ಜಿಮ್‌ನಲ್ಲಿ ಪೂಜಾ ಗಾಂಧಿ ಕಸರತ್ತು: ಮಳೆ ಹುಡುಗಿ ವ್ಯಾಯಾಮ ಮಾಡುತ್ತಿರುವ ವಿಧಾನ ತಪ್ಪೇ?

2006ರಲ್ಲೂ ಇಂತಹದ್ದೇ ಪರಿಸ್ಥಿತಿ ಇತ್ತು. ಕನ್ನಡದ ಸಿನಿಮಾಗಳು ಒಂದರ ಹಿಂದೊಂದು ಸೋಲುತ್ತಿದ್ದವು. ಆಗ ಗಣೇಶ್ ಹಾಗೂ ಯೋಗರಾಜ್ ಭಟ್ ಕಾಂಬಿನೇಷನ್‌ನಲ್ಲಿ 'ಮುಂಗಾರು ಮಳೆ' ತೆರೆಕಂಡಿತ್ತು. ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಟಿಯೇ ಪೂಜಾ ಗಾಂಧಿ. ಒಂದು ಸಿನಿಮಾ ಈ ನಟಿಯ ಬದುಕನ್ನೇ ಬದಲಿಸಿತ್ತು.

'ಮುಂಗಾರು ಮಳೆ'ಯಿಂದ ಇವತ್ತಿನವರೆಗೂ ಪೂಜಾ ಗಾಂಧಿ ಜರ್ನಿ ಮುಂದುವರೆದಿದೆ. ಕನ್ನಡಿಗರೊಂದಿಗೆ ನಟಿಯ ಹೊಂದಿಕೊಂಡಿದ್ದಾರೆ. ಕರ್ನಾಟಕದಲ್ಲಿಯೇ ನೆಲೆ ಕಂಡುಕೊಂಡಿದ್ದಾರೆ. ಸಿನಿಮಾದ ಜೊತೆ ರಾಜಕೀಯ ಕ್ಷೇತ್ರಕ್ಕೂ ಧುಮುಕಿದ್ದರು. ರಾಜಕೀಯದಲ್ಲಿ ಸೋತರು ಒಂದು ಪ್ರಯತ್ನ ಮಾಡಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ಮಾತಾಡುವುದಕ್ಕಷ್ಟೇ ಅಲ್ಲ. ಓದಲು ಬರೆಯಲು ಕಲಿತು ಕನ್ನಡಿಗರ ಮನಗೆದ್ದಿದ್ದರು.

Mungaru Male actress Pooja Gandhi workout in gym video is trending

ಇತ್ತೀಚೆಗೆ ಪೂಜಾ ಗಾಂಧಿ ವೈವಾಹಿಕ ಜೀವನಕ್ಕೂ ಕಾಲಿಟ್ಟಿದ್ದಾರೆ. ಸದ್ಯ ಸಿನಿಮಾಗಳಿಂದ ದೂರ ಉಳಿದಿರುವ ಪೂಜಾ ಗಾಂಧಿ ಸಾಂಸಾರಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ತನ್‌ ಇನ್‌ಸ್ಟಾಗ್ರಾಂನಲ್ಲಿ ಪೂಜಾ ಗಾಂಧಿ ವರ್ಕ್‌ ಔಟ್ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ಆ ವಿಡಿಯೋ ನೋಡಿ ನೆಟ್ಟಿಗರೊಬ್ಬರು ಈ ವಿಧಾನ ಸರಿಯಿಲ್ಲ ಎಂದು ಹೇಳಿದ್ದಾರೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ನಟಿ ಪೂಜಾಗಾಂಧಿ ಆಕ್ಟಿವ್ ಆಗಿದ್ದಾರೆ. ವರ್ಕ್‌ಔಟ್ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಪೂಜಾ ಗಾಂಧಿ ವರ್ಕ್‌ಔಟ್ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದರು. ಆ ವಿಡಿಯೋ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರು ಕಾಮೆಂಟ್‌ಗಳ ಮೇಲೆ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಪೂಜಾ ಗಾಂಧಿ ಫಿಟ್ನೆಸ್ ಬಗ್ಗೆ ಹೆಚ್ಚು ಗಮನಹರಿಸಿದ್ದಾರೆ ಅನ್ನೋದು ಈ ವಿಡಿಯೋ ಮೂಲಕ ಸಾಬೀತಾಗುತ್ತಿದೆ. ಅಲ್ಲದೆ ಜಿಮ್‌ನಲ್ಲಿ ಯಾವ ತರಹದ ವರ್ಕ್‌ಔಟ್‌ಗಳನ್ನು ಮಾಡುತ್ತಾರೆ? ಫಿಟ್ ಆಗುವುದಕ್ಕೆ ಎಷ್ಟು ಶ್ರಮವಹಿಸುತ್ತಿದ್ದಾರೆ? ಅನ್ನೋದು ವಿಡಿಯೋ ಮೂಲಕ ತಿಳಿಯುತ್ತೆ. ದೇಹದ ತೂಕ ಇಳಿಸಿಕೊಂಡು ಮತ್ತೆ ಸಿನಿಮಾ ಕಡೆ ಮುಖ ಮಾಡುತ್ತಾರಾ? ಅನ್ನೋ ಅನುಮಾನ ಮೂಡಿದೆ.

