"ನನ್ನ ರಾಜಾಹುಲಿ ಸಿನಿಮಾದ ಕಲೆಕ್ಷನ್ ಇವರ ಮೂರು ಸಿನಿಮಾದ ಗಳಿಕೆಗೂ ಹೆಚ್ಚು"; ಕೃಷ್ಣಗೆ ತಿರುಗೇಟು ಕೊಟ್ಟ ಗುರುದೇಶಪಾಂಡೆ

ಕಳೆದ ಎರಡು ಮೂರು ದಿನಗಳಿಂದ ಡಾರ್ಲಿಂಗ್ ಕೃಷ್ಣ ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ. ಅವರು ನಟಿಸಿ, ನಿರ್ದೇಶಿಸಿದ 'ಲವ್ ಮಾಕ್ಟೇಲ್ 3' ಸ್ಟೋರಿಯನ್ನು ಕದ್ದಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಈ ಸಂಬಂಧ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಇಬ್ಬರೂ ಪತ್ರಿಕಾಗೋಷ್ಠಿ ನಡೆಸಿ ನಿರ್ದೇಶಕ ಗುರುದೇಶಪಾಂಡೆ ಹಾಗೂ ಕಥೆಗಾರ ರಾಘವೇಂದ್ರ ನಾಯಕ್ ವಿರುದ್ಧ ಕಿಡಿಕಾರಿದ್ದರು.

ಡಾರ್ಲಿಂಗ್ ಕೃಷ್ಣ ಪತ್ರಿಕಾಗೋಷ್ಠಿ ಮಾಡುತ್ತಿದ್ದಂತೆ ನಿರ್ದೇಶಕ ಗುರುದೇಶಪಾಂಡೆ ಹಾಗೂ ಲೇಖಕ ರಾಘವೇಂದ್ರ ನಾಯಕ್ ಇಬ್ಬರೂ ಜಂಟಿಯಾಗಿ ಪ್ರೆಸ್ ಮೀಟ್ ಮಾಡಿ ತಿರುಗೇಟು ಕೊಟ್ಟಿದ್ದಾರೆ. ಡಾರ್ಲಿಂಗ್ ಕೃಷ್ಣ ಮಾಡಿದ ಆರೋಪಗಳಿಗೆಲ್ಲ ಒಂದೊಂದಾಗೇ ಉತ್ತರ ಕೊಡುತ್ತಾ ಹೋಗಿದ್ದಾರೆ. ಅದರಲ್ಲಿ ಗುರುದೇಶಪಾಂಡೆ ಬಗ್ಗೆ ರಿಮೇಕ್ ಮಾಡಿದ್ದಾರೆ, ಗುರುದೇಶಪಾಂಡೆ ಫ್ರೆಂಡ್‌ಶಿಪ್ ಮಾಡಿದರೆ, ಮನೆಗೆ ಸೇರಿಸೋಲ್ಲ ಎಂದಿದ್ದಕ್ಕೆ ತಿರುಗೇಟು ಕೊಟ್ಟಿದ್ದಾರೆ. ಅದರ ಸಾರಾಂಶ ಇಲ್ಲಿದೆ.

My Rajahuli movie collection is more than Darling Krishna Love Mocktail series said Gurudeshpande

'ಲವ್ ಮಾಕ್ಟೇಲ್ 3' ಸೆಕೆಂಡ್ ಹಾಫ್ ಕಥೆ ತಮ್ಮದು ಎಂದು ಆರೋಪಿಸಿರುವ ಗುರುದೇಶಪಾಂಡೆ, 2022ರಿಂದ ನಡೆದ ಘಟನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. "ರಾಘವೇಂದ್ರ ನಾಯಕ್ ಅವರು 2022ರಲ್ಲಿ ನನಗೆ ಒಂದು ಲೈನ್ ಕಥೆ ಹೇಳಿದರು. ಆ ಲೈನ್ ನನಗೆ ತುಂಬಾನೇ ಇಷ್ಟ ಆಯ್ತು. ನಾನು ನಿರ್ದೇಶನ ಮಾಡದೇ ಬಹಳ ದಿನ ಆಗಿತ್ತು. ಒಳ್ಳೆಯ ಕಥೆಗೆ ಕಾಯುತ್ತಿದ್ದರಿಂದ ಆ ಕಥೆಯನ್ನು ಆಯ್ಕೆ ಮಾಡಿಕೊಂಡೆ. ಆ ಕಥೆಗೆ ಸುಮಾರು ಐದಾರು ತಿಂಗಳು ವರ್ಕ್ ಮಾಡಿ ಸ್ಕ್ರೀನ್ ಪ್ಲೇ ಮಾಡಿದ್ವಿ. ಇದೆಲ್ಲ ಆದ್ಮೇಲೆ ನಾವು ಡಾರ್ಲಿಂಗ್ ಕೃಷ್ಣ ಅವರಿಗೆ ಈ ಕಥೆಯನ್ನು ಹೇಳಿದ್ವಿ. ಇದಲ್ಲದೆ, ಸ್ಕ್ರೀನ್ ಪ್ಲೇ ಮಾಡುವಾಗ ಸುಮಾರು ಐದಾರು ಜನ ರೈಟರ್‌ಗಳಿಗೆ ಹೇಳಿದ್ವಿ. ಎರಡು ಮೂರು ರೀಡಿಂಗ್ ಆಗಿದೆ." ಎಂದು ಹೇಳಿದ್ದಾರೆ.

