»   » 'ಮಾಸ್ತಿ ಗುಡಿ' ದುರಂತ ಸಂಭವಿಸಲು ಪ್ರಮುಖ ಕಾರಣ ಇದೇ.!

'ಮಾಸ್ತಿ ಗುಡಿ' ದುರಂತ ಸಂಭವಿಸಲು ಪ್ರಮುಖ ಕಾರಣ ಇದೇ.!

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಪಾಲಿಗೆ ನಿನ್ನೆ (ನವೆಂಬರ್ 7) ಕರಾಳ ದಿನ. ಯಾರೂ ಮಾಡದ 'ಸೂಪರ್ ಸ್ಟಂಟ್' ಮಾಡುವ ದುಸ್ಸಾಹಸಕ್ಕೆ ಕೈಹಾಕಿ ಇಬ್ಬರು ಖಳನಟರು ನೀರುಪಾಲಾಗಿದ್ದಾರೆ.

ಕನ್ನಡ ಚಿತ್ರರಂಗದ ಉದಯೋನ್ಮುಖ ನಟರಾದ ಅನಿಲ್ ಮತ್ತು ಉದಯ್ ರವರ ದುರಂತ ಸಾವಿಗೆ 'ಮಾಸ್ತಿ ಗುಡಿ' ಚಿತ್ರತಂಡದ ನಿರ್ಲಕ್ಷ್ಯವೇ ಕಾರಣ ಎಂಬುದು ಸ್ಪಷ್ಟ. [ಅನಿಲ್, ಉದಯ್ ಕೊನೆಯ ಮಾತಲ್ಲಿ ಸಾವಿನ ಮುನ್ಸೂಚನೆಯ ಸುಳಿವು.!]


ಪ್ರಮುಖ ಕಾರಣ ಏನು?

ತಿಪ್ಪಗೊಂಡನಹಳ್ಳಿ ಜಲಾಶಯ ವ್ಯಾಪ್ತಿಯಲ್ಲಿ ಚಿತ್ರೀಕರಣ ನಡೆಸಲು ಜಲಮಂಡಳಿ ವಿಧಿಸಿದ್ದ ಷರತ್ತುಗಳನ್ನು 'ಮಾಸ್ತಿ ಗುಡಿ' ಚಿತ್ರತಂಡ ಸಂಪೂರ್ಣವಾಗಿ ಉಲ್ಲಂಘನೆ ಮಾಡಿರುವುದೇ ದುರ್ಘಟನೆ ಸಂಭವಿಸಲು ಪ್ರಮುಖ ಕಾರಣ ಎನ್ನಲಾಗಿದೆ.


ಜಲಮಂಡಳಿ ವಿಧಿಸಿದ್ದ ಷರತ್ತುಗಳೇನು.?

''ನಿಷೇಧಿತ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸುವಂತಿಲ್ಲ. ಅನುಮತಿ ನೀಡಿದ ಪ್ರದೇಶಗಳಲ್ಲಿ ಮಾತ್ರ ಚಿತ್ರೀಕರಣ ಮಾಡಬೇಕು. ಚಿತ್ರೀಕರಣದ ವೇಳೆ ಯಾವುದೇ ಅಹಿತಕರ ಘಟನೆ ನಡೆದರೆ ಮಂಡಳಿ ಜವಾಬ್ದಾರಿಯಲ್ಲ'' ಎಂಬ ಷರತ್ತುಗಳನ್ನ ಜಲಮಂಡಳಿ ವಿಧಿಸಿತ್ತು. ['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]


ಷರತ್ತುಗಳನ್ನು ಉಲ್ಲಂಘಿಸಿದ 'ಮಾಸ್ತಿ ಗುಡಿ' ಚಿತ್ರತಂಡ

ಜಲಾಶಯದ ಹಿನ್ನೀರಿನಲ್ಲಿ ಯಾವುದೇ ಕಾರಣಕ್ಕೂ ಪ್ರವೇಶ ಮಾಡಬಾರದು ಎಂದು ಷರತ್ತು ವಿಧಿಸಿದರೂ, ಉಲ್ಲಂಘನೆ ಮಾಡಿ ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹೀಗಾಗಿ ದುರ್ಘಟನೆ ನಡೆದಿದೆ ಎಂಬುದು ಜಲಮಂಡಳಿ ಅಧಿಕಾರಿಗಳ ವಾದ. ['ಮಾಸ್ತಿಗುಡಿ' ಸಾಹಸ ನಿರ್ದೇಶಕ ರವಿವರ್ಮಗೆ ಜಗ್ಗೇಶ್ ಛೀಮಾರಿ]


