ದರ್ಶನ್ ಸಾರಥಿ ಮುಂದೆ, ಪರಮಾತ್ಮ ಸ್ವಲ್ಪ ಹಿಂದೆ

Darshan-Puneeth
ಗಳಿಕೆಯಲ್ಲಿ ಒಂದಕ್ಕೊಂದು ಪೈಪೋಟಿ ನೀಡುತ್ತಿದ್ದ ಈ ಎರಡು ಚಿತ್ರಗಳಲ್ಲಿ ಸದ್ಯಕ್ಕೆ ಸಾರಥಿಯದ್ದು ಒಂದು ಕೈ ಮೇಲು. ಒಂದು ವಾರದ ಅಂತರದಲ್ಲಿ ಬಿಡುಗಡೆಗೊಂಡ ಈ ಎರಡು ಚಿತ್ರಗಳಲ್ಲಿ ಸಾರಥಿ ತನ್ನ ಮುನ್ನಡೆ ಕಾಯ್ದು ಕೊಂಡಿದೆ.

ಪರಮಾತ್ಮ ಚಿತ್ರದ ಗಳಿಕೆಯಲ್ಲಿ ಸ್ವಲ್ಪ ಹಿನ್ನಡೆ ಕಂಡು ಬಂದಿದೆ ಎಂದರೆ ಅದರರ್ಥ ಚಿತ್ರ ಖಾಲಿ ಹೊಡೆಯುತ್ತಿದೆ ಎಂದಲ್ಲ. ಸಾರಥಿಗೆ ಹೋಲಿಸಿದರೆ ಸ್ವಲ್ಪ ಹಿಂದೆ ಅಷ್ಟೇ. ಆದರೂ ಫ್ಯಾಮಿಲಿ ಕ್ರೌಡ್ ಸೆಳೆಯುವಲ್ಲಿ ಪುನೀತ್ ಮತ್ತೆ ಯಶಸ್ಸು ಸಾಧಿಸಿದ್ದಾರೆ.

ಕ್ಲಾಸ್ ಮತ್ತು ಮಾಸ್ ಎರಡಕ್ಕೂ ಒಗ್ಗುವ ಚಿತ್ರ ಸಾರಥಿ, ಚಿತ್ರತಂಡ ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಸಿನಿಮಾ ಬಾಕ್ಷ್ ಆಫೀಸ್ ಅಕ್ಷರಸಃ ಲೂಟಿ ಹೊಡೆಯುತ್ತಿದೆ. ದರ್ಶನ್ ಜೈಲು ಸೇರಿದ್ದರಿಂದ ಅವರ ಮಾರುಕಟ್ಟೆ ಮುಗಿದೇ ಹೋಯಿತೆಂದು ಅವರ ಚಿತ್ರ ಬಿಡುಗಡೆ ಮಾಡಲು ನಿರಾಕರಿಸಿದ್ದ ಚಿತ್ರಮಂದಿರದ ಮಾಲೀಕರು ಕೈ ಕೈ ಹಿಸುಕಿ ಕೊಳ್ಳುತ್ತಿದ್ದಾರೆ.

ಉತ್ತರ ಕರ್ನಾಟಕ ಭಾಗದಲ್ಲಿ ದರ್ಶನ್ ಪವರ್ ಎಂದಿನಂತೆ ಜೋರು. ಚಿತ್ರದಲ್ಲಿನ ಮೈನವೇರೆಳಿಸುವ ಸ್ಟಂಟ್ ದೃಶ್ಯಗಳು ಚಿತ್ರದ ಪ್ರಮುಖ ಹೈಲೈಟ್. ಜೊತೆಗೆ ದರ್ಶನ್ ವಿಜಯಯಾತ್ರೆ ಕೂಡಾ ಚಿತ್ರದ ಅಭೂತಪೂರ್ವ ಸಕ್ಸಸ್ ಗೆ ಕಾರಣ ಎನ್ನಬಹುದು.

ಕ್ಲೈಮ್ಯಾಕ್ಷ್ ದೃಶ್ಯಗಳಿಗೆ ಸ್ವಲ್ಪ ಕತ್ತರಿ ಹಾಕಿದ ನಂತರ ಪರಮಾತ್ಮನ ಕಲೆಕ್ಷನ್ ಯಾವ ರೀತಿ ಇದೆ ಎನ್ನುವ ವರದಿ ಸದ್ಯಕ್ಕೆ ಲಭ್ಯವಿಲ್ಲ. ಆದರೂ ಈ ಎರಡು ಚಿತ್ರಗಳಲ್ಲಿ ಒಂದು ಈ ವರ್ಷದ ಬ್ಲಾಕ್ ಬಸ್ಟರ್ ಮತ್ತೊಂದು ಸೂಪರ್ ಹಿಟ್ ಆಗುವುದರಲ್ಲಿ ಅನುಮಾನವಿಲ್ಲ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Actor Darshan lead Kannada movie Sarathi doing better than Puneet Rajkumar's Paramathma all over Karnataka. But Paramathama movie attracting more and more family audience.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X