ಹಾಗೇ 'ಲವ್ ಮಾಕ್ಟೇಲ್ 3' ಸಿನಿಮಾ ನೋಡಿದ ಮೇಲೆ ಏನಾಯ್ತು? ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ನಾನು ಲವ್ ಮಾಕ್ಟೇಲ್ 3 ಸಿನಿಮಾದ ಪ್ರೀಮಿಯರ್ ಅನ್ನು ನೋಡಿ 10.53ಕ್ಕೆ ಮೆಸೇಜ್ ಹಾಕಿದೆ. ಅವರು ಹೇಳಿದಂತೆ ಕಾಲ್ ಮಾಡಿಲ್ಲ. ಅದರು ಅವರ ಮೊಬೈಲ್‌ನಲ್ಲೂ ಇರುತ್ತೆ. ನನ್ನ ಮೊಬೈಲ್‌ನಲ್ಲೂ ಇರುತ್ತೆ. ಸಾಕ್ಷಿ ಸಮೇತ ನಾವು ಕೊಡುತ್ತೇವೆ. ನಾನು ಒಂದು ವಾಯ್ಸ್ ನೋಟ್ ಕಳಿಸಿದ್ದೆ. ಅದರಲ್ಲಿ ನಿಮ್ಮ ಸಿನಿಮಾ ನೋಡಿದೆ. ಚೆನ್ನಾಗಿ ಮಾಡಿದ್ದೀರ. ಆದರೆ, ನಾವು 2023ರಲ್ಲಿ ಹೇಳಿದ ಕತೆ ಕೋರ್ ಪಾಯಿಂಟ್ ಅನ್ನು ಬಳಸಿಕೊಂಡು ಸಿನಿಮಾ ಮಾಡಿದ್ದೀರ. ಇಂಟರ್‌ವಲ್ ಬ್ಲಾಕ್‌ನಿಂದ ಹಿಡಿದು ಕ್ಲೈಮ್ಯಾಕ್ಸ್‌ವರೆಗೂ ನಾವು ಹೇಳಿದ ಕಥೆಯನ್ನು ಸಂಪೂರ್ಣವಾಗಿ ನೀವು ಬಳಸಿಕೊಂಡಿದ್ದೀರ ಎಂದು ಅವರಿಗೆ ಹೇಳಿದೆ. ಆಗ ಅವರು ನಾನು ಕಥೆಯನ್ನು ಬಳಸಿಕೊಂಡಿಲ್ಲ ಎಂದರು. ಆಗ 2023ರಲ್ಲಿ ಬಂದಿದ್ವಿ ಅಂದಾಗ ಅವರು ನೆನಪಿಸಿಕೊಂಡರು. ಅಲ್ಲಿಗೆ ಕಾಲ್ ಕಟ್ ಆಯ್ತು." ಎಂದು ಆ ದಿನದ ಘಟನೆಯನ್ನ ವಿವರಿಸಿದ್ದಾರೆ.

