ನಿರ್ಮಾಪಕರಿಗೆ ₹5 ಲಕ್ಷ ವಂಚನೆ ಪ್ರಕರಣ; ಹಣ ಹಿಂತಿರುಗಿಸಲು ನಾಗಶೇಖರ್‌ಗೆ 30 ದಿನಗಳ ಗಡುವು ಕೊಟ್ಟ ಕೋರ್ಟ್

'ಸಂಚು ವೆಡ್ಸ್ ಗೀತಾ', 'ಸಂಜು ವೆಡ್ಸ್ ಗೀತಾ 2', 'ಮೈನಾ'ದಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ನಾಗಶೇಖರ್ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ವರ್ಷಗಳ ಹಿಂದೆ ಸಿನಿಮಾ ಚಿತ್ರೀಕರಣಕ್ಕೆಂದು ನಿರ್ಮಾಪಕರೊಬ್ಬರಿಂದ ಹಣ ಪಡೆದು ಹಿಂತಿರುಗಿಸಿಲ್ಲ ಎಂದು ಆರೋಪ ಮಾಡಲಾಗಿತ್ತು. ಈ ಸಂಬಂಧ ನಿರ್ಮಾಪಕರು ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ಮಾಡಿದ ಕೋರ್ಟ್ ನಾಗಶೇಖರ್‌ಗೆ ಹಣವನ್ನು ಹಿಂತಿರುಗಿಸುವಂತೆ ಆದೇಶಿಸಿದೆ.

ಇತ್ತೀಚೆಗಷ್ಟೇ ನಾಗಶೇಖರ್ 'ಸಂಜು ವೆಡ್ಸ್ ಗೀತಾ 2' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಆದರೆ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ನಾಗಶೇಖರ್ 'ಸಂಜು ವೆಡ್ಸ್ ಗೀತಾ 2' ಸಿನಿಮಾವನ್ನು ಕೈಗೆತ್ತಿಗೊಳ್ಳುವುದಕ್ಕೂ ಮುನ್ನ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆದರೆ, ಅದು ಟೇಕಾಪ್‌ ಆಗಲಿಲ್ಲ. ಈ ವೇಳೆ ಸಾಲ ರೂಪದಲ್ಲಿ ತೆಗೆದುಕೊಂಡಿದ್ದ ಹಣವನ್ನು ನೀಡದ ಸತಾಯಿಸುತ್ತಿದ್ದಾರೆಂದು ನಿರ್ಮಾಪಕರು ಕೋರ್ಟ್ ಮೆಟ್ಟಿಲೇರಿದ್ದರು.

Nagashekar Accused of Cheating Producer 5 Lakh Court Orders Refund in 30 Days

ಈ ಪ್ರಕರಣವನ್ನು ಕೈಗೆತ್ತಿಕೊಂಡ ಕೋರ್ಟ್ ನಿನ್ನೆ (ಸೆಪ್ಟೆಂಬರ್ 11) ತೀರ್ಪು ನೀಡಿದ್ದು, ನಿರ್ಮಾಪಕರಿಂದ ಪಡೆದ ಹಣವನ್ನು ಹಿಂತಿರುಗಿಸುವಂತೆ ಆದೇಶ ಹೊರಡಿದೆ. ಒಂದು ವೇಳೆ 30 ದಿನಗಳ ಒಳಗಾಗಿ ಹಣವನ್ನು ನೀಡಿದೇ ಹೋದಲ್ಲಿ ಆರು ತಿಂಗಳು ಸೆರೆವಾಸ ಬಗ್ಗೆ ಹೇಳಿದೆ. ಈ ಬಗ್ಗೆ ನಿರ್ಮಾಪಕ ವಿಜಯ್ ಸವಣೂರು ಫಿಲ್ಮಿ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ. ಅಷ್ಟಕ್ಕೂ ನಾಗಶೇಖರ್ ಯಾರಿಂದ ಹಣ ಪಡೆದಿದ್ದರು? ನಾಗಶೇಖರ್ 5 ಲಕ್ಷ ಹಣವನ್ನು ಯಾಕೆ ಹಿಂತಿರುಗಿಸಲಿಲ್ಲ? ತಿಳಿಯುವುದಕ್ಕೆ ಮುಂದೆ ಓದಿ.

ಏನಿದು ₹5 ಲಕ್ಷದ ಪ್ರಕರಣ?

2022ರಲ್ಲಿ ನಾಗಶೇಖರ್ ಹಾಗೂ ವಿಜಯ್ ಸವಣೂರು ಎಂಬುವವರು ಸೇರಿ 'ಕ್ಯೂ' (Q) ಎಂಬ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದರು. ಈ ಸಿನಿಮಾಗೆ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ನಾಯಕನಾಗಿ ಆಯ್ಕೆ ಆಗಿದ್ದರು. ನಾಗಶೇಖರ್ ಅವರ ನಾಗಶೇಖರ್ ಮೂವೀಸ್ ಹಾಗೂ ವಿಜಯ್ ಅವರ ವಿಜಯ್ ಸವಣೂರು ಪ್ರೊಡಕ್ಷನ್ಸ್ ಎರಡು ಸಂಸ್ಥೆಗಳು ಜಂಟಿಯಾಗಿ ಈ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದರು. ಟೊರಿನೋ ಫ್ಯಾಕ್ಟರಿಯಲ್ಲಿ ಅದ್ಧೂರಿಯಾಗಿ ಫೋಟೊಶೂಟ್ ಅನ್ನು ಮಾಡಲಾಗಿತ್ತು.

