L2:Empuraan Box Office: 8 ದಿನಗಳಲ್ಲಿ ಮೋಹನ್‌ಲಾಲ್ ಸಿನಿಮಾ ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?

ಮೋಹನ್‌ಲಾಲ್ ಹಾಗೂ ಪೃಥ್ವಿರಾಜ್ ಸುಕುಮಾರನ್ ಕಾಂಬಿನೇಷನ್‌ ಸಿನಿಮಾ ಬಿಡುಗಡೆಗೂ ಮುನ್ನ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಮಲಯಾಳಂನ 'ಲೂಸಿಫರ್' ಸಿನಿಮಾದ ಎರಡನೇ ಚಾಪ್ಟರ್ ಆಗಿದ್ದರಿಂದ ನಿರೀಕ್ಷೆಗಳು ಹೆಚ್ಚಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಮೋಹನ್‌ಲಾಲ್‌ಗೆ ಮತ್ತ 'ಸಲಾರ್' ಖ್ಯಾತಿಯ ಪೃಥ್ವಿರಾಜ್ ಸುಕುಮಾರನ್ ಆಕ್ಷನ್ ಕಟ್ ಹೇಳಿದ್ದು ಸಿನಿಪ್ರಿಯರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತ್ತು.

'ಎಲ್‌ 2: ಎಂಪುರಾನ್' (L2: Empuraan)ಪ್ಯಾನ್ ಇಂಡಿಯಾ ರಿಲೀಸ್‌ಗೆ ಮುಂದಾಗಿತ್ತು.ಈ ಕ್ರೇಜ್ ನೋಡಿ ಕನ್ನಡದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡುವುದಕ್ಕೆ ಮುಂದಾಗಿತ್ತು. ಈ ವೇಳೆ ಕನ್ನಡ ಸಿನಿಮಾಗಳಿಗಿಂತ ಮಲಯಾಳಂ ಸಿನಿಮಾಗೇ ಹೆಚ್ಚು ಸ್ಕ್ರೀನ್‌ಗಳು ಸಿಕ್ಕಿದ್ದಕ್ಕೆ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಆದ್ರೂ ಕರ್ನಾಟಕದಲ್ಲಿಯೇ ಸುಮಾರು 750 ರಿಂದ 800 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು ಎನ್ನಲಾಗಿತ್ತು.

Mohanlal Prithviraj Sukumaran film L2 Empuraan Karnataka Box Office Collection Report

ಮೋಹನ್‌ಲಾಲ್ ಪ್ರಮುಖ ಪಾತ್ರದಲ್ಲಿ ನಟಿಸಿ, ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿದ 'ಎಲ್‌ 2: ಎಂಪುರಾನ್'ಗೆ ಮೊದಲ ದಿನವೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಕೂಡ ಮಖಾಡೆ ಮಲಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಅದರಲ್ಲೂ ಕರ್ನಾಟಕದಲ್ಲಿ ಈ ಸಿನಿಮಾ ದೊಡ್ಡ ಮಟ್ಟದ ಕಲೆಕ್ಷನ್ ಮಾಡುವುದಿಲ್ಲ ಎಂದೇ ಭಾವಿಸಲಾಗಿತ್ತು. ಆದರೆ, ಕಳೆದ 8 ದಿನಗಳಲ್ಲಿ ಸಿನಿಮಾಗೆ ಕರ್ನಾಟಕದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಹಾಗಿದ್ದರೆ, ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ 'ಲೂಸಿಫರ್ 2' ಗಳಿಸಿದ್ದೆಷ್ಟು? ತಿಳಿಯಲು ಮುಂದೆ ಓದಿ.

'ಎಲ್‌ 2: ಎಂಪುರಾನ್' ಕಲೆಕ್ಷನ್ ಹೇಗಿದೆ?

ಕಳೆದ ವಾರ ರಿಲೀಸ್ ಆಗಿರುವ ಸಿನಿಮಾಗಳ ಪೈಕಿ ಮೋಹನ್‌ಲಾಲ್ ನಟಿಸಿದ 'ಎಲ್‌ 2: ಎಂಪುರಾನ್' ಕಲೆಕ್ಷನ್ ಉತ್ತಮವಾಗಿದೆ. ಈ ಸಿನಿಮಾ ಬಿಡುಗಡೆಯಾಗಿ ಎಂಟು ದಿನಗಳಲ್ಲಿ 100 ಕೋಟಿ ಕ್ಲಬ್ ಸೇರುವತ್ತ ಹೆಜ್ಜೆ ಇಡುತ್ತಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ, 'ಎಂಪುರಾನ್' ಸಿನಿಮಾ ಎಂಟನೇ ದಿನ ಎಲ್ಲಾ ಐದು ಭಾಷೆಗಳಿಂದ 3.9 ಕೋಟಿ ರೂಪಾಯಿಯನ್ನು ಕಲೆ ಹಾಕಿದೆ. ಅದರಲ್ಲಿ ಮಲಯಾಳಂ ಭಾಷೆಯಿಂದಲೇ ಹೆಚ್ಚು ಕಲೆಕ್ಷನ್ ಆಗಿದೆ.

