»   » 'ಐಸ್ ಮಹಲ್' ಶೂಟಿಂಗ್ ವೇಳೆ ಟ್ರಾಕ್ಟರ್ ಪಲ್ಟಿ, ಪ್ರಾಣಾಪಾಯದಿಂದ ಸಹನಟ ಪಾರು

'ಐಸ್ ಮಹಲ್' ಶೂಟಿಂಗ್ ವೇಳೆ ಟ್ರಾಕ್ಟರ್ ಪಲ್ಟಿ, ಪ್ರಾಣಾಪಾಯದಿಂದ ಸಹನಟ ಪಾರು

Posted By: Pavithra
Subscribe to Filmibeat Kannada

ಹೊಸಬರ 'ಐಸ್ ಮಹಲ್' ಎನ್ನುವ ಸಿನಿಮಾದ ಚಿತ್ರೀಕರಣದ ವೇಳೆ ದುರಂತವೊಂದು ಸಂಭವಿಸಿದೆ.

'ಐಸ್ ಮಹಲ್'... ಹೊಸ ಪ್ರತಿಭೆ ಕಿಶೋರ್ ಅಭಿನಯದ ಸಿನಿಮಾ. ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುವುದರ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿರುವ ಕಿಶೋರ್, ಸಹೋದರ ಕೃಷ್ಣ ಟ್ರಾಕ್ಟರ್ ಓಡಿಸುವ ಸೀನ್ ನ ಶೂಟಿಂಗ್ ಮಾಡುತ್ತಿದ್ದರು. ಈ ವೇಳೆಯಲ್ಲಿ ಟ್ರಾಕ್ಟರ್ ಪಲ್ಟಿಯಾಗಿ, ಕೃಷ್ಣ ಅವರ ಕೈ ಮುರಿದಿದೆ.

Mishap during Kannada Movie 'Ice Mahal' Shooting

ಕಡೂರಿನ ವಗರೆಹಳ್ಳಿಯ ಹೊಲವೊಂದರಲ್ಲಿ 'ಐಸ್ ಮಹಲ್' ಸಿನಿಮಾದ ಕೊನೆಯ ದಿನದ ಚಿತ್ರೀಕರಣವನ್ನ ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಅವಘಡ ನಡೆದಿದ್ದು, ಸಹನಟ ಕೃಷ್ಣ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ವಗೆರೆಹಳ್ಳಿ ಬಳಿ ಇರುವ ಖಾಸಗಿ ಆಸ್ಪತ್ರೆಯಲ್ಲಿ ಕೃಷ್ಣ ಚಿಕಿತ್ಸೆ ಪಡೆಯುತ್ತಿದ್ದಾರೆ.

English summary
Mishap during Kannada Movie 'Ice Mahal' Shooting.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada