ಎರಡು ಮಾಸ್ ಒಂದು ಕ್ಲಾಸ್ 'ಕಾಟೇರ' ಕಟೌಟ್; ಅತೀ ಹೆಚ್ಚು ಕಟೌಟ್ ನಿಂತ ದರ್ಶನ್ ಸಿನಿಮಾ ಇದೇನೆ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ರಿಲೀಸ್ ಆಗುತ್ತಿದೆ. ಇದೇ ಡಿಸೆಂಬರ್ 29ರಂದು ಕರ್ನಾಟಕದಾದ್ಯಂತ ಅದ್ದೂರಿಯಾಗಿ ಬಿಡುಗಡೆ ಈಗಾಗಲೇ ಸಿದ್ಧತೆ ಶುರುವಾಗಿದೆ. ಈ ವೇಳೆ ಎಷ್ಟು ಎತ್ತರದ ಕಟೌಟ್ ನಿಲ್ಲುತ್ತೆ? ಎಷ್ಟು ಥಿಯೇಟರ್‌ ಮುಂದೆ ಕಟೌಟ್ ಬೀಳುತ್ತೆ ಅನ್ನೋದನ್ನು ನೋಡುವುದಕ್ಕೆ ಫ್ಯಾನ್ಸ್ ಎದುರು ನೋಡುತ್ತಿರುತ್ತಾರೆ.

ಅದರಲ್ಲೂ ಸೂಪರ್‌ಸ್ಟಾರ್ ಸಿನಿಮಾಗಳು ರಿಲೀಸ್ ಆಗುತ್ತಿದೆ ಅಂದರೆ, ಕಟೌಟ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುತ್ತೆ. ರಿಲೀಸ್ ಆದ್ಮೇಲೆ ಸಿನಿಮಾ ರೆಸ್ಪಾನ್ಸ್ ನೋಡಿ ಕಟೌಟ್‌ಗಳ ಸಂಖ್ಯೆಯಲ್ಲಿ ಏರಿಕೆ ಮಾಡುತ್ತಾರೆ. ಸದ್ಯ 'ಕಾಟೇರ' ಸಿನಿಮಾಗಾಗಿ ಕಟೌಟ್ ನಿರ್ಮಾಣ ಆಗುತ್ತಿದೆ.

More than 75 cutouts for Darshan Kaatera Movie here is the details

ರಾಜ್ಯದ ಮೂಲೆ ಮೂಲೆಗೆ 'ಕಾಟೇರ' ಕಟೌಟ್ ತಲುಪಲಿದೆ. ಕೇವಲ ಪ್ರಮುಖ ಚಿತ್ರಮಂದಿರಕ್ಕಷ್ಟೇ ಅಲ್ಲ. ಕರ್ನಾಟಕದ ಪ್ರತಿ ಜಿಲ್ಲೆಯ ಪ್ರಮುಖ ಚಿತ್ರಮಂದಿರಗಳಿಗೆ ಕಟೌಟ್ ತಲುಪಲಿದೆ. 'ಕಾಟೇರ' ರಿಲೀಸ್ ವೇಳೆ ಎಷ್ಟೆಷ್ಟು ಕಟೌಟ್ ಎದ್ದು ನಿಲ್ಲಲಿದೆ? ಎಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆ? ಕಟೌಟ್ ಯಾವ ಶೈಲಿಯಲ್ಲಿ ಇರುತ್ತೆ? ದರ್ಶನ್ ಯಾವ ಸಿನಿಮಾ ಅತೀ ಹೆಚ್ಚು ಕಟೌಟ್ ನಿಂತಿತ್ತು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

'ಕಾಟೇರ' ಕಟೌಟ್ ಕ್ರೇಜ್

ದರ್ಶನ್ ಸಿನಿಮಾಗೆ ರಿಲೀಸ್ ಆಗುತ್ತಿದೆ ಅಂದ್ರೆ, ಎಲ್ಲೆಲ್ಲಿಂದ ದಾಖಲೆಗಳು ಆಗುತ್ತವೋ ಅಂತ ಫ್ಯಾನ್ಸ್ ಎದುರು ನೋಡುತ್ತಿರುತ್ತಾರೆ. ಹೀಗೆ 'ಕಾಟೇರ' ಕಟೌಟ್ ಮೇಲೆ ಕಣ್ಣಿಟ್ಟಿರೋ ಫ್ಯಾನ್ಸ್ ಕ್ರೇಜಿ ನ್ಯೂಸ್ ಸಿಕ್ಕಿದೆ. ಕರ್ನಾಟಕದ ಮೂಲೆ ಮೂಲೆಯಲ್ಲಿ 'ಕಾಟೇರ' ಸಂಭ್ರಮ ಮಾಡುವುದಕ್ಕೆ ಕಟೌಟ್‌ಗಳ ನಿರ್ಮಾಣ ಕೆಲಸ ಜೋರಾಗಿ ನಡೆಯುತ್ತಿದೆ. ಕರ್ನಾಟಕ ಪ್ರಮುಖ ಜಿಲ್ಲೆ ಹಾಗೂ ಸೆಂಟರ್‌ಗಳ ಮುಂದೆ ಕಾಟೇರ ಕಟೌಟ್ ನಿಲ್ಲಲಿದೆ.

