ದರ್ಶನ್ ಅಪಘಾತದ ಕಾರಿನಲ್ಲಿ ಇದ್ದದ್ದು 4 ಜನ ಅಲ್ಲ, 6 ಜನ.! ಯಾರವರು.?

Recommended Video

ದರ್ಶನ್ ಕಾರ್ ಅಪಘಾತದ ವಿಚಾರದಲ್ಲಿ ಮತ್ತೊಂದು ಟ್ವಿಸ್ಟ್..! | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್, ದೇವರಾಜ್, ಪ್ರಜ್ವಲ್ ದೇವರಾಜ್ ಮತ್ತು ದರ್ಶನ್ ಆಪ್ತ ರಾಯ್ ಆಂಟೋನಿ ಪ್ರಯಾಣ ಮಾಡುತ್ತಿದ್ದ ಆಡಿ ಕಾರು ಮೈಸೂರಿನ ಹಿನಕಲ್ ರಿಂಗ್ ರಸ್ತೆಯಲ್ಲಿ ಅಪಘಾತಕ್ಕೀಡಾಗಿತ್ತು. ತದ ನಂತರ ನಾಲ್ಕು ಜನರು ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.

ಇದೀಗ, ಅಪಘಾತವಾದ ಕಾರಿನಲ್ಲಿ ಇದ್ದದ್ದು ನಾಲ್ಕು ಜನರು ಅಲ್ಲ. ಆರು ಜನರು ಎಂಬ ಮಾಹಿತಿ ಹೊರಬಿದ್ದಿದೆ. ಇಷ್ಟು ದಿನ ದರ್ಶನ್ ಆಪ್ತರು ಹೇಳಿದ ಪ್ರಕಾರ ಬರಿ ನಾಲ್ಕು ಜನ ಮಾತ್ರ ಕಾರಿನಲ್ಲಿದ್ರು. ಅದರಲ್ಲಿ ರಾಯ್ ಆಂಟೋನಿ ಕಾರು ಚಾಲನೆ ಮಾಡ್ತಿದ್ರು. ದರ್ಶನ್ ಮುಂದೆ ಕೂತಿದ್ರು, ನಟ ದೇವರಾಜ್ ಮತ್ತು ಪ್ರಜ್ವಲ್ ಹಿಂದೆ ಕೂತಿದ್ದರು.

ಒಂದು ಕಡೆ ಆಸ್ಪತ್ರೆ ಕಡೆಯಿಂದ ಆರು ಜನ ಎಂಬ ಮಾಹಿತಿ ಸಿಕ್ಕರೇ, ಮತ್ತೊಂದೆಡೆ ಐದು ಜನ ಇದ್ದರು ಎಂದು ಮೈಸೂರಿನ ಪೊಲೀಸ್ ಆಯುಕ್ತರು ಹೇಳಿಕೆ ನೀಡಿದ್ದಾರೆ. ನಿಜಕ್ಕೂ ದರ್ಶನ್ ಅವರ ಕಾರಿನಲ್ಲಿ ಆರು ಜನ ಇದ್ರಾ.? ಹಾಗಿದ್ರೆ, ಆ ಇಬ್ಬರು ಯಾರು.? ಅವರು ಎಲ್ಲಿ ಹೋದರು ಎಂಬ ಅನುಮಾನ ಈಗ ಕಾಡುತ್ತಿದೆ. ಮುಂದೆ ಓದಿ.....

ಆಸ್ಪತ್ರೆಯ ವರದಿ ಪ್ರಕಾರ 6 ಮಂದಿ

ಆಸ್ಪತ್ರೆಯ ವರದಿ ಪ್ರಕಾರ 6 ಮಂದಿ

ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಎಂಎಲ್ ಸಿ ವರದಿ ಪ್ರಕಾರ, ಅಪಘಾತಕ್ಕೆ ಸಂಬಂಧಪಟ್ಟಂತೆ ಆರು ಜನರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಈ ವರದಿಯನ್ನ ಈಗಾಗಲೇ ವಿವಿಪುರಂ ಪೊಲೀಸರಿಗೆ ನೀಡಲಾಗಿದೆಯಂತೆ.

ಮೈಸೂರು ಪೊಲೀಸ್ ಆಯುಕ್ತರ ಪ್ರಕಾರ

ಮೈಸೂರು ಪೊಲೀಸ್ ಆಯುಕ್ತರ ಪ್ರಕಾರ

ಇನ್ನು ಈ ಬಗ್ಗೆ ಇದೇ ಮೊದಲ ಸಲ ಮಾತನಾಡಿದ ಮೈಸೂರು ನಗರ ಪೊಲೀಸ್ ಆಯುಕ್ತ ಸುಬ್ರಮಣ್ಯಶ್ವೇರ್ ರಾವ್ 'ಅಪಘಾತವಾದ ಕಾರಿನಲ್ಲಿ ಐದು ಜನ ಇದ್ದರು ಎಂಬುದು ನಮ್ಮ ಗಮನಕ್ಕೆ ಬಂದಿದೆ. ನಾಲ್ಕು ಜನಕ್ಕೆ ಪೆಟ್ಟಾಗಿದೆ' ಎಂದಿದ್ದಾರೆ.