ಅಧಿಕಾರಿಗಳು ಊಟಕ್ಕೆ ಹೋದ ಸಂದರ್ಭದಲ್ಲಿ ಚಿತ್ರೀಕರಣ

ನಿನ್ನೆ (ನವೆಂಬರ್ 7) ಚಿತ್ರೀಕರಣಕ್ಕೂ ಮೊದಲು ತಿಪ್ಪಗೊಂಡನಹಳ್ಳಿ ಸಹಾಯಕ ಎಂಜಿನಿಯರ್ ಅವರು ನಿಷೇಧಿತ ಸ್ಥಳಗಳಲ್ಲಿ ಚಿತ್ರೀಕರಣ ನಡೆಸದಂತೆ ಹೇಳಿದ್ದಾರೆ. ಜೊತೆಗೆ ನಿಷೇಧಿತ ಸ್ಥಳಗಳನ್ನೂ ತೋರಿಸಿದ್ದಾರೆ. ಆದ್ರೆ, ಅವರು ಊಟಕ್ಕೆ ಹೋದ ಸಂದರ್ಭದಲ್ಲಿ ನಿಯಮಗಳನ್ನು ಗಾಳಿಗೆ ತೂರಿ 'ಮಾಸ್ತಿ ಗುಡಿ' ಚಿತ್ರತಂಡ ನೀರಿನಲ್ಲಿ ಚಿತ್ರೀಕರಣ ನಡೆಸಿದೆ ಎಂದು ಜಲಮಂಡಳಿ ಅಧಿಕಾರಿಗಳು ಹೇಳಿದ್ದಾರೆ. ['ಮಾಸ್ತಿ ಗುಡಿ' ಶೂಟಿಂಗ್ ವೇಳೆ ಕೆರೆಗೆ ಹಾರಿದ ಖಳನಾಯಕ ಅನಿಲ್, ಉದಯ್ ಸಾವು]


ಸ್ವಿಮ್ಮಿಂಗ್ ನಲ್ಲಿ ನೈಪುಣ್ಯ ಇಲ್ಲದೇ ಇದ್ದರೂ ಧುಮುಕಿಸಿದ್ದು ತಪ್ಪು.!

ಇಬ್ಬರೂ ಖಳನಟರಿಗೂ ಸ್ವಿಮ್ಮಿಂಗ್ ನಲ್ಲಿ ನೈಪುಣ್ಯ ಇಲ್ಲದೇ ಇರುವುದು ನಿರ್ದೇಶಕ ನಾಗಶೇಖರ್ ಹಾಗೂ ರವಿವರ್ಮ ರವರಿಗೆ ತಿಳಿದಿದ್ದರೂ, ಹೆಲಿಕಾಫ್ಟರ್ ನಿಂದ ಧುಮುಕುವಂತೆ ಹೇಳಿರುವುದು ದೊಡ್ಡ ತಪ್ಪು. [ದುರಂತ ಸಾವಿಗೀಡಾದ ಅನಿಲ್ ಯಾರು.? ನಿಜ ಬದುಕಿನ ಕಥೆ ಇಲ್ಲಿದೆ...]


ಸೇಫ್ಟಿ ಇಲ್ಲವೇ ಇಲ್ಲ.!

ಸುರಕ್ಷತಾ ಕ್ರಮವಾಗಿ ಲೈಫ್ ಜಾಕೆಟ್, ಹಗ್ಗ ಬಳಸದೇ ಖಳನಟರನ್ನ 100ಕ್ಕೂ ಹೆಚ್ಚು ಅಡಿಗಳಿಂದ ನೀರಿಗೆ ಹಾರುವಂತೆ ಮಾಡಿರುವುದು ನಿರ್ದೇಶಕ, ಸಾಹಸ ನಿರ್ದೇಶಕರ ನಿರ್ಲಕ್ಷ್ಯಕ್ಕೆ ದೊಡ್ಡ ಸಾಕ್ಷಿ.