ಡಾರ್ಲಿಂಗ್ ಕೃಷ್ಣ ರಿಮೇಕ್ ಸಿನಿಮಾಗಳ ನಿರ್ದೇಶಕ ಎಂದು ಆರೋಪಿಸಿದ್ದಕ್ಕೆ ತಿರುಗೇಟು ಕೊಟ್ಟಿದ್ದಾರೆ. "ಅವರು ನನ್ನನ್ನು ಲೆಜೆಂಡರಿ ಡೈರೆಕ್ಟರ್ ಅಂತ ಹೇಳುತ್ತಾರೆ. ಆಮೇಲೆ ಲೆಜೆಂಡರಿ ರೈಟರ್ ಅಂತ ಬೇರೆ ಇವರಿಗೆ ಹೇಳಿದ್ದಾರೆ. ನನ್ನ ರಿಮೇಕ್‌ಗಳ ಬಗ್ಗೆ ಅವರು ಹೇಳಿದ್ದಾರೆ. ರುದ್ರತಾಂಡವ ಮತ್ತು ಜಾನ್ ಜಾನಿ ಜನಾರ್ಧನ್‌ ಅಂತಹ ರಿಮೇಕ್ ಸಿನಿಮಾದಲ್ಲಿ ನಟಿಸಿದ್ದೆ ಎಂದಿದ್ದಾರೆ. ಯಾಕೆ ಅವತ್ತು ರಿಮೇಕ್ ಅಂತ ನಿಮಗೆ ಗೊತ್ತಿರಲಿಲ್ವಾ? ಅವರು ನಿಮಗೆ ಆ ಸಿನಿಮಾ ಮಾಡುವ ಅವಶ್ಯಕತೆ ಇತ್ತು. ಈಗ ಲವ್ ಮಾಕ್ಟೇಲ್ ಇಷ್ಟ ಆದ್ಮೇಲೆ ರಿಮೇಕ್ ಮತ್ತು ರಿಮೇಕ್ ಸಿನಿಮಾಗಳು ಬೇಡ ಅಂತ ಡಿಸೈಡ್ ಮಾಡಿದ್ದೀರ?" ಎಂದು ನಿರ್ದೇಶಕರು ಗುರುದೇಶಪಾಂಡೆ ಹೇಳಿದ್ದಾರೆ.

My Rajahuli movie collection is more than Darling Krishna Love Mocktail series said Gurudeshpande

ಹಾಗೇ 'ಲವ್ ಮಾಕ್ಟೇಲ್' ಮೂರು ಸಿನಿಮಾಗಳು ತನ್ನ 'ರಾಜಾಹುಲಿ' ಸಿನಿಮಾಗೆ ಸಮ ಎಂದು ಹೇಳಿದ್ದಾರೆ. "ಅವರು ಸಿನಿಮಾ ಗೆದ್ದಿರೋರು ಮಾತ್ರ ಮಾತಾಡ್ಬೇಕು ಅಂತ ಹೇಳಿದರು. ಬಹುಶ: ನನ್ನ ರಾಜಾಹುಲಿ ಒಂದು ಸಿನಿಮಾದ ಕಲೆಕ್ಷನ್ ಇವರ ಮೂರು ಸಿನಿಮಾ ಸೇರಿದರೂ ಆಗುವುದಿಲ್ಲ. 2013ನಲ್ಲಿಯೇ ರಾಜಾಹುಲಿ ಮೂಲಕ ಆ ಸಕ್ಸಸ್ ನೋಡಿದ್ವಿ." ಎಂದು ಡಾರ್ಲಿಂಗ್ ಕೃಷ್ಣಗೆ ತಿರುಗೇಟು ಕೊಟ್ಟಿದ್ದಾರೆ.

ಇದೇ ವೇಳೆ ಫ್ರೆಂಡ್‌ಶಿಪ್ ಮಾಡಿದರೆ, ಮನೆ ಸೇರಿಸೋಲ್ಲ ಅಂದ ಬಗ್ಗೆನ ಕಿಡಿಕಾರಿದ್ದಾರೆ. "ಗುರುದೇಶಪಾಂಡೆ ಜೊತೆ ಫ್ರೆಂಡ್‌ಶಿಪ್ ಮಾಡಿದರೆ, ನನ್ನ ಹೆಂಡ್ತಿ ನನ್ನ ಮನೆ ಸೇರಿಸೋಲ್ಲ ಅಂದರು. ಆಗ ನನ್ನ ಹೆಂಡ್ತಿ ನನ್ನ ಹಿಂದೆ ಇದ್ದಳು. ಅವಳು ಆ ವಿಡಿಯೋನಾ ನನ್ನ ಹೆಂಡ್ತಿ ನೋಡುತ್ತಿದ್ದಳು. ರುದ್ರತಾಂಡವ ಮತ್ತು ಜಾನ್ ಜಾನಿ ಜನಾರ್ಧನ್‌ಗೆ 5 ಸಿನಿಮಾ ಮಾಡಿರುವ ಈ ನಟನನ್ನು ಆಯ್ಕೆ ಮಾಡುವುದಕ್ಕೆ ಎಷ್ಟು ಕೇಳಿಕೊಂಡ್ರಿ ನೆನಪಿದೆಯಾ? ಅಂತ ಕೇಳಿದಳು." ಎಂದು ನಿರ್ದೇಶಕರು ಗುರುದೇಶಪಾಂಡೆ ನೋವಿನಿಂದ ಹೇಳಿದರು.

More from Filmibeat

English summary
My Rajahuli movie collection is more than Darling Krishna Love Mocktail series said Gurudeshpande.
Read more about: darling krishna guru deshpande
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X