ಪೊಲೀಸರ ಎದುರಲ್ಲಿ ಕಾರ್ ತೆಗೆದುಕೊಂಡು ಹೋದ್ರಾ.?

ಪೊಲೀಸರ ಎದುರಲ್ಲಿ ಕಾರ್ ತೆಗೆದುಕೊಂಡು ಹೋದ್ರಾ.?

ಪೊಲೀಸರು ಬಂದ ಮೇಲೆ ಕಾರನ್ನ ತೆಗೆದುಕೊಂಡು ಹೋಗಿದ್ರೆ ಅದರ ಬಗ್ಗೆ ನಾವು ಕ್ರಮ ತಗೆದುಕೊಳ್ಳುತ್ತೇವೆ. ಸದ್ಯಕ್ಕೆ ಲಕ್ಷ್ಮಣ್ ಎಂಬುವರು ದೂರು ನೀಡಿದ್ದಾರೆ. ಮೇಲ್ನೊಟಕ್ಕೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ. ತನಿಖೆ ಮಾಡ್ತೀವಿ. ಆಮೇಲೆ ಗೊತ್ತಾಗುತ್ತೆ' ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಸುಬ್ರಮಣ್ಯಶ್ವೇರ್ ರಾವ್ ತಿಳಿಸಿದ್ದಾರೆ.

ತರಂಗ ವಿಶ್ವ ಏನಂದ್ರು.?

ತರಂಗ ವಿಶ್ವ ಏನಂದ್ರು.?

'ನಾನು, ಸೃಜನ್ ಬೆಂಗಳೂರಿಗೆ ಹೊರಟಿದ್ದೇವು. ಅಪಘಾತ ವಿಷ್ಯ ತಿಳಿದ ನಂತರ ವಾಪಸ್ ಬಂದ್ವಿ. ಕಾರಿನಲ್ಲಿ ಎಷ್ಟು ಜನರು ಇದ್ವಿ ಎಂಬುದರ ಬಗ್ಗೆ ನಮಗೆ ಮಾಹಿತಿ ಇಲ್ಲ'' ಎಂದು ಹಾಸ್ಯ ನಟ ತರಂಗ ವಿಶ್ವ ಹೇಳಿದ್ದಾರೆ.

ಎಫ್.ಐ.ಆರ್ ನಲ್ಲಿ ನಾಲ್ಕು ಜನ

ಎಫ್.ಐ.ಆರ್ ನಲ್ಲಿ ನಾಲ್ಕು ಜನ

ಆಸ್ಪತ್ರೆಯ ವರದಿ ಹೇಳುತ್ತಿದೆ ಆರು ಜನ, ಪೊಲೀಸರು ಹೇಳುತ್ತಿದ್ದಾರೆ ಐದು ಜನ. ಆದ್ರೆ, ಎಫ್.ಐ.ಆರ್ ನಲ್ಲಿ ದಾಖಲಾಗಿರುವುದು ನಾಲ್ಕು ಜನ. ಹಾಗಾಗಿ ಮತ್ತಷ್ಟು ಅನುಮಾನಗಳು ಕಾಡುತ್ತಿದೆ. ನಿಜಕ್ಕೂ ಕಾರಿನಲ್ಲಿ ಎಷ್ಟು ಜನ ಇದ್ರು ಎಂಬುದನ್ನ ಈಗ ಆ ನಾಲ್ಕು ಜನ ಮಾತ್ರ ಹೇಳಬೇಕಾಗಿದೆ.

ಉಳಿದ ಇಬ್ಬರು ಯಾರು.?

ಉಳಿದ ಇಬ್ಬರು ಯಾರು.?

ಇಷ್ಟು ಸಮಯ ನಾಲ್ಕು ಜನ ಎಂದು ಹೇಳಲಾಗ್ತಿದ್ದ ಈ ಘಟನೆಯಲ್ಲಿ ಈಗ ಮತ್ತಿಬ್ಬರ ಹೆಸರು ಕೇಳಿಬರ್ತಿದೆ. ಆದ್ರೆ, ಅದು ಯಾರು ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ.

More from Filmibeat

English summary
Mysore city police commissioner sumbramanyasehswra rao has clarify about darshan accident case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X