ದರ್ಶನ್ ಭೇಟಿ ನಂತರ 'ಕರಿಯ'ನ ಬಗ್ಗೆ ಪ್ರತಾಪ್ ಸಿಂಹ ಹೇಳಿದ್ದೇನು.?
Recommended Video

ಕಾರು ಅಪಘಾತವಾಗಿ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ದರ್ಶನ್ ಅವರನ್ನ ಈಗಾಗಲೇ ಹಲವು ರಾಜಕೀಯ ಗಣ್ಯರು, ಚಿತ್ರರಂಗದವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ನಿನ್ನೆ ದಾಸನನ್ನ ಭೇಟಿ ಮಾಡಿದ್ದಾರೆ. ಬಳಿಕ ಮಾತನಾಡಿದ ಪ್ರತಾಪ್ ಸಿಂಹ ''ಕೆಂಚಾಲೋ ಮಚ್ಚಾಲೋ ಕಾಲದಿಂದಲೂ ನಾನು ಅವರ ಅಭಿಮಾನಿ'' ಎಂದು ಹೇಳುವ ಮೂಲಕ ಡಿ ಬಾಸ್ ಅಭಿಮಾನಿಗಳ ಖುಷಿಗೆ ಕಾರಣವಾದರು.
''ನಾವು ಬಹಳ ಹಿಂದಿನಿಂದಲೂ ದರ್ಶನ್ ಅವರನ್ನ ಇಷ್ಟಪಟ್ಕೊಂಡು ಹಾಗೂ ಅವರ ಸಿನಿಮಾಗಳನ್ನ ನೋಡ್ಕೊಂಡು ಬಂದಿದ್ದೇವೆ. ಸಹಜವಾಗಿ ದರ್ಶನ್ ಗೆ ಅಪಘಾತವಾಗಿದೆ ಎಂಬ ಸುದ್ದಿ ಕೇಳಿದಾಗ ನಮಗೂ ಆಘಾತವಾಗಿತ್ತು. ಈಗ ಅವರನ್ನ ನೋಡಿದೆ, ತುಂಬಾ ಚೆನ್ನಾಗಿದ್ದಾರೆ. ಬಲಗೈಗೆ ಪೆಟ್ಟಾಗಿರುವುದರಿಂದ ಕೆಲವು ದಿನ ವಿಶ್ರಾಂತಿ ಬೇಕಾಗಬಹುದು'' ಎಂದರು.

'ಸತತವಾಗಿ ಸಿನಿಮಾಗಳನ್ನ ಮಾಡ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳಲ್ಲಿ ಅಭಿನಯಿಸ್ತಿದ್ದಾರೆ. ಇದು ಅವರಿಗೆ ಇದೊಂದು ಬ್ರೇಕ್ ಅಂತ ಭಾವಿಸಿ, ಆದಷ್ಟೇ ಬೇಗ ಕಂಬ್ಯಾಕ್ ಮಾಡಲಿ ಎಂದು ಕೇಳಿಕೊಳ್ಳುತ್ತೇನೆ' ಎಂದು ಶುಭಹಾರೈಸಿದ್ದಾರೆ.
ಇನ್ನು ಕಾರು ಅಪಘಾತದಲ್ಲಿ ದರ್ಶನ್, ದೇವರಾಜ್, ಪ್ರಜ್ವಲ್ ದೇವರಾಜ್ ಹಾಗೂ ದರ್ಶನ್ ಆಪ್ತ ರಾಯ್ ಆಂಟೋನಿ ಇದ್ದರು. ನಾಲ್ಕು ಜನರಿಗೂ ಗಾಯಗಳಾಗಿತ್ತು. ದೇವರಾಜ್ ಮತ್ತು ಪ್ರಜ್ವಲ್ ದೇವರಾಜ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದರ್ಶನ್ ನಾಳೆ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.


Click it and Unblock the Notifications