Nagashekar Accused of Cheating Producer 5 Lakh Court Orders Refund in 30 Days

ಆದರೆ, ಈ ಪ್ರಾಜೆಕ್ಟ್ ಆರಂಭ ಆಗುವಷ್ಟರಲ್ಲಿಯೇ ನಾಗಶೇಖರ್ ಇನ್ನೊಬ್ಬರು ನಿರ್ಮಾಪಕರನ್ನು ಕರೆದುಕೊಂಡು ಬರುವುದಾಗಿ ಹೇಳಿದ್ದರಂತೆ. ಹೀಗಾಗಿ ಪ್ರಾಜೆಕ್ಟ್ ಟೇಕಾಫ್ ಆಗುವ ಮುನ್ನ ಇಬ್ಬರಲ್ಲಿ ವ್ಯವಹಾರಕ್ಕೆ ಸಂಬಂಧಿಸಿದಂತೆ ವೈಮಸ್ಸು ಶುರುವಾಗಿತ್ತು. ಹೀಗಾಗಿ 'ಕ್ಯೂ' ಸಿನಿಮಾ ಫೋಟೋಶೂಟ್ ಮಾಡುವುದಕ್ಕೆ ನಿರ್ಮಾಪಕ ವಿಜಯ್ ಸವಣೂರು ಬಳಿ ನಾಗಶೇಖರ್ ಸಾಲದ ರೂಪದಲ್ಲಿ ₹5 ಲಕ್ಷ ರೂಪಾಯಿಯನ್ನು ಪಡೆದಿದ್ದರು. ಆ ಹಣದಿಂದ ಪೋಟೋಶೂಟ್ ಮಾಡಿದ್ದರು. ಆದರೆ, ಸಿನಿಮಾ ಟೇಕಾಫ್ ಆಗಲಿಲ್ಲ. ನಾಗಶೇಖರ್ ಹಣವನ್ನು ಹಿಂತಿರುಗಿಸಲಿಲ್ಲ.

ಕೋರ್ಟ್‌ ಮೆಟ್ಟಿಲೇರಿದ್ಧ ನಿರ್ಮಾಪಕ

ನಾಗಶೇಖರ್ ₹5 ಲಕ್ಷ ಹಿಂತಿರುಗಿಸದೇ ಇದ್ದಿದ್ದರಿಂದ ನಿರ್ಮಾಪಕ ವಿಜಯ್ ಸವಣೂರು ಮೊದಲಿಗೆ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ್ದರು. ಅಲ್ಲಿ ನಾಗಶೇಖರ್ ₹5 ಲಕ್ಷ ರೂಪಾಯಿಯನ್ನು ಚಿತ್ರೀಕರಣಕ್ಕೆ ಬಳಸಿಕೊಂಡಿದ್ದು, ಮೂರು ತಿಂಗಳ ಒಳಗಾಗಿ ಹಿಂತಿರುಗಿಸುತ್ತೇನೆ. ಅದಕ್ಕೆ ಕಾಲಾವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಅದಾದ ಮೇಲೂ ಹಣ ಹಿಂತಿರುಗಿಸಲಿಲ್ಲ.

ಈ ಕಾರಣಕ್ಕೆ ವಿಜಯ್ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ನಾಗಶೇಖರ್ ಹಣ ಪಡೆದಿರುವುದು ಸಾಬೀತಾಗಿದ್ದು, ಬೆಂಗಳೂರು ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಪ್ರಕರಣದ ತೀರ್ಪು ನೀಡಿದೆ. ನಿರ್ಮಾಪಕ ವಿಜಯ್ ಸವಣೂರು ಅವರಿಗೆ ನಾಗಶೇಖರ್ ಬಡ್ಡಿ ಸಮೇತ 6.55 ಸಾವಿರ ರೂಪಾಯಿಯನ್ನು 30 ದಿನಗಳ ಒಳಗಾಗಿ ಹಿಂತಿರುಗಿಸುವಂತೆ ಆದೇಶಿಸಿದೆ. ಒಂದು ವೇಳೆ ಈ ಸಮಯದೊಳಗೆ ಹಿಂತಿರಗಿಸದೇ ಹೋದರೆ ಆರು ತಿಂಗಳು ಜೈಲು ವಾಸ ಅನುಭವಿಸಬೇಕಾಗುತ್ತೆ ಎಂದು ನಿರ್ಮಾಪಲ ವಿಜಯ್ ಸವಣೂರು ಫಿಲ್ಮಿಬೀಟ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.

More from Filmibeat

English summary
Sanju weds Geetha director Nagashekar has been accused of cheating a producer of ₹5 lakh. The court has now ordered him to return the amount within 30 days. Here are the details.
Read more about: nagashekar case controversy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X