಗಳಿಂದ ಖುಷಿಯಾಗಿರುವ ಮಿಲನಾ ವಿಡಿಯೋವೊಂದರಲ್ಲಿ ಧನ್ಯವಾದ ಸಲ್ಲಿಸಿದ್ದಾರೆ. 'ಹಾಯ್ ಎಲ್ಲರಿಗೂ ನಮಸ್ಕಾರ. ಬರ್ಥಡೇಗೆ ಶುಭಾಶಯ ಹೇಳಲು ತುಂಬಾ ಜನ ಮೆಸೇಜಸ್ ಕಳಿಸಿದ್ದೀರಿ. ವಿಡಿಯೋಸ್, ಸ್ಕೆಚ್ ಕಳಿಸಿದ್ದೀರ. ಹಾಗೆ ಬೇರೆ ಬೇರೆ ರೀತಿ ವಿಷ್ ಮಾಡಿದ್ದೀರ. ತುಂಬಾ ತಂಬಾ ಖುಷಿಯಾಗಿದೆ. ತುಂಬಾ ಸ್ಪೆಷಲ್ ಫೀಲ್ ಆಗಿದೆ. ನಿಮಗೆಲ್ಲ ಥ್ಯಾಂಕ್ಸ್ ಹೇಳಬೇಕು' ಎಂದು ಮಿಲನಾ ಹೇಳಿದ್ದಾರೆ.

ಸ್ಕ್ರಿಪ್ಟ್ ಚೆನ್ನಾಗಿ ಸಾಗುತ್ತಿದೆ

ಸ್ಕ್ರಿಪ್ಟ್ ಚೆನ್ನಾಗಿ ಸಾಗುತ್ತಿದೆ

'ಹಾಗೆಯೇ ಇನ್ನೊಂದು ಖುಷಿಯ ವಿಚಾರ ಎಂದರೆ 'ಲವ್ ಮಾಕ್‌ಟೇಲ್ 2' ಸ್ಕ್ರಿಪ್ಟ್ ಮಾಡ್ತಾ ಇದ್ದೇವೆ. 'ಲವ್ ಮಾಕ್‌ಟೇಲ್ 2' ಸ್ಕ್ರಿಪ್ಟ್ ಚೆನ್ನಾಗಿ ಡೆವಲಪ್ ಆಗ್ತಿದೆ. ನೀವೆಲ್ಲರೂ 'ಲವ್ ಮಾಕ್‌ಟೇಲ್' ಸೀಕ್ವೆಲ್‌ಗೆ ಕಾಯ್ತಾ ಇದ್ದೀರಿ ಎಂದುಕೊಂಡಿದ್ದೇನೆ. ನಾವು ಬೆಸ್ಟ್ ಔಟ್‌ಪುಟ್ ಕೊಡಲು ಟ್ರೈ ಮಾಡ್ತೀವಿ' ಎಂದು ಮಿಲನಾ ನಾಗರಾಜ್ ವಿಡಿಯೋದಲ್ಲಿ ತಿಳಿಸಿದ್ದಾರೆ.

ನಿರ್ಮಾಪಕರು ಯಾರು?

ನಿರ್ಮಾಪಕರು ಯಾರು?

ಲವ್ ಮಾಕ್‌ಟೇಲ್ ಯಶಸ್ಸು ಕಂಡಿದ್ದರಿಂದ ಅದರ ಎರಡನೆಯ ಭಾಗವನ್ನು ಸಿನಿಮಾ ನಿರ್ಮಿಸಲು ಬೇರೆ ಬೇರೆ ನಿರ್ಮಾಪಕರು ಮುಂದೆ ಬರುತ್ತಿದ್ದಾರೆ. ಲವ್ ಮಾಕ್‌ಟೇಲ್‌ಗೆ ತಾವೇ ಹಣ ಸುರಿದು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ನಿರ್ಮಾಣದ ಕಾರ್ಯ ನಿಭಾಯಿಸಿದ್ದರು. ಅದು ಹಿಟ್ ಆಗಿದ್ದರಿಂದ ಎರಡನೆಯ ಭಾಗಕ್ಕೆ ಹಣ ಹೂಡಲು ನಿರ್ಮಾಪಕರು ಮುಂದೆ ಬಂದಿದ್ದಾರೆ. ಆದರೆ ಈ ಚಿತ್ರವನ್ನೂ ನಾವೇ ನಿರ್ಮಾಣ ಮಾಡೋಣ ಎಂದು ಮಿಲನಾ ಹೇಳಿದ್ದಾರಂತೆ.

More from Filmibeat

English summary
Actress Milana Nagaraj thanked people for their wishes on her birthday and shares small update on Love Mocktail sequel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X