ಮೊದಲು ಬೋಟ್ ಆನ್ ಮಾಡಿಲ್ಲ.!

ನಟರು ನೀರಿಗೆ ಹಾರಿದ್ಮೇಲೆ, ಮೋಟರ್ ಬೋಟ್ ಮೂಲಕ ಹೋಗಿ ಅವರನ್ನು ರಕ್ಷಿಸುವ ಪ್ಲಾನ್ ಚಿತ್ರತಂಡಕ್ಕಿತ್ತು. ಆದ್ರೆ, ಚಿತ್ರೀಕರಣ ಶುರು ಆಗುವ ಮುನ್ನ ಮೋಟರ್ ಬೋಟ್ ಆನ್ ಮಾಡುವ ಗೋಜಿಗೆ ಚಿತ್ರತಂಡ ಹೋಗಿಲ್ಲ. ದುನಿಯಾ ವಿಜಯ್, ಅನಿಲ್ ಮತ್ತು ಉದಯ್ ನೀರಿಗೆ ಹಾರಿದ್ಮೇಲೆ ಮೋಟರ್ ಬೋಟ್ ಆನ್ ಮಾಡಲಾಗಿದೆ. ಆಗಲೇ ಡೀಸನ್ ಎಂಜಿನ್ ಕೈಕೊಟ್ಟಿರುವುದು ಚಿತ್ರತಂಡದ ಗಮನಕ್ಕೆ ಬಂದಿದೆ. ಅಷ್ಟರಲ್ಲಿ ಕಾಲ ಮೀರಿದೆ.


ರಿಹರ್ಸಲ್ ಇಲ್ಲ, ಪ್ಲಾನ್ ಇಲ್ಲ, ಮಾನಿಟರ್ ಕೂಡ ಮಾಡಿಲ್ಲ.!

ಚಿತ್ರೀಕರಣಕ್ಕೂ ಮುನ್ನ ಯಾವುದೇ ರಿಹರ್ಸಲ್ ಮಾಡಿಲ್ಲ. 100 ಕೆ.ಜಿಗೂ ಹೆಚ್ಚು ತೂಗುವ ವ್ಯಕ್ತಿ, 100ಕ್ಕೂ ಹೆಚ್ಚು ಅಡಿ ಮೇಲಿಂದ ಹಾರಿದಾಗ ಎಷ್ಟು ಅಡಿ ಆಳಕ್ಕೆ ಹೋಗುತ್ತಾನೆ? ತಿಪ್ಪಗೊಂಡನಹಳ್ಳಿ ಕೆರೆಯ ನೀರಿನ ಆಳ ಎಷ್ಟು? ಮೂವರ ಜೀವಕ್ಕೆ ಅಪಾಯ ಆಗದಂತೆ ಏನೇನು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು? ಎಂಬ ಕನಿಷ್ಟ ಪ್ಲಾನ್ನಿಂಗ್ ಇಲ್ಲದೇ ಉಡಾಫೆ ಮತ್ತು ನಿರ್ಲಕ್ಷ್ಯದಿಂದ 'ಮಾಸ್ತಿ ಗುಡಿ' ಚಿತ್ರತಂಡ ಶೂಟಿಂಗ್ ಮಾಡಿರುವುದರ ಪರಿಣಾಮ ಇಬ್ಬರು ಕಲಾವಿದರು ಬಲಿಯಾಗಿದ್ದಾರೆ.


ವಿಡಿಯೋ ನೋಡಿ....

'ಮಾಸ್ತಿ ಗುಡಿ' ಚಿತ್ರೀಕರಣದ ವೇಳೆ ಆದ ಅವಘಡದ ವಿಡಿಯೋ ಇಲ್ಲಿದೆ ನೋಡಿ....


English summary
'Maasti Gudi' crew is accused of flouting norms, not taking safety and precautionary measures and utter negligence causing the death of 2 actors, Anil and Uday in Tippagondanahalli Lake on November 7th, while shooting Climax scene.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada