Don't Miss!
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- News
ಬೆಂಗಳೂರು ಏರ್ಪೋರ್ಟ್ ಭದ್ರತೆಗೆ 1,700 ಹೆಚ್ಚುವರಿ ಸಿಬ್ಬಂದಿ
- Sports
ನ್ಯೂಜಿಲೆಂಡ್ ವಿರುದ್ಧ ಗೆದ್ದು ಸರಣಿ ಸಮಬಲಗೊಳಿಸಿದರೂ ಅಚ್ಚರಿ ವ್ಯಕ್ತಪಡಿಸಿದ ನಾಯಕ ಹಾರ್ದಿಕ್ ಪಾಂಡ್ಯ
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಹೆಡ್ ಬುಷ್' ಸಿನಿಮಾ ವಿರುದ್ಧ ತಿರುಗಿಬಿದ್ದ ಜಯರಾಜ್ ಪುತ್ರ: ಫಿಲ್ಮ್ ಚೇಂಬರ್‌ಗೆ ದೂರು
ಸ್ಯಾಂಡಲ್‌ವುಡ್ ಸಿನಿಮಾಗಳಲ್ಲಿ ಹಲವು ಎಕ್ಸ್‌ಪೆರಿಮೆಂಟ್‌ಗಳಾಗುತ್ತಿವೆ. ಒಂದು ಕಡೆ ಪ್ಯಾನ್ ಇಂಡಿಯಾ ಸಿನಿಮಾ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಇನ್ನೊಂದು ಕಡೆ ರಿಯಲಿಸ್ಟಿಕ್ ಸಿನಿಮಾಗಳನ್ನು ತೆಗೆಯಲು ಮುಂದಾಗಿದ್ದಾರೆ. ಇವೆರಡ ಮಧ್ಯೆ ಭೂಗತಲೋಕದ ಕಥೆಯನ್ನು ಹೇಳಲೂ ಸಜ್ಜಾಗುತ್ತಿವೆ. ಇಂತಹದ್ರಲ್ಲಿ 'ಹೆಡ್ ಬುಷ್' ಕೂಡ ಒಂದು.
ಡಾಲಿ ಧನಂಜಯ್ ಮತ್ತೊಂದು ಸಿನಿಮಾ ಎಕ್ಸ್‌ಪೆಕ್ಟೆಡ್ ಸಿನಿಮಾ 'ಹೆಡ್ ಬುಷ್'. ಈ ಸಿನಿಮಾ ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿದೆ. ಅಗ್ನಿಶ್ರೀಧರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರೋದ್ರಿಂದ 'ಹೆಡ್ ಬುಷ್' ಸಿನಿಮಾದ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಕರ್ನಾಟಕ ಕಂಡ ಭೂಗತಲೋಕದ ದೊರೆಯ ಚರಿತ್ರೆಯನ್ನು ತೆರೆಮೇಲೆ ತೋರಿಸಲು ಚಿತ್ರತಂಡ ಸಜ್ಜಾಗಿ ನಿಂತಿದೆ. ಈ ವೇಳೆ ಇಡೀ ತಂಡಕ್ಕೆ ಸಂಕಷ್ಟವೊಂದು ಎದುರಾಗಿದೆ.
ಕಿಚ್ಚನ
ಅಡುಗೆ
ಸವಿದ
ಧನಂಜಯ್,
ನಂದಕಿಶೋರ್,
ವಾಸುಕಿ
ವೈಭವ್:
ಸ್ಪೆಷಲ್
ಏನು?

'ಹೆಡ್ ಬುಷ್' ವಿರುದ್ಧ ತಿರುಗಿಬಿದ್ದ ಅಜಿತ್ ಜಯರಾಜ್
'ಹೆಡ್ ಬುಷ್' ಸಿನಿಮಾ ಹಲವು ದಿನಗಳಿಂದ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾ ಆರಂಭಕ್ಕೂ ಮುನ್ನವೇ ಇದು ಮಾಜಿ ಭೂಗತ ದೊರೆ ಎಂ ಪಿ ಜಯರಾಜ್ ಚರಿತ್ರೆಯನ್ನು ಆಧರಿಸಿದ ಸಿನಿಮಾ ಎಂಬುದು ಪ್ರಚಾರ ಆಗಿತ್ತು. ಈ ಸಿನಿಮಾದಲ್ಲಿ ಎಂ ಪಿ ಜಯರಾಜ್ ಪಾತ್ರದಲ್ಲಿ ಡಾಲಿ ಧನಂಜಯ್ ನಟಿಸುತ್ತಿದ್ದಾರೆ ಎಂಬುದು ಗೊತ್ತಾಗಿತ್ತು. ಆ ವೇಳೆ ಈ ಸಿನಿಮಾದ ಬಗ್ಗೆ ವಿವಾದಗಳು ಎದ್ದಿರಲಿಲ್ಲ. ಈಗ 'ಹೆಡ್ ಬುಷ್' ವಿರುದ್ಧ ಎಂ ಪಿ ಜಯರಾಜ್ ಪುತ್ರ ಅಜಿತ್ ತಿರುಗಿಬಿದ್ದಿದ್ದಾರೆ.
ಅರಸಿಕೆರೆಯಿಂದ
ಸ್ಪರ್ಧಿಸುತ್ತಾರಾ
ಧನಂಜಯ್?
ಗಾಳಿಯಲ್ಲಿ
ಹರಡಿದ
ಸುದ್ದಿಗೆ
ಡಾಲಿ
ಹೇಳಿದ್ದೇನು?

ಫಿಲ್ಮ್ ಚೇಂಬರ್‌ಗೆ ಅಜಿತ್ ದೂರು
ಎಂಪಿ ಜಯರಾಜ್ ಪುತ್ರ ಅಜಿತ್ ಜಯರಾಜ್ 'ಹೆಡ್ ಬುಷ್' ಕಥೆಯ ವಿಚಾರವಾಗಿ ಫಿಲ್ಮ್ ಚೇಂಬರ್‌ಗೆ ದೂರು ನೀಡಿದ್ದಾರೆ. "ನಮ್ಮ ತಂದೆಯ ಕಥೆಯನ್ನು ಆಧರಿಸಿ ಈ ಸಿನಿಮಾ ಮಾಡಿದ್ದಾರೆಂದು ತಿಳಿದು ಬಂದಿದೆ. ಇದರಿಂದ ನನ್ನ ವೈಯಕ್ತಿಕ ಬದುಕಿಗೆ ತೊಂದರೆಯಾಗಿದೆ. ಸಿನಿಮಾ ಶೂಟಿಂಗ್ ಆರಂಭ ಆಗುವುದಕ್ಕೂ ಮುನ್ನ ಸಿನಿಮಾ ತಂಡದೊಂದಿಗೆ ಮಾತಾಡಿದ್ದೆ. ಆದರೆ, ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ ಫಿಲ್ಮ್ ಚೇಂಬರ್ ದೂರನ್ನು ನೀಡಿದ್ದೇನೆ." ಎಂದು ಅಜಿತ್ ಜಯರಾಜ್ ಹೇಳಿದ್ದಾರೆ.

ಕಾನೂನು ಹೋರಾಟಕ್ಕೆ ಸಜ್ಜು
'ಹೆಡ್ ಬುಷ್' ಸಿನಿಮಾ ವಿರುದ್ಧ ಅಜಿತ್ ಜಯರಾಜ್ ತಿರುಗಿಬಿದ್ದಿದ್ದಾರೆ. ಎಂ ಪಿ ಜಯರಾಜ್ ಅವತಾರದಲ್ಲಿ ಧನಂಜಯ್ ಕಾಣಿಸಿಕೊಂಡಿದ್ದ ಒಂದು ಫೋಸ್ಟರ್ ರಿವೀಲ್ ಆಗಿದೆ. ಇದರ ಕೆಳಗೆ ಮೊದಲ ಅಂಡರ್ ವರ್ಲ್ಡ್ ಡಾನ್ ಎಂಬ ಹಣೆಬರಹ ಕೂಡ ಇದೆ. ಹೀಗಾಗಿ ತಂದೆಯ ಕತೆಯನ್ನು ತೆರೆಮೇಲೆ ತರಲು ಹೊರಟಿರುವ ಚಿತ್ರತಂಡದ ವಿರುದ್ಧ ಪುತ್ರ ಕಿಡಿಕಾರಿದ್ದಾರೆ. "ನಮ್ಮ ತಂದೆಯ ಕಥೆಯನ್ನಿಟ್ಟುಕೊಂಡು ಯಾರೂ ಸಿನಿಮಾ ಮಾಡಬಾರದು. ಇದಕ್ಕಾಗಿ ಕಾನೂನು ಪ್ರಕಾರವೇ ಹೋರಾಟ ಮಾಡುತ್ತೇನೆ. ಕಾನೂನು ಪ್ರಕಾರವೇ ಪ್ರಕರಣವನ್ನು ಎದುರಿಸುತ್ತೇನೆ." ಎಂದು ಜಯರಾಜ್ ಪುತ್ರ ಅಜಿತ್ ಜಯರಾಜ್ ಹೇಳಿದ್ದಾರೆ.
ನನ್ನನ್ನು
ಮನುಷ್ಯನನ್ನಾಗಿಸಿದ
ಗುರುಗಳು
ನೀವು:
ಹಂಸಲೇಖಗೆ
ಕೈ
ಮುಗಿದ
ಧನಂಜಯ್

'ಹೆಡ್ ಬುಷ್'ನಲ್ಲಿ ಸ್ಯಾಂಡ್‌ವುಡ್ ದಿಗ್ಗಜರು
ಈ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ. ಸ್ವತ: ಡಾಲಿ ಧನಂಜಯ್ ಹಾಗೂ ರಾಮ್ಕೊ ಸೋಮಣ್ಣ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶೂನ್ಯ ನಿರ್ದೇಶನ ಮಾಡುತ್ತಿದ್ದಾರೆ. ಪಾಯಲ್ ರಜಪೂತ್, ರವಿಚಂದ್ರನ್, ಯೋಗಿ, ವಸಿಷ್ಠ ಸಿಂಹ, ದೇವರಾಜ್, ಶೃತಿ ಹರಿಹರನ್, ರಘು ಮುಖರ್ಜಿ ಸೇರಿದಂತೆ ದೊಡ್ಡ ತಾರಾಗಣವೇ ಸೇರಿದೆ. ಚರಣ್ ರಾಜ್ ಸಂಗೀತ ನಿರ್ದೇಶಿಸುತ್ತಿದ್ದು, ಬಾದಲ್ ನಂಜುಂಡಸ್ವಾಮಿ ಆರ್ಟ್ ವರ್ಕ್ ಮಾಡಿದ್ದಾರೆ.