ನನಸಾಯಿತು ಪುನೀತ್ ರಾಜ್‌ಕುಮಾರ್ ಕಂಡ ಕನಸು: ಗಂಧದ ಗುಡಿ ಟೈಟಲ್ ಟೀಸರ್ ರಿಲೀಸ್

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕಂಡ ಅದೆಷ್ಟೋ ಕನಸುಗಳಲ್ಲಿ ಕರ್ನಾಟಕದ ಪರಿಸರ ಮೇಲಿನ ಡಾಕ್ಯೂಮೆಂಟರಿ ಫಿಲ್ಮ್ ಕೂಡ ಒಂದು. ಮಲೆನಾಡು, ಉತ್ತರ ಕನ್ನಡ, ಕರಾವಳಿ ಸೇರಿದಂತೆ ಕಡಲ ತೀರಗಳಲ್ಲಿ, ಕಾಡು ಮೇಡುಗಳಲ್ಲಿ ಪುನೀತ್ ರಾಜ್‌ಕುಮಾರ್ ಅಲೆದಾಡಿ ಪ್ರಕೃತಿ ಸೌಂದರ್ಯವನ್ನು ಸೆರೆ ಹಿಡಿದಿದ್ದಾರೆ. ಕರ್ನಾಟಕದ ಸಮುದ್ರದಾಳಕ್ಕೆ ಹೋಗಿ ಅಲ್ಲಿನ ಸೌಂದರ್ಯವನ್ನು ಚಿತ್ರೀಕರಿಸಿದ್ದರು. ಆ ಡಾಕ್ಯೂಮೆಂಟರಿಯನ್ನೇ ಕನ್ನಡಿಗರಿಗೆ ತೋರಿಸಲು ಪುನೀತ್ ರಾಜ್‌ಕುಮಾರ್ ಮುಂದಾಗಿದ್ದರು. ಆದರೆ, ಅಪ್ಪು ಆ ಆಸೆಯನ್ನು ಅರ್ಧದಲ್ಲಿಯೇ ಬಿಟ್ಟು ಹೊರಟುಹೋಗಿದ್ದಾರೆ.

ಅಪ್ಪು ಕಂಡ ಈ ಕನಸು ಕನ್ನಡ ರಾಜ್ಯೋತ್ಸವಕ್ಕೆ ಟೀಸರ್ ಬಿಡುಗಡೆ ಆಗಬೇಕಿತ್ತು. ಡಾಕ್ಯೂಮೆಂಟರಿಯ ಶೀರ್ಷಿಕೆಯನ್ನು ಘೋಷಣೆ ಮಾಡುವ ಆಲೋಚನೆಯಲ್ಲಿ ಪವರ್‌ಸ್ಟಾರ್ ಪುನೀತ್‌ಗಿತ್ತು. ಇದರೊಂದಿಗೆ ಟೈಟಲ್ ಟೀಸರ್ ಕೂಡ ರಿಲೀಸ್ ಮಾಡಿ ಕನ್ನಡಿಗರಿಗೆ ರಾಜ್ಯೋತ್ಸವದ ಉಡುಗೊರೆ ನೀಡಬೇಕು ಎಂದುಕೊಂಡಿದ್ದರು. ಆದರೆ, ವಿಧಿ ಬಿಡಲಿಲ್ಲ. ಈಗ ಅಪ್ಪು ಕನಸನ್ನು ಅಪ್ಪು ಪತ್ನಿ ಅಶ್ವಿನಿ ನೆರವೇರಿಸಲು ಮುಂದಾಗಿದ್ದಾರೆ. ಸದ್ಯ ಅಪ್ಪು ಕನಸಿನ ಟೀಸರ್ ರಿಲೀಸ್ ಆಗಿದೆ.

ಅಪ್ಪು 'ಗಂಧದ ಗುಡಿ' ಟೈಟಲ್ ಟೀಸರ್

ಅಪ್ಪು 'ಗಂಧದ ಗುಡಿ' ಟೈಟಲ್ ಟೀಸರ್

'ಗಂಧದ ಗುಡಿ' ಪರಿಸರದ ಕುರಿತಾದ ಸಿನಿಮಾವನ್ನು ಪಿಆರ್‌ಕೆ ಪ್ರೊಡಕ್ಷನ್‌ ಹಾಗೂ ಮಡ್ ಸ್ಕಿಪ್ಪರ್ ಮೀಡಿಯಾ ಹೌಸ್‍ ಜಂಟಿಯಾಗಿ ಸೇರಿ ನಿರ್ಮಿಸಿದೆ. ಈ ಡಾಕ್ಯೂಮೆಂಟರಿಗೆ ಅಪ್ಪು ಯಾವ ಶೀರ್ಷಿಕೆ ಫೈನಲ್ ಮಾಡಿದ್ದರು? ಅನ್ನುವುದು ಸಾಕಷ್ಟು ಕುತೂಹಲ ಕೆರಳಿಸಿತ್ತು. ಅದಕ್ಕೀಗ ತೆರೆ ಬಿದ್ದಿದೆ. ಈ ವಿಶೇಷ ಸಿನಿಮಾಗೆ ಗಂಧದ ಗುಡಿ ಎಂದು ಹೆಸರಿಡಲಾಗಿದೆ. ಇದರ ಶೀರ್ಷಿಕೆ ಅನಾವರಣ ಹಾಗೂ ಕರ್ನಾಟಕದ ಕಾಡು ಮೇಡುಗಳಲ್ಲಿ ಅಪ್ಪು ಆನಂದಿಸಿದ ಮಧುರ ಕ್ಷಣಗಳ ತುಣುಕನ್ನು ರಿವೀಲ್ ಮಾಡಲಾಗಿದೆ.

