ಇತ್ತ ದರ್ಶನ್ ರೋಡ್ ಶೋ, ಅತ್ತ ಖೈದಿ ಪರಾರಿ!!

Darshan
ಅದೃಷ್ಟ ಖುಲಾಯಿಸಿದರೆ ಮುಟ್ಟಿದ್ದೆಲ್ಲಾ ಚಿನ್ನವಂತೆ. ಅತ್ತ ಸಾರಥಿ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದರೆ ಇತ್ತ ಅವರ ರೋಡ್ ಶೋಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಗುತ್ತಿದೆ. ಆದರೆ ಇದೇ ಸಮಯವನ್ನು ತನ್ನ ಲಾಭಕ್ಕಾಗಿ ಬಳಸಿಕೊಂಡ ಖೈದಿಯೊಬ್ಬ ಸಿನಿಮೀಯ ರೀತಿಯಲ್ಲಿ ಜೈಲಿಂದ ಪರಾರಿಯಾಗಿದ್ದಾನೆ.

ತಡವಾಗಿ ಅಂದರೆ ಶನಿವಾರ (ಅ 22) ರಾಣೇಬೆನ್ನೂರು ನಲ್ಲಿ ನಡೆದ ಘಟನೆಯ ಸಂಕ್ಷಿಪ್ತ ವರದಿ ಇಂತಿದೆ:

ಅಂದು ರಾತ್ರಿ 8ಗಂಟೆಗೆ ಬೆಳಗಾವಿಯಿಂದ ರಾಣೇಬೆನ್ನೂರು ನಗರಕ್ಕೆ ದರ್ಶನ್ ಆಗಮಿಸಿದ್ದರು. ಅವರನ್ನು ಸ್ವಾಗತಿಸಲು ಸಾವಿರಾರು ಮಂದಿ ಅಭಿಮಾನಿಗಳು ಜಮಾಯಿಸಿದ್ದರು. ತುಂಬಾ ಜನ ಸೇರುವ ನಿರೀಕ್ಷೆ ಪೋಲೀಸ್ ಇಲಾಖೆಗೆ ಮೊದಲೇ ಇದ್ದಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೋಲೀಸ್ ರನ್ನು ನೇಮಿಸಿದ್ದರು.

ರಾಣೆಬೆನ್ನೂರು ಸಮೀಪದ ರಾಷ್ಟ್ರೀಯ ಹೆದ್ದಾರಿ ಬಳಿಯ ಗ್ರಾಮಾಂತರ ಠಾಣೆಯಿಂದ ಹೆಚ್ಚುವರಿಯಾಗಿ ದರ್ಶನ್ ರೋಡ್ ಶೋಗಾಗಿ ಪೋಲೀಸರನ್ನು ನಿಯೋಜಿಸಲಾಗಿತ್ತು. ಆ ಠಾಣೆಯ ಸಬ್ ಜೈಲಿನ ಒಂದು ಶೆಲ್ ನಲ್ಲಿ ಐದು ಮಂದಿ ಖೈದಿಗಳನ್ನು ಇರಿಸಲಾಗಿತ್ತು.

ದರ್ಶನ್ ನಗರಕ್ಕೆ ಬರುವ ವಿಷಯ ಖೈದಿಗಳಿಗೆ ತಿಳಿದಿತ್ತು. ಠಾಣೆಯಲ್ಲಿ ಹೇಗೂ ಡ್ಯೂಟಿ ಪೋಲೀಸ್ ಕಮ್ಮಿ ಇರೋದು ಅರಿತು ಐದು ಮಂದಿ ಖೈದಿಗಳಿದ್ದ ಸೆಲ್ ನ ಕಂಬಿಗಳನ್ನು ಮುರಿದು ಜೈಲಿನಿಂದ ಒಬ್ಬ ಖೈದಿ ರಾತ್ರೋರಾತ್ರಿ ಪರಾರಿಯಾಗಿದ್ದಾನೆ. ಜೈಲಿನಿಂದ ಓಡಿ ಹೋಗಲು ನೆರವಾದ ಉಳಿದ ನಾಲ್ಕು ಖೈದಿಗಳು ಮಾತ್ರ ನಿಯತ್ತಿನಿಂದ ಜೈಲು ಬಿಟ್ಟು ಹೊರಗೇ ಬಂದಿಲ್ಲ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೇದೆಗಳ ಮೇಲೆ ಕರ್ತವ್ಯ ಲೋಪ ಪ್ರಕರಣ ದಾಖಲಾಗಿದೆ.(ಒನ್ಇಂಡಿಯಾ ಕನ್ನಡ)

More from Filmibeat

English summary
During challenging star Darshan road show at Ranebennuru, a prisoner escaped from the jail. This incident happened on October 22nd. In this incident police department taking disciplinary action against three constables.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X