ಜಿಮ್‌ನಲ್ಲಿ ಪೂಜಾ ಗಾಂಧಿ ವರ್ಕ್‌ಔಟ್ ಮಾಡುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದೇನೋ ಸರಿ. ಆದರೆ, ಫಿಟ್ನೆಸ್ ಟ್ರೈನರ್ ಒಬ್ಬರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ನೀವು ಜಿಮ್‌ನಲ್ಲಿ ಮಾಡುತ್ತಿರುವ ವ್ಯಾಯಾಮದ ವಿಧಾನ ಸರಿಯಾಗಿಲ್ಲ ಎಂದು ಸಲಹೆ ನೀಡಿದ್ದಾರೆ. ಕಾಮೆಂಟ್‌ಗೆ ಪೂಜಾ ಗಾಂಧಿ ಪ್ರತಿಕ್ರಿಯೆ ಕೂಡ ಕೊಟ್ಟಿದ್ದಾರೆ.

"ನೀವು ವ್ಯಾಯಾಮ ಮಾಡುತ್ತಿರುವ ವಿಧಾನ ತಪ್ಪಿದೆ. ನೀವು ತಪ್ಪು ತಿಳಿದುಕೊಳ್ಳುವುದಿಲ್ಲವೆಂದು ಭಾವಿಸಿದ್ದೇನೆ. ಒಬ್ಬ ಫಿಟ್ನೆಸ್ ಟ್ರೈನರ್ ಆಗಿ ನನಗೆ ಹೇಳಬೇಕು ಅನಿಸಿತು." ಎಂದು ಕಾಮೆಂಟ್‌ ಮಾಡಿದ್ದಾರೆ. ಹಾಗೇ ತಾನು ಮುಂಗಾರು ಮಳೆ ಫ್ಯಾನ್ ಅಂತಲೂ ಹೇಳಿಕೊಂಡಿದ್ದಾರೆ. ಅದಕ್ಕೆ "ಪೂಜಾಗಾಂಧಿ ನಿಮ್ಮ ಸಲಹೆಗಳಿಗೆ ಧನ್ಯವಾದಗಳು" ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಪೂಜಾ ಗಾಂಧಿ ವರ್ಕ್‌ಔಟ್ ಮಾಡುತ್ತಿರುವುದು ನೋಡಿ, ಮತ್ತೆ ಸಿನಿಮಾದಲ್ಲಿ ನಟಿಸುವುದಕ್ಕೆ ಈ ತಯಾರಿ ಮಾಡುತ್ತಿದ್ದಾರಾ ಅನ್ನೋ ಅನುಮಾನ ಮೂಡಿದೆ. "ಮತ್ತೆ ಮುಂಗಾರು ಮಳೆ ಪೂಜಾ ಗಾಂಧಿ ಹಾಗೆ ನೋಡುವುದಕ್ಕೆ ಇಷ್ಟ.", "ನೀವು ಕರ್ನಾಟಕದ ನಂದಿನಿ ಅಂತೆಲ್ಲ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

More from Filmibeat

English summary
Kannada actress Pooja Gandhi workout video is trending:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X