ಕರ್ನಾಟಕದ ಕಲೆಕ್ಷನ್ ಎಷ್ಟು?

ತೆಲುಗು, ತಮಿಳು ಬಳಿಕ ಮಲಯಾಳಂ ಸಿನಿಮಾ ಕೂಡ ಕರ್ನಾಟಕದಲ್ಲಿ ತನ್ನ ಮಾರ್ಕೆಟ್ ಅನ್ನು ವಿಸ್ತರಣೆ ಮಾಡಿದೆ. 'ಎಂಪುರಾನ್' ಈ ಎಂಟು ದಿನಗಳಲ್ಲಿ ಸುಮಾರು 11 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಮೊದಲ ದಿನ ಸುಮಾರು 4 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಆಗಿದ್ದರೆ, ಎರಡನೇ ದಿನ 1.3 ಕೋಟಿ ರೂಪಾಯಿ, ಮೂರನೇ ದಿನ 2.25 ಕೋಟಿ ರೂಪಾಯಿ, ನಾಲ್ಕನೇ ದಿನ 1.8 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಒಟ್ಟು ಎಂಟು ದಿನಗಳಲ್ಲಿ 11.4 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ.

Mohanlal Prithviraj Sukumaran film L2 Empuraan Karnataka Box Office Collection Report

ಕರ್ನಾಟಕದ ವಿತರಕರು ಹೇಳೋದೇನು?

ಕರ್ನಾಟಕದ ವಿತರಕರು ಕೂಡ ಹೆಚ್ಚು ಕಡಿಮೆ ಇದೇ ರೇಂಜ್‌ನಲ್ಲಿಯೇ ಕಲೆಕ್ಷನ್ ಲೆಕ್ಕ ಕೊಡುತ್ತಾರೆ. ಎಂಟು ದಿನಗಳಲ್ಲಿ ಮೋಹನ್‌ಲಾಲ್ ಸಿನಿಮಾ 6.5 ಕೋಟಿಯಿಂದ 7 ಕೋಟಿ ರೂಪಾಯಿ ಶೇರ್ ಬಂದಿದ್ದು, 9 ರಿಂದ 9.5 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಆಗಿದೆ ಎಂದು ಹೇಳುತ್ತಿದ್ದಾರೆ. ಈ ಲೆಕ್ಕಾಚಾರಗಳನ್ನು ನೋಡಿದರೆ, 'ಎಲ್‌ 2 ಎಂಪುರಾನ್' ಕರ್ನಾಟಕದಲ್ಲಿ ಭರ್ಜರಿ ಕಲೆಕ್ಷನ್ ಆಗಿದೆ ಅಂತ ಗೆಸ್ ಮಾಡಬಹುದು.

ಮುಂದಿನ ವಾರ ಏನಾಗುತ್ತೆ?

ಮೋಹನ್‌ಲಾಲ್ ಸಿನಿಮಾ ಇನ್ನೊಂದು ವಾರದಲ್ಲಿ ಬಾಕ್ಸಾಫೀಸ್‌ ದೋಚಬೇಕು. ಯಾಕಂದ್ರೆ, ಏಪ್ರಿಲ್ 10ರಂದು ಕನ್ನಡದಲ್ಲಿ ಎರಡು ಸಿನಿಮಾಗಳು, 'ವಾಮನ' ಹಾಗೂ 'ವಿದ್ಯಾಪತಿ' ಸಿನಿಮಾಗಳು ರಿಲೀಸ್ ಆಗುತ್ತಿವೆ. ಎರಡೂ ಚಿಕ್ಕ ಸಿನಿಮಾಗಳೇ ಆಗಿದ್ದರೂ ಕರ್ನಾಟಕದಲ್ಲಿ ತಕ್ಕ ಮಟ್ಟಿಗೆ ಭರವಸೆಯನ್ನು ಮೂಡಿಸಿವೆ. ಇನ್ನೊಂದು ಕಡೆ ತಮಿಳಿನಲ್ಲಿ ಅಜಿತ್ ನಟಿಸಿದ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ರಿಲೀಸ್ ಆಗಲಿದೆ. ಹೀಗಾಗಿ 'ಎಂಪುರಾನ್' ಹವಾ ಕಡಿಮೆ ಆಗುತ್ತೆ ಅಂತ ಟ್ರೇಡ್ ಎಕ್ಸ್‌ಪರ್ಟ್‌ಗಳು ಭವಿಷ್ಯ ನುಡಿದಿದ್ದಾರೆ.

More from Filmibeat

English summary
Mohanlal, Prithviraj Sukumaran film L2: Empuraan Karnataka Box Office Collection Report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X