»   » ಅಮ್ಮನ ನೆನೆಯುವ ಚೆಂದದ ಕನ್ನಡ ಸಿನೆಮಾ ಹಾಡು

ಅಮ್ಮನ ನೆನೆಯುವ ಚೆಂದದ ಕನ್ನಡ ಸಿನೆಮಾ ಹಾಡು

Posted By:
Subscribe to Filmibeat Kannada

ಮೇ ತಿಂಗಳ ಹನ್ನೊಂದನೇ ತಾರೀಕು 'ಅಮ್ಮನ ದಿನ'. ಅಮ್ಮನ ಬಗ್ಗೆ ಎಷ್ಟು ಮಾತನಾಡಿದರೂ, ಎಷ್ಟು ಹೇಳಿದರೂ, ಎಷ್ಟು ಬರೆದರೂ ಕಮ್ಮಿ. ಯಾಕೆಂದರೆ ಅವಳು 'ಅಮ್ಮ'. ಅಮ್ಮ ಎನ್ನುವ ಪದಕ್ಕೆ ಆಲ್ಟರ್ನೇಟಿವ್ ಪದವನ್ನು ದೇವರು ಸೃಷ್ಟಿಸಿಯೇ ಇಲ್ಲ.

ಅಮ್ಮನಂಥ ಗುಮ್ಮನಿಲ್ಲ, ಅಮ್ಮನಂಥ ಗೆಳೆಯ/ತಿಯೂ ಇಲ್ಲ ಎನ್ನುವ ಮಾತಿದೆ. ತಾಯಿ ಮಕ್ಕಳ ಮೇಲೆ ತೋರಿಸುವ ಪ್ರೀತಿ ಒಂದೇ ದಾರಿಯಲ್ಲಿ ಹರಿಯುವಂತದ್ದು. ನಿಷ್ಕಳಂಕ, ನಿಷ್ಕಲ್ಮಷ ಅಮ್ಮನ ಪ್ರೀತಿಗೆ ಬೆಲೆಕಟ್ಟಲಾದೀತೇ?

ಕನ್ನಡದಲ್ಲಿ ಅದೆಷ್ಟೋ ತಾಯಿಯ ಬಗ್ಗೆ ಚಿತ್ರಗಳು ಬಂದಿವೆ, ಅದೆಷ್ಟೋ ಹಾಡುಗಳೂ ಇವೆ. ಅಮ್ಮ ಎಂದಾಕ್ಷಣ ಯಾವುದಾದರೂ ಹಾಡುಗಳನ್ನು ನಾವು ಗುನಗುತ್ತೇವೆ. ಅಂತಹ ಕೆಲವು ಹಾಡುಗಳನ್ನು ಅಮ್ಮನ ದಿನದಂದು ಸ್ಮರಿಸಿಕೊಳ್ಳೋಣ.

ಜನಪ್ರಿಯತೆ ಪಡೆದ ಹತ್ತು ಹಾಡುಗಳನ್ನು ಸ್ಲೈಡಿನಲ್ಲಿ ನೀಡಲಾಗಿದೆ. ಮತ್ತಾವುದಾದರೂ ಹಾಡುಗಳಿದ್ದರೆ ನಮಗೆ ತಿಳಿಸಿ.

ಅಮ್ಮಾ.. ಯಾರು ಏನೇ ಅಂದರೂ ನೀ ನನ್ನಾ ದೇವರು

ಅಮ್ಮಾ.. ಯಾರು ಏನೇ ಅಂದರೂ ನೀ ನನ್ನಾ ದೇವರು. ರವಿಚಂದ್ರನ್ ಅಭಿನಯದ 'ಅಣ್ಣಯ್ಯ' ಚಿತ್ರದ ಸೂಪರ್ ಹಿಟ್ ಗೀತೆ. ಮಧು, ಅರುಣಾ ಇರಾನಿ, ಧೀರೇಂದ್ರ ಗೋಪಾಲ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರದ ಈ ಹಾಡನ್ನು ಹಂಸಲೇಖ ರಚಿಸಿದ್ದರು.

ಟೈಗರ್ ಪ್ರಭಾಕರ್

ಕೈತುತ್ತು ಕೊಟ್ಟವಳೇ ಐ ಲವ್ ಯು ಮದರ್ ಇಂಡಿಯಾ. ಟೈಗರ್ ಪ್ರಭಾಕರ್, ಪಂಡರೀಭಾಯಿ ಅಭಿನಯದ 'ಕಲಿಯುಗ ಭೀಮ' ಚಿತ್ರದ ಕೈತುತ್ತು ಕೊಟ್ಟವಳೇ ಸೂಪರ್ ಹಿಟ್ ಗೀತೆಯನ್ನು ಹಂಸಲೇಖಾ ರಚಿಸಿದ್ದರು.

ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ..

'ಯಾರಿವನು' ಚಿತ್ರದಲ್ಲಿ ಪುನೀತ್ ರಾಜಕುಮಾರ್ ಬಾಲನಟನಾಗಿ ಹಾಡಿದ ಮತ್ತೊಂದು ಸೂಪರ್ ಹಿಟ್ ಗೀತೆ. ಡಾ. ರಾಜ್, ಶ್ರೀನಾಥ್, ಬಿ ಸರೋಜಾ ದೇವಿ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರದ ಕಣ್ಣಿಗೆ ಕಾಣುವ ದೇವರು ಹಾಡನ್ನು ಚಿ. ಉದಯಶಂಕರ್ ಬರೆದಿದ್ದರು.

