For Quick Alerts
  ALLOW NOTIFICATIONS  
  For Daily Alerts

  'ಮಾಸ್ತಿ ಗುಡಿ' ಶೂಟಿಂಗ್ ವೇಳೆ ಕೆರೆಗೆ ಹಾರಿದ ಖಳನಾಯಕ ಅನಿಲ್, ಉದಯ್ ಸಾವು

  By Bharath Kumar
  |

  ಬ್ರೇಕಿಂಗ್ : ಇದೀಗ ಬಂದ ಸುದ್ದಿ ಪ್ರಕಾರ, ಕೆರೆಗೆ ಬಿದ್ದಿದ್ದ ಖಳನಟರಾದ ಅನಿಲ್ ಹಾಗೂ ಉದಯ್ ಸಾವನ್ನಪ್ಪಿದ್ದಾರೆ. ಈ ವಿಚಾರವನ್ನ ತಾವರೆಕರೆ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ನಂದೀಶ್ ಟಿವಿ9ಗೆ ತಿಳಿಸಿದ್ದಾರೆ.

  ಘಟನೆ ಹಿನ್ನಲೆ : 'ಮಾಸ್ತಿಗುಡಿ' ಚಿತ್ರದ ಕ್ಲೈಮ್ಯಾಕ್ಸ್ ವೇಳೆ ದೊಡ್ಡ ಅನಾಹುತವೊಂದು ನಡೆದಿದೆ. ಚಿತ್ರದ ಖಳನಾಯಕರಾದ ಅನಿಲ್ ಹಾಗೂ ಉದಯ್ ಅವರು ನೀರಿಗೆ ಹಾರಿ ಕಾಣಿಯಾಗಿದ್ದರು. ರಾಮನಗರದ ತಿಪ್ಪಗೊಂಡನ ಹಳ್ಳಿ ಕೆರೆಯಲ್ಲಿ 'ಮಾಸ್ತಿಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಸಲಾಗುತ್ತಿತ್ತು. ['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]

  ಈ ವೇಳೆ ಚಿತ್ರದ ನಾಯಕ ನಟ ದುನಿಯಾ ವಿಜಯ್ ಹಾಗೂ ಖಳನಾಯಕರಾದ ಅನಿಲ್ ಮತ್ತು ಉದಯ್ ನಡುವೆ ಸಾಹಸ ದೃಶ್ಯಗಳನ್ನ ಹೆಲಿಕಾಫ್ಟರ್ ಮೂಲಕ ಶೂಟ್ ಮಾಡಲಾಗುತ್ತಿತ್ತು.[ಮಾಸ್ತಿಗುಡಿ ಚಿತ್ರದ ಗ್ಯಾಲರಿ]

  ದೃಶ್ಯವೊಂದರಲ್ಲಿ ಅನಿಲ್, ಉದಯ್ ಹಾಗೂ ದುನಿಯಾ ವಿಜಯ್ ಅವರ ಮಧ್ಯೆ ಫೈಟ್ ನಡೆಯುತ್ತಿರುತ್ತದೆ. ಈ ಸಂದರ್ಭದಲ್ಲಿ ಅನಿಲ್ ಹಾಗೂ ಉದಯ್ ಇಬ್ಬರು ಓಡಿ ಹೋಗಿ ಹೆಲಿಕಾಫ್ಟರ್ ಹತ್ತುತ್ತಾರೆ. ಅವರನ್ನ ಬೆನ್ನಟ್ಟಿ ಹೋಗುವ ದುನಿಯಾ ವಿಜಯ್ ಕೂಡ ಹೆಲಿಕಾಫ್ಟರ್ ಹತ್ತುತ್ತಾರೆ. ಹೆಲಿಕಾಫ್ಟರ್ ಕೆರೆಯ ಮಧ್ಯೆಕ್ಕೆ ಹೋದಾಗ ಹೆಲಿಕಾಫ್ಟರ್ ನಿಂದ ಅನಿಲ್, ಉದಯ್ ಹಾಗೂ ದುನಿಯಾ ವಿಜಯ್ ಮೂವರು ಕೆರೆಗೆ ಧುಮುಕುತ್ತಾರೆ. ಆದ್ರೆ, ನೀರಿಗೆ ಬಿದ್ದ ಮೂವರ ಪೈಕಿ ದುನಿಯಾ ವಿಜಯ್ ಮಾತ್ರ ನೀರಿನಿಂದ ಮೇಲೆ ಬರುತ್ತಾರೆ. ಉಳಿದ ಇಬ್ಬರು ನೀರಿನಲ್ಲೇ ನಾಪತ್ತೆಯಾಗಿದ್ದಾರೆ ಎಂಬುದು ವರದಿಯಾಗಿದೆ. [ಅನಿಲ್, ಉದಯ್ ಕೊನೆಯ ಮಾತಲ್ಲಿ ಸಾವಿನ ಮುನ್ಸೂಚನೆಯ ಸುಳಿವು.!]

  Mishap at Tippagondanahalli Back Water during 'Maasti Gudi' climax shooting

  ನೀರಿಗೆ ಬಿದ್ದು ನಿಮಿಷಗಳು ಕಳೆದರು ಅನಿಲ್ ಹಾಗೂ ಉದಯ್ ಇಬ್ಬರು ಮೇಲೆ ಬರದೆ ಇದ್ದಾಗ, ದುನಿಯಾ ವಿಜಯ್ ಅವರು ಕೂಗಿಕೊಂಡಿದ್ದಾರೆ. ಅಮೇಲೆ ಚಿತ್ರತಂಡದವರು ಬೋಟಿನಲ್ಲಿ ಹೋಗಿ ಅನಿಲ್ ಹಾಗೂ ಉದಯ್ ಗಾಗಿ ಒಂದು ಗಂಟೆಗೂ ಅಧಿಕ ಕಾಲ ಕಾರ್ಯಚರಣೆ ನಡೆಸಿದ್ದರು.

  English summary
  Major Mishap has happened during Duniya Vijay starrer 'Maasti Gudi' climax shooting. Anil and Uday, who are playing Villains in the movie drown in the Tippagondanahalli Lake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X