More than 75 cutouts for Darshan Kaatera Movie here is the details

ಎಷ್ಟು ಕಟೌಟ್‌ಗೆ ಪ್ಲ್ಯಾನ್?

ದರ್ಶನ್ ಸಿನಿಮಾ ರಿಲೀಸ್ ಆಗುತ್ತಿರುವ ಥಿಯೇಟರ್ ಮುಂದೆ 'ಕಾಟೇರ' ಕಟೌಟ್ ನಿಲ್ಲುವುದಕ್ಕೆ ಕ್ಷಣಗಣನೆ ಶುರುವಾಗಿದೆ. ಒಂದು ವಾರ ಮುನ್ನವೇ ಕಟೌಟ್ ಮಾಡುತ್ತಿದ್ದಾರೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಯ ಪ್ರಮುಖ ಚಿತ್ರಮಂದಿರಗಳಿಗಾಗಿಯೇ ಸುಮಾರು 75 ಕಟೌಟ್‌ಗಳು ಎದ್ದು ನಿಲ್ಲಲಿವೆ. ಇದಕ್ಕಾಗಿ 50ಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ. ಪ್ರಮುಖ ಚಿತ್ರಮಂದಿರ ನರ್ತಕಿ ಧಿಯೇಟರ್ ಮುಂದೆ 90 ಅಡಿ ಕಟೌಟ್ ಎದ್ದು ನಿಲ್ಲಲಿದೆ. ಇದರಲ್ಲಿ ಎರಡು ಮಾಸ್ ಹಾಗೂ ಒಂದು ಕ್ಲಾಸ್ ಕಟೌಟ್ ಕಾಣಿಸಿಕೊಳ್ಳಲಿದೆ. ಬಿಡುಗಡೆಗೆ ಒಂದು ದಿನ ಮುನ್ನ ಟೋಟಲ್ ಎಷ್ಟು ಕಟೌಟ್ ನಿಲ್ಲುತ್ತೆ ಅನ್ನುವ ಮಾಹಿತಿ ನೀಡಲಿದೆ.

'ಕುರುಕ್ಷೇತ್ರ'ಕ್ಕೆ ಅತೀ ಹೆಚ್ಚು ಕಟೌಟ್

ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ' ಸಿನಿಮಾಗೆ ಅತೀ ಹೆಚ್ಚು ಕಟೌಟ್ ನಿಲ್ಲಿಸಲಾಗಿತ್ತು. ಬೆಂಗಳೂರಿನಿಂದಲೇ ಸುಮಾರು 250 ಅಧಿಕ ಕಟೌಟ್‌ಗಳು ಕರ್ನಾಟಕದ ಮೂಲೆ ಮೂಲೆಗೆ ತಲುಪಿತ್ತು. ಈ ಸಿನಿಮಾ ರಿಲೀಸ್ ವೇಳೆನೂ ನಾಲ್ಕು ವಿಧವಿಧವಾದ ಕಟೌಟ್‌ಗಳನ್ನು ಮಾಡಲಾಗಿತ್ತು. ದರ್ಶನ್, ರೆಬೆಲ್‌ಸ್ಟಾರ್ ಅಂಬರೀಶ್, ನಿಖಿಲ್ ಕುಮಾರ್, ಅರ್ಜುನ್ ಸರ್ಜಾ ಕಟೌಟ್‌ಗಳು ಎದ್ದು ನಿಂತಿದ್ದವು.

'ಸಲಾರ್', 'ಡಂಕಿ' ಮುಂದೆ ಕಟೌಟ್

ಪ್ರಭಾಸ್ 'ಸಲಾರ್' ಹಾಗೂ ಶಾರುಖ್ ಖಾನ್ ಸಿನಿಮಾ 'ಡಂಕಿ' ಎರಡೂ ಸಿನಿಮಾಗಳು ಇದೇ ವಾರ ಬಿಡುಗಡೆಯಾಗಲಿವೆ. ಈ ಮಧ್ಯೆನೇ ದರ್ಶನ್ ಸಿನಿಮಾ 'ಕಾಟೇರ'ದ ಕಟೌಟ್‌ಗಳು ಎದ್ದು ನಿಲ್ಲಲಿವೆ. ಕರ್ನಾಟಕದಲ್ಲಿ ಕಟೌಟ್‌ಗಳ ವಿಚಾರದಲ್ಲೂ ದರ್ಶನ್ ಪರಭಾಷೆಯ ಸಿನಿಮಾಗಳಿಗೆ ಟಕ್ಕರ್ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಈ ವರ್ಷದ ಕೊನೆಯಲ್ಲಿ ದರ್ಶನ್ ಸಿನಿಮಾ ತೆರೆಮೇಲೆ ಅಬ್ಬರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

More from Filmibeat

English summary
Two Mass and one class cutout for Darshan Kaatera movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X