ಅಮ್ಮ ನಿನ್ನ ತೋಳಿನಲ್ಲಿ ಕಂದಾ ನಾನು..

'ಕಪ್ಪು ಬಿಳುಪು' ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಮಿನುಗು ತಾರೆ ಕಲ್ಪನ ಇದ್ದಾರೆ. ಆರ್ ಎನ್ ಜಯಗೋಪಾಲ್ ಸಾಹಿತ್ಯದ ಈ ಹಾಡನ್ನು ಪಿ ಸುಶೀಲಾ ಹಾಡಿದ್ದರು.

ಅಮ್ಮಾ ಎಂದರೆ ಏನೋ ಹರುಷವು, ನನ್ನ ಬಾಳಲಿ ಅವಳೇ ದೈವವು

ಡಾ. ವಿಷ್ಣುವರ್ಧನ್, ದ್ವಾರಕೀಶ್, ವಜ್ರಮುನಿ, ಲೀಲಾವತಿ ಪ್ರಮುಖ ಭೂಮಿಕೆಯಲ್ಲಿರುವ 'ಕಳ್ಳ ಕುಳ್ಳ' ಚಿತ್ರದ ಈ ಸೂಪರ್ ಹಿಟ್ ಗೀತೆಯನ್ನು ಚಿ ಉದಯಶಂಕರ್ ಬರೆದಿದ್ದರು.

ಅಮ್ಮಾ ನೀನು ನಕ್ಕರೆ ನಮ್ಮ ಬಾಳು ಸಕ್ಕರೆ..

ಅಶೋಕ್, ಆರತಿ, ಲೀಲಾವತಿ ಪ್ರಮುಖ ಭೂಮಿಕೆಯಲ್ಲಿರುವ ಈ ಹಾಡು 'ತಾಯಿಯ ಮಡಿಲು' ಚಿತ್ರದ್ದು. ಈ ಹಾಡಿಗೆ ಚಿ ಉದಯಶಂಕರ್ ಸಾಹಿತ್ಯ ನೀಡಿದ್ದಾರೆ.

ಅಮ್ಮಾ ನೀನು ನಮಗಾಗಿ, ಸಾವಿರ ವರುಷ

ಡಾ. ರಾಜ್, ಶ್ರೀನಿವಾಸಮೂರ್ತಿ, ಪಂಡರೀಭಾಯಿ, ಸರಿತಾ ಪ್ರಮುಖ ಭೂಮಿಕೆಯಲ್ಲಿರುವ 'ಕೆರಳಿದ ಸಿಂಹ' ಚಿತ್ರದ ಈ ಸೂಪರ್ ಹಿಟ್ ಗೀತೆಗೆ ಚಿ ಉದಯಶಂಕರ್ ಸಾಹಿತ್ಯ ನೀಡಿದ್ದರು.

ನಿಜ ಹೇಳುವೆನು ಅಮ್ಮ ನಿನ್ನ ಕಂಡರೆ ಪ್ರೀತಿ..

ಅಂಬರೀಶ್, ಅಂಬಿಕಾ ಪ್ರಮುಖ ಭೂಮಿಕೆಯಲ್ಲಿರುವ 'ಚಕ್ರವ್ಯೂಹ' ಚಿತ್ರದ ಗೀತೆ. ಈ ಹಾಡನ್ನು ಚಿ ಉದಯಶಂಕರ್ ರಚಿಸಿದ್ದಾರೆ.

ಅಮ್ಮಾ ಅಮ್ಮಾ.. ಐ ಲವ್ ಯು

ಪುನೀತ್ ರಾಜಕುಮಾರ್, ಮೀರಾ ಜಾಸ್ಮಿನ್, ರೋಜಾ, ದೇವರಾಜ್ ಪ್ರಮುಖ ಭೂಮಿಕೆಯಲ್ಲಿರುವ 'ಮೌರ್ಯ' ಚಿತ್ರದ ಗೀತೆ. ಕಲ್ಯಾಣ್ ಸಾಹಿತ್ಯ ನೀಡಿರುವ ಅಮ್ಮನ ಮೇಲೆ ಪ್ರೀತಿ ತೋರಿಸುವ ಮತ್ತೊಂದು ಸೂಪರ್ ಹಿಟ್ ಹಾಡು.

ಅಮ್ಮಾ ಅಮ್ಮಾ ನಿನ್ನ ಪ್ರೇಮಕ್ಕೆ, ತ್ಯಾಗಕ್ಕೆ

ವಿನೋದ್ ರಾಜ್, ದೇವರಾಜ್ , ದಿವ್ಯಾ ಪ್ರಮುಖ ಭೂಮಿಕೆಯಲ್ಲಿರುವ ಡ್ಯಾನ್ಸ್ ರಾಜ ಡ್ಯಾನ್ಸ್ ಚಿತ್ರದ ಈ ಹಾಡನ್ನು ಆರ್ ಎನ್ ಜಯಗೋಪಾಲ್ ಬರೆದಿದ್ದಾರೆ.

English summary
Mother sentiment songs in Kannada movies on eve of Mothers Day on May 11.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada