Exclusive: ಗುಟ್ಟಲ್ಲಿ ಸಿನಿಮಾ ಮಾಡ್ತಿದ್ದಾರೆ ಸ್ಯಾಂಡಲ್‌ವುಡ್ ಮೇಷ್ಟ್ರು.. 'ಅಮೆರಿಕಾ ಅಮೆರಿಕಾ 2' ಬರುತ್ತೆ ಕಾಯ್ತಿರಿ!

ಕನ್ನಡ ಚಿತ್ರರಂಗದ ಮೇಷ್ಟ್ರು ಅಂತಲೇ ಫೇಮಸ್ ನಾಗತಿಹಳ್ಳಿ ಚಂದ್ರಶೇಖರ್. ಇವರು ನಿರ್ದೇಶಿಸಿದ ಬಹುತೇಕ ಸಿನಿಮಾಗಳು ಸಿನಿಮಾ ಪ್ರಿಯರಿಗೆ ಇಷ್ಟ. ಇಂದಿಗೂ ಆ ಸಿನಿಮಾಗಳು ಅದೆಷ್ಟೋ ಮಂದಿಯ ಫೆವರೀಟ್. ಇಂತಹ ಎವರ್‌ಗ್ರೀನ್ ಸಿನಿಮಾಗಳಲ್ಲಿ ಇಂದಿನ ಯುವಕರನ್ನೂ ಕಾಡುವ ಸಿನಿಮಾ ಅಮೆರಿಕಾ ಅಮೆರಿಕಾ.

ರಮೇಶ್ ಅರವಿಂದ್, ಹೇಮಾ ಪಂಚಮುಖಿ, ಅಕ್ಷಯ್ ಆನಂದ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಕಳೆದ ವರ್ಷವಷ್ಟೇ ಸಿನಿಮಾ 25 ವರ್ಷಗಳನ್ನು ಪೂರೈಸಿತ್ತು. ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಸೇರಿದಂತೆ ಇಡೀ ತಂಡ ಈ ಸಂಭ್ರಮದಲ್ಲಿ ಭಾಗಿಯಾಗಿತ್ತು.

Nagathihalli Chandrashekar-America America

25 ವರ್ಷದ ಹಿಂದೆ ಬಂದ ಸಿನಿಮಾ ಆಗಿದ್ದರೂ ಇಂದಿಗೂ 'ಅಮೆರಿಕಾ ಅಮೆರಿಕಾ' ಪ್ರಸ್ತುತ ಅನಿಸುತ್ತೆ. ಒಂದು ಸಿನಿಮಾ ಮೆಗಾ ಹಿಟ್ ಆಗುತ್ತಿದ್ದಂತೆ ಎಲ್ಲರೂ ಸೀಕ್ವೆಲ್‌ ಕಡೆ ಗಮನ ಹರಿಸುತ್ತಾರೆ. ಆದರೆ, ನಾಗತಿಹಳ್ಳಿ ಚಂದ್ರಶೇಖರ್ 'ಅಮೆರಿಕಾ ಅಮೆರಿಕಾ 2'ಗೆ ಯಾಕೆ ಕೈ ಹಾಕಿಲ್ಲ ಅನ್ನೋ ಗುಮಾನಿ ಅದೆಷ್ಟೋ ಮಂದಿಗೆ ಕಾಡಿದ್ದು ಇತ್ತು. ಆದ್ರೀಗ ಈ ಸಿನಿಮಾ ಇಷ್ಟಪಡುವವರಿಗೆ ಖುಷಿ ವಿಷಯವೊಂದಿದೆ. ಅದೇನು ಅಂತ ತಿಳಿಯಲು ಮುಂದೆ ಓದಿ.

ಶೀಘ್ರದಲ್ಲೇ 'ಅಮೆರಿಕಾ ಅಮೆರಿಕಾ 2'

ಇಂದು (ಆಗಸ್ಟ್ 15) ನಾಗತಿಹಳ್ಳಿ ಚಂದ್ರಶೇಖರ್ ಹುಟ್ಟುಹಬ್ಬ. ಇವರ ಸಿನಿಮಾಗಳನ್ನು ಇಷ್ಟ ಪಡುವವರಿಗೆ ಒಂದು ಗುಡ್‌ ನ್ಯೂಸ್ ಇದೆ. ಸ್ಯಾಂಡಲ್‌ವುಡ್ ಮೇಷ್ಟ್ರು ಹೊಸ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅದುವೇ 'ಅಮೆರಿಕಾ ಅಮೆರಿಕಾ 2' ಸದ್ದಿಲ್ಲದೆ ಸೈಲೆಂಟ್ ಆಗಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ ಎಂದು ಬಲ್ಲ ಮೂಲಗಳು ಫಿಲ್ಮಿಬೀಟ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.

Nagathihalli Chandrashekar-America America

ಪ್ರಮುಖ ಪಾತ್ರದಲ್ಲಿರೋದ್ಯಾರು?

'ಅಮೆರಿಕಾ ಅಮೆರಿಕಾ 2' ಅಂದಾಗ, ಮತ್ತೆ ರಮೇಶ್ ಅರವಿಂದ್, ಆಕ್ಷಯ್ ಆನಂದ್, ಹೇಮಾ ಪಂಚಮುಖಿ ಇರಬಹುದಾ? ಅನ್ನೋ ಪ್ರಶ್ನೆ ಮೂಡಬಹುದು. ಆದರೆ, 25 ವರ್ಷಗಳ ಹಿಂದಿನ ಸ್ಟಾರ್ ಕಾಸ್ಟ್ ಈ ಸೀಕ್ವೆಲ್‌ನಲ್ಲಿ ಇಲ್ಲ. ಇಂದಿನ ಯುವ ನಟರನ್ನು ಹಾಕಿಕೊಂಡು ಸಿನಿಮಾ ಮಾಡುತ್ತಿದ್ದಾರೆ. ಪೃಥ್ವಿ ಅಂಬರ್, ನಿರೂಪ್ ಭಂಡಾರಿ ಹಾಗೂ ಶಾನ್ವಿ ಶ್ರೀವತ್ಸವ್ ಈ ಸಿನಿಮಾದ ಪ್ರಮುಖ ಮೂರು ಪಾತ್ರಗಳು ಎಂದು ಮೂಲಗಳು ತಿಳಿಸಿವೆ.

ಯಾವ ಹಂತದಲ್ಲಿದೆ ಶೂಟಿಂಗ್?

ನಾಗತಿಹಳ್ಳಿ ಚಂದ್ರಶೇಖರ್ ಈಗಾಗಲೇ ಸಿನಿಮಾ ಶೇ.70ರಷ್ಟು ಶೂಟಿಂಗ್ ಮುಗಿಸಿದ್ದಾರೆ ಅನ್ನೋದು ಸುದ್ದಿ. ಆದರೆ, ಸದ್ದಿಲ್ಲದೆ ಸೈಲೆಂಟ್ ಆಗಿ ಯಾಕೆ ಶೂಟಿಂಗ್ ಮಾಡುತ್ತಿದ್ದಾರೆ ಅನ್ನೋದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಈ ಸಿನಿಮಾ ಕೂಡ ಅಮೆರಿಕದಲ್ಲಿ ಬಹುಪಾಲು ಶೂಟಿಂಗ್ ನಡೆಯುತ್ತಿದೆ ಎಂದು ಎನ್ನಲಾಗಿದೆ. ಉಳಿದ ಭಾಗದ ಚಿತ್ರೀಕರಣ ಯಾವಾಗ ಆಗುತ್ತೆ? ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಯಾವಾಗ ಸಿನಿಮಾ ಅನೌನ್ಸ್ ಮಾಡುತ್ತಾರೆ ಅನ್ನೋದೇ ಈಗ ಕುತೂಹಲ.

'ಇಂಡಿಯಾ Vs ಇಂಗ್ಲೆಂಡ್' ಕೊನೆ ಸಿನಿಮಾ

2020ರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ 'ಇಂಡಿಯಾ Vs ಇಂಗ್ಲೆಂಡ್' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಆದರೆ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ. ಹೀಗಾಗಿ ಬರೋಬ್ಬರಿ ಮೂರು ವರ್ಷಗಳ ಬಳಿಕ ಮತ್ತೊಂದು ಸಿನಿಮಾಗೆ ಕೈ ಹಾಕಿದ್ದಾರೆ. 'ಅಮೆರಿಕಾ ಅಮೆರಿಕಾ 2' 25 ವರ್ಷಗಳ ಹಿಂದಿನ ಸಂಚಲನವನ್ನು ಸೃಷ್ಟಿಸುತ್ತಾ? ಅನ್ನೋದು ಮುಂದಿನ ದಿನಗಳ ಗೊತ್ತಾಗುತ್ತೆ. ಅಷ್ಟಕ್ಕೂ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಅವರ ತಂಡ ಈ ವಿಷಯವನ್ನು ಎಲ್ಲೂ ಬಹಿರಂಗ ಪಡಿಸಿಲ್ಲ. ಮುಂದಿನ ದಿನಗಳಲ್ಲಿ ಸಿನಿಮಾ ಬಗ್ಗೆ ರಿವೀಲ್ ಮಾಡುವ ಸಾಧ್ಯತೆಯಿದೆ.

More from Filmibeat

English summary
Nagathihalli Chandrashekhar making America America 2
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X