ಜಗ್ಗತ್ತಿನಲ್ಲಿ ಇಂತಹದ್ದೊಂದು ಸಿನಿಮಾ ಬಂದಿಲ್ಲ

ಜಗ್ಗತ್ತಿನಲ್ಲಿ ಇಂತಹದ್ದೊಂದು ಸಿನಿಮಾ ಬಂದಿಲ್ಲ

ನಾಡಿನ ಘನತೆಯನ್ನು ಇಡೀ ವಿಶ್ವಕ್ಕೆ ಪರಿಚಯಿಸಬೇಕೆಂಬ ಕನಸಿನೊಂದಿಗೆ ಪುನೀತ್ ರಾಜ್‌ಕುಮಾರ್ ಕೈ ಗೊಂಡ ವಿಶಿಷ್ಟ ಪಯಣವೇ 'ಗಂಧದ ಗುಡಿ'. ಪುನೀತ್ ಅವರ ದೃಷ್ಟಿಕೋನದಲ್ಲಿ ಕರ್ನಾಟಕದ ಸೊಬಗು ಅನಾವರಣಗೊಳ್ಳುವ ಹೊಸ ಬಗೆಯ ಈ ಪ್ರಯೋಗಕ್ಕೆ ಅವರು ಮಾರ್ಗದರ್ಶಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದು 'ವೈಲ್ಡ್ ಲೈಫ್ ಕರ್ನಾಟಕ' ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಅಮೋಘ ವರ್ಷ ಅವರನ್ನು. ಒಬ್ಬ ಸೂಪರ್ ಸ್ಟಾರ್ ನಟ ಹಾಗೂ ಒಬ್ಬ ವನ್ಯ ಜೀವಿ ಛಾಯಾಗಾಹಕ ಜೊತೆ ಸೇರಿ ಒಂದು ಭೂಪ್ರದೇಶವನ್ನು ಅನ್ವೇಷಣೆ ಮಾಡಿರುವ ಚಿತ್ರವೊಂದು ಬಹುಶ: ಜಗತ್ತಿನ ಯಾವ ಭಾಷೆಯಲ್ಲೂ ಬಂದಿಲ್ಲವೆಂದು ಹೇಳಬಹುದು. ಎಂದು ಗಂಧದ ಗುಡಿ ತಂಡ ಹೇಳಿದೆ.

ಅತ್ಯಂತ ಕುತೂಹಲಕಾರಿ ಕಥನ

ಅತ್ಯಂತ ಕುತೂಹಲಕಾರಿ ಕಥನ

"ನಮ್ಮ ನಾಡು, ನಮ್ಮ ಕಾಡು, ನಮ್ಮ ಭಾಷೆ, ನಮ್ಮ ಜನ, ನಮ್ಮ ಸಂಸ್ಕೃತಿ ಈ ಎಲ್ಲಾ ವಿಷಯಗಳು ಹೇಗೆ ಒಂದನ್ನೊಂದು ಬೆಸೆದುಕೊಂಡಿವೆ ಎಂಬುದನ್ನು ಪುನೀತ್ ರಾಜ್‌ಕುಮಾರ ಅರಸುತ್ತಾ, ಹಂತ ಹಂತವಾಗಿ ಅರಿಯುತ್ತಾ ಹೋಗುವುದರ ನೈಜ ಚಿತ್ರಣವೇ 'ಗಂಧದಗುಡಿ'. ಅತ್ಯಾಧುನಿಕ ಉಪಕರಣಗಳನ್ನು ಬಳಸಿ, ನಮ್ಮ ನಾಡಿನ ದೃಶ್ಯ ವೈಭವವನ್ನು ಸೆರೆ ಹಿಡಿದು ಪ್ರೇಕ್ಷಕರಿಗೆ ಉಣಬಡಿಸುವುದರ ಜೊತೆ ಎಲ್ಲಿಲ್ಲಿಯೂ ಬೋಧನೆಯನ್ನಿಸದಂತೆ ಅತ್ಯಂತ ಕುತೂಹಲಕಾರಿಯಾಗಿ ಒಂದು ಕಥನವನ್ನು ಕಟ್ಟುವ ಪ್ರಯತ್ನ ಈ ಚಿತ್ರದಲ್ಲಾಗಿದೆ" ಎಂದು ತಂಡ ಹೇಳಿಕೊಂಡಿದೆ.

2022ರಲ್ಲಿ 'ಗಂಧದ ಗುಡಿ' ರಿಲೀಸ್

'ಗಂಧದ ಗುಡಿ' ಸಿನಿಮಾದ ಶೀರ್ಷಿಕೆಕ ಈಗ ತಾನೇ ರಿಲೀಸ್ ಆಗಿದೆ. ಅದರಂತೆಯೇ ಈ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. 2022ರಲ್ಲಿ ಗಂಧದ ಗುಡಿ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ.

More from Filmibeat

English summary
Most Expected Puneeth Rajkumar Documentary movie Gandada gudi teaser released. It was power star puneeth rajkumar dream projeect.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X